HomeGovt SchemesCrop loss Input subsidy-ಮೊದಲ ಹಂತದಲ್ಲಿ 13.02 ಕೋಟಿ ಬೆಳೆ ಪರಿಹಾರ ಬಿಡುಗಡೆಗೆ ಸಿದ್ದತೆ! ಪಟ್ಟಿಯಲ್ಲಿ...

Crop loss Input subsidy-ಮೊದಲ ಹಂತದಲ್ಲಿ 13.02 ಕೋಟಿ ಬೆಳೆ ಪರಿಹಾರ ಬಿಡುಗಡೆಗೆ ಸಿದ್ದತೆ! ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!

ರಾಜ್ಯದಲ್ಲಿ ಕಳೆದ ತಿಂಗಳು ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆ ಗಿಂತಲು ಅಧಿಕ ಮಳೆ ಬಂದಿರುವ ಕಾರಣ ಕಟಾವಿಗೆ ಬಂದ ಬೆಳೆಯು ಹಾನಿಯಿದಿದ್ದು(Bele hani) ಬೆಳೆ ಹಾನಿ ಸಂಬಂಧ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ರೈತರಿಗೆ NDRF ಮಾರ್ಗಸೂಚಿ ಪ್ರಕಾರ ಬೆಳೆ ನಷ್ಟ ಪರಿಹಾರ(Bele hani parihara) ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ದಾವಣಗೆರೆ, ಕಲಬುರ್ಗಿ ಜಿಲ್ಲೆಯ ಜಿಲ್ಲಾಡಳಿತದ ಅಧಿಕೃತ ಮಾಹಿತಿಯ ಪ್ರಕಾರ ಕಲಬುರ್ಗಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 33,718 ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ನೀಡಲು 13.08 ಕೋಟಿ ಅನುದಾನಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅನುಮೋದನೆ ನೀಡಿದ್ದು ಇನ್ನು 2-3 ದಿನಗಳಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳ ರೈತರ ಖಾತೆಗೆ ಬೆಳೆ ಪರಿಹಾರದ ಇನ್ಪುಟ್ ಸಬ್ಸಿಡಿ(Bele parihara amount)ಹಣ ಜಮಾ ಅಗುತ್ತದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Anganawadi Jobs-2024: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್! ಅಂಗನವಾಡಿಯಲ್ಲಿ 577 ಖಾಲಿ ಹುದ್ದೆಗೆ ಅರ್ಜಿ!

ಇದೇ ರೀತಿ ದಾವಣಗೆರೆ ಜಿಲ್ಲೆಯಲ್ಲಿಯು ಮೊದಲ ಹಂತದಲ್ಲಿ ಬೆಳೆ ಹಾನಿ ಪರಿಹಾರ ವಿತರಣೆಗೆ 1.42 ಕೋಟಿ ಹಣ ಮೀಸಲಿಡಲಾಗಿದ್ದು ಬೆಳೆ ಹಾನಿ ಸಮೀಕ್ಷೆ ಪೂರ್ಣಗೂಳಿಸಿ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ರವರು ಮಾಹಿತಿ ಹಂಚಿಕೊಂಡಿದ್ದಾರೆ.

Parihara Farmer list check- ನಿಮ್ಮ ಬೆಳೆ ಹಾನಿ ಅರ್ಜಿ Parihara ತಂತ್ರಾಂಶದಲ್ಲಿ ದಾಖಲಾಗಿರುವುದನ್ನು ಚೆಕ್ ಮಾಡುವ ವಿಧಾನ:

ಅತೀಯಾದ ಮಳೆ ಅಥವಾ ಮಳೆ ಕೊರತೆಯಿಂದ ಬೆಳೆ ಹಾನಿಯಾದ ಸಮಯದಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ಒದಗಿಸಲು ಪರಿಹಾರ ತಂತ್ರಾಂಶವನ್ನು ಬಳಕೆ ಮಾಡಲಾಗುತ್ತದೆ ಈ ತಂತ್ರಾಂಶದಲ್ಲಿ ರೈತರ ಅರ್ಜಿಯನ್ನು ಅಪ್ಲೋಡ್ ಮಾಡಿ DBT ಮೂಲಕ ಅರ್ಹ ಫಲಾನುಭವಿಗಳಿಗೆ ಬೆಳೆ ನಷ್ಟಕ್ಕೆ ಪರಿಹಾರವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: Bank loan for business- ಬಡ್ಡಿದರ ರಿಯಾಯಿತಿಯಲ್ಲಿ ಮಹಿಳೆಯರಿಗೆ 20 ಲಕ್ಷದವರೆಗೆ ಸಾಲ! ಇಲ್ಲಿದೆ ಸಂಪೂರ್ಣ ವಿವರ!

Parihara Farmer list – ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಹೆಸರು ಬೆಳೆ ಪರಿಹಾರ ವಿತರಣ ಪಟ್ಟಿಯಲ್ಲಿ ಇದಿಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ.

Step-1: ಮೊದಲಿಗೆ Parihara Farmer list ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಬಳಿಕ “ಪರಿಹಾರ ಹಣ ಸಂದಾಯ ವರದಿ/Parihara Pay ment report” ಪೇಜ್ ತೆರೆದುಕೊಳ್ಳುತ್ತದೆ ಇಲ್ಲಿ “ಆಧಾರ್ ಸಂಖ್ಯೆ/Aadhar Number” ಸಂಖ್ಯೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ

Step-3: “ಆಧಾರ್ ಸಂಖ್ಯೆ/Aadhar Number” ಸಂಖ್ಯೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Calamity Type” ಕಾಲಂ ನಲ್ಲಿ “Flood” ಎಂದು ಆಯ್ಕೆ ಮಾಡಿಕೊಂಡು ನಂತರ “Year” ಕಾಲಂ ನಲ್ಲಿ “2024-25” ಎಂದು ಆಯ್ಕೆ ಮಾಡಿಕೊಳ್ಳಿ.

Step-4: ನಂತರ “ಆಧಾರ್ ಸಂಖ್ಯೆ ನಮೂದಿಸಿ/Enter Aadhaar” ಕಾಲಂ ನಲ್ಲಿ ನಿಮ್ಮ 12 ಅಂಕಿಯ ಆಧಾರ್ ನಂಬರ್ ಅನ್ನು ಹಾಕಿ ಪಕ್ಕದ ಕಾಲಂ ನಲ್ಲಿ ಕ್ಯಾಪ್ಚ್ ಕೋಡ್ ನಮೂದಿಸಿ “ವಿವರಗಳನ್ನು ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಿದರೆ ಎರಡು ಕಾಲಂ ತೆರೆದುಕೊಳ್ಳುತ್ತವೆ ಇಲ್ಲಿ “ಪರಿಹಾರ ನಮೂದಿನ ವಿವರಗಳು/Details of parihara entries” ನಲ್ಲಿ ನಿಮ್ಮ ಆಧಾರ್ ಕಾರ್ಡ ವಿವರ ಸೇರಿದಂತೆ ಸರ್ವೆ ನಂಬರ್ ಬೆಳೆ ವಿವರ, ವಿಸ್ತೀರ್ಣ ವಿಳಾಸದ ಮಾಹಿತಿ ತೋರಿಸಿದರೆ ನಿಮ್ಮ ಅರ್ಜಿ ಪರಿಹಾರ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು.

bele parihara

ಜಿಲ್ಲಾಡಳಿತದಿಂದ ಇನ್ಪುಟ್ ಸಬ್ಸಿಡಿ ಪರಿಹಾರದ ಹಣ ಬಿಡುಗಡೆ ಅದ ಬಳಿಕ “ಹಣ ಸಂದಾಯದ ವಿವರಗಳು/Payment Details” ಕಾಲಂ ನಲ್ಲಿ ಹಣ ಜಮಾ ವಿವರ ತೋರಿಸುತ್ತದೆ.

ಇದನ್ನೂ ಓದಿ: Aadhar card-ಆಧಾರ್ ಕಾರ್ಡ್‌ ನಲ್ಲಿ ಹೆಸರು, ವಿಳಾಸವನ್ನು ಎಷ್ಟು ಬಾರಿ ತಿದ್ದುಪಡಿ ಮಾಡಿಸಬಹುದು?

Parihara website-ಪರಿಹಾರ ತಂತ್ರಾಂಶ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಮೊದಲಿಗೆ ಬೆಳೆ ಹಾನಿಯಾದ ಅರ್ಹರ ರೈತರ ಆಧಾರ್ ಕಾರ್ಡ ವಿವರ, ಬ್ಯಾಂಕ್ ಅಕೌಂಟ್, ಜಮೀನಿನ ವಿವರವನ್ನು ಡಾಟ ಎಂಟ್ರಿ ಅಪರೇಟರ್ ಗಳು ಪರಿಹಾರ ತಂತ್ರಾಂಶದಲ್ಲಿ ದಾಖಲೆ ಮಾಡುತ್ತಾರೆ ನಂತರ ಪಹಣಿ/RTC ಅಲ್ಲಿರುವ ಹೆಸರನ್ನು ಮತ್ತು ಆಧಾರ್ ಕಾರ್ಡ ಹೆಸರನ್ನು ತಾಳೆ ಮಾಡಿ ನೋಡಿ ಮ್ಯಾಚ್ ಅಗುವ ರೈತ ಅರ್ಜಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ಅನುಮೋದನೆ ಮಾಡಿ ಮೇಲಾಧಿಕಾರಿಗಳಿಗೆ ಕಳುಹಿಸಿಕೊಡುತ್ತಾರ‍ೆ.

ಇದನ್ನೂ ಓದಿ: Diesel pumpset subsidy- ಶೇ 90% ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

ಇದಾದ ಬಳಿಕ ಎಲ್ಲಾ ಅರ್ಹ ರೈತರ XML ಪೈಲ್ ಅನ್ನು ರಚನೆ ಮಾಡಿ ಕೊನೆಯಲ್ಲಿ ಜಿಲ್ಲಾಧಿಕಾರಿಗಳು ರೈತರ ಖಾತೆಗ ಹಣ ವರ್ಗಾವಣೆ ಮಾಡಲು ಅಂತಿಮ ಡಿಜಿಟಲ್ ಅನುಮೋದನೆಯನ್ನು ನೀಡಿ DBT ಮೂಲಕ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.

bele parihara status

ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಮಾಡಿದ್ದರೆ ಮಾತ್ರ ಬೆಳೆ ಹಾನಿ ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತದೆ.

Most Popular

Latest Articles

Related Articles