HomeNewsBigg boss kannada-ಬಿಗ್ ಬಾಸ್ ಗೆ ವಿದಾಯ ಹೇಳಿದ ಕಿಚ್ಚ ಸುದೀಪ್!

Bigg boss kannada-ಬಿಗ್ ಬಾಸ್ ಗೆ ವಿದಾಯ ಹೇಳಿದ ಕಿಚ್ಚ ಸುದೀಪ್!

ಕಳೆದ ತಿಂಗಳಷ್ಟೇ ಬರ್ತಡೇ ಯನ್ನು ಆಚರಿಸಿಕೊಂಡ ಕನ್ನಡ ಚಿತ್ರರಂಗದ ಪ್ರಖ್ಯಾತ ನಟರಲ್ಲಿ ಒಬ್ಬರಾದ ಕಿಚ್ಚ ಸುದೀಪ್(Kichha Sudeep) ರವರು ಬಿಗ್ ಬಾಸ್ ಶೋಗೆ(Bigg boss show) ವಿದಾಯ ನೀಡುವ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕನ್ನಡದ ಸತತ ಬಿಗ್ ಬಾಸ್ 11 ಸೀಸನ್ ಗಳಲ್ಲಿ(Bigg boss kannada episode) ಯಶಸ್ವಿಯಾಗಿ ನಿರೂಪಕರಾಗಿ ನಟ ಕಿಚ್ಚ ಸುದೀಪ್ ಯಶಸ್ವಿಯಾಗಿ ಕಾರ್ಯಕ್ರಮ ನೆಡೆಸಿಕೊಟ್ಟಿದ್ದು. ಇದು ನನ್ನ ನಿರೂಪಣೆಯ ಕೊನೆಯ ಆವೃತ್ತಿ ಎಂದು ತಿಳಿಸುವುದರ ಮೂಲಕ ದೊಡ್ಡಮಟ್ಟದ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ನಟ ಕಿಚ್ಚ ಸುದೀಪ್ ರವರ ಈ ನಿರ್ಣಯದಿಂದ ಬಿಗ್ ಬಾಸ್ ರಿಯಾಲಿಟಿ ಶೋ ಅಭಿಮಾನಿಗಳಿಗೆ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ತೀರ ಬೇಸರ ಉಂಟು ಮಾಡಿದೆ. ನಟ ಕಿಚ್ಚ ಸುದೀಪ್ ರವರು ಬಿಗ್ ಬಾಸ್ ಗೆ ವಿದಾಯ ಹೇಳಲು? ಬಿಗ್ ಬಾಸ್ ನಿಂದ ಕಿಚ್ಚ ಸುದೀಪ್ ಪಡೆಯುತ್ತಿರುವ ಒಟ್ಟು ಸಂಭಾವನೆ ಎಷ್ಟು(Sudeep bigg boss salary) ನಟ ಕಿಚ್ಚ ಸುದೀಪ್ ರವರ ಒಟ್ಟು ಆಸ್ತಿ ಮೌಲ್ಯದ ವಿವರ ಸೇರಿದಂತೆ ಇತರೆ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Monthly pension scheme- ರೈತರಿಗೆ ಈ ಯೋಜನೆಯಡಿ ಸಿಗುತ್ತೆ ತಿಂಗಳಿಗೆ ರೂ 3,000 ಪಿಂಚಣಿ!

Actor kichha sudeep-ಬಿಗ್ ಬಾಸ್ ಸೀಸನ್ 11 ಕಿಚ್ಚ ಸುದೀಪ್ ರವರ ಕೊನೆಯ ನಿರೂಪಣೆ:

ಬಿಗ್ ಬಾಸ್ ಗೆ ಗುಡ್ ಬೈ ಹೇಳಿದ ನಟ ಕಿಚ್ಚ ಸುದೀಪ್ ತಮ್ಮ ಅಧಿಕೃತ ಎಕ್ಸ್ ಕಥೆಯಲ್ಲಿ ಬಿಗ್ ಬಾಸ್ ನಿರೂಪಕರಾಗಿ ವಿದಾಯ ಹೇಳುವ ಬಗ್ಗೆ ಮಾಹಿತಿ ಕೊಂಡಿರುವ ಅವರು ಕಳೆದ 11 ವರ್ಷದ ಬಿಗ್ ಬಾಸ್ ಜರ್ನಿಗೆ ವಿದಾಯ ಹೇಳುವ ಮಾತನ್ನು ಆಡಿದ್ದಾರೆ.

ನಿರೂಪಕರಾಗಿ ಇದು ನನ್ನ ಕೊನೆಯ ಸೀಸನ್ ಎಂದು ತಮ್ಮ ನಿರ್ಧಾರವನ್ನು ಪ್ರಕಟಿಸುವಿರುವ ಅವರು ಈ ನಿರ್ಧಾರವನ್ನು ಕಲರ್ಸ್ ವಾಹಿನಿಯವರು ಮತ್ತು ನನ್ನ ಅಭಿಮಾನಿಗಳು ಬೆಂಬಲಿಸುವ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Home loan- ಮನೆ ಕಟ್ಟಲು ಸಾಲ ಪಡೆಯಬೇಕೆ? ಇಲ್ಲಿದೆ ಉಪಯುಕ್ತ ಮಾಹಿತಿ!

kichha sudeep

Bigg boss kannada season 11- ಬಿಗ್ ಬಾಸ್ ನಿರೂಪಣೆಗೆ ವಿದಾಯ ಹೇಳಲು ಕಾರಣವೇನು?

ಬಿಗ್ ಬಾಸ್ ಗೆ ವಿದಾಯ ಹೇಳಲು ಯಾವುದೇ ಅಧಿಕೃತ ಮಾಹಿತಿಯನ್ನು ನಟ ಕಿಚ್ಚ ಸುದೀಪ್ ರವರು ಹಂಚಿಕೊಂಡಿರುವುದಿಲ್ಲ ಬಲ್ಲ ಮೂಲಗಳ ಮಾಹಿತಿ ಪ್ರಕಾರ ಚಲನಚಿತ್ರಗಳಲ್ಲಿ ಇನ್ನೂ ಹೆಚ್ಚಿನ ಸಮಯವನ್ನು ಕೊಡಲು ಬಿಗ್ ಬಾಸ್ ಶೋನಿಂದ ನಟಕಿಚ್ಚ ಸುದೀಪ್ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

Sudeep bigg boss salary – ಬಿಗ್ ಬಾಸ್ ಶೋನಿಂದ ಕಿಚ್ಚ ಸುದೀಪ್ ರವರು ಪಡೆಯುತ್ತಿರುವ ಸಂಭಾವನೆ ಎಷ್ಟು?

ಕೆಲವು ಮಾಧ್ಯಮಗಳ ವರದಿ ಪ್ರಕಾರ ಒಂದು ಎಪಿಸೋಡ್ ಗೆ ಸುದೀಪ್ ರವರು 12 ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗುತ್ತಿತ್ತು ಒಟ್ಟು ಒಂದು ಸೀಸನ್ಗೆ ಹತ್ತರಿಂದ ಹನ್ನೆರಡು ಕೋಟಿ ಪಡೆಯುತ್ತಾರೆ ಎನ್ನುವ ಮಾಹಿತಿ ಇದೆ. ಬಿಗ್ ಬಾಸ್ನ ಮೊದಲ ಐದು ಆವೃತ್ತಿಗಳಿಂದ ಒಟ್ಟು ಇಪ್ಪತ್ತು ಕೋಟಿ ಗಳಿಸಿದ್ದಾರೆ ಎನ್ನುವ ಮಾಹಿತಿ ಇದೆ.

ಇದನ್ನೂ ಓದಿ: RTC Aadhar link- ಪಹಣಿಗೆ ಆಧಾರ್ ಲಿಂಕ್ ಸರಕಾರದಿಂದ ಮಹತ್ವದ ಮಾಹಿತಿ ಪ್ರಕಟ!

Actor sudeep net worth – ನಟ ಕಿಚ್ಚ ಸುದೀಪ್ ರವರ ಒಟ್ಟು ಆಸ್ತಿ ಮೌಲ್ಯಗಳು :

ನಟ ಕಿಚ್ಚ ಸುದೀಪ್ ರವರು ನಟನೆಯ ಬಗ್ಗೆ ಜೊತೆಗೆ ವಿವಿಧ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಸುದೀಪ್ ಜಾರಿಟಬಲ್ ಟ್ರಸ್ಟ್ ಮೂಲಕ ಬಡ ಜನರಿಗೆ ಸರ್ಕಾರಿ ಶಾಲೆಗಳಿಗೆ ವಿವಿಧ ಬಗೆಯ ಧನ ಸಹಾಯವನ್ನು ಮಾಡಿದ್ದಾರೆ.

Sudeep car collection – ನಟ ಕಿಚ್ಚ ಸುದೀಪ್ ರವರ ಹುಟ್ಟು ಆಸ್ತಿ ಮೌಲ್ಯ 125 ಕೋಟಿ ಎಂದು ತಿಳಿಸಿದ್ದು ಇವರ ಬಳಿ ಇರುವ ಐಷಾರಾಮಿ ವಸ್ತುಗಳ ವಿವರ ಈ ಕೆಳಗಿನಂತಿವೆ:

  • 3 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರ್
  • 1 ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಎಂ 3 ಕಾರ್
  • 75 ಲಕ್ಷದ ಜೀಪ್ ಕಾಂಪಾಸ್
  • 1.5 ಕೋಟಿ ಮೌಲ್ಯದ ರಿಚರ್ಡ್ ಮಿಲ್ ವಾಚ್
  • 90 ಲಕ್ಷ ಮೌಲ್ಯದ ಹಮ್ಮರ್ ಎಚ್ 3 ಕಾರ್

ಇದನ್ನೂ ಓದಿ: BPL Card-ಪಡಿತರ ಚೀಟಿದಾರರೇ ಗಮನಿಸಿ ಈ ನಿಯಮ ಪಾಲಿಸದಿದ್ದರೆ ನಿಮ್ಮ ಕಾರ್ಡ ರದ್ದಾಗುತ್ತದೆ!

Sudeep property – ನಟ ಕಿಚ್ಚ ಸುದೀಪ್ ರವರ ಆದಾಯದ ಮೂಲಗಳು:

ನಟ ಕಿಚ್ಚ ಸುದೀಪ್ ರವರು ನಟನೆ, ನಿರೂಪಣೆ ಜೊತೆಗೆ ವಿವಿಧ ವ್ಯಾಪಾರಗಳಲ್ಲಿಯೂ ತೊಡಗಿಕೊಂಡಿದ್ದು ಶೇರು ಮಾರುಕಟ್ಟೆ ರಿಯಲ್ ಎಸ್ಟೇಟ್ ಮತ್ತು ಚಿತ್ರ ನಿರ್ಮಾಣಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ.

  • ಒಂದು ಸಿನಿಮಾಗೆ ನಟ ಕಿಚ್ಚ ಸುದೀಪ್ ರವರು ಪಡೆಯುವ ಅಂದಾಜು ಸಂಭಾವನೆ- 10 ರಿಂದ 25 ಕೋಟಿ.
  • ಜಾಹೀರಾತು ಮತ್ತು ಬ್ಯಾಂಡ್ ಎಂಡೋಸ್ಮೆಂಟ್ ನಿಂದ ಒಂದು ವರ್ಷಕ್ಕೆ ಗಳಿಸುವ ಆದಾಯ- 5 ಕೋಟಿ.
Most Popular

Latest Articles

Related Articles