ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು(GKVK), 2025- 26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿಸ್ತರಣಾ ನಿರ್ದೇಶನಾಲಯದ ದೂರ ಶಿಕ್ಷಣ ಘಟಕ ನಡೆಸುವ ವಿವಿಧ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸಗಳಿಗೆ(Certificate and Diploma Courses by Agricultural University-2025) ಅರ್ಜಿ ಆಹ್ವಾನಿಸಲಾಗಿದೆ.
ಇದರಲ್ಲಿ ಕೇವಲ ಓದಲು, ಬರೆಯಲು ಬರುವ ಅಭ್ಯರ್ಥಿಗಳಿಂದ ಹಿಡಿದು ಪದವಿ ಮುಗಿಸಿರುವ ಅಭ್ಯರ್ಥಿಗಳ ತನಕ ವಿವಿಧ ಡಿಪ್ಲೋಮಾ ಕೋರ್ಸ್ ಗಳು ಹಾಗೂ ಸರ್ಟಿಫಿಕೇಟ್ ಕೋರ್ಸ್ ಗಳನ್ನು(Diploma Certificate Courses) ಮಾಡಲು ಮುಕ್ತ ಅವಕಾಶವಿದ್ದು, ಈ ಒಂದು ಸುವರ್ಣ ಅವಕಾಶವನ್ನು ಸದಪಯೋಗಪಡಿಸಿಕೊಳ್ಳಲು ಇರಬೇಕಾದ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Subsidy Scheme-ಈ ಕಾರ್ಡ ಇದ್ದವರಿಗೆ ಹೆರಿಗೆ ವೆಚ್ಚ ಭರಿಸಲು ₹50 ಸಾವಿರ ಸಹಾಯಧನ!
ಈ ಅಂಕಣದಲ್ಲಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಅರ್ಹತೆಗಳೇನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳ ಮಾಹಿತಿ ಸೇರಿದಂತೆ ಸಂಪೂರ್ಣ ವಿವರವನ್ನು ಇಲ್ಲಿ ಪ್ರಕಟಿಸಲಾಗಿದ್ದು ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.
Agricultural Certificate Diploma Courses-ಈ ಯೋಜನೆಯ ಮುಖ್ಯ ಉದ್ದೇಶವೇನು?
ಗ್ರಾಮೀಣ ಪ್ರದೇಶದಲ್ಲಿ ವಿಶೇಷವಾಗಿ ಶಾಲಾ ಮತ್ತು ಕಾಲೇಜು ವ್ಯಾಸಂಗ ವಂಚಿತರಾದ ಯುವ ಜನರಿಗೆ ಖುಷಿಯ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸುವುದು ಹಾಗೂ ಕೃಷಿ ತಾಂತ್ರಿಕತೆಗಳನ್ನು ರೈತರಿಗೆ ದೂರ ಶಿಕ್ಷಣದ ಮೂಲಕ ತಲುಪಿಸುವುದು ಇದರ ಉದ್ದೇಶವಾಗಿದೆ.
ಅದೇ ರೀತಿ ಕಾರ್ಯನಿರತರಾಗಿರುವ ಉದ್ಯೋಗಗಳಿಗೆ ಕೂಡ ಉನ್ನತ ಕೃಷಿ ಜ್ಞಾನವನ್ನು ವೃದ್ಧಿಸಿಕೊಳ್ಳುವ ಅವಕಾಶ ಒದಗಿಸುವುದು ಕೂಡ ಈ ಯೋಜನೆಯ ಉದ್ದೇಶವಾಗಿದೆ.
ಇದನ್ನೂ ಓದಿ: Agriculture Loan-13,689 ರೈತರ ಖಾತೆಗೆ ಶೂನ್ಯ ಬಡ್ಡಿದರದಲ್ಲಿ ₹589 ಕೋಟಿ ಸಾಲ!

Diploma Courses Details-ಕೋರ್ಸ್ ಗಳ ವಿವರ :
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಒಟ್ಟು 2 ತರಹದ ಕೋರ್ಸ್ ಗಳನ್ನು ಆಫರ್ ಮಾಡಿದ್ದು ಈ ಕೆಳಗಿನಂತಿವೆ.
1)ಡಿಪ್ಲೋಮಾ ಕೋರ್ಸ್ ಗಳು:
- ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಅಗ್ರಿಕಲ್ಚರ್
- ಒಂದು ವರ್ಷದ ಕೃಷಿ ಡಿಪ್ಲೋಮಾ
2)ಸರ್ಟಿಫಿಕೇಟ್ ಕೋರ್ಸ್ ಗಳು:
- ಕೃಷಿಯಲ್ಲಿ ಬೀಜೋತ್ಪಾದನೆ ತಾಂತ್ರಿಕತೆಗಳು
- ಕೃಷಿಯಲ್ಲಿ ಯಂತ್ರೋಪಕರಣಗಳ ನಿರ್ವಹಣೆ
- ಜೇನು ಸಾಕಾಣಿಕೆ
- ಸಮಗ್ರ ಕೃಷಿ
- ಸಾವಯುವ ಕೃಷಿ
ಇದನ್ನೂ ಓದಿ: RTC Joint Owner-ನಿಮ್ಮ ಪಹಣಿಯಲ್ಲಿ ಜಂಟಿಯಿರುವ ಖಾತೆಯನ್ನು ಸರಿಪಡಿಸಿಕೊಳ್ಳುವುದು ಹೇಗೆ?
Admission Fee Structure-ಕೋರ್ಸ್ ಗಳ ಅವಧಿ, ಅರ್ಜಿ ಶುಲ್ಕ ಹಾಗೂ ಕೋರ್ಸ್ ಶುಲ್ಕಗಳ ವಿವರ:
ಎಲ್ಲಾ ಕೋರ್ಸಗಳು ಒಂದು ವರ್ಷದ ಅವಧಿಯ ಕೋರ್ಸ್ ಗಳಾಗಿವೆ. ಎಲ್ಲಾ ಕೋರ್ಸ್ ಗಳಿಗೂ ಅರ್ಜಿ ಸಲ್ಲಿಸಲು 100 ರೂಪಾಯಿ ಅರ್ಜಿ ಶುಲ್ಕ ಪಾವತತಿಸಿ ಅರ್ಜಿ ಸಲ್ಲಿಸಬೇಕು.
ಕೋರ್ಸ್ ಶುಲ್ಕಗಳನ್ನು ಕೋರ್ಸ್ ಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗಿದ್ದು ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಪರಿಶೀಲಿಸಿ ಅರ್ಜಿ ಸಲ್ಲಿಸಿ.
Eligibility Criteria-ಅರ್ಹತೆಗಳು:
- ಪೋಸ್ಟ್ ಗ್ರಾಜುವೇಟ್ ಡಿಪ್ಲೋಮಾ ಇನ್ ಅಗ್ರಿಕಲ್ಚರ್ ಕೋರ್ಸ್ ಮಾಡಲು ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿ ಮುಗಿಸಿರಬೇಕು.
- ಒಂದು ವರ್ಷದ ಕೃಷಿ ಡಿಪ್ಲೋಮಾ, ಕೃಷಿಯಲ್ಲಿ ಬೀಜ ಉತ್ಪಾದನೆಯ ತಾಂತ್ರಿಕತೆಗಳು ಹಾಗೂ ಕೃಷಿಯಲ್ಲಿ ಯಂತ್ರೋಪಕರಣಗಳ ನಿರ್ವಹಣೆ ಕೋರ್ಸ್ ಗಳಿಗಾಗಿ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು.
- ಜೇನು ಸಾಕಾಣಿಕೆ ಮತ್ತು ಸಮಗ್ರ ಕೃಷಿ ಕೋರ್ಸ್ ಗಾಗಿ ಕನಿಷ್ಠ 7ನೇ ತರಗತಿ ಪಾಸ್ ಆಗಿರಬೇಕು.
- ಸಾವಯುವ ಕೃಷಿ ಕೋರ್ಸ್ ಗೆ ಅರ್ಜಿ ಸಲ್ಲಿಸಲು ಕೇವಲ ಓದಲು ಬರೆಯಲು ಬಲ್ಲವರಾಗಿದ್ದರೆ ಸಾಕು.
ಇದನ್ನೂ ಓದಿ: RTC Joint Owner-ನಿಮ್ಮ ಪಹಣಿಯಲ್ಲಿ ಜಂಟಿಯಿರುವ ಖಾತೆಯನ್ನು ಸರಿಪಡಿಸಿಕೊಳ್ಳುವುದು ಹೇಗೆ?
How To Apply For-ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳು ಬೆಳಗ್ಗೆ ನೀಡಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
Office Address-ವಿಳಾಸ:
ದೂರ ಶಿಕ್ಷಣ ಘಟಕ, ವಿಸ್ತರಣಾ ನಿರ್ದೇಶನಾಲಯ
ಕೃಷಿ ವಿಶ್ವವಿದ್ಯಾನಿಲಯ
ಜಕೆವಿಕೆ, ಬೆಂಗಳೂರು – 560065
Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 12ನೇ ಏಪ್ರಿಲ್ 2025
Offcial Website-ಕೃಷಿ ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣ- Click here