Subsidy Scheme-ಈ ಕಾರ್ಡ ಇದ್ದವರಿಗೆ ಹೆರಿಗೆ ವೆಚ್ಚ ಭರಿಸಲು ₹50 ಸಾವಿರ ಸಹಾಯಧನ!

March 20, 2025 | Siddesh
Subsidy Scheme-ಈ ಕಾರ್ಡ ಇದ್ದವರಿಗೆ ಹೆರಿಗೆ ವೆಚ್ಚ ಭರಿಸಲು ₹50 ಸಾವಿರ ಸಹಾಯಧನ!
Share Now:

ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆಯು, ರಾಜ್ಯದ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿ ಉದ್ದೇಶದಿಂದಾಗಿ ಲೇಬರ್ ಕಾರ್ಡ್(Delivery Assistance for Labour Card Holder's 2025) ಹೊಂದಿದ ಮಹಿಳೆಯ ಮೊದಲ ಎರಡು ಹೆರಿಗೆಗೆ 50 ಸಾವಿರ ರೂಪಾಯಿಯವರೆಗೆ ಆರ್ಥಿಕ ಸಹಾಯ ಧನವನ್ನು ನೀಡಲು ಅರ್ಜಿ ಆಹ್ವಾನಿಸಿದೆ.

ಕಾರ್ಮಿಕ ಇಲಾಖೆಯ ಹೆರಿಗೆ ಸೌಲಭ್ಯ ಯೋಜನೆಯ ಲಾಭವನ್ನು ಪಡೆಯುವುದು ಹೇಗೆ? ಅರ್ಜಿ ಯಾವಾಗ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸುವಾಗ ಬೇಕಾಗುವಂತಹ ಅಗತ್ಯ ದಾಖಲಾತಿಗಳು ಯಾವುವು ಎಂಬ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Agriculture Loan-13,689 ರೈತರ ಖಾತೆಗೆ ಶೂನ್ಯ ಬಡ್ಡಿದರದಲ್ಲಿ ₹589 ಕೋಟಿ ಸಾಲ!

Karmika ilake Subsidy Scheme-ಹೆರಿಗೆ ಸೌಲಭ್ಯ ಯೋಜನೆ :

ಇದು ಕಾರ್ಮಿಕ ಇಲಾಖೆಯ ಯೋಜನೆಯಾಗಿದ್ದು, ಕಾರ್ಮಿಕ ಮಂಡಳಿಯಲ್ಲಿ ನೊಂದಾಯಿತ ಮಹಿಳಾ ಕಾರ್ಮಿಕರಿಗೆ ತಮ್ಮ ಮಗುವಿನ ಮೊದಲ ಎರಡು ಹೆರಿಗೆಗೆ ಆರ್ಥಿಕ ಸಹಾಯಧನ ನೀಡುವ ಉದ್ದೇಶ ಈ ಯೋಜನೆಯದ್ದಾಗಿದೆ. ಅರ್ಹ ಮಹಿಳೆಯರಿಗೆ ಈ ಯೋಜನೆಯ ಅಡಿಯಲ್ಲಿ ಮೊದಲ ಎರಡು ಹೆರಿಗೆಗೆ ರೂ.50,000/- ಆರ್ಥಿಕ ಸಹಾಯ ನೀಡಲಾಗುವುದು.

ಕಾರ್ಮಿಕ ಇಲಾಖೆಯಲ್ಲಿ ಮಹಿಳಾ ಕಾರ್ಮಿಕರು ಎಂದು ನೋಂದಾಯಿಸಿದ್ದು, ಲೇಬರ್ ಕಾರ್ಡ್ ಹೊಂದಿರಬೇಕು. ಒಂದು ವೇಳೆ ಈಗಾಗಲೇ ನೊಂದಾಯಿತ ಮಹಿಳಾ ಕಾರ್ಮಿಕರಿಗೆ ಎರಡು ಮಕ್ಕಳಿದ್ದರೆ ಅಂಥವರಿಗೆ ಈ ಸೌಲಭ್ಯವು ಸಿಗುವುದಿಲ್ಲ.

ಇದನ್ನೂ ಓದಿ: RTC Joint Owner-ನಿಮ್ಮ ಪಹಣಿಯಲ್ಲಿ ಜಂಟಿಯಿರುವ ಖಾತೆಯನ್ನು ಸರಿಪಡಿಸಿಕೊಳ್ಳುವುದು ಹೇಗೆ?

Documents-ಬೇಕಾಗುವ ದಾಖಲಾತಿಗಳು ಯಾವುವು?

  • ಮಗುವಿನ ಜನನ ಪ್ರಮಾಣಪತ್ರ
  • ಆಸ್ಪತ್ರೆಯಿಂದ ಬಿಡುಗಡೆಯಾದ ವಿವರ
  • ಮಗುವಿನ ಫೋಟೋ
  • ಸ್ವಯಂ ಘೋಷಿತ ಪ್ರಮಾಣ ಪತ್ರ
  • 90 ದಿನ ಕೆಲಸ ಮಾಡಿದ ಪ್ರಮಾಣ ಪತ್ರ

Application Last Date-ಅರ್ಜಿ ಸಲ್ಲಿಕೆಗೆ ನಿಗದಿತ ಅವಧಿ :

ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ನೀವು ಕಡ್ಡಾಯವಾಗಿ ಮಗುವಿನ ಜನ್ಮ ದಿನಾಂಕದಿಂದ 6 ತಿಂಗಳ ಒಳಗಾಗಿ ಅರ್ಜಿ ಸಲ್ಲಿಸದಲ್ಲಿ ಮಾತ್ರ ಈ ಯೋಜನೆಯ ಲಾಭ ನಿಮಗೆ ಸಿಗಲಿದೆ.

ಇದನ್ನೂ ಓದಿ: RTC Joint Owner-ನಿಮ್ಮ ಪಹಣಿಯಲ್ಲಿ ಜಂಟಿಯಿರುವ ಖಾತೆಯನ್ನು ಸರಿಪಡಿಸಿಕೊಳ್ಳುವುದು ಹೇಗೆ?

karmika ilake yojane

How To Apply-ಹಾಗಿದ್ದರೆ ಅರ್ಜಿ ಹೇಗೆ ಸಲ್ಲಿಸಬೇಕು?

ನೀವು ಈ ಯೋಜನೆಯ ಲಾಭ ಪಡೆಯಲು ಅಗತ್ಯ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕಂಪ್ಯೂಟರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರವೂ ಕೂಡ ಅರ್ಜಿ ಸಲ್ಲಿಸಬಹುದು.

Online Application Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಈ APPLY NOW ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Karmika Card-ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ 2 ಲಕ್ಷ ರೂ. ಸಿಗುವ ಹೊಸ ಯೋಜನೆ!

Step-2: ಬಳಿಕ ಈ ಪೇಜ್ ನಲ್ಲಿ ಕೊನೆಯಲ್ಲಿ ಕಾಣುವ "ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ OTP ಅನ್ನು ಪಡೆದು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-3: ಬಳಿಕ ಇಲ್ಲಿ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಕಾರ್ಮಿಕ ಇಲಾಖೆಯ ಹೆರಿಗೆ ಸೌಲಭ್ಯ ಯೋಜನೆಯ ಜಾಲತಾಣ-CLICK HERE

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: