- Advertisment -
HomeNewsState Government Total Vacancy- ರಾಜ್ಯ ಸರಕಾರದಲ್ಲಿ ಇಲಾಖಾವಾರು ಖಾಲಿಯಿರುವ ಹುದ್ದೆಗಳ ವಿವರ ಬಿಡುಗಡೆ! ಬರೋಬ್ಬರಿ...

State Government Total Vacancy- ರಾಜ್ಯ ಸರಕಾರದಲ್ಲಿ ಇಲಾಖಾವಾರು ಖಾಲಿಯಿರುವ ಹುದ್ದೆಗಳ ವಿವರ ಬಿಡುಗಡೆ! ಬರೋಬ್ಬರಿ 2.76 ಲಕ್ಷ ಹುದ್ದೆಗಳು ಖಾಲಿ!

ರಾಜ್ಯ ಸರಕಾರದಡಿಯಲ್ಲಿ ಬರುವ 43 ಇಲಾಖೆಯಲ್ಲಿ ಬರೋಬರಿ 2.76 ಲಕ್ಷ ಹುದ್ದೆಗಳು ಖಾಲಿಯಿದ್ದು(State Government Total Vacancy) ಈ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರದ ಕ್ರಮವೇನು? ಯಾವ ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಕರ್ನಾಟಕ ವಿಧಾನಸಭೆಯ ಕಲಾಪದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಸಮಯದಲ್ಲಿ ಹಿರೇಕೆರೂರು ಶಾಸಕರಾದ ಯು ಬಿ ಬಣಕಾರ್ ಅವರು ಮಾನ್ಯ ಮುಖ್ಯಮಂತ್ರಿಯವರಿಗೆ ಕೇಳಿದ ಪ್ರಶ್ನೆಗೆ ಸರಕಾರದಿಂದ ಲಿಖಿನವಾಗಿ ನೀಡಿದ ಅಧಿಕೃತ ಉತ್ತರದ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದ್ದು ರಾಜ್ಯ ಸರಕಾರದಡಿ ಬರುವ ಎಲ್ಲಾ ಇಲಾಖೆಗಳಲ್ಲಿ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ ಎನ್ನುವ ಮಾಹಿತಿ ಸೇರಿದಂತೆ ಪ್ರಮುಖ ವಿವರವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Sainika School Admission-ಸೈನಿಕ ಶಾಲೆಯಲ್ಲಿ ಓದುವ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಸುವರ್ಣ ಅವಕಾಶ!

ರಾಜ್ಯ ಸರಕಾರದ ಇಲಾಖೆಗಳಲ್ಲಿ ಬರೋಬ್ಬರಿ 2.76 ಲಕ್ಷ ಹುದ್ದೆಗಳು ಖಾಲಿ:

ಶಿಕ್ಷಣ ಇಲಾಖೆ ಸೇರಿದಂತೆ ರಾಜ್ಯದ 43 ಇಲಾಖೆಗಳಲ್ಲಿ ಒಟ್ಟಾರೆ 2.76 ಲಕ್ಷ (2,76,386) ಹುದ್ದೆಗಳು ಖಾಲಿ ಇದ್ದು ರಾಜ್ಯ ಸರಕಾರದ ಅಧಿಕೃತ ಲಿಖಿತ ಉತ್ತರದಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ.

ಎ ದರ್ಜೆಯ 16,017 ಹುದ್ದೆಗಳು, ಬಿ ದರ್ಜೆಯ 16,734 ಹುದ್ದೆಗಳು, ಸಿ ದರ್ಜೆಯ 1,66,021 ಹುದ್ದೆಗಳು, ಡಿ ದರ್ಜೆಯ 77,614 ಹುದ್ದೆಗಳು ಖಾಲಿ ಉಳಿದಿವೆ ಎಂದು ಉತ್ತರಿಸಲಾಗಿದೆ. ಶಿಕ್ಷಣ ಇಲಾಖೆಯಲ್ಲಿ 70727 ಹುದ್ದೆಗಳು ಖಾಲಿ ಇವೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 37,069 ಹುದ್ದೆಗಳು ಖಾಲಿ ಇದ್ದು, ಒಳಾಡಳಿತ ಇಲಾಖೆಯಲ್ಲಿ 26,168, ಕಂದಾಯ ಇಲಾಖೆಯಲ್ಲಿ 11,145, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 10,898 ಹುದ್ದೆಗಳು ಖಾಲಿ ಇರುತ್ತವೆ.

ಗ್ರೂಪ್-ಸಿ ವೃಂದದ 96,844 ಹುದ್ದೆಗಳನ್ನು (ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಗ್ರೂಪ್-ಡಿ ಸಮನಾಂತರ) ಮತ್ತು ತಾಂತ್ರಿಕ ಹುದ್ದೆಗಳನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ನಿರ್ಧರಿಸಲಾಗಿದೆ ಎಂದು ಉತ್ತರಿಸಿದ್ದು. ರಾಜ್ಯದಲ್ಲಿ ವಿವಿಧ ಇಲಾಖೆಗಳ ವಿವಿಧ ವೃಂದಗಳ ಒಟ್ಟಾರೆ 4673 ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಪ್ರಸ್ತಾವ ಸಲ್ಲಿಸಿಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: Matru Vandana Yojana- ಮಾತೃವಂದನಾ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ ₹11,000!

ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು? ಇಲಾಖಾವಾರು, ವರ್ಗವಾರು ವಿವರ ಹೀಗಿದೆ:

ಕೃಷಿ- 6,773
ಪಶುಸಂಗೋಪನೆ- 10,755
ಹಿಂದುಳಿದ ವರ್ಗಗಳ ಕಲ್ಯಾಣ-8,334
ಸಹಕಾರ- 4,855
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ- 6,191
ಪರಿಸರ ಮತ್ತು ಜೀವಿಶಾಸ್ತ್ರ- 6
ಇ-ಆಡಳಿತ- 71
ಇಂದನ- 247
ಅರ್ಥಿಕ- 9,536
ಮೀನುಗಾರಿಕೆ- 859
ಆಹಾರ ಮತ್ತು ನಾಗರೀಕ ಸರಬರಾಜು- 1,395
ಅರಣ್ಯ- 6,337
ಕೈಮಗ್ಗ ಮತ್ತು ಜವಳಿ- 50
ಉನ್ನತ ಶಿಕ್ಷಣ- 13,227
ಒಳಾಡಳಿತ- 26,168

ಇದನ್ನೂ ಓದಿ: Bond Paper-ಇನ್ನು ಮುಂದೆ ಬಾಂಡ್ ಪೇಪರ್ ಪಡೆಯುವುದು ಬಾರೀ ಸುಲಭ! ಇಲ್ಲಿದೆ ಸಂಪೂರ್ಣ ವಿವರ!

ವಾರ್ತೆ- 328
ಮಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ- 61
ಕನ್ನಡ ಮತ್ತು ಸಂಸ್ಕೃತಿ- 432
ಕಾರ್ಮಿಕ- 2,613
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ- 7,853
ಭಾರಿ ಮತ್ತು ಮಧ್ಯಮ ಕೈಗಾರಿಕೆ- 379
ಭಾರಿ ನೀರಾವರಿ- 601
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ- 37,069
ಗಣಿ-653
ಸಣ್ಣ ನೀರಾವರಿ- 1,237
ಅಲ್ಪ ಸಂಖ್ಯಾತರ ಕಲ್ಯಾಣ- 4,159
ಸಂಸದೀಯ ವ್ಯವಹಾರಗಳು- 508
ಯೋಜನೆ ಸಾಂಖ್ಯಿಕ ವಿಜ್ಞಾನ ಮತ್ತು ತಂತ್ರಜ್ಞಾನ- 918
ಲೋಕೋಪಯೋಗಿ-1,401

ಇದನ್ನೂ ಓದಿ: E-Khata Application: ಆಸ್ತಿ ನೋಂದಣಿ ಸಂಬಂಧಿಸಿದಂತೆ ಇ-ಖಾತಾದಲ್ಲಿ ಮಹತ್ವದ ಬದಲಾವಣೆ!


ಕಂದಾಯ-11,145
ಗ್ರಾಮೀಣ ಅಭಿವೃದ್ದು ಮತ್ತು ಪಂಚಾಯತ್ ರಾಜ್- 10,808
ಪರಿಶಿಷ್ಠ ಜಾತಿಗಳ ಕಲ್ಯಾಣ- 9,980
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ- 70,727
ರೇಷ್ಮೆ- 3,222
ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ- 3,923

ಸಣ್ಣ ಕೈಗಾರಿಕೆ- 365
ಪರಿಶಿಷ್ಠ ಪಂಗಡಗಳ ಕಲ್ಯಾಣ- 2,429
ಪ್ರವಾಸೋದ್ಯಮ- 430
ಸಾರಿಗೆ- 1,641
ನಗರಾಭಿವೃದ್ದಿ- 885
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ- 4,544
ಯುವಜನ ಸೇವೆಗಳು- 212

state government total vacancy
state government total vacancy details

ಇದನ್ನೂ ಓದಿ: Drip Irrigation-ರಾಜ್ಯ ಸರಕಾರದಿಂದ ಹನಿ ಮತ್ತು ತುಂತುರು ನೀರಾವರಿ ಘಟಕಕ್ಕೆ ₹255 ಕೋಟಿ ಅನುದಾನ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

ಖಾಲಿಯಿರುವ ಹುದ್ದೆಗಳನ್ನು ತುಂಬಲು ಸರ್ಕಾರ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ?

ಆರ್ಥಿಕ ಮಿತವ್ಯಯ ಜಾರಿಯಲ್ಲಿದ್ದರೂ ಸಹ ಖಾಲಿ ಹುದ್ದೆಗಳ ಭರ್ತಿಗೆ ಇಲಾಖೆಗಳಿಂದ ಆರ್ಥಿಕ ಇಲಾಖೆಗೆ ಸಲ್ಲಿಕೆಯಾಗುವ ಪ್ರಸ್ತಾವನೆಗಳನ್ನು ಪ್ರಕರಣವಾರು ಪರಿಶೀಲಿಸಿ, ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ, ಅಗತ್ಯತೆಗೆ ಅನುಗುಣವಾಗಿ ಹುದ್ದೆಗಳ ಭರ್ತಿಗೆ ಸಹಮತಿ ನೀಡಲಾಗುತ್ತಿದೆ. ಮಂಜೂರಾಗಿ ಖಾಲಿಯಿರುವ ಹುದ್ದೆಗಳಿಗೆದುರಾಗಿ, ಸಿಬ್ಬಂದಿ ಅಧಿಕಾರಿಗಳನ್ನು ಹೆಚ್ಚುವರಿ ಪ್ರಭಾರದಲ್ಲಿರಿಸಿ ಪ್ರಭಾರ ಭತೆಗಳನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದ್ದು

ಗ್ರೂಪ್ -ಸಿ ವೃಂದದ ಕೆಲವು ಹುದ್ದೆ ಅಂದರೆ ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಗ್ರೂಪ್-ಡಿ ವೃಂದಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ತಿಳಿಸಲಾಗಿದೆ. ಅದರಂತೆ, ಮಂಜೂರಾಗಿ ಖಾಲಿ ಇರುವ ಹುದ್ದೆಗಳ ಎದುರಾಗಿ, ಅಂದಾಜು 96,844 ಹುದ್ದೆಗಳನ್ನು ಶೀಘ್ರಲಿಪಿಗಾರರು, ಬೆರಳಚ್ಚುಗಾರರು ವಾಹನ ಚಾಲಕರು ಮತ್ತು ಗ್ರೂಪ್-ಡಿ ಸಮಾನಾಂತರ) ಮತ್ತು ತಾಂತ್ರಿಕ ಹುದ್ದೆಗಳನ್ನು ಗುತ್ತಿಗೆ / ಹೊರಗುತ್ತಿಗೆ ಅಧಾರದ ಮೇಲೆ ಸಿಬ್ಬಂದಿಗಳನ್ನು ಪಡೆದು ವೆಚ್ಚ ಭರಿಸಲಾಗುತ್ತಿದೆ ಎಂದು ಸದನಕ್ಕೆ ತಿಳಿಸಲಾಗಿದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -