HomeGovt SchemesPackage trip-ಸರಕಾರದಿಂದ ಸಹಾಯಧನ ಪಡೆದು ಅಯೋಧ್ಯೆ ಮತ್ತು ಕನ್ಯಾಕುಮಾರಿ ಯಾತ್ರೆ ಕೈಗೊಳ್ಳಲು ಅರ್ಜಿ!

Package trip-ಸರಕಾರದಿಂದ ಸಹಾಯಧನ ಪಡೆದು ಅಯೋಧ್ಯೆ ಮತ್ತು ಕನ್ಯಾಕುಮಾರಿ ಯಾತ್ರೆ ಕೈಗೊಳ್ಳಲು ಅರ್ಜಿ!

ರಾಜ್ಯ ಸರಕಾದ ಧಾರ್ಮಿಕ ದತ್ತಿ ಇಲಾಖೆಯಿಂದ ಸಹಾಯಧನ ಪಡೆದು ದಕ್ಷಿಣ ಭಾರತದ ಕ್ಷೇತ್ರಗಳ ಯಾತ್ರಾ ಮತ್ತು ಕಾಶಿ, ಗಯಾ, ಅಯೋಧ್ಯೆ(Subsidy Package trip) ಸೇರಿದಂತೆ ಇತರೆ ಸ್ಥಳಗಳಿಗೆ ಪ್ರವಾಸವನ್ನು ಕೈಗೊಳ್ಳಲು ರೈಲ್ವೆ ಇಲಾಖೆ ಸಹಯೋಗದಲ್ಲಿ ಟಿಕೆಟ್ ಬುಕಿಂಗ್ ಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ದಕ್ಷಿಣ ಭಾರತದ ಕ್ಷೇತ್ರಗಳ ಯಾತ್ರಾ ಪ್ಯಾಕೇಜ್ ಮತ್ತು ಕಾಶಿ-ಗಯಾ ದರ್ಶನ ಒಟ್ಟು ಎರಡು ಪ್ಯಾಕೇಜ್ ನಲ್ಲಿ ಪ್ರವಾಸ ಕೈಗೊಳ್ಳಲು ಅವಕಾಶವಿದ್ದು ಆಸಕ್ತ ಪ್ರವಾಸಿಗರು ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: SSP Date Extended- ಎಲ್ಲಾ ರೀತಿಯ ವಿದ್ಯಾರ್ಥಿವೇತನಕ್ಕೆ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿಕೆ!

ಈ ಎರಡು ಪ್ಯಾಕೇಜ್ ಪ್ರವಾಸದ ಸಹಾಯಧನ ಮತ್ತು ಇತರೆ ಸಂಪೂರ್ಣ ವಿವರ ಮತ್ತು ರೈಲು ಟಿಕೆಟ್ ಬುಕ್ ಮಾಡುವ ವಿಧಾನ ಸೇರಿದಂತೆ ಇತರೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು ಪೂರ್ಣ ಮಾಹಿತಿಯನ್ನು ಓದಿಕೊಂಡು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

Package trip details-ಪ್ರವಾಸದ ಪ್ಯಾಕೇಜ್ ವಿವರ:

1) ದಕ್ಷಿಣ ಕ್ಷೇತ್ರಗಳ ಯಾತ್ರಾ:

ಈ ಪ್ರವಾಸದಲ್ಲಿ ರಾಮೇಶ್ವರ-ಕನ್ಯಾಕುಮಾರಿ-ಮದುರೈ-ತಿರುವನಂತಪುರಂ ಸ್ಥಳಗಳನ್ನು ತೋರಿಸಲಾಗುತ್ತದೆ. ಒಟ್ಟು 6 ದಿನದ ಪ್ರವಾಸ ಇದಾಗಿರುತ್ತದೆ.

ರೂ 25,000 ಸಾವಿರ ಒಬ್ಬ ಪ್ರವಾಸಿಗೆ ವೆಚ್ಚವಾಗಲಿದ್ದು ರಾಜ್ಯ ಸರಕಾರದಿಂದ 10,000/- ಭರಿಸಲಾಗುತ್ತದೆ ಪ್ರವಾಸಕ್ಕೆ ಹೋಗುವವರು 15,000/- ಪಾವತಿ ಮಾಡಬೇಕು.

ಇದನ್ನೂ ಓದಿ: Diesel pumpset subsidy- ಶೇ 90% ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

ರಾಮೇಶ್ವರದಲ್ಲಿ- ರಾಮೇಶ್ವರ ದೇವಾಲಯ, ಕನ್ಯಾಕುಮಾರಿಯಲ್ಲಿ- ಶ್ರೀ ಭಗಮತಿ ದೇವಾಲಯ, ಮದುರೈ- ಶ್ರ‍ೀ ಮೀನಾಕ್ಷಿ ದೇವಾಲಯ ಮತ್ತು ತಿರುವನಂತಪುರಂ ನಲ್ಲಿ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯಗಳ ಭೇಟಿ ಮಾಡಲಾಗುತ್ತದೆ.

ಪ್ರವಾಸಿಗಲು ರೈಲು ಹತ್ತಲು ಅವಕಾಶವಿರುವ ಸ್ಥಳಗಳು: ಬೆಳಗಾವಿ, ಹುಬ್ಬಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಬೆಂಗಳೂರು

2) ಕಾಶಿ-ಗಯಾ ದರ್ಶನ:

ಕಾಶಿ, ಗಯಾ, ಅಯೋಧ್ಯ ಮತ್ತು ಪ್ರಯಾಗ್ ರಾಜ್ ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟು 9 ದಿನಗಳ ಯಾತ್ರೆ ಇದಾಗಿರುತ್ತದೆ. ಒಟ್ಟು ರೂ 32,500/- ಒಬ್ಬ ಪ್ರವಾಸಿಗೆ ವೆಚ್ಚ ವಾಗಲಿದ್ದು ರಾಜ್ಯ ಸರಕಾರದಿಂದ ರೂ 17,500 ಅನ್ನು ಭರಿಸಲಾಗುತ್ತದೆ.

1) ವಾರಣಾಸಿ-Varanasi: Tulsi Manas temple, Sankat Mochan Hanuman temple, Kashi Vishwanath temple & Ganga Aarti (Holy bath & Ganga Aarti is subject to feasibility based on water level).

ಇದನ್ನೂ ಓದಿ: Sukanya samriddhi- ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿ!

2) ಅಯೋಧ್ಯ-Ayodhya: Ram Janmabhoomi temple.

3) ಪ್ರಯಾಗ್ ರಾಜ್-Prayagraj: Hanuman temple & Holy bath in Ganges.

ಪ್ರವಾಸಿಗಲು ರೈಲು ಹತ್ತಲು ಅವಕಾಶವಿರುವ ಸ್ಥಳಗಳು: ಯಶವಂತಪುರ, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳಿ, ಬೆಳಗಾವಿ

Railway ticket booking method- ಪ್ರವಾಸಕ್ಕೆ ರೈಲು ಟಿಕೆಟ್ ಬುಕ್ ಮಾಡುವ ವಿಧಾನ:

Railway ticket booking

ಈ ಮೇಲಿನ ಪ್ರವಾಸಕ್ಕೆ ಹೋಗಲು ಆಸಕ್ತಿಯಿರುವ ಅಭ್ಯರ್ಥಿಗಳು ಮುಂಚಿತವಾಗಿ ಈ Book Now ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ತೆರಳಲು ಇಚ್ಚಿಸಿರುವ ಯಾತೆಯನ್ನು ಆಯ್ಕೆ ಮಾಡಿಕೊಂಡು ರೈಲು ಟಿಕೆಟ್ ಅನ್ನು ಬುಕ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Waqf board-ಏನಿದು ವಕ್ಫ್ ಕಾಯ್ದೆ? ಇದರಿಂದ ರೈತರಿಗೆ ಹೇಗೆ ತೊಂದರೆಯಾಗುತ್ತದೆ? ಇಲ್ಲಿದೆ ಸಂಪೂರ್ಣ ವಿವರ!

Most Popular

Latest Articles

Related Articles