Udyoga Mela-ಉದ್ಯೋಗಾಕಾಂಕ್ಷಿಗಳೇ ಗಮನಿಸಿ ನವೆಂಬರ್ 30ರಂದು ಮಂಗಳೂರಿನಲ್ಲಿ ಉದ್ಯೋಗ ಮೇಳ!

November 29, 2026 | Siddesh
Udyoga Mela-ಉದ್ಯೋಗಾಕಾಂಕ್ಷಿಗಳೇ ಗಮನಿಸಿ ನವೆಂಬರ್ 30ರಂದು ಮಂಗಳೂರಿನಲ್ಲಿ ಉದ್ಯೋಗ ಮೇಳ!
Share Now:

ಮಂಗಳೂರು: ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನರಿಗೆ ಉತ್ತಮ ಅವಕಾಶವೊಂದು ಲಭಿಸಿದೆ. ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಉದ್ಯೋಗಾಕಾಂಕ್ಷಿಗಳಿಗಾಗಿ ಉದ್ಯೋಗ ಮೇಳ(Udyoga Mela Mangalore)ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅಗತ್ಯವಿರುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಮಂಗಳೂರಿನ ಸಂತ ಅಲೋಶಿಯಸ್ (ಡೀಮ್ಡ್ ವಿಶ್ವವಿದ್ಯಾಲಯ) ಆವರಣದಲ್ಲಿ ನವೆಂಬರ್ 30, 2026ರಂದು ಉದ್ಯೋಗ ಮೇಳ ನಡೆಯಲಿದೆ. ಉದ್ಯೋಗಾಕಾಂಕ್ಷಿಗಳು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಉದ್ಯೋಗ ಮೇಳದಲ್ಲಿ(Udyoga Mela In Karnataka) ಭಾಗವಹಿಸಲು ಅಭ್ಯರ್ಥಿಗಳು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವುದು ಹೇಗೆ? ಉದ್ಯೋಗ ಮೇಳದ ಕುರಿತು ಪ್ರಕಟಣೆಯಲ್ಲಿ ಹೊರಡಿಸಿರುವ ಅಧಿಕೃತ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: PM-Kisan 2026: ಪಿಎಂ ಕಿಸಾನ್ ಯೋಜನೆ 6 ಲಕ್ಷ ರೈತರಿಗೆ ₹6,000 ನೆರವು ಮಿಸ್!

Udyoga Mela Mangalore 2026-ಉದ್ಯೋಗ ಮೇಳದ ವಿವರಗಳು

  • ದಿನಾಂಕ: 30 ನವೆಂಬರ್ 2026
  • ಸಮಯ: ಬೆಳಿಗ್ಗೆ 9:00ರಿಂದ ಸಂಜೆ 5:00ರವರೆಗೆ
  • ಸ್ಥಳ: ಸಂತ ಅಲೋಶಿಯಸ್ (ಡೀಮ್ಡ್ ವಿಶ್ವವಿದ್ಯಾಲಯ), ಮಂಗಳೂರು

Job Mela Resume-5ಕ್ಕಿಂತ ಹೆಚ್ಚು ರೆಸ್ಯೂಮ್ ಕಡ್ಡಾಯ:

ಉದ್ಯೋಗ ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ 5ಕ್ಕಿಂತ ಹೆಚ್ಚು ರೆಸ್ಯೂಮ್‌ಗಳನ್ನು ತಮ್ಮೊಂದಿಗೆ ತರಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ. ವಿವಿಧ ಕಂಪನಿಗಳು ಹಾಗೂ ಉದ್ಯೋಗದಾತರನ್ನು ನೇರವಾಗಿ ಭೇಟಿಯಾಗಿ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಪಡೆಯಲು ಇದು ಉತ್ತಮ ವೇದಿಕೆಯಾಗಲಿದೆ.

ಇದನ್ನೂ ಓದಿ: Pumpset Repair Training-ಉಚಿತ ಮೋಟಾರ್ ರಿವೈಂಡಿಂಗ್ ಮತ್ತು ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Job Resume Format-ಅನ್ಲೈನ್ ನಲ್ಲಿ ರೆಸ್ಯೂಮ್ ಸಿದ್ದಪಡಿಸಲು ಈ ಲಿಂಕ್ ಬಳಕೆ ಮಾಡಬಹುದು- Resume Format

Udyoga Mela In Karnataka-ಉದ್ಯೋಗ ಪಡೆಯಲು ಉತ್ತಮ ಅವಕಾಶ:

ಉದ್ಯೋಗ ಹುಡುಕುತ್ತಿರುವ ಯುವಜನರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ವಿದ್ಯಾರ್ಹತೆ ಹಾಗೂ ಕೌಶಲ್ಯಕ್ಕೆ ಹೊಂದುವ ಉದ್ಯೋಗಾವಕಾಶಗಳಿಗಾಗಿ ಪ್ರಯತ್ನಿಸಬಹುದು. ಅಭ್ಯರ್ಥಿಗಳು ತಮ್ಮ ರೆಸ್ಯೂಮ್‌ಗಳೊಂದಿಗೆ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: Bara Parihara List-ಬರ ಪರಿಹಾರ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರಿದೆಯೇ ಎಂದು ಮೊಬೈಲ್‌ನಲ್ಲೇ ಪರಿಶೀಲಿಸಿ!

How To Register-ನೋಂದಣಿ ಹೇಗೆ?

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತ ಉದ್ಯೋಗಾಕಾಂಕ್ಷಿಗಳು ಯುವ ಉದ್ಯೋಗ ಸೇತು ಮೂಲಕ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನೋಂದಣಿ ಮಾಡಿಕೊಳ್ಳಬೇಕುಎ:

Step-1: ವಿದ್ಯಾರ್ಥಿಗಳು ಈ Register Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ.

Step-2: ನಂತರ ಇಲ್ಲಿ ಮುಖಪುಟದಲ್ಲಿ ಉದ್ಯೋಗ ಮೇಳ ದಕ್ಷಿಣ ಕನ್ನಡ ಎಂದು ತೋರಿಸುತ್ತದೆ ಅಲ್ಲೇ ಕೆಳಗೆ ಕಾಣಿಸುವ "ಅಭ್ಯರ್ಥಿಗಾಗಿ ನೋಂದಾಯಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಬಳಿಕ ಈ ಪೇಜ್ ನಲ್ಲಿ ನಿಮ್ಮ ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ OTP ಕಳುಹಿಸಿ ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿ ಪಡೆದು ಲಾಗಿನ್ ಅಗಿ.

Step-4: ಇದಾದ ನಂತರ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿ ನೋಂದಣಿ ಪೂರ್ಣಗೊಳಿಸಿ.

ಇದನ್ನೂ ಓದಿ: Agriculture Machinery Subsidy-ಪವರ್ ಸ್ಪ್ರ‍ೇಯರ್, ಪಂಪ್ ಸೆಟ್ ಸೇರಿದಂತೆ ವಿವಿಧ ಉಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಅರ್ಜಿ ಆಹ್ವಾನ!

ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನರು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ, ಅಗತ್ಯ ದಾಖಲೆಗಳು ಹಾಗೂ 5ಕ್ಕಿಂತ ಹೆಚ್ಚು ರೆಸ್ಯೂಮ್‌ಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉತ್ತಮ ಉದ್ಯೋಗಾವಕಾಶವನ್ನು ಪಡೆದುಕೊಳ್ಳುವತ್ತ ಹೆಜ್ಜೆ ಇಡಬಹುದು.

Udyoga Mela Official Website-ನೋಂದಣಿ ವೆಬ್‌ಸೈಟ್: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: