- Advertisment -
HomeNew postsLPG subsidy amount: ಕೇಂದ್ರ ಸರಕಾರದಿಂದ ಗ್ಯಾಸ್ ಸಬ್ಸಿಡಿ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

LPG subsidy amount: ಕೇಂದ್ರ ಸರಕಾರದಿಂದ ಗ್ಯಾಸ್ ಸಬ್ಸಿಡಿ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

Last updated on September 30th, 2024 at 03:39 pm

ಆತ್ಮೀಯ ಓದುಗ ಮಿತ್ರರೇ ಇಂದು ಈ ಅಂಕಣದಲ್ಲಿ ಸಿಲಿಂಡರ್ ಸಬ್ಸಿಡಿ ಜಮಾ ಅಗಿರುವುದನ್ನು ಹೇಗೆ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಬವುದು ಎಂದು ಮತ್ತು ಕೇಂದ್ರ ಸರಕಾರದ ಇತ್ತೀಚಿನ ಗ್ಯಾಸ್ ಸಿಲಿಂಡರ್ ದರದ(Cylinder price) ನಿರ್ಣಯದ ವಿವರವನ್ನು ತಿಳಿಸಲಾಗಿದ್ದು, ಈ ಮಾಹಿತಿ ನಿಮಗೆ ಉಪಯುಕ್ತ ಎಂದು ಅನಿಸಿದಲ್ಲಿ ತಪ್ಪದೇ ನಿಮ್ಮ ಅಪ್ತರಿಗೂ ಶೇರ್ ಮಾಡಿ.

ದುಬಾರಿ ದುನಿಯಾ ದೈನಂದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ  ಕಂಗೆಟ್ಟಿರುವ ಕೆಳ ವರ್ಗ ಮತ್ತು ಮಧ್ಯಮ ವರ್ಗದ ಜನರಿಗೆ ಸಹಾಯ ಹಸ್ತ ನೀಡಲು ದೆಸೆಯಲ್ಲಿ ಕೇಂದ್ರ ಸರಕಾರದಿಂದ ಮನೆ ಬಳಕೆ ಸಿಲಿಂಡರ್ ಗೆ 200 ರೂ ದರ ಕಡಿತ ಮಾಡಲಾಗಿದೆ.

ಇದರ ಜೊತೆಗೆ ಉಜ್ವಲ ಯೋಜನೆಯಡಿ ಬರುವ ಫಲಾನುಭವಿಗಳಿಗೆ  ಗೃಹಬಳಕೆಯ ಅಡುಗೆ ಅನಿಲ(LPG gas subsidy) ಸಿಲಿಂಡರ್ ಗೆ 200 ರೂ.  ಸಹಾಯಧನವನ್ನು ಸಹ ಕೇಂದ್ರ ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದೆ.

ಈ ಕುರಿತು ಕೇಂದ್ರದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು ಇದರನ್ವಯ ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್ ಬೆಲೆ 200 ರೂಪಾಯಿಗಳಷ್ಟು ಕಡಿಮೆಯಾಗಿದೆ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ.  ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲದ ಸಬ್ಸಿಡಿಯು ದೊರೆಯಲಿದ್ದು ಉಜ್ವಲ ಯೋಜನೆಯಡಿ ಸರ್ಕಾರ ಈಗಾಗಲೇ 200 ರೂಪಾಯಿ ಸಬ್ಸಿಡಿ ನೀಡುತ್ತಿದ್ದು, ಈಗ ಹೆಚ್ಚುವರಿಯಾಗಿ 200 ರೂಪಾಯಿ ನೀಡಿದಂತಾಗುತ್ತದೆ.

ಈ ಯೋಜನೆಯಡಿ ಫಲಾನುಭವಿಗಳು ಒಂದು ವರ್ಷದಲ್ಲಿ ಒಟ್ಟು 12 ಅಡುಗೆ ಅನಿಲ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಪಡೆಯಲು ಅರ್ಹರಾಗಿದ್ದು. ಪ್ರಧಾನ ಮಂತ್ರಿ ಉಜ್ವಲ ಯೋಜನೆ 2016 ರಿಂದ ಆರಂಭಿಸಲಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (BPL card) ಸರ್ಕಾರವು ಉಚಿತ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲಾಗಿತ್ತು.

ಇದನ್ನೂ ಓದಿ: Gruhalakshmi guidelines: ಗೃಹಲಕ್ಷ್ಮಿ ಯೋಜನೆ ಮಾರ್ಗಸೂಚಿ ಸಡಿಲಿಕೆ!

Cylinder subsidy- ಸಿಲಿಂಡರ್ ಸಬ್ಸಿಡಿ ಪಡೆಯುವುದು ಹೇಗೆ?

ಅರ್ಹ ಫಲಾನುಭವಿಗಳು ಗ್ಯಾಸ್ ಸಬ್ಸಿಡಿ ಪಡೆಯಲು ತಮ್ಮ ಆಧಾರ್ ಸಂಖ್ಯೆಯನ್ನು LPG ಸಂಪರ್ಕದೊಂದಿಗೆ ಲಿಂಕ್ ಮಾಡಬೇಕು. ಮತ್ತು ನೀವು ಪ್ರತಿ ತಿಂಗಳು ಸಿಲಿಂಡರ್ ಖರೀದಿ ಮಾಡುವ ಎಜೆನ್ಸಿಯಲ್ಲಿ ಕಚೇರಿಯಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರವನ್ನು ಅಪ್ಡೇಟ್ ಮಾಡಿಕೊಂಡಿರಬೇಕಾಗುತ್ತದೆ. ಈಗಾಗಲೇ ಈ ಕೆಲಸ ಮಾಡಿಕೊಂಡಿರುವವರು ಪುನಃ ಲಿಂಕ್ ಮಾಡುವ ಅವಶ್ಯಕತೆ ಇರುವುದಿಲ್ಲ.

how to check LPG subsidy amount – ಗ್ಯಾಸ್ ಸಬ್ಸಿಡಿ ನಿಮಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

ಫಲಾನುಭವಿಗಳು ಈ ಕೆಳಗೆ ನಮೂದಿಸಿರುವ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನಿಮಗೆ ಇಲ್ಲಿಯವರೆಗೆ ಎಷ್ಟು ಭಾರಿ ಸಿಲಿಂಡರ್ ಸಬ್ಸಿಡಿ ಬಂದಿದೆ ಎಂದು ಸಂಪೂರ್ಣ ವಿವರವನ್ನು ತಿಳಿದುಕೊಳ್ಳಬವುದಾಗಿದೆ.

Step-1: ಮೊದಲಿಗೆ ಈ ಲಿಂಕ್ https://www.mylpg.in ಮೇಲೆ ಕ್ಲಿಕ್ ಮಾಡಿ ಮೈ ಎಲ್.ಪಿ.ಜಿ ವೆಬ್ಸೈಟ್ ಭೇಟಿ ಮಾಡಬೇಕು ನಂತರ ನಿಮ್ಮ ಮನೆಯಲ್ಲಿ ಬಳಕೆ ಮಾಡುವ ಸಿಲಿಂಡರ್ ಕಂಪನಿಯ ಸಿಲಿಂಡರ್(Bharat gas/ HP Gas/ Indane ಚಿತ್ರದ ಮೇಲೆ ಕ್ಲಿಕ್ ಮಾಡಬೇಕು.

Step-2: ನಂತರ ಇಲ್ಲಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಂಡು “ಹೊಸ ಬಳಕೆದಾರ” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಸಿಲಿಂಡರ್ ನ ಗ್ರಾಹಕರ ಸಂಕ್ಯೆಯನ್ನು ಮತ್ತು ನೊಂದಾಯಿತ ಮೊಬೈಲ್ ಸಂಕ್ಯೆಯನ್ನು ನಮೂದಿಸಿ “ಮುಂದುವರೆಯಿರಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಈ ಮೇಲಿನ ಪ್ರಕ್ರಿಯೆ ಮುಗಿಸಿದ ನಂತರ ನಿಮ್ಮ ಮೊಬೈಲ್ ಗೆ “ಒಟಿಪಿ” ಬರುತ್ತದೆ ಅದನ್ನು ಇಲ್ಲಿ ನಮೂದಿಸಿ ಮತ್ತೆ “ಮುಂದುವರೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಒಂದೊಮ್ಮೆ OTP ಬರದೆ ಇದ್ದಲ್ಲಿ “click here to generate OTP” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಮತ್ತೊಮೆ ಒಟಿಪಿ ಬರುತ್ತದೆ.

Step-4: ಇದಾದ ಬಳಿಕೆ ನಿಮ್ಮ ಬಳಕೆ ದಾರರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡು “ಮುಂದುವರೆಯಿರಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬಳಕೆದಾರರ ಐಡಿ ಸಕ್ರಿಯಕೊಳ್ಳುತ್ತದೆ. ಉದಾಹರಣೆಗೆ ಈ ರೀತಿ Login Id: Siddesh123  Password: Manjunath&1747  ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ರಚನೆ ಮಾಡಿಕೊಳ್ಳಬೇಕು. 

Step-5: ತದನಂತರ “ಸೈನ್ ಇನ್” ಅಥವಾ “ಇಲ್ಲಿ ಕ್ಲಿಕ್ ಮಾಡಿ” ಬಟನ್ ಮೇಲೆ ಕ್ಲಿಕ್ ಮಾಡಿ ನೀವು ರಚನೆ ಮಾಡಿಕೊಂಡಿರುವ ಬಳಕೆದಾರ ಐಡಿ ಮತ್ತು ಪಾಸ್ವರ್ಡ ಹಾಕಿ ಲಾಗಿನ್ ಅದ ಬಳಿಕ ಮೆನು ಬಟನ್ ಮೇಲೆ ಕ್ಲಿಕ್ ಮಾಡಿ “ಸಿಲಿಂಡರ್ ಬುಕಿಂಗ್ ಇತಿಹಾಸವನ್ನು ನೋಡಿ” ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನೀವು ಯಾವ ದಿನಾಂಕದಂದು ಸಿಲಿಂಡರ್ ಬುಕ್ ಮಾಡಿದ್ದಿರಾ?  ಸಿಲಿಂಡರ್ ಸಬ್ಸಿಡಿ ಎಷ್ಟು ಜಮಾ ಅಗಿದೆ? ಯಾವ ಬ್ಯಾಂಕ್ ಖಾತೆಗೆ ಜಮಾ ಅಗಿದೆ? ಎಂದು ಸಂಪೂರ್ಣ ವಿವರವನ್ನು ತೋರಿಸುತ್ತದೆ.

ರೇಷನ್ ಕಾರ್ಡ ಕುರಿತು ನಮ್ಮ ಪುಟದ ಇತರೆ ಅಂಕಣಗಳು:

- Advertisment -
LATEST ARTICLES

Related Articles

- Advertisment -

Most Popular

- Advertisment -