Ration Card And LPG-ಜೂನ್ 01 ರಿಂದ ರೇಷನ್ ಕಾರ್ಡ ಮತ್ತು LPG ಸಿಲಿಂಡರ್ ವಿತರಣೆಯಲ್ಲಿ ಪ್ರಮುಖ ಬದಲಾವಣೆ!

May 11, 2025 | Siddesh
Ration Card And LPG-ಜೂನ್ 01 ರಿಂದ ರೇಷನ್ ಕಾರ್ಡ ಮತ್ತು LPG ಸಿಲಿಂಡರ್ ವಿತರಣೆಯಲ್ಲಿ ಪ್ರಮುಖ ಬದಲಾವಣೆ!
Share Now:

ನಾಗರಿಕರಿಗೆ ದಿನನಿತ್ಯ ಅಗತ್ಯವಾಗಿ ಅವಶ್ಯವಿರುವ ಪ್ರಮುಖ ಸರ್ಕಾರದ ಯೋಜನೆಗಳಲ್ಲಿ ರೇಷನ್ ಕಾರ್ಡ(Ration Card) ಮತ್ತು ಎಲ್.ಪಿ.ಜಿ ಸಿಲಿಂಡರ್(LPG Cylinder) ಬಹು ಮುಖ್ಯವಾಗಿದ್ದು ಇದರ ವಿತರಣೆಯಲ್ಲಿ ಸರ್ಕಾರದಿಂದ ಮುಂದಿನ ತಿಂಗಳಿನಿಂದ ಪ್ರಮುಖ ಬದಲಾವಣೆಗಳನ್ನು ತರಲು ಮುಂದಾಗಿದ್ದು, ಇದರ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಆಹಾರ ಇಲಾಖೆಯಿಂದ(Ahara Ilake) ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಸಾರ್ವಜನಿಕರಿಗೆ ಉಚಿತವಾಗಿ ಸರ್ಕಾರದ ವಿವಿಧ ಯೋಜನೆಯಡಿ ಆಹಾರ ಧಾನ್ಯ ಮತ್ತು ಇನ್ನಿತರೆ ಯೋಜನೆಯ ಸೌಲಭ್ಯವನ್ನು ಒದಗಿಸಲು ಪಡಿತರ ಚೀಟಿ/ರೇಶನ್ ಕಾರ್ಡ ಅನ್ನು ವಿತರಣೆ ಮಾಡಲಾಗುತ್ತದೆ.

ಇದನ್ನೂ ಓದಿ: Diploma Application-ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ! ತಿಂಗಳಿಗೆ ರೂ. 2,500/- ಶಿಷ್ಯವೇತನ!

ಇದರ ಜೊತೆಗೆ ಗೃಹ ಬಳಕೆಗೆ ದಿನನಿತ್ಯ ಅವಶ್ಯವಾಗಿ ಆಹಾರವನ್ನು ತಯಾರಿಸಲು ಬೇಕಾಗುವ ಸಿಲಿಂಡರ್ ಅನ್ನು ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ(Ujwal Scheme) ಸಬ್ಸಿಡಿ ದರದಲ್ಲಿ ನಾಗರಿಕರಿಗೆ ವಿತರಣೆ ಮಾಡಲಾಗುತ್ತದೆ, ಪ್ರಸ್ತುತ ಈ ಅಂಕಣದಲ್ಲಿ ರೇಷನ್ ಕಾರ್ಡ ಮತ್ತು ಸಿಲಿಂಡರ್ ವಿತರಣೆ(Ration Card And LPG Yojana) ಕುರಿತು ಜೂನ್ ತಿಂಗಳಿನಿಂದ ಪ್ರಮುಖ ಬದಲಾವಣೆಗಳ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Ration Card And LPG-ಜೂನ್ 01 ರಿಂದ ರೇಷನ್ ಕಾರ್ಡ ಮತ್ತು LPG ಸಿಲಿಂಡರ್ ವಿತರಣೆಯಲ್ಲಿ ಪ್ರಮುಖ ಬದಲಾವಣೆ:

ರೇಷನ್ ಕಾರ್ಡ ವಿತರಣೆ ಮತ್ತು ಸಿಲಿಂಡರ್ ಅನ್ನು ಅರ್ಹ ನಾಗರಿಕರಿಗೆ ವಿತರಣೆ ಮಾಡುವುದರ ಕುರಿತು ಸರ್ಕಾರದ ನಿಯಮದಲ್ಲಿ ಬದಲಾವಣೆ ಮಾಡಲು ಮುಂದಾಗಿರುವ ಅಂಶಗಳ ವಿವರ ಈ ಕೆಳಗಿನಂತಿದೆ.

ಇದನ್ನೂ ಓದಿ: Birth Certificate-ಇನ್ನೂ ಮುಂದೆ ಜನನ ಪ್ರಮಾಣ ಪತ್ರ ಪಡೆಯುವುದು ಭಾರಿ ಸುಲಭ!

Ration Card Latest Updates-ರೇಷನ್ ಕಾರ್ಡ ಬದಲಾವಣೆಗಳು:

New Ration Card-ಹೊಸ ರೇಷನ್ ಕಾರ್ಡ ಪಡೆಯಲು ಅವಕಾಶ:

ಈ ಹಿಂದೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ಬಳಿಕ ಹೊಸ APL ಕಾರ್ಡ ಮತ್ತು BPL ಕಾರ್ಡಗಳನ್ನು ಪಡೆಯಲು ಅರ್ಜಿ ಸಲ್ಲಿಸುವುದನ್ನು ಸ್ಥಗಿತಗೊಳಿಸಲಾಗಿತ್ತು ಪ್ರಸ್ತುತ ಈ ನಿಯಮಕ್ಕೆ ಸಡಿಲಿಕೆಯನ್ನು ನೀಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಸಲ್ಲಿಸಲು ನಾಗರಿಕರಿಗೆ ಅವಕಾಶವನ್ನು ನೀಡಲು ಸರ್ಕಾರ ಮುಂದಾಗಿದೆ.

Ration Card Distribution-ರೇಷನ್ ಕಾರ್ಡ ವಿತರಣೆಗೆ ಕ್ರಮ:

ಈಗಾಗಲೇ ರೇಷನ್ ಕಾರ್ಡ ಪಡೆಯಲು ಅರ್ಜಿಯನ್ನು ಸಲ್ಲಿಸಿ ಕಾರ್ಡ ವಿತರಣೆಗೆ ಕಾಯುತ್ತಿರುವವರಿಗೂ ಸಹ ಸಿಹಿ ಸುದ್ದಿಯನ್ನು ನೀಡಲಾಗಿದ್ದು ಇಲ್ಲಿಯವರೆಗೆ ವಿತರಣೆಯಾಗದ ರೇಷನ್ ಕಾರ್ಡಗಳನ್ನು ವಿತರಣೆ ಮಾಡಲು ಸಹ ಆಹಾರ ಇಲಾಖೆಯಿಂದ ಸೂಕ್ತ ಕ್ರಮಗೊಳ್ಳಲು ಸರ್ಕಾರ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Farm Pond Subsidy-ಕೃಷಿ ಹೊಂಡ ನಿರ್ಮಾಣಕ್ಕೆ ಶೇ 90% ಸಹಾಯಧನ!

Ration Card e-KYC-ಇ-ಕೆವೈಸಿ ಮಾಡಿಕೊಳ್ಳದವರಿಗೆ ರೇಷನ್ ವಿತರಣೆ ಸ್ಥಿಗಿತ:

ರೇಷನ್ ಕಾರ್ಡ ಅನ್ನು ಪಡೆದು ಕಾರ್ಡನಲ್ಲಿರುವ ಎಲ್ಲ ಸದಸ್ಯರ ಇ-ಕೆವೈಸಿ ಅಗದೇ ಇದ್ದಲ್ಲಿ ಆ ಸದಸ್ಯರ ಪಾಲಿನ ಪ್ರತಿ ತಿಂಗಳ ರೇಷನ್ ವಿತರಣೆಯನ್ನು ಸ್ಥಿಗಿತ ಮಾಡಲು ಆಹಾರ ಇಲಾಕೆ ನಿರ್ಧರಿಸಿದೆ.

lpg

LPG Cylinder Latest News-ಎಲ್.ಪಿ.ಜಿ ಸಿಲಿಂಡರ್ ವಿತರಣೆ ಬದಲಾವಣೆ ವಿವರ ಹೀಗಿದೆ:

Renewal-6 ತಿಂಗಳ ಬದಲಾಗಿ ಒಂದು ವರ್ಷಕ್ಕೆ ನವೀಕರಣ:

ಸಹಾಯಧನದಲ್ಲಿ ಸಿಲಿಂಡರ್ ಅನ್ನು ಪಡೆಯಲು ಈ ಹಿಂದೆ ಎಲ್.ಪಿ.ಜಿ ಸಿಲಿಂಡರ್ ಅನ್ನು ಪಡೆಯಲು ಆರು ತಿಂಗಳ ಬದಲಾಗಿ ಒಂದು ವರ್ಷಕ್ಕೆ ನವೀಕರಣ ಮಾಡಿಕೊಳ್ಳಲು ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ.

ಇದನ್ನೂ ಓದಿ: PM Kisan-2025: ಪಿ ಎಂ ಕಿಸಾನ್ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಪ್ರಕಟ!

Adhar card link-ಆಧಾರ್ ಲಿಂಕ್ ಕಡ್ಡಾಯ:

ಹೊಸದಾಗಿ ಉಜ್ವಲ ಯೋಜನೆಯಡಿ ಸಬ್ಸಿಡಿಯಲ್ಲಿ ಗೃಹ ಬಳಕೆ ಸಿಲಿಂಡರ್ ಅನ್ನು ಫಲಾನುಭವಿಗಳು ಪಡೆಯಲು ತಮ್ಮ ಆಧಾರ್ ಅನ್ನು ಲಿಂಕ್ ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

New LPG Connection-ಹೊಸ ಕನೆಕ್ಷನ್ ಪಡೆಯಲು ಅರ್ಜಿ ಸಲ್ಲಿಕೆ ವಿಧಾನದಲ್ಲಿ ಸರಳೀಕರಣ:

ನಾಗರಿಕರು ಇನ್ನು ಮುಂದೆ ಹೊಸ ಸಿಲಿಂಡರ್ ಕನೆಕ್ಷನ್ ಅನ್ನು ಪಡೆಯಲು ಅರ್ಜಿಯನ್ನು ಸಲ್ಲಿಸುವ ವಿಧಾನದಲ್ಲಿ ಅರ್ಜಿ ವಿಲೇವಾರಿಯ ವಿಧಾನದಲ್ಲಿ ಸರಳೀಕರಣ ಮಾಡಲಾಗಿದ್ದು ಈ ಕ್ರಮದಿಂದ ನಾಗರಿಕರು ಶೀಘ್ರವಾಗಿ ಸಿಲಿಂಡರ್ ಅನ್ನು ಕನೆಕ್ಷನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.

Ration Card And LPG Important Information-ಸಾರ್ವಜನಿಕರು ತಪ್ಪದೇ ಈ ಕ್ರಮ ಅನುಸರಿಸಿ:

1) ಇಲ್ಲಿಯವರೆಗೆ ರೇಷನ್ ಕಾರ್ಡಗೆ ಇ-ಕೆವೈಸಿ ಅನ್ನು ಮಾಡಿಕೊಳ್ಳದವರು ತಪ್ಪದೇ ನಿಮ್ಮ ನ್ಯಾಯಬೆಲೆ ಅಂಗಡಿಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಇ-ಕೆವೈಸಿ ಮಾಡಿಕೊಳ್ಳಿ.

2) ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿಯನ್ನು ಪಡೆಯುತ್ತಿರುವವರು ತಪ್ಪದೇ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಅನ್ನು ಲಿಂಕ್ ಅಗಿರುವುದನ್ನು ಖಚಿತಪಡಿಸಿಕೊಳ್ಳಿ ಲಿಂಕ್ ಇಲ್ಲದೇ ಇದ್ದಲ್ಲಿ ಲಿಂಕ್ ಮಾಡಿಸಿಕೊಳ್ಳಿ.

3) ಹೊಸ ರೇಷನ್ ಕಾರ್ಡ ಪಡೆಯಲು ಅರ್ಹರಿರುವವರು ಕೂಡಲೇ ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳನ್ನು ಸಿದ್ದಪಡಿಸಿ ಇಟ್ಟುಕೊಳ್ಳಿ.

4) ಈಗಾಗಲೇ ರೇಶನ್ ಕಾರ್ಡ ಅನ್ನು ಪಡೆಯಲು ಅರ್ಜಿ ಸಲ್ಲಿಸಿದರು ಕಾರ್ಡ ಅನ್ನು ಪಡೆಯಲು ನಿಮ್ಮ ತಾಲ್ಲೂಕಿನ ಆಹಾರ ಇಲಾಖೆ ಕಚೇರಿಯನ್ನು ಭೇಟಿ ಮಾಡಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: