HomeNewsAnganawadi Jobs-2024: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್! ಅಂಗನವಾಡಿಯಲ್ಲಿ 577 ಖಾಲಿ ಹುದ್ದೆಗೆ ಅರ್ಜಿ!

Anganawadi Jobs-2024: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್! ಅಂಗನವಾಡಿಯಲ್ಲಿ 577 ಖಾಲಿ ಹುದ್ದೆಗೆ ಅರ್ಜಿ!

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ(Anganawadi Jobs)ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಯಾವೆಲ್ಲ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುವ ನಿರುದ್ಯೋಗಿಗಳಿಗೆ ಮಾಹಿತಿ ತಲುಪುವವರಿಗೆ ಶೇರ್ ಮಾಡಿ ಸಹಕರಿಸಿ.

ಇದನ್ನೂ ಓದಿ: Bank loan for business- ಬಡ್ಡಿದರ ರಿಯಾಯಿತಿಯಲ್ಲಿ ಮಹಿಳೆಯರಿಗೆ 20 ಲಕ್ಷದವರೆಗೆ ಸಾಲ! ಇಲ್ಲಿದೆ ಸಂಪೂರ್ಣ ವಿವರ!

ಗ್ರಾಮೀಣ ಭಾಗದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಪ್ರಾರಂಭಿಕ ಹಂತದಲ್ಲಿ ಶಿಕ್ಷಣವನ್ನು ನೀಡಲು ರಾಜ್ಯ ಸರಕಾರದಿಂದ ಪ್ರತಿ ಹಳ್ಳಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆದು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತದೆ, ಈ ಕೇಂದ್ರಗಳಲ್ಲಿ ಕೆಲಸ ಮಾಡಲು ಆಸಕ್ತಿಯಿರುವವರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

Who can apply for Anganawadi Jobs- ಅರ್ಜಿ ಸಲ್ಲಿಸಲು ಅರ್ಹರು:

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು 2nd PUC ಅನ್ನು ಉತೀರ್ಣರಾಗಿರಬೇಕು. ಅದೇ ರೀತಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲು SSLC ಅನ್ನು ಉತೀರ್ಣರಾಗಿರಬೇಕು.

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರರ ವಯಸ್ಸು 19 ರಿಂದ 35 ವರ್ಷದ ಒಳಗಿರಬೇಕು.

ಇದನ್ನೂ ಓದಿ: Aadhar card-ಆಧಾರ್ ಕಾರ್ಡ್‌ ನಲ್ಲಿ ಹೆಸರು, ವಿಳಾಸವನ್ನು ಎಷ್ಟು ಬಾರಿ ತಿದ್ದುಪಡಿ ಮಾಡಿಸಬಹುದು?

Anganawadi vacancy details-ಹುದ್ದೆಗಳ ವಿವರ ಹೀಗಿದೆ:

ಬಾಗಲಕೋಟೆ ಮತ್ತು ವಿಜಯಪುರ ಎರಡು ಜಿಲ್ಲೆಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದ್ದು ಒಟ್ಟು 577 ಕ್ಕೂ ಹೆಚ್ಚಿನ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Anganawadi notification

Documents- ಅರ್ಜಿ ಸಲ್ಲಿಸಲು ದಾಖಲಾತಿಗಳು:

ಅರ್ಜಿದಾರರ ಪೋಟೋ
ಅರ್ಜಿದಾರರ ಆಧಾರ್ ಕಾರ್ಡ
ಅಂಕಪಟ್ಟಿ
ವಾಸವ ದೃಡೀಕರಣ ಪ್ರಮಾಣ ಪತ್ರ

ಇದನ್ನೂ ಓದಿ: SSP Date Extended- ಎಲ್ಲಾ ರೀತಿಯ ವಿದ್ಯಾರ್ಥಿವೇತನಕ್ಕೆ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿಕೆ!

Anganawadi Job application link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಮೊದಲಿಗೆ Apply Now ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಅರ್ಜಿ ಸಲ್ಲಿಸುವ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಬಳಿಕ ಇಲ್ಲಿ ಜಿಲ್ಲೆ ಮತ್ತು ತಾಲ್ಲೂಕನ್ನು ಹಾಗೂ “Notification Number/ಅಧಿಸೂಚನೆ ಸಂಖ್ಯೆ”, category ಅನ್ನು ಆಯ್ಕೆ ಮಾಡಿಕೊಂಡು Submit ಬಟನ್ ಮೇಲೆ ಕ್ಲಿಕ್ ಮಾಡಿ “Please select the vacancy as per your choice” ನಲ್ಲಿ ಅಯ್ಕೆ ಮಾಡಿಕೊಂಡು ಅರ್ಜಿದಾರ ಅಭ್ಯರ್ಥಿಯ ಪೂರ್ಣ ಹೆಸರು ಇತರೆ ವಿವರವನ್ನು ಭರ್ತಿ ಮಾಡಬೇಕು.

ಇದನ್ನೂ ಓದಿ: Diesel pumpset subsidy- ಶೇ 90% ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

Step-3: ಇಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಕೊನೆಯಲ್ಲಿ “Preview” ಬಟನ್ ಮೇಲೆ ಕ್ಲಿಕ್ ಮಾಡಿ ನೀವು ಭರ್ತಿ ಮಾಡಿರುವ ಎಲ್ಲಾ ಮಾಹಿತಿ ಸರಿಯಾಗಿ ಇದಿಯಾ ಎಂದು ಒಮ್ಮೆ ಚೆಕ್ ಮಾಡಿಕೊಂಡು ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ತದನಂತರ ಇಲ್ಲಿ Documents Upload ಕ್ಲಿಕ್ ಮಾಡಿ “Upload Your Photo,Signature/ನಿಮ್ಮ ಭಾವ ಚಿತ್ರ, ಸಹಿ ಅಪ್ಲೋಡ್ ಮಾಡಲು” ಮತ್ತು “Upload Documents/ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ” ಈ ಎರಡು ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ ನಿಮ್ಮ Application Id* ಅನ್ನು ನಮೂದಿಸಿ ನಿಮ್ಮ ಪೋಟೋ ಮತ್ತು ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು.

Step-5: ಕೊನೆಯಲ್ಲಿ ಹಿಂದಿನ ಪೇಜ್ ಗೆ ಬಂದು “Print Application/ಅರ್ಜಿ ಮುದ್ರಿಸಲು” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಬೇಕು.

Most Popular

Latest Articles

Related Articles