Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeMost PopularMoneyGoogle Pay, Phone pe ನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಕಳಿಸಿದರೆ! ವಾಪಸ್ ಪಡೆಯುವುದು ಹೇಗೆ!

Google Pay, Phone pe ನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಕಳಿಸಿದರೆ! ವಾಪಸ್ ಪಡೆಯುವುದು ಹೇಗೆ!

Google Pay, Phone pe ನಲ್ಲಿ ಆಜಾಗೃಕತೆಯಿಂದ ತಪ್ಪಾದ ಮೊಬೈಲ್ ಸಂಖ್ಯೆ ಹಾಕಿ ತಪ್ಪಾದ ವ್ಯಕ್ತಿಗೆ ಅಥವಾ ಬೇರೆಯವರಿಗೆ ಹಣ ಪಾವತಿ ಮಾಡಿದ ಬಳಿಕ ಆ ಹಣವನ್ನು ಮರಳಿ ಹೇಗೆ ವಾಪಸ್ ಪಡೆಯುವುದು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಶುಭ ದಿನ.

Krushikamitra.com ಓದುಗ ಮಿತ್ರರಿಗೆ ನಮಸ್ಕಾರಗಳು ಇಂದಿನ ಡಿಜಿಟಲ್ ಯುಗದಲ್ಲಿ ಗೂಗಲ್ ಪೇ, ಫೋನ್ ಪೇ, ಪೇಟಿಎಂ(Google Pay, Phone pe, Paytm) ಅಪ್ಲಿಕೇಶನ್ ಗಳ ಬಳಕೆ ಎಷ್ಟರಮಟ್ಟಿಗೆ ದೈನಂದಿನ ಜೀವನದಲ್ಲಿ ಪಾತ್ರ ವಹಿಸಿದೆ ಎಂದರೆ ತರಕಾರಿಗಳನ್ನು ಕೊಳ್ಳುವುದರಿಂದ ಹಿಡಿದು ದೊಡ್ಡ ಮೊತ್ತದ ವಸ್ತುಗಳನ್ನು ಖರೀದಿ ಮಾಡುವವರೆಗೂ ಈ UPI ಆಧಾರಿತ ಹಣ ವಹಿವಾಟಿನ ಮೊಬೈಲ್ ಅಪ್ಲಿಕೇಶನ್ ಗಳ ಬಳಕೆಯನ್ನು ನಾವು ಮಾಡುತ್ತೇವೆ.

ಇದನ್ನೂ ಓದಿ: Ganga Kalyana- ಕೊಳವೆ ಬಾವಿ ಕೊರೆಸಲು 4.25 ಲಕ್ಷ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ಇಂದಿನ ಡಿಜಿಟಲ್ ಯುಗದಲ್ಲಿ ದೈನಂದಿನ ವ್ಯವಹಾರಿಕ ಚಟುವಟಿಕೆಗಳನ್ನು ನಡೆಸಲು ಫೋನ್ ಪೇ, ಗೂಗಲ್ ಪೇ ಅಂತಹ ಹಣ ಪಾವತಿ ಮಾಡುವಂತಹ ಮೊಬೈಲ್ application ಗಳು ಮಹತ್ವದ ಪಾತ್ರ ವಹಿಸುತ್ತವೆ. ಈ App ಗಳನ್ನು ಬಳಕೆ ಮಾಡುವ ನಾವು ಈ ಅಪ್ಲಿಕೇಶನ್ ಮೂಲಕ ಹಣ ವಹಿವಾಟನ್ನು ಮಾಡುವ ಸಮಯದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಅತ್ಯಗತ್ಯ.

1) Google Pay, Phone pe ಅಪ್ಲಿಕೇಶನ್ ಗಳನ್ನು ಬಳಕೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು:

ನಿಮ್ಮ ವಾಟ್ಸಾಪ್ ಗೆ ಅಪರಿಚಿತ ನಂಬರ್ ನಿಂದ ಬರುವ ಅನಧಿಕೃತ ವೆಬ್ಸೈಟ್ ಲಿಂಕ್ ಗಳ ಮೇಲೆ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ.

ವಾಟ್ಸಪ್ ಗ್ರೂಪ್(Whatsapp) ಗಳಲ್ಲಿ ಮತ್ತು ಟೆಲಿಗ್ರಾಂ(Telegram) ಇತರೆ ಸೋಶಿಯಲ್ ಮೀಡಿಯಾಗಳ ಮೂಲಕ ಬರುವ ಅನಧಿಕೃತ APK ಫೈಲ್ ಅಪ್ಲಿಕೇಶನ್ ಗಳನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡದಿರಿ, ಯಾವುದೇ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡುವುದಿದ್ದರೆ Google plya storeಗೆ ಭೇಟಿ ಮಾಡಿ ಮಾತ್ರ ಡೌನ್ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: Best mileage bikes-ಅತಿ ಹೆಚ್ಚು ಮೈಲೇಜ್ ಕೊಡುವ ಬೈಕ್ ಗಳು!ಫುಲ್ ಟ್ಯಾಂಕ್ ಮಾಡಿದರೆ 700-750 km ಓಡಿಸಬಹುದು!

ನಿಮ್ಮ ಮೊಬೈಲಿಗೆ ಸ್ಕ್ರೀನ್ ಲಾಕ್ ಮರೆಯದೆ ಇಟ್ಟುಕೊಳ್ಳಿ ಜೊತೆಗೆ ನಿಮ್ಮ ಫೋನ್ ಪೇ, ಗೂಗಲ್ ಪೇ ಆಪ್ ಗಳ ಪಾಸ್ವರ್ಡ್ ಅನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಆ ಪಾಸ್ವರ್ಡ್‌ಗಳನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡದಿರಿ.

+91 ನಿಂದ ಪ್ರಾರಂಭವಾಗುವ ಮೊಬೈಲ್ ಸಂಖ್ಯೆಗಳನ್ನು ಹೊರತುಪಡಿಸಿ ಇತರೆ ಮೊಬೈಲ್ ಸಂಖ್ಯೆಯಿಂದ ಕರೆ ಬಂದರೆ ಜಾಗ್ರತೆ ವಹಿಸಿ.

2) ಗೂಗಲ್ ಪೇ, ಫೋನ್ ಪೇ, ಪೇಟಿಎಂ ನಲ್ಲಿ ಹಣ ಸಂದಾಯ ಮಾಡುವಾಗ ಅನುಸರಿಸಬೇಕಾದ ಮುನ್ನಚ್ಚರಿಕೆ ಕ್ರಮಗಳು:

ಈಗಿನ ಡಿಜಿಟಲ್ ಯುಗದಲ್ಲಿ 10 ರೂಪಾಯಿ ನಿಂದ ಹಿಡಿದು ಒಂದು ಲಕ್ಷದವರೆಗೆ ದಿನನಿತ್ಯ ಈ ಅಪ್ಲಿಕೇಶನ್ ಗಳ ಮೂಲಕವೇ ನಾವುಗಳು ಹಣ ವಹಿವಾಟನ್ನು ಮಾಡುತ್ತೇವೆ. ನಗದು ಹಣ ಬಳಕೆ ಕಡಿಮೆಯಾಗಿರುತ್ತಿದ್ದು, ಮೊಬೈಲ್ ನಂಬರ್ ಮತ್ತು ಅಕೌಂಟ್ ನಂಬರ್ ಗಳನ್ನು ನಮೂದಿಸಿ ಈ ಅಪ್ಲಿಕೇಶನ್ ಗಳ ಮೂಲಕ ಹಣ ಸಂದಾಯ ಮಾಡುವಾಗ ಈ ಕೆಳಗೆ ತಿಳಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಅನುಸರಿಸಿ.

ಇದನ್ನೂ ಓದಿ: Bele vime parihara-ಬೆಳೆ ವಿಮೆ ಈ ಜಿಲ್ಲೆಯ ರೈತರಿಗೆ 45 ಕೋಟಿ ಬಿಡುಗಡೆ!

5000/- ಕ್ಕಿಂತ ಹೆಚ್ಚಿನ ಹಣವನ್ನು ಬೇರೆಯವರಿಗೆ ಸಂದಾಯ ಮಾಡುವಾಗ ಒಮ್ಮೆಲೇ 5000/- ಹಣವನ್ನು ಕಳಿಸುವ ಬದಲು ಪ್ರಾಯೋಗಿಕವಾಗಿ 1 ರೂ ಸಂದಾಯ ಮಾಡಿ ಚೆಕ್ ಮಾಡಿಕೊಳ್ಳುವುದು.

ಮೊಬೈಲ್ ನಂಬರ್ ಮತ್ತು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡುವಾಗ ಸಂದಾಯ ಮಾಡುವ ವ್ಯಕ್ತಿಯ ಬ್ಯಾಂಕ್ ಖಾತೆಯ ಹೆಸರನ್ನು ತಪ್ಪದೇ ಖಚಿತಪಡಿಸಿಕೊಳ್ಳಿ.

ನೀವು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಆಪ್ ಗಳನ್ನು ಬಳಕೆ ಮಾಡುವಾಗ ನಿಮ್ಮ ಮೊಬೈಲ್ ಇಂಟರ್ನೆಟ್ ಸ್ಪೀಡ್ ಎಷ್ಟು ಇದೆ ಎಂದು ಚೆಕ್ ಮಾಡಿಕೊಳ್ಳಿ ಒಂದೊಮ್ಮೆ ನಿಧಾನಗತಿಯಲ್ಲಿದ್ದರೆ ಹಣವನ್ನು ಪಾವತಿ ಮಾಡಬೇಡಿ, ಉತ್ತಮ ಇಂಟರ್ನೆಟ್ ಇರುವ ಕಡೆ ಹೋಗಿ ಪಾವತಿ ಮಾಡಿ.

3) ಗೂಗಲ್ ಪೇ ಫೋನ್ ಪೇ ಪೇಟಿಎಂ ನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಕಳಿಸಿದರೆ ವಾಪಸ್ ಪಡೆಯುವುದು ಹೇಗೆ?

ನಾವುಗಳು ಗೂಗಲ್ ಪೇ, ಪೇಟಿಎಂ, ಫೋನ್ ಪೇ ಆಪ್ ಗಳನ್ನು ಬಳಕೆ ಮಾಡುವಲ್ಲಿ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರು ಅವಸರದಲ್ಲಿ ಆಜಾಗೃಕತೆಯಿಂದ ತಪ್ಪಾದ ವ್ಯಕ್ತಿಗೆ ಹಣ ಸಂದಾಯವಾದರೆ ವಾಪಸ್ ಪಡೆಯುವುದು ಹೇಗೆ ಅಥವಾ ಯಾವ ಹಂತಗಳನ್ನು ಅನುಸರಿಸಿ ಮರಳಿ ಪಡೆಯಬೇಕೆಂದು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: SIP- ಪ್ರತಿ ತಿಂಗಳು ರೂ 1,000 ಸಾವಿರ ಉಳಿತಾಯ ಮಾಡಿ 12 ಲಕ್ಷ ಆದಾಯಗಳಿಸಿ!

Step 1: ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಗೂಗಲ್ ಪೇಟಿಎಂ ಆಪ್ ಓಪನ್ ಮಾಡಿಕೊಂಡು “see transaction history” ಬಟನ್ ಮೇಲೆ ಕ್ಲಿಕ್ ಮಾಡಬೇಕು.

google pay app

Step 2: ಇಲ್ಲಿ ತಪ್ಪಾದ ವ್ಯಕ್ತಿಗೆ ಸಂದಾಯವಾಗಿರುವುದರ ಮೇಲೆ ಕ್ಲಿಕ್ ಮಾಡಬೇಕು ಗೂಗಲ್ ಪೇ ಆಪ್ ನಲ್ಲಿ “Having issue” ಬಟನ್ ಮೇಲೆ ಕ್ಲಿಕ್ ಮಾಡಿ ಒಂದೊಮ್ಮೆ ನೀವು ಬಳಕೆ ಮಾಡುವ ಅಪ್ಲಿಕೇಶನ್ ಫೋನ್ ಪೇ ಅಗಿದ್ದರೆ “Contact phone pe support” ಬಟನ್ ಮೇಲೆ ಕ್ಲಿಕ್ ಮಾಡಬೇಕು.

phone pe

Step 3: ಈ ಪೇಜ್ ನ ಬಲಬದಿಯಲ್ಲಿ ಮೇಲೆ ಕಾರ್ನರ್ ನಲ್ಲಿ ಕಾಣುವ “ಭಾಷೆ” ಆಯ್ಕೆಯಲ್ಲಿ “ಕನ್ನಡ” ಭಾಷೆಯನ್ನು ಆಯ್ಕೆ ಮಾಡಿಕೊಂಡು ಈ ಪೇಜ್ ನ ಕೆಳಗೆ “ತಪ್ಪು ಖಾತೆಗೆ ಹಣವನ್ನು ಕಳುಹಿಸಲಾಗಿದೆ” ಎನ್ನುವ ಆಯ್ಕೆಯ ಬಟನ್ ಮೇಲೆ ಕ್ಲಿಕ್ ಮಾಡಿ.

phone pe app

ಇದನ್ನೂ ಓದಿ: Dairy farm subsidy-ಹೈನುಗಾರಿಕೆಗೆ 40 ಸಾವಿರ ಸಹಾಯಧನ! ಇಲ್ಲಿದೆ ಯೋಜನೆಯ ಸಂಪೂರ್ಣ ಮಾಹಿತಿ!

ಆಗ ಫೋನ್ ಪೇ ಸಪೋರ್ಟ್ ನಿಂದ ನೀವು ಸಂದಾಯ ಮಾಡಿರುವ ಹಣ ವಹಿವಾಟಿನ UTR ಸಂಖ್ಯೆಗೆ messege ಬರತ್ತೆ. ಇದರ ಜೊತೆಗೆ ” ಹತ್ತಿರದ ಬ್ಯಾಂಕ್ ಶಾಖೆಗೆ ಬೇಟಿ ನೀಡಿ ಈ UTR ಸಂಖ್ಯೆ 52838925278 ಜೊತೆ ತಪ್ಪಾದ credit charge back ಗೆ ದೂರು ಸಲ್ಲಿಸಿ ನಿಮ್ಮ ಬ್ಯಾಂಕ್ ಇದಕ್ಕೆ ಸಹಾಯ ಮಾಡಲು ಸಾಧ್ಯವಾಗುತ್ತದೆ” ಈ ರೀತಿ ಸಂದೇಶವು ಸಹ ಬರುತ್ತದೆ. ಈ UTR ಸಂಖ್ಯೆಯನ್ನು ಒಂದು ಕಡೆ ನಮೂದಿಸಿಕೊಂಡು ನೀವು ಫೋನ್ ಪೇಗೆ ಲಿಂಕ್ ಮಾಡಿರುವ Bank account ನ ಶಾಖೆಯನ್ನು ಭೇಟಿ ನೀಡಿ ತಪ್ಪಾಗಿ ಬೇರೆ ವ್ಯಕ್ತಿಗೆ ಹಣ ಸಂದಾಯವಾಗಿದ್ದು ಮರಳಿ ನನ್ನ ಖಾತೆಗೆ ಹಣ ಸಂದಾಯ ಮಾಡಲು ದೂರು ಅರ್ಜಿ ಸಲ್ಲಿಸಿ.

ಗಮನಿಸಿ: ತಪ್ಪಾದ ವ್ಯಕ್ತಿಗೆ ಹಣ ಸಂದಾಯ ಮಾಡುವುದರ ಕುರಿತು ದೂರು ಸಲ್ಲಿಸಲು ಹಣ ವಹಿವಾಟು ಆದ ದಿನದಿಂದ 60 ದಿನದವರೆಗೆ ಅವಕಾಶವಿರುತ್ತದೆ.

Most Popular

Latest Articles

Related Articles