Land Conversion-ಗ್ರಾಮೀಣ ಭಾಗದಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ: ಸಚಿವ ಕೃಷ್ಣಬೈರೇಗೌಡ

March 21, 2025 | Siddesh
Land Conversion-ಗ್ರಾಮೀಣ ಭಾಗದಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ: ಸಚಿವ ಕೃಷ್ಣಬೈರೇಗೌಡ
Share Now:

ಗ್ರಾಮೀಣ ಭಾಗದಲ್ಲಿ ಗ್ರಾಮಠಾಣ(NA Land) ವ್ಯಾಪ್ತಿಯಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಸಾರ್ವಜನಿಕರು ಭೂ ಪರಿವರ್ತನೆಯನ್ನು ಮಾಡಿಕೊಳ್ಳಲು ಅವಶ್ಯಕತೆಯಿರುವುದಿಲ್ಲ ಎಂದು ಕಂದಾಯ ಸಚಿವರು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ಸಮಯದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು ಇದರ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.

ಗ್ರಾಮಠಾಣ ಒಳಗಡೆ ನೀಲಿ ನಕ್ಷೆಯ ಪ್ರಕಾರ ಮನೆ ಕಟ್ಟಲು ಅವಕಾಶ ಇರುತ್ತದೆ. ಆದರೆ ಭೂ ಪರಿವರ್ತನೆಗೆ(Land Conversion) ಅವಕಾಶ ಇಲ್ಲ. ಒಂದು ವೇಳೆ ಕೃಷಿ ಭೂಮಿ (ಸರ್ವೆ ನಂ) ವ್ಯಾಪ್ತಿಯಲ್ಲಿದ್ದರೆ, ಭೂಪರಿವರ್ತನೆಗೆ ಅವಕಾಶ ಇರುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ(Krishna byre gowda) ಅವರು ತಿಳಿಸಿದರು.

ಇದನ್ನೂ ಓದಿ: Diploma Certificate Courses-ಕೃಷಿ ವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡುವ ಅರ್ಜಿ ಆಹ್ವಾನ!

ನಿನ್ನೆ ನಡೆದ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಜವರಾಯಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಗ್ರಾಮ ಪಂಚಾಯತ್(Grama Panchayat) ವ್ಯಾಪ್ತಿಯಲ್ಲಿ ಬರುವ ಗ್ರಾಮಠಾಣ ಹಾಗೂ ಊರುಗುಪ್ಪೆ ಸರ್ವೆ ನಂಬರ್ ಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ನಿವಾಸಿಗಳಿಗೆ ಸಂಬಂಧಿಸಿದ ಹಕ್ಕು ಪತ್ರ ನೀಡುವ ಬಗ್ಗೆ ಸಂಬಂಧಿಸಿದ ಗ್ರಾಮ ಪಂಚಾಯತಿಗಳಿಂದ ನಿಯಮಾನುಸಾರ ಕ್ರಮವಹಿಸಬಹುದಾಗಿರುತ್ತದೆ.

ಗ್ರಾಮಠಾಣ ಹಾಗೂ ಊರುಗುಪ್ಪೆ ಸರ್ವೆ ನಂಬರ್ ಗಳಲ್ಲಿ ಕಂದಾಯ ಇಲಾಖೆಗೆ(karnataka revenue department) ಸೇರಿದ ಸರ್ವೆ ನಂಬರ್ ಅಥವಾ ಜಮೀನುಗಳಿದ್ದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 94ಸಿ/94ಸಿಸಿ/94ಡಿ ರಂತೆ ಕ್ರಮವಹಿಸಲು ಅವಕಾಶ ಇರುತ್ತದೆ.

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 94ಸಿ ಮತ್ತು ಕಲಂ 94ಸಿಸಿ ರಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಸ್ವೀಕರಿಸಿದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಅವಕಾಶವಿರುತ್ತದೆ.

ಇದನ್ನೂ ಓದಿ: Subsidy Scheme-ಈ ಕಾರ್ಡ ಇದ್ದವರಿಗೆ ಹೆರಿಗೆ ವೆಚ್ಚ ಭರಿಸಲು ₹50 ಸಾವಿರ ಸಹಾಯಧನ!

krishna byre gowda

ಗ್ರಾಮ ಪಂಚಾಯಿತಿಗಳ(GP) ವ್ಯಾಪ್ತಿಯಲ್ಲಿನ ನಿವೇಶನಗಳು ಮತ್ತು ಕಟ್ಟಡಗಳನ್ನು ಕ್ರಮಬದ್ಧವಲ್ಲದ (ಸರ್ಕಾರಿ/ಸ್ಥಳೀಯ ಸಂಸ್ಥೆ/ಶಾಸನಬದ್ಧ ಸಂಸ್ಥೆ/ಅರಣ್ಯ ಭೂಮಿಯನ್ನು ಹೊರತುಪಡಿಸಿ) ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಪ್ರತ್ಯೇಕ ವಹಿಯಲ್ಲಿ ದಾಖಲಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ,

1993ಕ್ಕೆ ತಿದ್ದುಪಡಿ ತರಲಾಗುತ್ತಿದೆ. ಅಧಿನಿಯಮಕ್ಕೆ ತರಲಾಗುವ ತಿದ್ದುಪಡಿಯನ್ವಯ, ನಿಯಮಗಳನ್ನು ರೂಪಿಸಿ ದಿನಾಂಕ: 14.06.2013 ಮೊದಲು ಹಾಗೂ ನಂತರ ನೋಂದಣಿಯಾದ ಎಲ್ಲಾ ನಿವೇಶನಗಳು ಮತ್ತು ಕಟ್ಟಡಗಳಿಗೆ ಅಭಿಯಾನದ ಮಾದರಿಯಲ್ಲಿ ಇ-ಸ್ವತ್ತು ತಂತ್ರಾಂಶದ ಮೂಲಕ ಖಾತೆ ನೀಡಲು ಕ್ರಮ ಕೈಗೊಳ್ಳಲಾಗುವುದು.

ಗ್ರಾಮಠಾಣಗಳಿಗೆ, ಊರುಗುಪ್ಪೆ ಸರ್ವೆ ನಂಬರ್ ನಲ್ಲಿರುವ ಸ್ವತ್ತು ಪಹಣಿಯಲ್ಲಿ(RTC) ಗ್ರಾಮಸ್ಥರು ಎಂದು ಬರುತ್ತಿದ್ದಲ್ಲಿ ಪುನಃ ಪಹಣಿಯಲ್ಲಿ ತರುವ ಅವಶ್ಯಕತೆ ಕಂಡು ಬರುವುದಿಲ್ಲ. ಇಂತಹ ಪಹಣಿಗಳಲ್ಲಿ ಗ್ರಾಮಸ್ಥರು ಎಂದು ಪಹಣಿ ಕಾಲಂ 9 ಅಥವಾ 11 ರಲ್ಲಿ ನಮೂದಾಗಿರುವುದರಿಂದ ಹಾಗೂ ಖಾಸಗಿ ಖಾತೆದಾರರ ಹೆಸರು ನಮೂದಿರುವುದಿಲ್ಲವಾದ್ದರಿಂದ ಕರ್ನಾಟಕ ಭೂಕಂದಾಯ ಕಾಯ್ದೆ 1964 ರಡಿ ಭೂಪರಿವರ್ತನೆ ಮಾಡಲು ಸಾಧ್ಯವಿರುವುದಿಲ್ಲ. ಪ್ರಸ್ತುತ ಪಹಣಿಯಲ್ಲಿ ಮಾಲೀಕರ ಹೆಸರು ನಮೂದಿದ್ದಲ್ಲಿ ಮಾತ್ರ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Agriculture Loan-13,689 ರೈತರ ಖಾತೆಗೆ ಶೂನ್ಯ ಬಡ್ಡಿದರದಲ್ಲಿ ₹589 ಕೋಟಿ ಸಾಲ!

ಕೃಷಿ ಜಮೀನನ್ನು ವ್ಯವಸಾಯೇತರ ಉದ್ದೇಶಕ್ಕೆ ಭೂ ಪರಿವರ್ತಿಸಲು ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 95(2) ರಡಿ ಅವಕಾಶ ಕಲ್ಪಿಸಲಾಗಿದೆ.ಗ್ರಾಮಠಾಣ, ಊರುಗುಪ್ಪೆ ಸ.ನಂ ನಲ್ಲಿರುವ ಸ್ವತ್ತು, ಆರ್ ಟಿ ಸಿ ನಲ್ಲಿ ಗ್ರಾಮಸ್ಥರು ಎಂದು ದಾಖಲಿರುವ ಸ್ವತ್ತುಗಳಿಗೆ ಭೂಪರಿವರ್ತಿಸಲು ಕಾಯ್ದೆಗಳಡಿ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

Village Map Download-ನಿಮ್ಮ ಗ್ರಾಮದ ನಕ್ಷೆಯನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು:

ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಈ ಕೆಳಗಿನ ಹಂತಗಳನ್ನು ಅನುಸರಿಸಿ ನಿಮ್ಮ ಗ್ರಾಮದ ಅಧಿಕೃತ ಕಂದಾಯ ನಕ್ಷೆಯನ್ನು(Revenue Map Download) ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.

Step-1: ಮೊಟ್ಟ ಮೊದಲಿಗೆ Download Village Map ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: RTC Joint Owner-ನಿಮ್ಮ ಪಹಣಿಯಲ್ಲಿ ಜಂಟಿಯಿರುವ ಖಾತೆಯನ್ನು ಸರಿಪಡಿಸಿಕೊಳ್ಳುವುದು ಹೇಗೆ?

revenue map

Step-2: ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, Map Type ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡು "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮ/ಹಳ್ಳಿಯ ಕಂದಾಯ ನಕ್ಷೆಯು ತೆರೆದುಕೊಳ್ಳುತ್ತದೆ ಇಲ್ಲಿ ಕೊನೆಯಲ್ಲಿ ಕಾಣುವ "PDF" ಐಕಾನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಗ್ರಾಮದ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಈ ನಕ್ಷೆಯಲ್ಲಿ ನಿಮ್ಮ ಗ್ರಾಮದ ಗಡಿ ರೇಖೆ, ಸರ್ವೆ ನಂಬರ್ ವಾರು ಗಡಿ, ಕಾಲುದಾರಿ, ಬಂಡಿದಾರಿ, ಜಮೀನಿನ ಸರ್ವೆ ನಂಬರ್ ವಿವರ, ನೀರು ಹರಿಯುವ ದಿಕ್ಕಿನ ದಿಕ್ಸೂಚಿ, ದೇವಸ್ಥಾನ ಇರುವ ಜಾಗ, ನದಿ ಮತ್ತು ಹಳ್ಳ ಹಾಗೂ ಅಣೆಕಟ್ಟು ಸ್ಥಳದ ಮಾಹಿತಿ, ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ PDF ನಕ್ಷಯಲ್ಲಿ ಸಾರ್ವಜನಿಕರು ಕಾಣಬಹುದಾಗಿದೆ.

Share Now: