- Advertisment -
HomeGovt SchemesMobile Canteen Subsidy-ಮೊಬೈಲ್ ಕ್ಯಾಂಟಿನ್ ಗೆ ₹5 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Mobile Canteen Subsidy-ಮೊಬೈಲ್ ಕ್ಯಾಂಟಿನ್ ಗೆ ₹5 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಹಿಂದುಳಿದ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ ಸ್ವಂತ ಉದ್ಯೋಗವನ್ನು ಮಾಡಿ ಅರ್ಥಿಕವಾಗಿ ನೆರವು ನೀಡಲು 2024-25ನೇ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಮೊಬೈಲ್ ಕ್ಯಾಂಟಿನ್(Mobile Canteen Subsidy)ಗೆ ₹5 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಆಹಾರ ಪದಾರ್ಥಗಳ ಮಾರಾಟಕ್ಕೆ ಪೂರಕ ಬ್ಯುಸಿನೆಸ್ ಗಳಲ್ಲಿ ವರ್ಷ ಪೂರ್ತಿ ಬೇಡಿಕೆ ಇದ್ದೇ ಇರುತ್ತದೆ ಅದರಲ್ಲೂ ಇತ್ತಿಚೇಗೆ ಮೊಬೈಲ್ ಕ್ಯಾಂಟಿನ್ ವ್ಯವಹಾರದಲ್ಲಿ(Mobile Canteen Subsidy Yojana) ಕಡಿಮೆ ಬಂಡವಾಳವನ್ನು ಹೂಡಿಕೆ ಮಾಡಿ ಹೆಚ್ಚು ಆದಾಯವನ್ನು ಪಡೆಯಲು ಉತ್ತಮ ಅವಕಾಶಗಳಿವೆ.

ಮೊಬೈಲ್ ಕ್ಯಾಂಟಿನ್ ಗೆ ₹5 ಲಕ್ಷ ಸಹಾಯಧನ(Karnataka Mobile Canteen Subsidy scheme) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಈ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು ಅರ್ಹ ಅರ್ಜಿದಾರರ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: Bele Vime Amount-2 ಲಕ್ಷ ರೈತರ ಖಾತೆಗೆ ₹76 ಕೋಟಿ ಬೆಳೆ ವಿಮೆ ಪರಿಹಾರ ಜಮಾ!

Mobile Canteen Subsidy Scheme-ಯೋಜನೆಯ ವಿವರ:

ಪ್ರವಾಸೋದ್ಯಮ ಇಲಾಖೆಯಿಂದ(karnataka tourism department) 2024-25ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಒಂದು ತಿಂಗಳ ಉದ್ಯಮಶೀಲತೆ/ಕೌಶಲ್ಯ ತರಬೇತಿ ಹಾಗೂ ತರಬೇತಿ ಪಡೆದ ಬಳಿಕ ಅರ್ಹ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ಉದ್ದಿಮೆಯನ್ನು ಆರಂಭಿಸಲು ಸಬ್ಸಿಡಿಯನ್ನು ಪಡೆಯಲು ಈ ಯೋಜನೆಯಡಿ ಅವಕಾಶವಿರುತ್ತದೆ.

Mobile Canteen Subsidy Amount-ಸಹಾಯಧನ ವಿವರ:

ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಮೊಬೈಲ್ ಕ್ಯಾಂಟಿನ್ ಅನ್ನು ಆರಂಭಿಸಲು ಒಟ್ಟು ಘಟಕ ವೆಚ್ಚಕ್ಕೆ ಶೇ 70 ರಷ್ಟು ಗರಿಷ್ಥ 5 ಲಕ್ಷದ ವರೆಗೆ ಸಹಾಯಧನವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ: Ration Card-ರೇಷನ್ ಕಾರ್ಡ ತಿದ್ದುಪಡಿ ಅರ್ಜಿ ಸಲ್ಲಿಸಲು ಈ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ!

Mobile Canteen Subsidy

Who Can Apply For Mobile Canteen Subsidy-ಅರ್ಜಿ ಸಲ್ಲಿಸಲು ಅರ್ಹರು:

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದವರಾಗಿರಬೇಕು.
  • ಅರ್ಜಿದಾರರು ಕನಿಷ್ಥ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು.
  • ಅರ್ಜಿದಾರರ ವಯಸ್ಸು 20 ರಿಂದ 45 ವರ್ಷದೊಳಗಿರಬೇಕು.
  • ಅಭ್ಯರ್ಥಿಗಳು ಲಘು ವಾಹನ ಚಾಲನಾ ಪರವಾನಗಿ ಪಡೆದಿರಬೇಕು.
  • ನಗರ ಪ್ರದೇಶದ ಫಲಾನುಭವಿಗಳ ವಾರ್ಷಿಕ ಆದಾಯ ₹2 ಲಕ್ಷ ಮೀರಬಾರದು.
  • ಗ್ರಾಮಾಂತರ ಪ್ರದೇಶದ ಫಲಾನುಭವಿಗಳ ವಾರ್ಷಿಕ ಆದಾಯ ₹1.50 ಲಕ್ಷ ಮೀರಬಾರದು.
  • ಯಾವುದೇ ಸರ್ಕಾರಿ ಇಲಾಖೆಯಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ಖಾಯಂ ನೌಕರಿಯಲ್ಲಿರಬಾರದು.

ಇದನ್ನೂ ಓದಿ: Khata Details-ನಿಮ್ಮ ಆಸ್ತಿಗೆ ಖಾತಾ ಪಡೆಯಲು ಈ ದಾಖಲೆ ಸಲ್ಲಿಸುವುದು ಕಡ್ಡಾಯ!

Documents-ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿ ನಮೂನೆ(ಇಲಾಖೆಯ ಕಚೇರಿಯಲ್ಲಿ ಪಡೆಯಬೇಕು).
2) ಅರ್ಜಿದಾರರ ಆಧಾರ್ ಕಾರ್ಡ.
3) ಪೋಟೋ.
4) ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
5) ಲಘುವಾಹನ ಚಾಲನಾ ಪರವಾನಗಿ ಪತ್ರ.
6) ಕನಿಷ್ಠ ಎಸ್‌ಎಸ್‌ಎಲ್‌ಸಿ ಯಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿಯ ಪ್ರತಿ.
7) ಅರ್ಜಿದಾರನು ಯಾವುದೇ ಸರ್ಕಾರಿ ಇಲಾಖೆ, ನಿಗಮ, ಮಂಡಳಿಗಳಲ್ಲಿ ಖಾಯಂ ನೌಕರಿಯಲ್ಲಿರದ ಬಗ್ಗೆ ಸ್ವಯಂ ಪ್ರಮಾಣೀಕರಿಸಿ, ರೂ.50/-ರ ಬೆಲೆಯ ಛಾಪಾಕಾಗದ (ಅಫಿಡೇವಿಟ್)ದಲ್ಲಿ ನಮೂನೆ-3ರಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು.

ಇದನ್ನೂ ಓದಿ: Togari Kharidi-ರಾಜ್ಯ ಸರ್ಕಾರದಿಂದ ತೊಗರಿ ಖರೀದಿಗೆ ₹140 ರೂ ಕೋಟಿ!

Last Date For Mobile Canteen Subsidy Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 31 ಜನವರಿ 2025

How to Apply For Mobile Canteen Subsidy-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಮೇಲೆ ತಿಳಿಸಿರುವ ಎಲ್ಲಾ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ಅರ್ಜಿಗನ್ನು ನಿಮ್ಮ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

- Advertisment -
LATEST ARTICLES

Related Articles

- Advertisment -

Most Popular

- Advertisment -