Fast Food Business-ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ಆರಂಭಿಸಲು ಉಚಿತ ತರಬೇತಿಗೆ ಅರ್ಜಿ ಆಹ್ವಾನ!

October 31, 2025 | Siddesh
Fast Food Business-ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ಆರಂಭಿಸಲು ಉಚಿತ ತರಬೇತಿಗೆ ಅರ್ಜಿ ಆಹ್ವಾನ!
Share Now:

ಫಾಸ್ಟ್ ಫುಡ್ ಆಹಾರ ತಯಾರಿಕೆಯನ್ನು ಕಲಿತು ತಮ್ಮದೇ ಅದ ಸ್ವಂತ ಉದ್ಯಮಿಯನ್ನು(Fast Food Training) ಆರಂಭಿಸಲು ಅಲೋಚನೆಯನ್ನು ಹೊಂದಿರುವವ ನಿರುದ್ಯೋಗಿ ಯುವಕರಿಗೆ ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತವಾಗಿ 12 ದಿನದ ವಸತಿ ಸಹಿತ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ದಿನೇ ದಿನೇ ಹೆಚ್ಚುತ್ತಿರುವ ಜನ ಸಂಖ್ಯೆಯ ಅನುಗುಣವಾಗಿ ಆಹಾರ ತಯಾರಿಕೆ(Fast Food Business) ಮತ್ತು ಮಾರಾಟ ಕ್ಷೇತ್ರದಲ್ಲಿ ಹೆಚ್ಚು ಬೇಡಿಕೆ ಇದ್ದು ಈ ನಿಟ್ಟಿನಲ್ಲಿ ಫಾಸ್ಟ್ ಫುಡ್ ಸ್ಟಾಲ್ ಉದ್ಯಮವನ್ನು ಪ್ರಾರಂಭಿಸುವ ಯೋಜನೆಯನ್ನು ಹಾಕಿಕೊಂಡಿರುವ ಗ್ರಾಮೀಣ ಮತ್ತು ನಗರ ಭಾಗದ ಯುವಕರು ಈ ತರಬೇತಿಯ ಪ್ರಯೋಜನವನ್ನು ಪಡೆಯಬಹುದು.

ಇದನ್ನೂ ಓದಿ: Electric Scooter-ಕೆಎಂಎಫ್ ನಿಂದ ಹಾಲು ವಿತರಕರಿಗೆ ರಿಯಾಯಿತಿ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟಿ ವಿತರಣೆ!

ಇಂದಿನ ಈ ಅಂಕಣದಲ್ಲಿ ಉಚಿತ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯನ್ನು(Fast Food Shop) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳೇನು? ತರಬೇತಿಯನ್ನು ಪಡೆಯಲು ಯಾರೆಲ್ಲ ಭಾಗವಹಿಸಬಹುದು? ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿಯನ್ನು ಆರಂಭಿಸಲು ಯಾವೆಲ್ಲ ಯೋಜನೆಯಡಿ ಸಬ್ಸಿಡಿಯನ್ನು ಪಡೆಯಬಹುದು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Fast Food Training Details-ಉಚಿತ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿ:

ಸ್ವಂತ ಉದ್ಯೋಗವನ್ನು ಆರಂಭಿಸಬೇಕು ಎನ್ನುವ ಯೋಜನೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಉಚಿತವಾಗಿ ಕೌಶಲ್ಯ ತರಬೇತಿಯನ್ನು ನೀಡಲು ಪ್ರತಿ ಜಿಲ್ಲೆಯಲ್ಲಿಯು ಸಹ ಒಂದು ಆರ್ ಸೆಟ್ ಸ್ವ-ಉದ್ಯೋಗ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದ್ದು ಈ ಕೇಂದ್ರಗಳ ಮೂಲಕ ಸ್ವ-ಉದ್ಯೋಗವನ್ನು ಆರಂಭಿಸಲು ಇಚ್ಚೆಯನ್ನು ಹೊಂದಿರುವ ಫಲಾನುಭವಿಗಳಿಗೆ ವಸತಿ ಮತ್ತು ಊಟ ಸಹಿತ ಉಚಿತ ತರಬೇತಿಯನ್ನು ನೀಡಲಾಗುತ್ತದೆ.

ಪ್ರಸ್ತುತ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ ಕೇಂದ್ರದಿಂದ ಫಾಸ್ಟ್ ಫುಡ್ ತಯಾರಿಕೆ ಹೇಗೆ ಮಾಡಬೇಕು? ಫಾಸ್ಟ್ ಫುಡ್ ಉದ್ದಿಮೆಯನ್ನು ಆರಂಭಿಸಲು ಪ್ರಾರಂಭಿಕ ಹಂತದಲ್ಲಿ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಈಗಾಗಲೇ ಈ ಉದ್ದಿಮೆಯನ್ನು ಮಾಡುತ್ತಿರುವ ಯಶಸ್ವಿ ಉದ್ದಿಮೆದಾರರ ಮೂಲಕ ವಿವಿಧ ಬಗ್ಗೆಯ ಕೌಶಲ್ಯವನ್ನು ಈ ತರಬೇತಿ ಮೂಲಕ ಕಲಿಸಲಾಗುತ್ತದೆ.

ಇದನ್ನೂ ಓದಿ: Pouthi Khata-ನಿಮ್ಮ ಜಮೀನಿನ ದಾಖಲೆಗಳಲ್ಲಿ ಗೊಂದಲ ಇದೆಯೇ? ತಕ್ಷಣವೇ ಪೌತಿ ಖಾತೆಗೆ ಅರ್ಜಿ ಸಲ್ಲಿಸಿ!

Who Can Apply For Fast Food Training-ತರಬೇತಿ ಪಡೆಯಲು ಯಾರೆಲ್ಲ ಭಾಗವಹಿಸಬಹುದು?

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ ಕೇಂದ್ರದಿಂದ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅಭ್ಯರ್ಥಿಯ ವಯಸ್ಸು18 ರಿಂದ 45 ವರ್ಷದ ಒಳಗಿರಬೇಕು.

ಕನ್ನಡ ಓದಲು ಮತ್ತು ಬರವಣಿಗೆ ಬರುವಂತಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯಿರುತ್ತದೆ.

ಬಿಪಿಎಲ್ ಕಾರ್ಡ ಹೊಂದಿರುವವರಿಗೆ ಪ್ರಥಮ ಆದ್ಯತೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತರಬೇತಿಯನ್ನು ಪಡೆದು ಸ್ವಂತ ಉದ್ದಿಮೆಯನ್ನು ಆರಂಭಿಸಲು ಅಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Maize MSP- ಕೆಎಂಎಫ್ ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಮನವಿ!

Fast Food Training Details

Free Fast Food Training Duration-ತರಬೇತಿ ಅವಧಿ:

ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯು 13 ನವೆಂಬರ್ 2025 ರಿಂದ ಪ್ರಾರಂಭವಾಗಿ 24 ನವೆಂಬರ್ 2025 ರವರೆಗೆ ನಡೆಯಲಿದೆ.

Free Fast Food Training Center Address-ತರಬೇತಿ ಸ್ಥಂಸ್ಥೆ ವಿಳಾಸ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ,ಕುಮಟಾ,ಉತ್ತರಕನ್ನಡ-581343

ಇದನ್ನೂ ಓದಿ: Pension Scheme-ಕಾರ್ಮಿಕ ಇಲಾಖೆಯ ವತಿಯಿಂದ ಮಾಸಿಕ ಪಿಂಚಣಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

How To Apply For Fast Food Training-ತರಬೇತಿಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸುವುದು ಹೇಗೆ?

ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ತರಭೇತಿ ಆರಂಭವಾಗುವ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿದ್ದು ಇದಕ್ಕಾಗಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಲು ಸೂಚಿಸಲಾಗಿದೆ.

Step-1: ಅಭ್ಯರ್ಥಿಗಳು ಪ್ರಥಮ ಹಂತದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ "Free Fast Food Training Registration" ಅಧಿಕೃತ ಗೂಗಲ್ ಪಾರ್ಮ್ ಅನ್ನು ಪ್ರವೇಶ ಮಾಡಿ.

Step-2: ತದನಂತರ ಈ ಪೇಜ್ ನಲ್ಲಿ ಕೇಳಿರುವ ನಿಮ್ಮ ಹೆಸರು ಇನ್ನಿತರೆ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿಯನ್ನು ಮಾಡಿ.

ಇದನ್ನೂ ಓದಿ: Scholarship Application-ಸಮಾಜ ಕಲ್ಯಾಣ ಇಲಾಖೆಯಿಂದ 5 ವಿದ್ಯಾರ್ಥಿವೇತನ ಯೋಜನೆಯಡಿ ಅರ್ಜಿ ಆಹ್ವಾನ!

Fast Food Training

Documents For Fast Food Training-ತರಬೇತಿಯಲ್ಲಿ ಭಾಗವಹಿಸಲು ಬೇಕಾಗುವ ದಾಖಲೆಗಳು:

ನೋಂದಣಿಯನ್ನು ಮಾಡಿಕೊಂಡಿರುವ ಅಭ್ಯರ್ಥಿಗಳು ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿ ಆರಂಭವಾಗುವ ದಿನದಂದು ತರಬೇತಿಯಲ್ಲಿ ಭಾಗವಹಿಸಲು ಅವಶ್ಯವಿರುವ ದಾಖಲೆಗಳ ಪಟ್ಟಿ ಹೀಗಿದೆ:

  • ಅಭ್ಯರ್ಥಿಯ ಆಧಾರ್ ಕಾರ್ಡ ಪ್ರತಿ.
  • ಅಭ್ಯರ್ಥಿಯ ಬ್ಯಾಂಕ್ ಪಾಸ್ ಬುಕ್.
  • ಅಭ್ಯರ್ಥಿಯ ರೇಶನ್ ಕಾರ್ಡ ಪ್ರತಿ.
  • ಅಭ್ಯರ್ಥಿಯ ಪಾನ್ ಕಾರ್ಡ ಪ್ರತಿ.
  • ಅಭ್ಯರ್ಥಿಯ ನಾಲ್ಕು ಪೋಟೋ.

ಉದ್ದಿಮೆ ಆರಂಭಿಸಲು ಯಾವೆಲ್ಲ ಯೋಜನೆಯಡಿ ಆರ್ಥಿಕ ನೆರವು ಪಡೆಯಬಹುದು:

ಅಭ್ಯರ್ಥಿಗಳು ಈ ಉಚಿತ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯನ್ನು ಪಡೆದ ಬಳಿಕ ಈ ಉದ್ದಿಮೆಯನ್ನು ಆರಂಭಿಸಲು ಯಾವೆಲ್ಲ ಯೋಜನೆ ಅಡಿಯಲ್ಲಿ ಆರ್ಥಿಕ ನೆರವು/ಸಬ್ಸಿಡಿಯನ್ನು ಪಡೆದು ಈ ಉದ್ದಿಮೆಯನ್ನು ಆರಂಭಿಸಬಹುದು ಇದರ ವಿವರ ಹೀಗಿದೆ:

1) PMEGP ಯೋಜನೆಯಡಿ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ಅನ್ನು ಆರಂಭಿಸಲು ಒಟ್ಟು ಯೋಜನಾ ವೆಚ್ಚದ ಶೇ 35% ಸಬ್ಸಿಡಿಯನ್ನು ಪಡೆಯಬಹುದು.
2) PMFME ಯೋಜನೆಯಡಿ ಆಹಾರ ಸಂಸ್ಕರಣೆ ಮತ್ತು ಮೌಲವರ್ದನೆಗೆ ಯೋಜನಾ ವೆಚ್ಚದ ಶೇ 50% ಸಬ್ಸಿಡಿಯನ್ನು ಪಡೆಯಬಹುದು.
3) ರಾಜ್ಯ ದಲ್ಲಿ ಅಸ್ತಿತ್ವದಲ್ಲಿರುವ ವಿವಿಧ ವರ್ಗದ ನಿಗಮಗಳಿಂದ ಫಾಸ್ಟ್ ಫುಡ್ ಸ್ಟಾಲ್ ವಾಹನವನ್ನು ಖರೀದಿ ಮಾಡಲು ಸಹಾಯಧನವನ್ನು ಪಡೆಯಬಹುದು.

Helpline-ತರಬೇತಿಯ ಕುರಿತು ಮತ್ತು ನೋಂದಣಿಗಾಗಿ ಸಂಪರ್ಕಿಸಿ- 9449860007/ 9538281989/ 9916783825/ 8880444612

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: