Power Weeder Susbidy-ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ರೂ 19,031/- ಕ್ಕೆ ಪವರ್ ವೀಡರ್! ಇಲ್ಲಿದೆ ಸಂಪೂರ್ಣ ವಿವರ!

November 1, 2025 | Siddesh
Power Weeder Susbidy-ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ರೂ 19,031/- ಕ್ಕೆ ಪವರ್ ವೀಡರ್! ಇಲ್ಲಿದೆ ಸಂಪೂರ್ಣ ವಿವರ!
Share Now:

ಕೃಷಿ ಇಲಾಖೆಯಿಂದ ಕೃಷಿ ಯಾಂತ್ರೀಕರಣ ಯೋಜನೆ ಅಡಿಯಲ್ಲಿ ಸಹಾಯಧನದಲ್ಲಿ ವಿವಿಧ ಕೃಷಿ ಚಟುವಟಿಕೆಗೆ ಪೂರಕ ಯಂತ್ರಗಳನ್ನು(Power Weeder) ಪಡೆಯಲು ಅವಕಾಶವಿದ್ದು, ಪವರ್ ವೀಡರ್ ಪಡೆಯಲು ಎಷ್ಟು ಸಬ್ಸಿಡಿ ನಿಗದಿಪಡಿಸಲಾಗಿದೆ? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ದಿನಗಳಲ್ಲಿ ಜಮೀನಿನಲ್ಲಿ ದೈನಂದಿನ ಕೃಷಿ ಚಟುವಟಿಕೆಗಳನ್ನು ಮಾಡಲು ಬಹುತೇಕ ರಾಜ್ಯದ ಎಲ್ಲಾ ಭಾಗದಲ್ಲಿ ಕಾರ್ಮಿಕ ಕೊರತೆ ಇದ್ದು ಸಮಯಕ್ಕೆ ಸರಿಯಾಗಿ ಕೃಷಿ ಕಾರ್ಮಿಕರ(Power Weeder Susbidy) ಲಭ್ಯತೆಯಿಲ್ಲದ ಕಾರಣ ದೊಡ್ಡ ಮಟ್ಟದಲ್ಲಿ ರೈತರಿಗೆ ಕೃಷಿ ಚಟುವಟಿಕೆಯನ್ನು ಕೈಗೊಳ್ಳಲು ತೊಂದರೆ ಅಗುತ್ತದೆ. ಕಾರ್ಮಿಕರ ಕೊರತೆಯನ್ನು ನಿಭಾಯಿಸಲು ಕೃಷಿಯಲ್ಲಿ ಯಂತ್ರಗಳನ್ನು ಬಳಕೆ ಮಾಡುವುದು ಅತ್ಯವಶ್ಯಕ.

ಇದನ್ನೂ ಓದಿ: Fast Food Business-ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ಆರಂಭಿಸಲು ಉಚಿತ ತರಬೇತಿಗೆ ಅರ್ಜಿ ಆಹ್ವಾನ!

ಸಣ್ಣ ಮತ್ತು ಮಧ್ಯಮ ಗ್ರಾತದ ಜಮೀನನ್ನು ಹೊಂದಿರುವ ರೈತರು ಅಧಿಕ ಹಣವನ್ನು ಪಾವತಿ ಮಾಡಿ ಕೃಷಿ ಯಂತ್ರಗಳನ್ನು ಖರೀದಿ(Power Weeder Susbidy Application) ಮಾಡಲು ಸಾಧ್ಯವಾಗುವುದಿಲ್ಲ ಇದಕ್ಕೆ ಸೂಕ್ತ ಪರಿಹಾರವನ್ನು ಒದಗಿಸಲು ಕೃಷಿ ಇಲಾಖೆಯಿಂದ ಕೃಷಿ ಯಾಂತ್ರೀಕರಣ ಯೋಜನೆ ಅಡಿಯಲ್ಲಿ ವಿವಿಧ ಯಂತ್ರಗಳಿಗೆ ಸಬ್ಸಿಡಿಯನ್ನು ನೀಡಲಾಗುತ್ತದೆ ಇದೆ ಮಾದರಿಯಲ್ಲಿ ಪವರ್ ವೀಡರ್ ಖರೀದಿ ಮೇಲೆ ಶೇ 40% ಸಹಾಯಧನವನ್ನು ಪಡೆಯಲು ರೈತರಿಗೆ ಅವಕಾಶವಿದೆ.

Power Weeder Susbidy Amount-ಪವರ್ ವೀಡರ್ ಸಬ್ಸಿಡಿ ಮೊತ್ತ ಎಷ್ಟು?

ಕೃಷಿ ಇಲಾಖೆಯಿಂದ ಕೃಷಿ ಯಾಂತ್ರೀಕರಣ ಯೋಜನೆ ಅಡಿಯಲ್ಲಿ ವಿತರಣೆ ಮಾಡುವ ಪವರ್ ವೀಡರ್ ಯಂತ್ರಕ್ಕೆ(4 Stroke Diesel Engine Power Weeder)ನಿಗದಿಪಡಿಸಿರುವ ರೈತರು ಯಂತ್ರ ಖರೀದಿ ಮಾಡಲು ಪಾವತಿ ಮಾಡಬೇಕಾದ ಮೊತ್ತ(Farmer Share) ಮತ್ತು ಸಹಾಯಧನ ಮೊತ್ತದ(Subsidy Amount) ವಿವರ ಹೀಗಿದೆ:

1) ಸಾಮಾನ್ಯ ವರ್ಗದ(GEN) ರೈತರಿಗೆ:

  • ಪೂರ್ಣ ದರ: 89,063/-
  • ಸಹಾಯಧನ: 39,906/-
  • ರೈತರ ವಂತಿಕೆ: 50,157/-

ಇದನ್ನೂ ಓದಿ: Electric Scooter-ಕೆಎಂಎಫ್ ನಿಂದ ಹಾಲು ವಿತರಕರಿಗೆ ರಿಯಾಯಿತಿ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟಿ ವಿತರಣೆ!

2) ಪ.ಜಾತಿ/ಪ.ಪಂಗಡ(SC/ST) ವರ್ಗದ ರೈತರಿಗೆ:

  • ಪೂರ್ಣ ದರ: 77,813/-
  • ಸಹಾಯಧನ: 70,031/-
  • ರೈತರ ವಂತಿಕೆ: 19,031/-

ವಿಶೇಷ ಸೂಚನೆ: ಕಂಪನಿ ಮತ್ತು ಮಾಡೆಲ್ ವಾರು ಪವರ್ ವೀಡರ್ ಯಂತ್ರದ ಮೊತ್ತದಲ್ಲಿ ವ್ಯತ್ಯಾಸವಾಗುತ್ತದೆ.

How To Apply For Farm Mechanisation Scheme-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ರೈತರು ಸಹಾಯಧನದಲ್ಲಿ ಯಂತ್ರವನ್ನು ಪಡೆಯಲು ಈ ಅಂಕಣದಲ್ಲಿ ತಿಳಿಸಿರುವ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: Pouthi Khata-ನಿಮ್ಮ ಜಮೀನಿನ ದಾಖಲೆಗಳಲ್ಲಿ ಗೊಂದಲ ಇದೆಯೇ? ತಕ್ಷಣವೇ ಪೌತಿ ಖಾತೆಗೆ ಅರ್ಜಿ ಸಲ್ಲಿಸಿ!

Powder Weeder

Required Documents For Application-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಪವರ್ ವೀಡರ್ ಮಶಿನ್ ಅನ್ನು ಸಬ್ಸಿಡಿಯಲ್ಲಿ ಪಡೆಯಲು ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳ ಪಟ್ಟಿ:

  • ರೈತರ ಅಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ಜಮೀನಿನ ಪಹಣಿ/RTC
  • ರೈತರ ಪೋಟೋ
  • ಬಾಂಡ್ ಪೇಪರ್
  • ವೋಟರ್/ರೇಶನ್ ಕಾರ್ಡ

Farm Mechanisation Eligibility Criteria-ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು:

ಕೃಷಿ ಇಲಾಖೆಯಿಂದ ಕಳೆದ 7 ವರ್ಷದಲ್ಲಿ ಸಬ್ಸಿಡಿಯಲ್ಲಿ ಪವರ್ ವೀಡರ್ ಯಂತ್ರವನ್ನು ಪಡೆದಿರಬಾರದು.
ತಮ್ಮ ಹೆಸರಿನಲ್ಲಿ ಕೃಷಿ ಜಮೀನನ್ನು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಸಣ್ಣ ಮತ್ತು ಅತೀ ಸಣ್ಣ ವರ್ಗಕ್ಕೆ ಸೇರಿದ ರೈತರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Maize MSP- ಕೆಎಂಎಫ್ ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಮನವಿ!

Farm Mechanisation Online Application-ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸಹ ಅವಕಾಶ:

ರೈತರು ಕೃಷಿ ಇಲಾಖೆಯ ಕೆ-ಕಿಸಾನ್ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಕೆಳಗಿನ ಹಂತಗಳನ್ನು ಅನುಸರಿಸಿ ಅಗತ್ಯ ವಿವರವನ್ನು ಭರ್ತಿ ಮಾಡಿ ಆನ್ಲೈನ್ ಮೂಲಕವು ಸಹ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Step-1: ಮೊದಲಿಗೆ "Farm Mechanisation Application" ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಕೆ-ಕಿಸಾನ್ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Pension Scheme-ಕಾರ್ಮಿಕ ಇಲಾಖೆಯ ವತಿಯಿಂದ ಮಾಸಿಕ ಪಿಂಚಣಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

Powder Weeder Susbidy Application

Step-2: ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ "Farm Mechanisation Application Registration/ಕೃಷಿ ಯಾಂತ್ರೀಕರಣ ಅರ್ಜಿ ನೋಂದಣಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ FID ನಂಬರ್ ಅನ್ನು ನಮೂದಿಸಿ "Get Details" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: "Get Details" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಅರ್ಜಿಯನ್ನು ಸಲ್ಲಿಸುವುದರ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೈಪಿಡಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ-Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: