Nano DAP-ನಾನ್ಯೋ ಡಿ.ಎ.ಪಿ ಬಳಸುವ ಮುನ್ನ ತಪ್ಪದೇ ಈ ಮಾಹಿತಿ ತಿಳಿಯಿರಿ!

July 22, 2025 | Siddesh
Nano DAP-ನಾನ್ಯೋ ಡಿ.ಎ.ಪಿ ಬಳಸುವ ಮುನ್ನ ತಪ್ಪದೇ ಈ ಮಾಹಿತಿ ತಿಳಿಯಿರಿ!
Share Now:

ಇಪ್ಕೋ ಸಂಸ್ಥೆಯು(Iffco) ನಾನ್ಯೋ ಯೂರಿಯಾ(Nano Urea) ಮತ್ತು ನಾನ್ಯೋ ಡಿ.ಎ.ಪಿಯನ್ನು(Nano DAP) ಗೊಬ್ಬರವನ್ನು ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆ ಮಾಡಿದ್ದು ಇಂದಿನ ಈ ಅಂಕಣದಲ್ಲಿ ನಾನ್ಯೋ ಡಿ.ಎ.ಪಿ ಬಳಸುವ ಮುನ್ನ ರೈತರು ತಿಳಿದಿರಬೇಕಾದ ಅವಶ್ಯಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಈ ಲೇಖನದಲ್ಲಿ ನಾನ್ಯೋ ಡಿ.ಎ.ಪಿಯನ್ನು(Nano DAP Fertilizer) ಬಳಕೆ ಮಾಡುವುದರಿಂದ ರೈತರಿಗೆ ಯಾವೆಲ್ಲ ಪ್ರಯೋಜನಗಳಿವೆ? ನಾನ್ಯೋ ಡಿ.ಎ.ಪಿಯನ್ನು ವಿವಿಧ ಬೆಳೆಗಳಲ್ಲಿ ಬಳಸುವ ವಿಧಾನ ಮತ್ತು ಪ್ರಮಾಣ ಎಷ್ಟು?ನಾನ್ಯೋ ಡಿ.ಎ.ಪಿ ಕುರಿತು ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಲಿಂಕ್ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: E-swathu Status-ನಿಮ್ಮ ಮನೆ ದಾಖಲೆಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ!

How To Use Nano DAP Fertilizer-ನಾನ್ಯೋ ಡಿ.ಎ.ಪಿಯನ್ನು ವಿವಿಧ ಬೆಳೆಗಳಲ್ಲಿ ಬಳಸುವ ವಿಧಾನ ಮತ್ತು ಪ್ರಮಾಣ ಎಷ್ಟು?

ಮೆಕ್ಕೆಜೋಳ: ಮೆಕ್ಕೆಜೋಳ ಬೆಳೆಯಲ್ಲಿ ಪ್ರಾರಂಭಿಕ ಹಂತದಲ್ಲಿ ಬಿತ್ತನೆ ಮಾಡುವಾಗ ಬೀಜಗಳಿಗೆ 3-5 ಮಿಲಿ ನಾನ್ಯೋ ಡಿ.ಎ.ಪಿಯನ್ನು ಹಾಕಿ ಬೀಜೊಪಚಾರ ಮಾಡಬಹುದು ನಂತರ ಬಿತ್ತನೆ ಮಾಡಿದ 30-35 ದಿನಗಳ ಬಳಿಕ ಪ್ರತಿ ಲೀಟರ್ ನೀರಿಗೆ 2-4 ಮಿಲಿ ಹಾಕಿ ಸಿಂಪರಣೆ ಮಾಡಬಹುದು.

ಭತ್ತ: ಭತ್ತ ನಾಟಿ ಮಾಡುವ ಮುಂಚೆ 3-5 ಮಿಲಿ ನಾನ್ಯೋ ಡಿ.ಎ.ಪಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಸಸಿಗಳನ್ನು ಅದ್ದಿ ನಾಟಿ ಮಾಡಬಹುದು ಅಥವಾ ಬೀಜ ಬಿತ್ತನೆ ಮಾಡಿದ್ದಲ್ಲಿ ಬೀಜೊಪಚಾರ ಮಾಡಿ ಬಿತ್ತನೆ ಮಾಡಬೇಕು. ಇದಾದ ಬಳಿಕ ಸಸಿಯು 30-35 ದಿನ ಇರುವ ಹಂತದಲ್ಲಿ ಪ್ರತಿ ಲೀಟರ್ ನೀರಿಗೆ 2-4 ಮಿಲಿ ಹಾಕಿ ಸಿಂಪರಣೆ ಮಾಡಬಹುದು.

ಹತ್ತಿ: ಹತ್ತಿ ಬೀಜಗಳನ್ನು ಬಿತ್ತನೆ ಮಾಡುವಾಗ ಪ್ರತಿ ಕೆಜಿ ಬೀಜಕ್ಕೆ 3-5 ಮಿಲಿ ನಾನ್ಯೋ ಡಿ.ಎ.ಪಿಯನ್ನು ಹಾಕಿ ಬೀಜೊಪಚಾರ ಮಾಡಬಹುದು ನಂತರ ಕವಲೊಡೆಯುವಿಕೆ ಹಂತದಲ್ಲಿ 30-35 ದಿನಗಳಲ್ಲಿ ಪ್ರತಿ ಲೀಟರ್ ನೀರಿಗೆ 2-4 ಮಿಲಿ ನಾನ್ಯೋ ಡಿ.ಎ.ಪಿಯನ್ನು ಮಿಶ್ರಣ ಮಾಡಿ ಎಕರೆಗೆ 200 ಲೀಟರ್ ದ್ರಾವಣದಲ್ಲಿ ಸಿಂಪರಣೆ ಮಾಡಿಬೇಕು

ಇದನ್ನೂ ಓದಿ: Property Registration-ಇ-ಸ್ವತ್ತು ಯೋಜನೆ: ಸರಕಾರದಿಂದ ಸಕ್ರಮ ಆಸ್ತಿಗೆ ಡಿಜಿಟಲ್ ದಾಖಲೆ! ಇಂದೇ ಅರ್ಜಿ ಸಲ್ಲಿಸಿ!

ಕಬ್ಬು: ಹತ್ತಿ ಬೀಜಗಳನ್ನು ಬಿತ್ತನೆ ಮಾಡುವಾಗ ಪ್ರತಿ ಕೆಜಿ ಬೀಜಕ್ಕೆ 3-5 ಮಿಲಿ ನಾನ್ಯೋ ಡಿ.ಎ.ಪಿಯನ್ನು ಹಾಕಿ ಬೀಜೊಪಚಾರ ಮಾಡಬಹುದು ನಂತರ ಕವಲೊಡೆಯುವಿಕೆ ಹಂತದಲ್ಲಿ 30-35 ದಿನಗಳಲ್ಲಿ ಪ್ರತಿ ಲೀಟರ್ ನೀರಿಗೆ 2-4 ಮಿಲಿ ನಾನ್ಯೋ ಡಿ.ಎ.ಪಿಯನ್ನು ಮಿಶ್ರಣ ಮಾಡಿ ಎಕರೆಗೆ 200 ಲೀಟರ್ ದ್ರಾವಣದಲ್ಲಿ ಸಿಂಪರಣೆ ಮಾಡಬಹುದು.

ಕಾಫಿ: ಮುಂಗಾರು ಮಳೆ ಆರಂಭಕ್ಕೂ ಮುನ್ನ 3-5 ಮಿಲಿ ನಾನ್ಯೋ ಡಿ.ಎ.ಪಿಯನ್ನು ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪರಣೆ ಮಾಡಬೇಕು ಬಳಿಕ ರಂಜಕದ ಅವಶ್ಯಕತೆಯ ಆಧಾರದ ಮೇಲೆ 3 ಬಾರಿ ಸಂಪರಣೆ ಮಾಡಬಹುದು.

ನೆಲಗಡಲೆ, ಸೋಯಾಬೀನ್, ನೆಲಗಡಲೆ, ಸೂರ್ಯಕಾಂತಿ, ಮುಂತಾದ ಎಣ್ಣೆಕಾಳು ಬೆಳೆಗಳಲ್ಲಿ: ಬಿತ್ತನೆ ಸಮಯದಲ್ಲಿ ಪ್ರತಿ ಕೆಜಿ ಬೀಜಕ್ಕೆ 3-5 ಮಿಲಿ ಹಾಕಿ ಬೀಜೊಪಚಾರ ಮಾಡಬಹುದು ಮತ್ತು ಕವಲೊಡೆಯುವಿಕೆ ಹಂತದಲ್ಲಿ 30-35 ದಿನಗಳಲ್ಲಿ ಪ್ರತಿ ಲೀಟರ್ ನೀರಿಗೆ 2-4 ಮಿಲಿ ನಾನ್ಯೋ ಡಿ.ಎ.ಪಿಯನ್ನು ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.

ಟಮೋಟೊ,ಆಲೂಗಡ್ಡೆ, ಈರುಳ್ಳಿ, ಇನ್ನಿತರೆ ತರಕಾರಿಗಳಲ್ಲಿ, ತೊಗರಿ,ಕಡಲೆ ಇನ್ನಿತರೆ ದ್ವಿದಳ ಧ್ಯಾನಗಳಲ್ಲಿ ಮತ್ತು ಅಡಿಕೆ,ತೆಂಗು ಮುಂತಾದ ತೋಟದ ಗಿಡಗಳಿಗೆ 3-5 ಮಿಲಿ ಪ್ರತಿ ಲೀಟರ್ ಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬಹುದು.

ಇದನ್ನೂ ಓದಿ: Aadhaar Update-ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ! ಕೂಡಲೇ ಅರ್ಜಿ ಸಲ್ಲಿಸಿ!

nano dap details

ಇದನ್ನೂ ಓದಿ: New Ration Card-ಹೊಸ ರೇಷನ್ ಕಾರ್ಡ ಪಡೆಯಲು ಅವಕಾಶ– ತಕ್ಷಣ ಅರ್ಜಿ ಸಲ್ಲಿಸಿ!

Nano DAP Benefits-ನಾನ್ಯೋ ಡಿ.ಎ.ಪಿಯನ್ನು ಬಳಕೆ ಮಾಡುವುದರಿಂದ ರೈತರಿಗೆ ಯಾವೆಲ್ಲ ಪ್ರಯೋಜನಗಳಿವೆ?

ನಾನ್ಯೋ ಡಿ.ಎ.ಪಿಯನ್ನು ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳ ಮೇಲೆ ಸಿಂಪರಣೆಯನ್ನು ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದ್ದು ಇವುಗಳ ಪಟ್ಟಿ ಹೀಗಿದೆ:

ವಿವಿಧ ಬಗ್ಗೆಯ ಬಿತ್ತನೆ ಬೀಜಗಳನ್ನು ಬಿತ್ತುವ ಮುನ್ನ ಬೀಜಗಳನ್ನು ನಾನ್ಯೋ ಡಿ.ಎ.ಪಿ ದ್ರಾವಣದಲ್ಲಿ ಬೀಜೊಪಚಾರ ಮಾಡಿ ಬಿತ್ತುವುದರಿಂದ ಮೊಳಕೆಯೊಡೆಯುವಿಕೆಯ ಪ್ರಮಾಣ ಹೆಚ್ಚುತ್ತದೆ.

ಸಸಿಗಳನ್ನು ಅದ್ದಿ ನಾಟಿ ಮಾಡುವುದರಿಂದ ಬೇರುಗಳ ಬೆಳವಣಿಗೆಗೆ ಉತ್ತಮವಾಗಿರುತ್ತದೆ.

ಕಾವಲೊಡೆಯುವ ಹಂತದಲ್ಲಿ ಸಿಂಪರಣೆ ಮಾಡುವುದರಿಂದ ಕೊಂಬೆಗಳು ಮತ್ತು ಹೂವುಗಳ ಸಂಖ್ಯೆಯ ಹೆಚ್ಚಳಕ್ಕೆ ಸಹಕಾರಿಯಾಗಿದೆ.

ಅಧಿಕ ಇಳುವರಿಯೊಂದಿಗೆ ಉತ್ತಮ ಆದಾಯ ಮತ್ತು ಬೇಸಾಯ ವೆಚ್ಚ ಕಡಿತ, ಸಂಗ್ರಹಣೆ, ಸಾಗಾಟ ಮತ್ತು ಬಳಕೆ ಸುಲಭವಾಗಿದೆ.

ನಾನ್ಯೋ ಡಿ.ಎ.ಪಿಯು ಹರಳು ರೂಪದ ಗೊಬ್ಬರಗಳಿಗೆ ಹೋಲಿಗೆ ಮಾಡಿದರೆ ಇವು ಹೆಚ್ಚು ಪರಿಸರ ಸ್ನೇಹಿಯಾಗಿದ್ದು ವಿಷಕಾರಿಯಲ್ಲ.

ಇದನ್ನೂ ಓದಿ: Free Coaching Center-ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ! ಈಗಲೇ ಅರ್ಜಿ ಸಲ್ಲಿಸಿ!

How To Purchase Nano DAP-ರೈತರು ಎಲ್ಲಿ ನಾನ್ಯೋ ಡಿ.ಎ.ಪಿಯನ್ನು ಖರೀದಿಸಬೇಕು?

ರೈತರು ನಾನ್ಯೋ ಡಿ.ಎ.ಪಿಯನ್ನು ಖರೀದಿಸಲು ನಿಮ್ಮ ಹತ್ತಿರ ಆಗ್ರೋ ಶಾಪ್ ಅಥವಾ ವ್ಯವಸಾಯ ಸೇವ ಸಹಕಾರ ಸಂಘದ(ಸೊಸೈಟಿ/VSS) ಶಾಖೆಯನ್ನು ನೇರವಾಗಿ ಭೇಟಿ ಮಾಡಿ ಖರೀದಿಸಬಹುದು ಜೊತೆಗೆ ಆನ್ಲೈನ್ ಮೂಲಕವು ಸಹ ಖರೀದಿಸಲು ಅವಕಾಶವಿದ್ದು ಇಪ್ಕೋ ಸಂಸ್ಥೆಯ ಇಪ್ಕೋ ಬಜಾರ್ "Order Now" ಜಾಲತಾಣವನ್ನು ಪ್ರವೇಶ ಮಾಡಿ ಖರೀದಿ ಮಾಡಬಹುದು.

Nano DAP Website-ನಾನ್ಯೋ ಡಿ.ಎ.ಪಿ ಕುರಿತು ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: