Railway Department Rrecruitment-ರೈಲ್ವೆ ಇಲಾಖೆಯಲ್ಲಿ 800ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ!

ಭಾರತೀಯ ರೈಲ್ವೆ ಇಲಾಖೆಯ, ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ 800ಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದ್ದು, ಬಿಡುಗಡೆಯಾಗಿರುವ ಅಧಿಸೂಚನೆಯ ವಿವರ ಇಲ್ಲಿದೆ.

Railway Department Rrecruitment-ರೈಲ್ವೆ ಇಲಾಖೆಯಲ್ಲಿ 800ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ!
Railway Department Rrecruitment-2024

ಭಾರತೀಯ ರೈಲ್ವೆ ಇಲಾಖೆಯ, ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ 800ಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದ್ದು, ಬಿಡುಗಡೆಯಾಗಿರುವ ಅಧಿಸೂಚನೆಯ ವಿವರ ಇಲ್ಲಿದೆ.

South East Central Railway recruitment : ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗವು ಭಾರತದ 19 ರೈಲ್ವೆ ವಲಯಗಳಲ್ಲಿ ಒಂದಾಗಿದೆ. ಈ ವಲಯದಲ್ಲಿ ಖಾಲಿ ಇರುವ 861 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ, ಖಾಲಿ ಹುದ್ದೆಗಳ ವಿವರ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಇತರೆ ನೇಮಕಾತಿ ವಿವರವನ್ನು ಸಂಪೂರ್ಣವಾಗಿ ಇಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇ 9, 2024 ರ ಒಳಗಾಗಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Labour Card Scholarship- ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನಸಹಾಯಕ್ಕಾಗಿ ಅರ್ಜಿ ಅಹ್ವಾನ!

SECR Recruitment 2024 - ನೇಮಕಾತಿ ವಿವರ : 

ನೇಮಕಾತಿ ವಿಭಾಗ : ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗ
ಖಾಲಿ ಹುದ್ದೆಗಳ ಸಂಖ್ಯೆ : 861 ಹುದ್ದೆಗಳು 
ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮೂಲಕ 

ಖಾಲಿ ಹುದ್ದೆಗಳ ಮಾಹಿತಿ : ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿ ಎಲೆಕ್ಟ್ರಿಷಿಯನ್, ಸ್ಟೆನೋಗ್ರಾಫರ್, ವೆಲ್ಡರ್, ಫಿಟ್ಟರ್, ಡೀಸೆಲ್, ಮೆಕಾನಿಕ್, ಪೇಂಟರ್, ಕಾರ್ಪೆಂಟರ್ ಸೇರಿ ಒಟ್ಟು 861 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

Educational Eligibility:

ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ SSLC ಪಾಸಾಗಿ ಸಂಬಂಧಿಸಿದ ವಿಷಯದಲ್ಲಿ ITI ಪಾಸಾಗಿರಬೇಕು.

ಇದನ್ನೂ ಓದಿ: Gruhalakshmi april amount-2024: ಗೃಹಲಕ್ಷ್ಮಿ ಯೋಜನೆ ಏಪ್ರಿಲ್ ತಿಂಗಳ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

Age Eligibility : ವಯೋಮಿತಿ ಮಾನದಂಡ 

 ರೈಲ್ವೆ ಇಲಾಖೆಯ ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗವು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 15 ವರ್ಷ ಹೊಂದಿರಬೇಕು ಹಾಗೂ ಗರಿಷ್ಠ 24 ವರ್ಷದ ಒಳಗಿರಬೇಕು. ಇನ್ನು ಮೀಸಲಾತಿ ವ್ಯಾಪ್ತಿಯಲ್ಲಿ ಬರುವಂತಹ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ವಯೋ ಸಡಿಲಿಕೆ ಅನ್ವಯವಾಗುತ್ತದೆ.
• OBC - 3 ವರ್ಷ 
• SC / ST : 5 ವರ್ಷ 
• ಮಾಜಿ ಸೈನಿಕ / PwD : 10 ವರ್ಷ

ವೇತನ / Salary:

ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷ ತರಬೇತಿ ನೀಡಲಾಗುತ್ತದೆ ಹಾಗೂ ಅದರ ಜೊತೆಗೆ ಅಭ್ಯರ್ಥಿಗಳಿಗೆ ₹7,700/- ರಿಂದ ₹8,050/- ವರೆಗೆ ಸ್ಟೈಪೆಂಡ್ ಕೂಡಾ ನೀಡಲಾಗುತ್ತದೆ.

ಇದನ್ನೂ ಓದಿ: 2nd installment parihara amount- ಈ ಪಟ್ಟಿಯಲ್ಲಿರುವವರಿಗೆ ಸಿಗಲಿದೆ 2ನೇ ಕಂತಿನ ಬರ ಪರಿಹಾರ!

ಅರ್ಜಿ ಸಲ್ಲಿಸುವ ವಿಧಾನ: 

ಅರ್ಜಿ ಸಲ್ಲಿಸುವಂತಹ ಅರ್ಹ ಅಭ್ಯರ್ಥಿಗಳು ನಾವು ಕೆಳಗೆ ನೀಡಿರುವ "APPLY NOW" ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 9ನೇ ಮೇ 2024ರ ಒಳಗಾಗಿ ಅರ್ಜಿ ಸಲ್ಲಿಸಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು : 

• Apply Now : https://www.apprenticeshipindia.gov.in/
• ಅಧಿಕೃತ ಪೋರ್ಟಲ್ : https://secr.indianrailways.gov.in/ 
• ಅಧಿಸೂಚನೆ : ಡೌನ್ಲೋಡ್