Labour Pension Scheme-ಲೇಬರ್ ಕಾರ್ಡದಾರರಿಗೆ ತಿಂಗಳಿಗೆ ₹3,000 ಪಿಂಚಣಿ ಹಣ! ಪಡೆಯುವುದು ಹೇಗೆ!

February 3, 2026 | Siddesh
Labour Pension Scheme-ಲೇಬರ್ ಕಾರ್ಡದಾರರಿಗೆ ತಿಂಗಳಿಗೆ ₹3,000 ಪಿಂಚಣಿ ಹಣ! ಪಡೆಯುವುದು ಹೇಗೆ!
Share Now:

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM) ಯೋಜನೆಯ ಅಡಿಯಲ್ಲಿ ಕಾರ್ಮಿಕ ಕಾರ್ಡ್ ಹೊಂದಿದ ಕಾರ್ಮಿಕ ವೃದ್ಧಾಪ್ಯದಲ್ಲಿರುವವರಿಗೆ(Pradhan Mantri Shram Yogi Maan-dhan) 60 ವರ್ಷಗಳ ನಂತರ ಮಾಸಿಕವಾಗಿ ₹3,000 ಖಚಿತ ಪಿಂಚಣಿ ಹಣವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಿದೆ.

ಕೆಲಸವೇ ನಮ್ಮ ಜೀವನ, ಕಾಯಕವೇ ಕೈಲಾಸ(Labour Pension Scheme) ಎಂದು ನಂಬಿ ದಿನವಿಡೀ ಕೆಲಸ ಮಾಡುವ ನಮ್ಮ ಎಲ್ಲಾ ಕಾರ್ಮಿಕ ವರ್ಗದವರಿಗೆ ಇದೊಂದು ಉತ್ತಮವಾದ ನಿರ್ಧಾರವಾಗಿದೆ ಎಂದರೆ ತಪ್ಪಾಗದು. ಪ್ರತಿಯೊಬ್ಬ ಮನುಷ್ಯನೂ ಶಕ್ತಿ ಇರುವವರೆಗೆ ಮಾತ್ರ ದುಡಿಯಲು ಸಾಧ್ಯ, ಆದರೆ ಅವರಿಗೆ ವಯಸ್ಸಾದ ಮೇಲೆ ಅವರ ಕ್ಷೇಮಕ್ಕೆ ನೆರವು ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Lakhpati Didi-ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗಿಫ್ಟ್! ಏನಿದು ಲಖ್ ಪತಿ ದೀದಿ ಮತ್ತು ಶಿ-ಮಾರ್ಟ್ ಯೋಜನೆ?

ಪ್ರಸ್ತುತ ಇಂದಿನ ಈ ಅಂಕಣದಲ್ಲಿ ಪಿಂಚಣಿ ಹಣವನ್ನು ಪಡೆದುಕೊಳ್ಳಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಹೇಗೆ ಅರ್ಜಿಯನ್ನು ಸಲ್ಲಿಸಬೇಕು? ಇನ್ನುಳಿದ ಎಲ್ಲಾ ಮಾಹಿತಿಯನ್ನು ಈ ಅಂಕಣದಲ್ಲಿ ವಿವರವಾಗಿ ತಿಳಿಸಲಾಗಿದೆ.

Who Can APply-ಯಾರು ಅರ್ಜಿ ಸಲ್ಲಿಸಬಹುದು?

ಪಿಂಚಣಿ ಹಣವನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು:

ಅರ್ಜಿದಾರರಿಗೆ ಕನಿಷ್ಟ 18 ರಿಂದ 40 ವಯಸ್ಸಾಗಿರಬೇಕು.

ಅರ್ಜಿದಾರರ ಮಾಸಿಕ ಆದಾಯದ ಮಿತಿಯು 15,000 ರೂ ಗಳನ್ನು ಮೀರಿರಬಾರದು.

ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸದವರು, ಚಾಲಕರು, ಕೃಷಿ ಕಾರ್ಮಿಕರು ಮುಂತಾದ ಅಸಂಘಟಿತ ವಲಯದವರು ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದರೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

EPFO, ESIC ಅಥವಾ NPS ಯೋಜನೆಯಲ್ಲಿ ಸದಸ್ಯತ್ವವನ್ನು ಹೊಂದಿರಬಾರದು.

ಇದನ್ನೂ ಓದಿ: PM Kisan Tractor Yojana-ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ 50% ಸಬ್ಸಿಡಿ! ಅರ್ಜಿ ಸಲ್ಲಿಸುವುದು ಹೇಗೆ?

Documents Required-ಅಗತ್ಯವಿರುವ ದಾಖಲೆಗಳು?

ಆಧಾರ್ ಕಾರ್ಡ/Aadhar Card
ಲೇಬರ್ ಕಾರ್ಡ/Labour Card
ಬ್ಯಾಂಕ ಪಾಸ್ ಪುಸ್ತಕ/Bank Passbook
ಮೊಬೈಲ್ ಸಂಖ್ಯೆ/Mobile NUmber

ಇದನ್ನೂ ಓದಿ: LIC Policy Status-ಮೊಬೈಲ್ ನಲ್ಲೇ ಎಲ್ಐಸಿ ಪಾಲಿಸಿ ಸ್ಟೇಟಸ್ ಚೆಕ್ ಮಾಡಲು ಲಿಂಕ್ ಬಿಡುಗಡೆ!

Where To APply-ಎಲ್ಲಿ ಅರ್ಜಿ ಸಲ್ಲಿಸಬೇಕು?

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM) ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಅರ್ಹರಿರುವ ಅಭ್ಯರ್ಥಿಗಳು ನಿಮ್ಮ ಹತ್ತಿರದ CSC ಕೇಂದ್ರ ಅಥವಾ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಹಾಗೆಯೇ ನಿಮ್ಮ ವಯಸ್ಸಿಗೆ ಅನುಗುಣವಾಗಿ ಪ್ರತಿ ತಿಂಗಳು ನೀವು ಪಾವತಿಸಬೇಕಾದ ಮೊತ್ತವನ್ನು ನಿಗದಿಪಡಿಸಲಾಗುತ್ತದೆ ಉದಾಹರಣೆ ₹55 ರಿಂದ ₹200 ವರೆಗೆ.

ಇದನ್ನೂ ಓದಿ: Fodder Seed Kit-ಕೃಷಿಕರಿಗೆ ಉಚಿತ ಮೇವಿನ ಬೀಜದ ಕಿಟ್ ವಿತರಣೆ! ಅರ್ಜಿ ಸಲ್ಲಿಸುವುದು ಹೇಗೆ?

labour pension

ಇದನ್ನೂ ಓದಿ: Fellowship Application-ಸಿಇಟಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕೆ ಅರ್ಜಿ!

Other Scheme list-ಲೇಬರ್ ಕಾರ್ಡ ಹೊಂದಿದ ಫಲಾನುಭವಿಗಳ ಇತರ ಪ್ರಮುಖ ಸೌಲಭ್ಯಗಳು:

ಸೌಲಭ್ಯದ ಹೆಸರು ವಿವರ
ಶೈಕ್ಷಣಿಕ ಸಹಾಯಧನಕಾರ್ಮಿಕರ ಮಕ್ಕಳಿಗೆ ₹5,000 ದಿಂದ ₹50,000 ವರೆಗೆ ವಿದ್ಯಾರ್ಥಿವೇತನ
ವೈದ್ಯಕೀಯ ಸಹಾಯಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಧನಸಹಾಯ.
ವಿವಾಹ ಸಹಾಯಧನಕಾರ್ಮಿಕರ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ₹50,000 ಸಹಾಯಧನ.
ಹೆರಿಗೆ ಸೌಲಭ್ಯಮಹಿಳಾ ಕಾರ್ಮಿಕರಿಗೆ ಹೆರಿಗೆ ಸಮಯದಲ್ಲಿ ಆರ್ಥಿಕ ನೆರವು.
ಅಂತ್ಯಕ್ರಿಯೆ ವೆಚ್ಚಕಾರ್ಮಿಕರ ಮರಣದ ನಂತರ ವಾರಸುದಾರರಿಗೆ ಅಂತ್ಯಕ್ರಿಯೆಗಾಗಿ ₹5,000 ಮತ್ತು ಪರಿಹಾರ ಧನ.
ಉಪಕರಣ ಸಹಾಯಧನಕೆಲಸಕ್ಕೆ ಬೇಕಾದ ಕಿಟ್ ಅಥವಾ ಉಪಕರಣಗಳನ್ನು ಖರೀದಿಸಲು ಸಹಾಯಧನ.

ಇದನ್ನೂ ಓದಿ: Caste And Income Certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ!

More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ: Read More

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: