HomeGovt SchemesNew ration card- ಎಲ್ಲಾ ಜಿಲ್ಲೆಗಳಲ್ಲೂ ಹೊಸ ರೇಶನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

New ration card- ಎಲ್ಲಾ ಜಿಲ್ಲೆಗಳಲ್ಲೂ ಹೊಸ ರೇಶನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ಆಹಾರ ಇಲಾಖೆಯಿಂದ ಹೊಸ ಎಪಿಎಲ್ ಕಾರ್ಡ ಮತ್ತು ಬಿಪಿಎಲ್ ಕಾರ್ಡ ಪಡೆಯಲು ಆನ್ಲೈನ್ ಮೂಲಕ ಅರ್ಜಿ(New ration card application) ಸಲ್ಲಿಸಲು ಅವಕಾಶ ನೀಡಲಾಗಿದೆ ಅರ್ಹ ಅರ್ಜಿದಾರರು ಅವಕಾಶವನ್ನು ಬಳಕೆ ಮಾಡಿಕೊಂಡು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ನಮ್ಮ ರಾಜ್ಯದಲ್ಲಿ ಆಧಾರ್ ಕಾರ್ಡ, ವೋಟಿಂಗ್ ಕಾರ್ಡ, ಪಾನ್ ಕಾರ್ಡ ಅಗತ್ಯ ದಾಖಲೆಗಳಂತೆ ರೇಶನ್ ಕಾರ್ಡ ಸಹ ಒಂದು ಪ್ರಮುಖ ದಾಖಲೆಯಾಗಿದ್ದು ಎಲ್ಲಾ ನಾಗರಿಕರು ಸಹ ಈ ಕಾರ್ಡ ಅನ್ನು ಪಡೆಯಲು ಆಸಕ್ತಿ ಹೊಂದಿರುತ್ತಾರೆ ಅದ್ದರಿಂದ ಇಂದಿನ ಈ ಅಂಕಣದಲ್ಲಿ ರೇಶನ್ ಕಾರ್ಡಗೆ(New ration card) ಅರ್ಜಿ ಸಲ್ಲಿಕೆ ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Crop loss Input subsidy-ಮೊದಲ ಹಂತದಲ್ಲಿ 13.02 ಕೋಟಿ ಬೆಳೆ ಪರಿಹಾರ ಬಿಡುಗಡೆಗೆ ಸಿದ್ದತೆ! ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!

ಈಗಾಗಲೇ ಮೆಡಿಕಲ್ ಎಮರ್ಜೆನ್ಸಿ ಕಾರಣದಿಂದ ರೇಶನ್ ಕಾರ್ಡ ಪಡೆಯಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವನ್ನು ಇಲಾಖೆಯಿಂದ ನೀಡಲಾಗಿತ್ತು ಈಗ ಎಲ್ಲಾ ನಾಗರಿಕರಿಗೂ ಹೊಸ ರೇಶನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಹೊಸ ರ‍ೇಶನ್ ಕಾರ್ಡ ಅನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು? ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಆಹಾರ ಇಲಾಖೆಯ ಅಧಿಕೃತ ಮಾರ್ಗಸೂಚಿ ವಿವರವನ್ನು ಸಹ ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Anganawadi Jobs-2024: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್! ಅಂಗನವಾಡಿಯಲ್ಲಿ 577 ಖಾಲಿ ಹುದ್ದೆಗೆ ಅರ್ಜಿ!

New ration card applicatin documents-ಅಗತ್ಯ ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ್
  • ಅರ್ಜಿದಾರರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮನೆಯ ವಿದ್ಯುತ್ ಬಿಲ್
  • ಪಾನ್ ಕಾರ್ಡ
  • ಇ-ಮೇಲ್ ಐಡಿ
  • ಮೊಬೈಲ್ ಸಂಖ್ಯೆ
  • ಜನನ ಪ್ರಮಾಣ ಪತ್ರ

ಇದನ್ನೂ ಓದಿ: Bank loan for business- ಬಡ್ಡಿದರ ರಿಯಾಯಿತಿಯಲ್ಲಿ ಮಹಿಳೆಯರಿಗೆ 20 ಲಕ್ಷದವರೆಗೆ ಸಾಲ! ಇಲ್ಲಿದೆ ಸಂಪೂರ್ಣ ವಿವರ!

Ration card application link-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ರೇಶನ್ ಕಾರ್ಡ ಪಡೆಯಲು ಯಾವುದೇ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಅಗತ್ಯ ದಾಖಲೆಗಳನ್ನು ಒದಗಿಸಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಗ್ರಾಹಕರು ತಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Ration cad application link-ರ‍ೇಶನ್ ಕಾರ್ಡಗೆ ಅಧಿಕೃತ ವೆಬ್ಸೈಟ್: Click here

ಅರ್ಜಿ ಸಲ್ಲಿಸಿದ ಎಷ್ಟು ದಿನಗಳ ಬಳಿಕ ರೇಶನ್ ಕಾರ್ಡ ಸಿಗುತ್ತದೆ?

ಗ್ರಾಹಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ತಮ್ಮ ಅರ್ಜಿಯು ಆಹಾರ ಇಲಾಖೆಯಿಂದ ಪರೀಶಿಲನೆಯಾಗಿ 15 ದಿನಗಳ ಬಳಿಕ ಇ-ಪಡಿತರ ಚೀಟಿಯನ್ನು ನೀಡಲಾಗುತ್ತದೆ ಇದಕ್ಕೆ ರೂ 100/- ಶುಲ್ಕ ಪಾವತಿಯನ್ನು ಮಾಡಿ ಗ್ರಾಹಕರು ಪಡೆಯಬಹುದು.

ಇದನ್ನೂ ಓದಿ: Aadhar card-ಆಧಾರ್ ಕಾರ್ಡ್‌ ನಲ್ಲಿ ಹೆಸರು, ವಿಳಾಸವನ್ನು ಎಷ್ಟು ಬಾರಿ ತಿದ್ದುಪಡಿ ಮಾಡಿಸಬಹುದು?

BPL card guidelines-ಹೊಸ ಬಿಪಿಎಲ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅನರ್ಹರು?

ಆಹಾರ ಇಲಾಖೆಯ ಮಾರ್ಗಸೂಚಿಯನ್ವಯ ಈ ಕೆಳಗಿನ ಮಾನದಂಡಗಳ ಅಡಿಯಲ್ಲಿ ಬರುವವರು ಬಿಪಿಎಲ್ ಕಾರ್ಡ ಪಡೆಯಲು ಬರುವುದಿಲ್ಲ ಅದರೆ ಇವರು ಎಪಿಎಲ್ ಕಾರ್ಡ ಅನ್ನು ಪಡೆಯಬಹುದು.

1) ಆದಾಯ ತೆರಿಗೆ ಪಾವತಿಸುವ ಸದಸ್ಯರನ್ನು ಒಳಗೊಂಡ ಎಲ್ಲಾ ಕುಟುಂಬಗಳು.

2) ಎಲ್ಲಾ ವರ್ಗದ ಸರ್ಕಾರಿ ನೌಕರರು.

3) ಸರ್ಕಾರಿ ಸ್ವಾಮ್ಯದ ಉದ್ಯಮಗಳು/ಮಂಡಳಿಗಳು/ನಿಗಮಗಳ ಖಾಯಂ ನೌಕರರು.

4) ಸ್ವಾಯತ್ತ ಸಂಸ್ಥೆಯ/ಮಂಡಳಿಗಳ ನೌಕರರು.

5) ಸಹಕಾರ ಸಂಘಗಳ ಖಾಯಂ ಸಿಬ್ಬಂದಿಗಳು.

6) ವೃತ್ತಿಪರ ವರ್ಗಗಳು: ವೈದ್ಯರುಗಳು, ಆಸ್ಪತ್ರೆಗಳ ನೌಕರರು, ವಕೀಲರುಗಳು. ಲೆಕ್ಕ ಪರಿಶೋಧಕರುಗಳು.

ಇದನ್ನೂ ಓದಿ: Diesel pumpset subsidy- ಶೇ 90% ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

7) ಸೈಕಲ್ ಮೇಲೆ ಅಥವಾ ಗಾಡಿಗಳ ಮೇಲೆ ತಳ್ಳಿಕೊಂಡು ಅಥವಾ ರಸ್ತೆಯ ಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡುವ ಮತ್ತು ತರಕಾರಿ ಮಾತ್ರ ವ್ಯಾಪಾರ ಮಾಡುವ ಹಾಗೂ ಗೂಡಂಗಡಿಗಳಲ್ಲಿ ವ್ಯಾಪಾರ ಮಾಡುವವರನ್ನು ಹೊರತುಪಡಿಸಿ. ಉಳಿದ ಎಲ್ಲಾ ವ್ಯಾಪಾರಸ್ಥರು.

8) 3 ಹೆಕ್ಟೇರ್ (7% ಎಕರೆ) ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿದವರು.

9) ಒಂದು ಆಟೋರಿಕ್ಷಾವನ್ನು ಹೊಂದಿ. ಸ್ವತಃ ಒಡಿಸುತ್ತಿದ್ದು ಬೇರೆ ಆದಾಯದ ಮೂಲವಿಲ್ಲದವರನ್ನು ಹೊರತುಪಡಿಸಿ, 100 ಸಿ.ಸಿ.ಗೆ ಮೇಲ್ಪಟ್ಟ ಇಂಧನ ಚಾಲಿತ ವಾಹನಗಳನ್ನು (ದ್ವಿಚಕ್ರ, ತ್ರಿಚಕ್ರ, ಕಾರು ಇತ್ಯಾದಿ ವಾಹನ) ಹೊಂದಿರುವ ಸದಸ್ಯರನ್ನು ಒಳಗೊಂಡ ಕುಟುಂಬ.

10) ಅನುದಾನರಹಿತ ಕನ್ನಡ ಶಾಲೆಗಳ ನೌಕರರನ್ನು ಹೊರತುಪಡಿಸಿ, ಅನುದಾನಿತ/ ಅನುದಾನರಹಿತ ಶಾಲಾ ಕಾಲೇಜುಗಳ ನೌಕರರು.

11) ನೊಂದಾಯಿತ ಗುತ್ತಿಗೆದಾರರು. ಎ.ಪಿ.ಎಂ.ಸಿ. ಟ್ರೇಡರ್ಸ್/ಕಮಿಷನ್ ಏಜೆಂಟ್ಸ್/ಬೀಜ ಮತ್ತು ಗೊಬ್ಬರ ಇತ್ಯಾದಿ ಡೀಲರ್ಸ್.

12) ಮನೆ/ಮಳಿಗೆ/ಕಟ್ಟಡಗಳನ್ನು ಬಾಡಿಗೆಗೆ ನೀಡಿ ವರಮಾನ ಪಡೆಯುವವರು.

13) ಪ್ರತಿ ತಿಂಗಳಿಗೆ ಸರಾಸರಿ ವಿದ್ಯುತ್ ಬಿಲ್ ರೂ.450/- ಕ್ಕಿಂತ ಮೇಲ್ಪಟ್ಟು ಪಾವತಿಸುವ ಕುಟುಂಬಗಳು.

14) ಬಹುರಾಷ್ಟ್ರೀಯ ಕಂಪನಿ, ಉದ್ದಿಮೆ/ಕೈಗಾರಿಕೆಗಳ ನೌಕರರು

ಆಹಾರ ಇಲಾಖೆಯ ಅಧಿಕೃತ ಮಾರ್ಗಸೂಚಿ: Download Now

ಹೊಸ ರೇಶನ್ ಕಾರ್ಡ ಅರ್ಜಿ ಸಲ್ಲಿಕೆ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ: 18004259339 ಅಥವಾ 1967 (10 ಗಂಟೆಯಿಂದ ಸಂಜೆ 5:30ರ ವರಗೂ ಈ ನಂಬರ್‌ಗಳಿಗೆ ಸಂಪರ್ಕಿಸಬಹುದು)

ಪಡಿತರ ಚೀಟಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಉದ್ಬವಿಸುವ ಪ್ರಶ್ನೆಗಲಿಗೆ ಇಲಾಖೆಯ ಉತ್ತರಗಳ ಕೈಪಿಡಿ: Donwload Now

Most Popular

Latest Articles

Related Articles