Azim Premji Scholarship-ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ! ವಿದ್ಯಾರ್ಥಿನಿಯರಿಗೆ ₹30,000 ವಿದ್ಯಾರ್ಥಿವೇತನ!

August 13, 2026 | Siddesh
Azim Premji Scholarship-ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ! ವಿದ್ಯಾರ್ಥಿನಿಯರಿಗೆ ₹30,000 ವಿದ್ಯಾರ್ಥಿವೇತನ!
Share Now:

2026-2027 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಅವರ ಮುಂದಿನ ಉನ್ನತ ಶಿಕ್ಷಣವನ್ನು ಪಡೆಯಲು ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಅಜೀಂ ಪ್ರೇಮ್‌ಜಿ ಫೌಂಡೇಶನ್‌ ವತಿಯಿಂದ ವಿದ್ಯಾರ್ಥಿನಿಯರಿಗೆ ₹30,000 ವಿದ್ಯಾರ್ಥಿವೇತನವನ್ನು ಪಡೆಯಲು ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ವಿದ್ಯಾರ್ಥಿವೇತನವು ವಿಶೇಷವಾಗಿ ಸರ್ಕಾರಿ ಶಾಲೆ ಅಥವಾ ಕಾಲೇಜುಗಳಲ್ಲಿ ವ್ಯಾಸಂಗ ಮುಗಿಸಿ ಪದವಿ ಅಥವಾ ಡಿಪ್ಲೊಮಾ ಮೊದಲ ವರ್ಷದ ಕೋರ್ಸ್‌ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿವೇತನ ಮಹತ್ವದ ಅವಕಾಶವಾಗಿದೆ.

ಇದನ್ನೂ ಓದಿ: Free Sewing Machine Scheme-ಈ ಜಿಲ್ಲೆಯ ಕುಶಲಕರ್ಮಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ!

2024-2025 ನೇ ಸಾಲಿನಲ್ಲಿ ವಿದ್ಯಾರ್ಥಿವೇತನವನ್ನು ಪಡೆದ ವಿದ್ಯಾರ್ಥಿಗಳು 2026-2027 ನೇ ಸಾಲಿನ ಶೈಕ್ಷಣಿಕ ವರ್ಷದ ನವೀಕರಣ ಅರ್ಜಿಗಳು ಸೆಪ್ಟೆಂಬರ್ 2026 ರಿಂದ ಪ್ರಾರಂಭವಾಗುತ್ತವೆ.

ಈ ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಹರು? ಅರ್ಜಿಯನ್ನು ಸಲ್ಲಿಸಲು ಯಾವೆಲ್ಲ ದಾಖಲಾತಿಗಳನ್ನು ಸಲ್ಲಿಸಬೇಕು? ಅರ್ಜಿ ಪ್ರಕ್ರಿಯೆ ಏನು? ಪ್ರಮುಖ ದಿನಾಂಕಗಳಾವುವು?

Purpose of this Scholorship-ಈ ವಿದ್ಯಾರ್ಥಿವೇತನದ ಮುಖ್ಯ ಉದ್ದೇಶವೇನು?

✔️ ಪ್ರತಿಭಾವಂತ ಆದರೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅವರ ಮುಂದಿನ ಶಿಕ್ಷಣಕ್ಕೆ ನೆರವಿಗಾಗಿ.
✔️ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಯುವಕರಿಗೆ ವೃತ್ತಿ ಹಾಗೂ ಮೌಲ್ಯಾಧಾರಿತ ತರಬೇತಿ ನೀಡುವುದು.
✔️ ಗ್ರಾಮೀಣ ಮತ್ತು ಬಡ ಪ್ರದೇಶಗಳ ಶಿಕ್ಷಣ ಮಟ್ಟವನ್ನು ಸುಧಾರಿಸಲು ಯುವ ಪ್ರತಿಭೆಯನ್ನು ಗುರುತಿಸುವುದು.

ಇದನ್ನೂ ಓದಿ: Free Heavy Vehicle Training-ಉಚಿತ ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ!

Who Can APply-ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಹರು?

ವಿದ್ಯಾರ್ಥಿವೇತನವು ಹೆಣ್ಣು ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ.

ಅರ್ಜಿದಾರ ವಿದ್ಯಾರ್ಥಿನಿಯು 10ನೇ ಮತ್ತು 12ನೇ ತರಗತಿಯನ್ನು ಸರ್ಕಾರಿ ಶಾಲೆಗಳಲ್ಲಿ ಓದಿರಬೇಕು.

2025-26ನೇ ಶೈಕ್ಷಣಿಕ ವರ್ಷಕ್ಕೆ ಮೊದಲ ವರ್ಷದಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಭಾರತದ ಸರ್ಕಾರಿ/ಖಾಸಗಿ ವಿಶ್ವವಿದ್ಯಾಲಯದಲ್ಲಿ ಮಾನ್ಯತೆ ಪಡೆದ ಪದವಿಪೂರ್ವ ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶ ಪಡೆದಿರಬೇಕು.

ಇದನ್ನೂ ಓದಿ: SSP Scholarship-2026: ವಿದ್ಯಾರ್ಥಿವೇತನ ಪಡೆಯಲು ಎಲ್ಲಾ ತರಗತಿಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ!

More Information-ಹೆಚ್ಚಿನ ಮಾಹಿತಿಗಾಗಿ:

ಪದವಿಪೂರ್ವ ಪದವಿ ಅಥವಾ ಡಿಪ್ಲೊಮಾ ಕಾರ್ಯಕ್ರಮವು 2 ರಿಂದ 5 ವರ್ಷಗಳವರೆಗೆ ಇರಬೇಕು.

2026-27 ಅಥವಾ ಅದಕ್ಕೂ ಮೊದಲು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಯಾವುದೇ ಕಾರ್ಯಕ್ರಮಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ವಿಪ್ರೋದ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

Imp Dates-ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಮುಖ ದಿನಾಂಕಗಳು?

ಅರ್ಜಿ ಸಲ್ಲಿಕೆ ಆರಂಭ: 10 ಆಗಷ್ಟ್ 2026
ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ: 31 ಆಗಷ್ಟ್ 2026
ನವೀಕರಣ ಅರ್ಜಿ ಸಲ್ಲಿಕೆ ದಿನಾಂಕ: ಸೆಪ್ಟೆಂಬರ್ 2026

ಇದನ್ನೂ ಓದಿ: Land RTC-ಜಮೀನಿನ ಪಹಣಿಯ ಹಿಸ್ಸಾ ಸಂಖ್ಯೆ ಎಂದರೇನು? ಹಿಸ್ಸಾ ಸಂಖ್ಯೆ ಹೇಗೆ ಬರುತ್ತದೆ?ಇಲ್ಲಿದೆ ಅಗತ್ಯ ಮಾಹಿತಿ!

Documents Required-ಅರ್ಜಿ ಸಲ್ಲಿಸಲು ದಾಖಲಾತಿಗಳಾವುವು?

ವಿದ್ಯಾರ್ಥಿನಿಯ ಆಧಾರ್ ಕಾರ್ಡ

10 ಮತ್ತು12 ತರಗತಿ ಅಂಕಪಟ್ಟಿ

ಕಾಲೇಜು ಪ್ರವೇಶ ಪತ್ರ

ಪಾಸ್ ಪೋರ್ಟ್ ಫೋಟೋ

ಬ್ಯಾಂಕ ಪಾಸ್ ಪುಸ್ತಕ

azim prem ji scholorship

ಇದನ್ನೂ ಓದಿ: Scholorship Amount-BE/B.Tech ವಿದ್ಯಾರ್ಥಿಗಳಿಗೆ ₹70,250 ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

Online Application process-ಅರ್ಜಿ ಸಲ್ಲಿಸುವ ವಿಧಾನಗಳಾವುವು?

ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನದ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.

Step-1: ವಿದ್ಯಾರ್ಥಿನಿಯರು ಮೊದಲಿಗೆ ಈ ಲಿಂಕ್ "Click Here" ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ನಂತರ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿದಾರ ವಿದ್ಯಾರ್ಥಿಗಳು ಈ ಜಾಲತಾಣವನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದರೆ “Create an Account” ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೊಸ ಖಾತೆಯನ್ನು ರಚಿಸಿಕೊಳ್ಳಬೇಕು.

Step-3: ತದನಂತರ “Login” ಬಟನ್ ಮೂಲಕ ಅಗತ್ಯ ವಿವರಗಳನ್ನು ನಮೂದಿಸಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-4: ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Ration Card-ರೇಷನ್ ಕಾರ್ಡ್‍ದಾರರ ಗಮನಕ್ಕೆ: ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರ ಜಂಟಿಯಾಗಿ ವಿತರಣೆ!

For More Information-ವಿದ್ಯಾರ್ಥಿವೇತನದ ಬಗ್ಗೆ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ-Click Here

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: