ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಬೇಕಿಂಗ್ ತಂತ್ರಜ್ಞಾನ(Bakery Training) ಮತ್ತು ಮೌಲ್ಯವರ್ಧನಾ ಸಂಸ್ಥೆಯು “ಹದಿನಾಲ್ಕು(14) ವಾರಗಳ ಬೇಕರಿ ಟೆಕ್ನಾಲಜಿ ಸರ್ಟಿಫಿಕೇಟ್ ಕೋರ್ಸ್”ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸ್ವಂತ ಬೇಕರಿಯನ್ನು(Bakery business) ಪ್ರಾರಂಭಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಿ ಉನ್ನತ ಮಟ್ಟದ ಬೇಕರಿ ಉತ್ಪನ್ನ ತಯಾರಿಕೆ ತರಬೇತಿಯನ್ನು ಪಡೆದುಕೊಳ್ಳಲು ಅವಕಾಶವಿದ್ದು, ಈ ತರಬೇತಿಯಲ್ಲಿ ಭಾಗವಹಿಸಲು ಅರ್ಜಿಯನ್ನು ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು ಯಾವುವು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Yashaswini Card-2025: ಯಶಸ್ವಿನಿ ಕಾರ್ಡ ಪಡೆಯಲು ಇನ್ನು 10 ದಿನ ಮಾತ್ರ ಅವಕಾಶ!
Bakery Training-2025: ಸಂಸ್ಥೆಯ ಕುರಿತು ಕಿರು ಪರಿಚಯ:
ಬೇಕರಿ ಒಂದು ಬೃಹತ್ ಉದ್ದಿಮೆಯಾಗಿ ಪ್ರಪಂಚದಾದ್ಯಂತ ಶರವೇಗದಲ್ಲಿ ಬೆಳೆಯುತ್ತಿದ್ದು, ಸ್ವಯಂ ಉದ್ಯೋಗಾಕಂಕ್ಷಿಗಳಿಗೆ ವರದಾನವಾಗಿದೆ. ಈ ನಿಟ್ಟಿನಲ್ಲಿ ಬೇಕರಿ ತರಬೇತಿ ಕೇಂದ್ರವು(Bakery training course), ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶನಾಲಯದಲ್ಲಿ 1968 ರಲ್ಲಿ ಸ್ಥಾಪನೆಗೊಂಡಿತು. ಪ್ರಾರಂಭದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಯು. ಎಸ್. ವೀಟ್. ಅಸೋಸೀಯೇಟ್ಸ್, ನವದೆಹಲಿಯವರು ಕೌಶಲ್ಯ ತರಬೇತಿಯನ್ನು ಉತ್ತೇಜಿಸುವ ಸಲುವಾಗಿ ಆರ್ಥಿಕ ನೆರವು ನೀಡುವುದರ ಮೂಲಕ ಯಂತ್ರೋಪಕರಣಗಳ ವ್ಯವಸ್ಥೆ ಕಲ್ಪಿಸಿತು.
ಪ್ರಾರಂಭದಲ್ಲಿ ಮಹಿಳೆಯರಿಗಾಗಿ ಮೂರು ದಿನಗಳ ಬೇಕರಿ ತಿನಿಸುಗಳ ತಯಾರಿಕಾ ತರಬೇತಿ ಪ್ರಾರಂಭಿಸಿದ್ದು, ಕ್ರಮೇಣ ತಂತ್ರಜ್ಞಾನ ಆಧಾರಿತ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಂತರ ಈ ಸಂಸ್ಥೆಯು ಅವಶ್ಯತೆಗನುಸಾರವಾಗಿ ಯುವಕ ಹಾಗೂ ಯುವತಿಯರನ್ನು ಕೌಶಲ್ಯದಲ್ಲಿ ಸ್ವಾವಲಂಬಿಗಳಾಗಿಸಲು ಬೇಕಾದ ತಂತ್ರಜ್ಞಾನ ಆಧರಿಸಿ ಹಂತ ಹಂತವಾಗಿ ವಿವಿಧ ಕಾಲಾವಧಿಯ ತರಬೇತಿ ಕಾರ್ಯಕ್ರಮಗಳನ್ನು ಆಳವಡಿಸಿಕೊಳ್ಳುತ್ತಾ ಬಂದಿದೆ.
ಪ್ರಯೋಗಾಲಯದಲ್ಲಿ ಬೇಕರಿ ಉತ್ಪನ್ನಗಳನ್ನು ಕೌಶಲ್ಯ ತರಬೇತಿಯ ಮೂಲಕವೇ ಸಾಮರ್ಥ್ಯ ಬಲವರ್ದನೆ ಮಾಡಲಾಗುತ್ತಿದೆ. ಇದರ ಮೂಲ ಉದ್ದೇಶವು ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಉದ್ದಿಮೆಯ ಎಲ್ಲಾ ಹಂತದ ಅರಿವು ಮೂಡುವಂತೆ ಸಮರ್ಥವಾಗಿ ತಿಳಿಸಿಕೊಡುತ್ತಿದೆ.
ಇದನ್ನೂ ಓದಿ: Land Conversion-ಗ್ರಾಮೀಣ ಭಾಗದಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ: ಸಚಿವ ಕೃಷ್ಣಬೈರೇಗೌಡ
Eligibility Criteria For Bakery Training-ಅರ್ಜಿ ಸಲ್ಲಿಸಲು ಅರ್ಹತೆಗಳು:
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
- ಅಭ್ಯರ್ಥಿಯು ಎಸ್.ಎಸ್.ಎಲ್.ಸಿ. ಪಾಸ್ ಅಥವಾ ಫೇಲ್ ಆಗಿರುವವರು ಅರ್ಜಿಯನ್ನು ಸಲ್ಲಿಸಬಹುದು.
- ಯುವಕ/ಯುವತಿಯರು ಸಹ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು.
ಇದನ್ನೂ ಓದಿ: Diploma Certificate Courses-ಕೃಷಿ ವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡುವ ಅರ್ಜಿ ಆಹ್ವಾನ!

ಇದನ್ನೂ ಓದಿ: Subsidy Scheme-ಈ ಕಾರ್ಡ ಇದ್ದವರಿಗೆ ಹೆರಿಗೆ ವೆಚ್ಚ ಭರಿಸಲು ₹50 ಸಾವಿರ ಸಹಾಯಧನ!
How To Apply-ಅರ್ಜಿಯನ್ನು ಸಲ್ಲಿಸುವುದು ಹೇಗೆ?
ತರಬೇತಿಯನ್ನು ಪಡೆಯಲು ಆಸಕ್ತಿಯಿರುವವರು ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ರೂ.10-00 ಸಂದಾಯಿಸಿ ಅರ್ಜಿ ನಮೂನೆಯನ್ನು ಸಂಯೋಜಕರು ಮತ್ತು ಮುಖ್ಯಸ್ಥರು, ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ, ಕೃಷಿ ವಿಶ್ವ ವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು-560 065 ರವರಿಂದ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಮಾರ್ಚ್ 29 ರೊಳಗೆ ಅಪರಾಹ್ನ 4.00 ಘಂಟೆಯೊಳಗೆ ಕಚೇರಿಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಮಾರ್ಚ 2025
Documents-ಅರ್ಜಿ ಸಲ್ಲಿಸಲು ದಾಖಲೆಗಳು:
1) ಅರ್ಜಿದಾರರ ಆಧಾರ್ ಕಾರ್ಡ
2) ಪೋಟೋ
3) ವಿದ್ಯಾರ್ಹತೆ ಪ್ರಮಾಣ ಪತ್ರ
4) ಮೊಬೈಲ್ ನಂಬರ್
ಇದನ್ನೂ ಓದಿ: Agriculture Loan-13,689 ರೈತರ ಖಾತೆಗೆ ಶೂನ್ಯ ಬಡ್ಡಿದರದಲ್ಲಿ ₹589 ಕೋಟಿ ಸಾಲ!
Bakery Training Details-ಯಾವೆಲ್ಲ ತರಬೇತಿಯನ್ನು ಇಲ್ಲಿ ನಡೆಸಲಾಗುತ್ತದೆ?
- 14-ವಾರದ ಬೇಕರಿ ತಂತ್ರಜ್ಞಾನ ತರಬೇತಿ- ವಾಣಿಜ್ಯ ಉದ್ದೇಶಕ್ಕಾಗಿ
- 8-ವಾರದ ಬೇಕರಿ ತಿನಿಸು ತಯಾರಿ ತರಬೇತಿ – ಗೃಹ ಮಟ್ಟಕ್ಕೆ ಅಥವಾ ಹವ್ಯಾಸಕ್ಕಾಗಿ
For More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ಜಾಲತಾಣ- CLICK HERE
Helpline-ದೂರವಾಣಿ ಸಂಖ್ಯೆ-080-23513370