- Advertisment -
HomeAgricultureFertilizer Shop- ಬೀಜ ಮತ್ತು ಗೊಬ್ಬರ ಅಂಗಡಿ ಪರವಾನಗಿ ಪಡೆಯುವುದು ಹೇಗೆ? ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು?

Fertilizer Shop- ಬೀಜ ಮತ್ತು ಗೊಬ್ಬರ ಅಂಗಡಿ ಪರವಾನಗಿ ಪಡೆಯುವುದು ಹೇಗೆ? ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು?

ಕೃಷಿ ಇಲಾಖೆಯಿಂದ ಬೀಜ ಮತ್ತು ಗೊಬ್ಬರ ಅಂಗಡಿಯನ್ನು ತೆರೆಯಲು ಪರವಾನಗಿ(Fertilizer Shop license) ಪಡೆಯುವುದು ಹೇಗೆ? ಇದಕ್ಕೆ ಸಂಬಂಧಪಟ್ಟಂತೆ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಈ ಹಿಂದೆ ಯಾವುದೇ ಪದವಿ ಪಡೆದಿರುವವರು ಸಹ ಬೀಜ ಮತ್ತು ಗೊಬ್ಬರ ಅಂಗಡಿಯನ್ನು ತೆರೆದು ರೈತರಿಗೆ ಗೊಬ್ಬರ ಮತ್ತು ಬೀಜ, ಕೀಟನಾಶಕಗಳನ್ನು ಮಾರಾಟ(Pesticide and Fertilizer shop license) ಮಾಡಲು ಅವಕಾಶವಿತ್ತು ಅದರೆ ಪ್ರಸ್ತುತ ಕೃಷಿ ಇಲಾಖೆಯ ಮಾರ್ಗಸೂಚಿಯ ಪ್ರಕಾರ ನಿಗದಿತ ವಿದ್ಯಾರ್ಹತೆಯನ್ನು ಹೊಂದಿರುವವರು ಮಾತ್ರ ಬೀಜ ಮತ್ತು ಗೊಬ್ಬರ,ಕೀಟನಾಶಕ ಅಂಗಡಿಯನ್ನು ತೆರೆಯಲು ಸಾಧ್ಯವಿದೆ.

ಇದಲ್ಲದೇ ಈ ಕೆಳಗೆ ಅರ್ಜಿದಾರರು ಸ್ವಂತ ತಾವೇ ನೇರವಾಗಿ ಕೃಷಿ ಇಲಾಖೆಯ(Karnataka agriculture department) ಅಧಿಕೃತ ಕೆ-ಕಿಸಾನ್ ತಂತ್ರಾಂಶವನ್ನು ಪ್ರವೇಶ ಮಾಡಿ ಬೀಜ ಮತ್ತು ಗೊಬ್ಬರ ಅಂಗಡಿ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಹಾಗೂ ಒದಗಿಸಬೇಕಾಗುವ ದಾಖಲಾತಿಗಳ ಮಾಹಿತಿಯನ್ನು ಸಹ ತಿಳಿಸಲಾಗಿದೆ.

ಇದನ್ನೂ ಓದಿ: Murarji school admission- ಮೊರಾರ್ಜಿ ದೇಸಾಯಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ!

Fertilizer shop licence qualification- ಬೀಜ ಮತ್ತು ಗೊಬ್ಬರ, ಕೀಟನಾಶಕ ಅಂಗಡಿ ಪರವಾನಗಿ ಪಡೆಯಲು ನಿಗದಿಪಡಿಸಿರುವ ವಿದ್ಯಾರ್ಹತೆ:

ಕೃಷಿ ವಿಶ್ವವಿದ್ಯಾಲಯದಿಂದ ನೀಡುವ ನಾಲ್ಕು ವರ್ಷದ ಕೃಷಿಯಲ್ಲಿ ಪದವಿಯನ್ನು ಪಡೆದಿರುವವರು, ಕೃಷಿ ಡಿಪ್ಲೋಮಾ, ರಸಾಯನಶಾಸ್ತ್ರ ವಿಷಯದಲ್ಲಿ ಪದವಿಯನ್ನು ಪಡೆದಿರುವವರು ಬೀಜ ಮತ್ತು ಗೊಬ್ಬರ, ಕೀಟನಾಶಕ ಅಂಗಡಿ ಪರವಾನಗಿ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.

How to apply for Fertilizer Shop license-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಕೃಷಿ ಇಲಾಖೆಯ ಕೆ-ಕಿಸಾನ್ ತಂತ್ರಾಂಶವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: SSLC ಮತ್ತು PUC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ!

Documents For Fertilizer Shop license-ಅರ್ಜಿಯನ್ನು ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ
2) ವಿದ್ಯಾರ್ಹತೆ ಪ್ರಮಾಣ ಪತ್ರ
3) ಪಾನ್ ಕಾರ್ಡ
4) GST ಪ್ರಮಾಣ ಪತ್ರ
5) ಅಂಗಡಿ ಬಾಡಿಗೆ ಅಗ್ರಿಮೇಂಟ್ ಪ್ರತಿ
6) ಸ್ಥಳೀಯ ಪ್ರಾಧಿಕಾರದ ಪರವಾನಗಿ ಪತ್ರ
7) ಅಂಗಡಿ ಸ್ಥಳದ Site Map
8) ಶುಲ್ಕ ಪಾವತಿ ಚಾನೆಲ್
9) Approved Principal Certifiacate for pesticides
10) Source wise authorized form-o with fertilizer details
11) Source of supply A2-Wholesale marketing license
12) Digital payment/QR Code scanner details

ಇದನ್ನೂ ಓದಿ: Borewell- ಇನ್ನು ಮುಂದೆ ಬೋರ್ ವೆಲ್ ಕೊರೆಸಲು ಈ ನಿಯಮ ಪಾಲನೆ ಕಡ್ಡಾಯ!

Apply Method For Fertilizer Shop license-ಅರ್ಜಿಯಲ್ಲಿ ಸಲ್ಲಿಸುವ ವಿಧಾನ:

ಅರ್ಹ ಅರ್ಜಿದಾರರು ಕೃಷಿ ಇಲಾಖೆಯ ಕೆ-ಕಿಸಾನ್ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಮೊದಲಿಗೆ Fertilizer shop license Online application ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಕೆ-ಕಿಸಾನ್ ಜಾಲತಾಣವನ್ನು ಪ್ರವೇಶ ಮಾಡಬೇಕು.

Fertilizer Shop license

Step-2: ಬಳಿಕ ಇ ಪೇಜ್ ನಲ್ಲಿ ಕಾಣುವ “Register/ನೋಂದಣಿ” ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ Firm Name ಮತ್ತು ವಿಳಾಸದ ವಿವರ ಸೇರಿದಂತೆ ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯಲ್ಲಿ ಕಾಣುವ “Enter Security Code” ಅಲ್ಲಿ ಕೋಡ್ ಹಾಕಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಬೇಕು.

ಇದನ್ನೂ ಓದಿ: Gruha Jyothi Yojana- ಮನೆಗೆ ಉಚಿತ ವಿದ್ಯುತ್ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

Step-3: ಮೇಲಿನ ಹಂತವನ್ನು ಅನುಸರಿಸಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡ ನಂತರ “Login/ಲಾಗಿನ್” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ಹಾಕಿ ಲಾಗಿನ್ ಅಗಬೇಕು.

gobbara angadi

Step-4: ಲಾಗಿನ್ ಅದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಅರ್ಜಿದಾರರ ಅಗತ್ಯ ವಿವರ ಮತ್ತು ಅಂಗಡಿ ಪರವಾನಗಿಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ಶುಲ್ಕ ಪಾವತಿ ವಿಭಾಗವನ್ನು ಭೇಟಿ ಮಾಡಿ ಶುಲ್ಕ ಪಾವತಿ ಮಾಡಿದರೆ ಅರ್ಜಿ ಸಲ್ಲಿಸುವ ಪ್ರಕಿಯೆ ಪೂರ್ಣಗೊಳ್ಳುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಬಳಕೆದಾರ ಕೈಪಿಡಿಗಳನ್ನು ಡೌನ್ಲೋಡ್ ಮಾಡಲು ಲಿಂಕ್- Download Now

- Advertisment -
LATEST ARTICLES

Related Articles

- Advertisment -

Most Popular

- Advertisment -