HomeNew postsPM Vidyalaxmi Scheme- ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲು ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಜಾರಿ!...

PM Vidyalaxmi Scheme- ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲು ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಜಾರಿ! ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಅರ್ಥಿಕವಾಗಿ ನೆರವು ನೀಡಲು ಕೇಂದ್ರ ಸರಕಾರದಿಂದ ಹೊಸ ಯೋಜನೆಯೊಂದಕ್ಕೆ ಸಂಪುಟ ಸಭೆಯಲ್ಲಿ ಅಧಿಕೃತ ಅನುಮೋದನೆ ನೀಡಲಾಗಿದ್ದು ಈ ಯೋಜನೆಗೆ “ಪಿಎಂ ವಿದ್ಯಾಲಕ್ಷ್ಮೀ ಯೋಜನೆ”(PM Vidyalaxmi Yojana) ಎಂದು ಹೆಸರಿಡಲಾಗಿದೆ.

ಇಂದಿನ ದಿನ ಮಾನಗಳಲ್ಲಿ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನ ನೀಡಲಾಗುತ್ತಿದ್ದು ಉನ್ನತ ಮಟ್ಟದ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಬೇಕು ಎನ್ನುವ ಕನಸು ಎಲ್ಲಾ ತಂದೆ-ತಾಯಿಯರ ಕನಸಾಗಿರುತ್ತದೆ. ಅರ್ಥಿಕವಾಗಿ ಹಿಂದುಳಿದರು ಮಕ್ಕಳ ಶಿಕ್ಷಣಕ್ಕೆ ಬ್ಯಾಂಕ್ ಗಳ ಮೂಲಕ ಸಾಲವನ್ನು ಪಡೆಯಲು ಈ ಪಿಎಂ ವಿದ್ಯಾಲಕ್ಷ್ಮೀ ಯೋಜನೆ(PM Vidyalaxmi Scheme) ನೆರವು ನೀಡಲಿದೆ.

ಇದನ್ನೂ ಓದಿ: New ration card- ಎಲ್ಲಾ ಜಿಲ್ಲೆಗಳಲ್ಲೂ ಹೊಸ ರೇಶನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ಏನಿದು ಪಿಎಂ ವಿದ್ಯಾಲಕ್ಷ್ಮೀ ಯೋಜನೆ? ಯಾರೆಲ್ಲೆ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ನಿನ್ನೆ 07 ನವೆಂಬರ್ 2024 ರಂದು ಪ್ರಧಾನಮತ್ರಿ ನರೇಂದ್ರ ಮೋದಿರವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ.

Education loan scheme-“ಪಿಎಂ ವಿದ್ಯಾಲಕ್ಷ್ಮೀ ಯೋಜನೆ” ಹಣಕಾಸಿನ ನೆರವಿನ ವಿವರ:

ಪಿಎಂ ವಿದ್ಯಾಲಕ್ಷ್ಮೀ ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಬ್ಯಾಂಕ್ ಮೂಲಕ ಶಿಕ್ಷಣ ಸಾಲವನ್ನು(Education loan) ಪಡೆಯಲು ನೆರವು ನೀಡುತ್ತದೆ ಈ ಯೋಜನೆಯ ಮೂಲಕ 10 ಲಕ್ಷದ ವರೆಗೆ ಪಡೆಯುವ ಸಾಲಕ್ಕೆ ಶೇ 3% ಬಡ್ಡಿದರ ಸಹಾಯಧನವನ್ನು(Education loan interest rate) ನೀಡಲಾಗುತ್ತದೆ.

ಉನ್ನತ ಶಿಕ್ಷಣಕ್ಕೆ ಸಾಲವನ್ನು ಪಡೆಯುವ ವಿಧಾನಕ್ಕೆ ಸರಳ ರೂಪ ನೀಡಲಾಗಿದ್ದು ವಿದ್ಯಾರ್ಥಿಗಲು ತಾವು ಪಡೆಯುವ ಸಾಲಕ್ಕೆ ಪಾವತಿ ಮಾಡಬೇಕಾದ ಬಡ್ದಿಗೆ ಕೇಂದ್ರ ಸರಕಾರದಿಂದ ಸಬ್ಸಿಡಿ ಪಡೆಯಬಹುದಾಗಿದೆ.

ಇದನ್ನೂ ಓದಿ: Crop loss Input subsidy-ಮೊದಲ ಹಂತದಲ್ಲಿ 13.02 ಕೋಟಿ ಬೆಳೆ ಪರಿಹಾರ ಬಿಡುಗಡೆಗೆ ಸಿದ್ದತೆ! ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!

PM Vidyalaxmi yojane

Education loan Application-ಅರ್ಜಿ ಸಲ್ಲಿಕೆ ಮಾಹಿತಿ:

ಅರ್ಹ ವಿದ್ಯಾರ್ಥಿಗಳು ಈ ಯೋಜನೆಗೆ ನಿಗದಿಪಡಿಸಿದ ವೆಬ್ಸೈಟ್ ಅನ್ನು ಶೀಘ್ರದಲ್ಲೇ ಕೇಂದ್ರದಿಂದ ತೆರೆಯಲಾಗುತ್ತದೆ ಈ ಜಾಲತಾಣವನ್ನು ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Education loan Documents-ಅಗತ್ಯ ದಾಖಲೆಗಳು:

1) ಆಧಾರ್‌ ಕಾರ್ಡ್‌

2) ಮತದಾರರ ಗುರುತಿನ ಚೀಟಿ

3) ಪ್ಯಾನ್‌ ಕಾರ್ಡ್

4) ಕಾಲೇಜು ದಾಖಲಾತಿ ಪ್ರಮಾಣ ಪತ್ರ

5) ಬ್ಯಾಂಕ್ ಪಾಸ್ ಬುಕ್ ವಿವರ

6) ವಿದ್ಯಾರ್ಥಿಯ ಪೋಟೋ

7) ಮೊಬೈಲ್ ನಂಬರ್

ಇದನ್ನೂ ಓದಿ: Anganawadi Jobs-2024: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್! ಅಂಗನವಾಡಿಯಲ್ಲಿ 577 ಖಾಲಿ ಹುದ್ದೆಗೆ ಅರ್ಜಿ!

PM Vidyalaxmi

ಇದನ್ನೂ ಓದಿ: Bank loan for business- ಬಡ್ಡಿದರ ರಿಯಾಯಿತಿಯಲ್ಲಿ ಮಹಿಳೆಯರಿಗೆ 20 ಲಕ್ಷದವರೆಗೆ ಸಾಲ! ಇಲ್ಲಿದೆ ಸಂಪೂರ್ಣ ವಿವರ!

Who can apply for PM Vidyalaxmi Yojana- “ಪಿಎಂ ವಿದ್ಯಾಲಕ್ಷ್ಮೀ ಯೋಜನೆ” ಪ್ರಯೋಜನ ಪಡೆಯಲು ಅರ್ಹರು:

1) ಅರ್ಜಿದಾರರರು ವಿದ್ಯಾರ್ಥಿಯು ಭಾರತೀಯ ನಿವಾಸಿಯಾಗಿರಬೇಕು.

2) ಈ ಯೋಜನೆಯು ಎನ್‌ಐಆರ್‌ಎಫ್‌ (NIRF) ಶ್ರೇಯಾಂಕದಲ್ಲಿ ಅಗ್ರ 100ರೊಳಗೆ ಸ್ಥಾನ ಪಡೆದಿರುವ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. ಇದರ ಜತೆಗೆ ಎನ್‌ಐಆರ್‌ಎಫ್‌ನಲ್ಲಿ 101-200 ರ‍್ಯಾಂಕ್‌ ಪಡೆದ ರಾಜ್ಯ ಸರ್ಕಾರದ ಎಚ್‌ಇಐಗಳು ಮತ್ತು ಎಲ್ಲ ಕೇಂದ್ರ ಸರ್ಕಾರದ ಆಡಳಿತದ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೂ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: Aadhar card-ಆಧಾರ್ ಕಾರ್ಡ್‌ ನಲ್ಲಿ ಹೆಸರು, ವಿಳಾಸವನ್ನು ಎಷ್ಟು ಬಾರಿ ತಿದ್ದುಪಡಿ ಮಾಡಿಸಬಹುದು?

PM Vidyalaxmi Yojana press news-ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಕುರಿತು ಕೇಂದ್ರ ಸರಕಾರದ ಅಧಿಕೃತ ಪ್ರಕಟಣೆ: Read Now

Most Popular

Latest Articles

Related Articles