HomeGovt SchemesKuri sakanike yojane- ಕುರಿ ಸಾಕಾಣಿಕೆ ಮಾಡಲು 1.75 ಲಕ್ಷ ನೆರವು! ಇಲ್ಲಿದೆ ಅರ್ಜಿ ಸಲ್ಲಿಸಲು...

Kuri sakanike yojane- ಕುರಿ ಸಾಕಾಣಿಕೆ ಮಾಡಲು 1.75 ಲಕ್ಷ ನೆರವು! ಇಲ್ಲಿದೆ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ!

ಕುರಿ ಸಾಕಾಣಿಕೆ ಮಾಡಲು ಯಾವೆಲ್ಲ ಯೋಜನೆಯದಿ ಸಹಾಯಧನ(Kuri sakanike yojane) ಪಡೆಯಬಹುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಹಸು ಸಾಕಾಣಿಕೆಯ ರೀತಿಯಲ್ಲಿ ಕುರಿ ಸಾಕಾಣಿಕೆಯು ಸಹ ಪ್ರಚಲಿತಕ್ಕೆ ಬರುತ್ತಿದ್ದು ಯುವ ಜನರು ಈ ಕಸುಬನ್ನು ಮಾಡಲು ಒಲವು ತೋರುತ್ತಿದ್ದಾರೆ.

ಇದನ್ನೂ ಓದಿ: Today Gold rate- ಇಳಿಕೆಯತ್ತ ಚಿನ್ನದ ದರ! ಇಲ್ಲಿದೆ ದೇಶದ ಪ್ರಮುಖ ನಗರಗಳ ಚಿನ್ನದ ದರ!

ಕುರಿ ಸಾಕಾಣಿಕೆಯನ್ನು(sheep farming) ಮಾಡಲು ಪ್ರಾರಂಭಿಕ ಹಂತದಲ್ಲಿ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಕುರಿ ಸಾಕಾಣಿಕೆಯಲ್ಲಿನ ಸವಾಲುಗಳೇನು? ಯಾವೆಲ್ಲ ಯೋಜನೆಯಡಿ ಕುರಿ ಸಾಕಾಣಿಕೆಯನ್ನು ಮಾಡಲು ಫಲಾನುಭವಿಗಳು ಅರ್ಥಿಕ ನೆರವನ್ನು ಪಡೆಯಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

Kuri sakanike subsidy yojanegalu- ಯಾವೆಲ್ಲ ಯೋಜನೆಯಡಿ ಕುರಿ ಸಾಕಾಣಿಕೆಗೆ ಸಹಾಯಧನ ಪಡೆಯಬಹುದು?

1) NLM Scheme- ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ.

2) ಅಮೃತ ಕುರಿ ಸ್ವಾಭಿಮಾನಿ ಕುರಿಗಾಹಿ ಯೋಜನೆ(sheep farming scheme).

3) ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಸಹಾಯಧನ.

ಇದನ್ನೂ ಓದಿ: Gruhalakshmi DBT amount-ಬಿಪಿಎಲ್ ಕಾರ್ಡ ರದ್ದಾದ್ರೆ ಗೃಹಲಕ್ಷ್ಮಿ ಹಣ ಜಮಾ ಆಗಲ್ಲವಾ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ!

ಕುರಿ ಸಾಕಾಣಿಕೆಯನ್ನು ಮಾಡಲು ಪ್ರಾರಂಭಿಕ ಹಂತದಲ್ಲಿ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು?

ಕುರಿ ಸಾಕಾಣಿಕೆಯನ್ನು ಆರಂಭಿಸಲು ಯೋಜನೆಯನ್ನು ಹಾಕಿಕೊಂಡ ಬಳಿಕ ಉತ್ತಮ ತಳಿಯ ಕುರಿ ಮರಿಗಳು ಎಲ್ಲಿ ಸಿಗುತ್ತವೆ ಹಾಗೆಯೇ ನಿಮ್ಮ ಪ್ರದೇಶಕ್ಕೆ ಹೊಂದಿಕೊಳ್ಳುವ ತಳಿಗಳನ್ನು ಗುರುತಿಸುವುದು.

ಕುರಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಅಗತ್ಯ ವಸ್ತುಗಳು ಕಡಿಮೆ ದರದಲ್ಲಿ ಗುಣಮಟ್ಟದ ಸಾಮಾಗ್ರಿಗಳನ್ನು ಖರೀದಿಸಲು ಯೋಜನೆ ರೂಪಿಸುವುದು ಇದಲ್ಲದೇ ಕುರಿ ಸಾಕಾಣಿಕೆ ಮಾಡಲು ಯಾವೆಲ್ಲ ಯೋಜನೆಯಡಿ ಸಹಾಯಧನ ಪಡೆಯಬಹುದು ಎಂದು ತಿಳಿದುಕೊಂಡು ಮುಂಚಿತವಾಗಿ ಅರ್ಜಿ ಸಲ್ಲಿಸಿರಬೇಕು.

ಕುರಿ ಸಾಕಾಣಿಕೆಯಲ್ಲಿ ನೈಪುಣ್ಯತೆಯನ್ನು ಪಡೆಯಲು ಈಗಾಗಲೇ ಕುರಿ ಸಾಕಾಣಿಕೆ ಮಾಡಿರುವ ಪ್ರಗತಿ ಪರ ರೈತರ ಬಳಿ ನೇರವಾಗಿ ಭೇಟಿ ಮಾಡಿ ಅಗತ್ಯ ತರಬೇತಿಯನ್ನು ಹಾಗೂ ಈ ಕಸುಬಿನಲ್ಲಿರುವ ಪ್ರಾಯೋಗಿನ ಸವಾಲುಗಳ ಮಾಹಿತಿಯನ್ನು ಪಡೆಯುವುದು.

ಕುರಿ ಮಾರುಕಟ್ಟೆಯ ಕುರಿತು ಸಹ ಮುಂಚಿತವಾಗಿ ಅನ್ವೇಶಣೆ ಮಾಡಿಟ್ಟುಕೊಳ್ಳುವುದು ಸಹ ಅಷ್ಟೇ ಮುಖ್ಯವಾಗಿದೆ.

ಇದನ್ನೂ ಓದಿ: Aadhaar Card- ಆಧಾರ್ ಕಾರ್ಡ ಹೊಂದಿರುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!

Kuri sakanike

ಕುರಿ ಸಾಕಾಣಿಕೆಯಲ್ಲಿನ ಸವಾಲುಗಳೇನು?

ಅನೇಕ ಜನರು ಉತ್ತಮ ಕುರಿ ತಳಿ ಹಾಗೂ ತಮ್ಮ ಪ್ರದೇಶಕ್ಕೆ ಹೊಂದಿಕೊಳ್ಳುವ ಕುರಿ ತಳಿ ಆಯ್ಕೆ ಮಾಡಿಕೊಳ್ಳುವುದರಲ್ಲಿ ವಿಪಲವಾಗುತ್ತಾರೆ.

ಕುರಿಗಳನ್ನು ಶೆಡ್ ನಲ್ಲೇ ಸಾಕಾಣಿಕೆ ಮಾಡುವುದರಿಂದ ಒಂದು ಕುರಿಗೆ ಬಂದಿರುವ ಕಾಯಿಲೆ ಬಹು ಬೇಗನೆ ಇನ್ನೊಂದು ಕುರಿಗೆ ಪಸರಿಸುತ್ತದೆ.

ಕುರಿಗಳನ್ನು ಶೆಡ್ ನಲ್ಲೇ ಸಾಕಾಣಿಕೆ ಮಾಡುವುದರಿಂದ ದೊಡ್ಡ ಮಟ್ಟದಲ್ಲಿ ಕುರಿಗಳಿಗೆ ಹಾಕಲು ಮೇವು ಬೇಕಾಗುತ್ತದೆ.

ಇದನ್ನೂ ಓದಿ: DBT Status- ಎಲ್ಲಾ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

Sheep farming subsidy-ಯೋಜನೆವಾರು ಸಹಾಯಧನ ಮಾಹಿತಿ:

1) NLM Scheme- ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ.

ಕುರಿ ತಳಿ ಅಭಿವೃದಿಗಾಗಿ ಈ ಯೋಜನೆಯಡಿ ನೀವು ಎಷ್ಟು ಪ್ರಮಾಣದ ಕುರಿಯನ್ನು ಸಾಕಾಣಿಕೆ ಮಾಡಿ ಮಾಡಲು ಇಚ್ಚೆ ಹೊಂದಿರಿತ್ತಿರೋ ಅದರ ಆಧಾರದ ಮೇಲೆ 50 ಲಕ್ಷದ ವರೆಗೆ ಸಬ್ಸಿಡಿಯನ್ನು ಪಡೆಯಬಹುದು.

ಅರ್ಜಿ ಸಲ್ಲಿಸಲು ಲಿಂಕ್: Apply Now

ಇದನ್ನೂ ಓದಿ: BPL card cancellation order- ಬಿಪಿಎಲ್ ಕಾರ್ಡ ರದ್ದು ಆಹಾರ ಇಲಾಖೆಯಿಂದ ಅಧಿಕೃತ ಆದೇಶ! ಇಲ್ಲಿದೆ ಅದೇಶದ ಪ್ರತಿ!

2) ಅಮೃತ ಕುರಿ ಸ್ವಾಭಿಮಾನಿ ಕುರಿಗಾಹಿ ಯೋಜನೆ.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಅಮೃತ ಕುರಿ ಸ್ವಾಭಿಮಾನಿ ಕುರಿಗಾಹಿ ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತದೆ. ಈ ಯೋಜನೆಯಡಿ ಕುರಿ ಸಾಕಾಣಿಕೆ ಮಾಡಲು ರೂ 1.75 ಲಕ್ಷದವರೆಗೆ ಅರ್ಥಿಕ ನೆರವನ್ನು ಪಡೆಯಬಹುದು.

ಅರ್ಜಿಯನ್ನು ಸಲ್ಲಿಸಲು ಆಸಕ್ತರು ನಿಮ್ಮ ಹತ್ತಿರದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕಚೇರಿಯನ್ನು ಅಥವಾ ಕುರಿ ಸಾಕಾಣಿಕೆ ಸಂಘ ಕಚೇರಿಯನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್: Click here

3) ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಸಹಾಯಧನ.

ಉದ್ಯೋಗ ಖಾತ್ರಿ ಯೋಜನೆಯಡಿ ಕುರಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ರೂ 70,000 ದ ವರೆಗೆ ಅರ್ಥಿಕ ನೆರವನ್ನು ಪಡೆಯಲು ಅವಕಾಶವಿದ್ದು ಆಸಕ್ತ ಫಲಾನುಭವಿಗಳು ನಿಮ್ಮ ಹಳ್ಳಿಯ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್: Click here

Most Popular

Latest Articles

Related Articles