ಬೆಳೆಗಳಿಗೆ ಎಷ್ಟು ಪ್ರಮಾಣದ ಜೈವಿಕ ಗೊಬ್ಬರಗಳನ್ನು ಬಳಕೆ ಮಾಡಬೇಕು? ಬಳಸುವ ವಿಧಾನ ಹೇಗೆ?

ರೈತರು ಬೆಳೆಗಳಿಂದ ಉತ್ತಮ ಇಳುವರಿ ಪಡೆಯಲು ಮತ್ತು ಕಡಿಮೆ ವೆಚ್ಚದಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ ಮಾಡುಲು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಜೈವಿಕ ಗೊಬ್ಬರಗಳ ಬಳಕೆ ಮಾಡುವುದು ಅತ್ಯಗತ್ಯವಾಗಿದೆ.

ಈ ಅಂಕಣದಲ್ಲಿ ವಿವಿಧ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಳೆಗಳಿಗೆ ಎಷ್ಟು ಪ್ರಮಾಣದ ಜೈವಿಕ ಗೊಬ್ಬರಗಳನ್ನು ಬಳಕೆ ಮಾಡಬೇಕು? ಬಳಸುವ ವಿಧಾನ ಹೇಗೆ? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.

ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಅಣುಜೀವಿ ಗೊಬ್ಬರಗಳ ಬಳಕೆ:

ಕ್ರ.ಸಂಬೆಳೆಅಣುಜೀವಿ ಗೊಬ್ಬರ(ಪ್ರತಿ ಎಕರೆ)ಪ್ರಮಾಣ  (ಗ್ರಾಂ/ಪ್ರತಿ ಎಕರೆಗೆ)ಬಳಸುವ ವಿಧಾನ
ಭತ್ತಅಝೋಸ್ಫಿರಿಲಂ1 ಕಿ.ಗ್ರಾಂ.ಸಸಿಗಳನ್ನು 15-20 ನಿಮಿಷಗಳ ಕಾಲ ಅದ್ದಿ ನಾಟಿ ಮಾಡುವುದು
ಜೋಳಅಝೋಸ್ಫಿರಿಲಂ ಮತ್ತು ರಂಜಕ ಕರಗಿಸುವ ಗೊಬ್ಬರ200 ಗ್ರಾಂ 200 ಗ್ರಾಂಬೀಜೋಪಚಾರ
ಗೋವಿನಜೋಳಅಝೋಸ್ಫಿರಿಲಂ250 ಗ್ರಾಂಬೀಜೋಪಚಾರ
ಸಜ್ಜೆಅಝೋಸ್ಫಿರಿಲಂ ಮತ್ತು ರಂಜಕ ಕರಗಿಸುವ ಗೊಬ್ಬರ200 ಗ್ರಾಂ 150 ಗ್ರಾಂಬೀಜೋಪಚಾರ
ಗೋಧಿಅಝೋಸ್ಫಿರಿಲಂ1.2 ಕಿ.ಗ್ರಾಂಬೀಜೋಪಚಾರ
ಕಡಲೆಅಝೋಸ್ಫಿರಿಲಂ ಮತ್ತು ರಂಜಕ ಕರಗಿಸುವ ಗೊಬ್ಬರ500 ಗ್ರಾಂ 500 ಗ್ರಾಂಬೀಜೋಪಚಾರ
ಹೆಸರುರೈಜೊಬಿಯಂ ಮತ್ತು ರಂಜಕ ಕರಗಿಸುವ ಗೊಬ್ಬರ200 ಗ್ರಾಂ 500 ಗ್ರಾಂಬೀಜೋಪಚಾರ
ಶೇಂಗಾರೈಜೊಬಿಯಂ500 ಗ್ರಾಂಬೀಜೋಪಚಾರ
ಸೋಯಾಅವರೆರೈಜೊಬಿಯಂ ಮತ್ತು ರಂಜಕ ಕರಗಿಸುವ ಗೊಬ್ಬರ500 ಗ್ರಾಂ 500 ಗ್ರಾಂಬೀಜೋಪಚಾರ
ಹತ್ತಿಅಝೋಸ್ಫಿರಿಲಂ ಮತ್ತು ರಂಜಕ ಕರಗಿಸುವ ಗೊಬ್ಬರ200 ಗ್ರಾಂ 200 ಗ್ರಾಂಬೀಜೋಪಚಾರ
ಮೆಣಸಿನಕಾಯಿಅಝೋಸ್ಫಿರಿಲಂ ಮತ್ತು ರಂಜಕ ಕರಗಿಸುವ ಗೊಬ್ಬರ200 3.2 ಕಿ.ಗ್ರಾಂಬೀಜೋಪಚಾರ  ಸಸಿಗಳ ಬೇರುಗಳನ್ನು ಅದ್ದುವುದು
ಈರುಳ್ಳಿ/ಉಳ್ಳಾಗಡ್ಡೆಅಝೋಸ್ಫಿರಿಲಂ500 ಗ್ರಾಂಬೀಜೋಪಚಾರ

ಇದನ್ನೂ ಓದಿ: ಉಚಿತ ಕುರಿ,ಮೇಕೆ, ಹೈನುಗಾರಿಕೆ,ಕೋಳಿ,ಹಂದಿ ಸಾಕಾಣಿಕೆ ತರಬೇತಿಗೆ ಅರ್ಜಿ ಅಹ್ವಾನ.

ಜೈವಿಕ ಗೊಬ್ಬರವನ್ನು ಎಲ್ಲಿ ಖರೀದಿ ಮಾಡಬವುದು?

ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ , ಜಿಲ್ಲೆ ಮಟ್ಟದ ಕೃಷಿ ವಿಜ್ನಾನ ಕೇಂದ್ರ, ಕೃಷಿ ಮತ್ತು ತೋಟಗಾರಿಕೆ ಕಾಲೇಜ್, ತೋಟಗಾರಿಕೆ ಇಲಾಖೆಯ ಜೈವಿಕ ಕೇಂದ್ರಗಳಲ್ಲಿ ಖರೀದಿ ಮಾಡಬವುದು.

ಅಥವಾ 

ಡಾ ಮಂಜುನಾಥ, ಪ್ಯೂಚರ್ ಬಯೋ ಟೆಕ್ ,ದಾರವಾಡ ಮೊ: 9480291450 ಇವರಿಗೆ ಸಂಪರ್ಕ ಮಾಡಿದರೆ ವಿ.ಆರ್.ಎಲ್ ನಲ್ಲಿ ನಿಮಗೆ ತಲುಪಿಸಿತ್ತಾರೆ.