Pension Amount- ಈ ಪಟ್ಟಿಯಲ್ಲಿರುವ ಫಲಾನುಭವಿಗಳಿಗೆ ಜುಲೈ-2025 ತಿಂಗಳ ಪಿಂಚಣಿ ಹಣ ಬಿಡುಗಡೆ!

July 4, 2025 | Siddesh
Pension Amount- ಈ ಪಟ್ಟಿಯಲ್ಲಿರುವ ಫಲಾನುಭವಿಗಳಿಗೆ ಜುಲೈ-2025 ತಿಂಗಳ ಪಿಂಚಣಿ ಹಣ ಬಿಡುಗಡೆ!
Share Now:

ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪಿಂಚಣಿ ನಿರ್ದೇಶನಾಲಯದಿಂದ ವಿವಿಧ ಪಿಂಚಣೆ ಯೋಜನೆಯಡಿ(July Pension Amount) ಅರ್ಹ ಫಲಾನುಭವಿಗಳಿಗೆ ನೀಡುವ ಜುಲೈ-2025 ತಿಂಗಳ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದ್ದು ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ನಮ್ಮ ರಾಜ್ಯದಲ್ಲಿ ಕಂದಾಯ ಇಲಾಖೆಯಡಿ(Karnataka Revenue Department) ಕಾರ್ಯನಿರ್ವಹಿಸುವ ಪಿಂಚಣಿ ನಿರ್ದೇಶನಾಲಯದಿಂದ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಪಿಂಚಣಿಯನ್ನು ಪ್ರತಿ ತಿಂಗಳು ನೇರವಾಗಿ ಅವರ ಖಾತೆಗೆ 10 ನೇ ತಾರೀಖಿನ ಒಳಗಾಗಿ ಜಮಾ ಮಾಡಲಾಗುತ್ತದೆ ಇದೇ ಮಾದರಿಯಲ್ಲಿ ಜುಲೈ-2025 ತಿಂಗಳ ಪಿಂಚಣಿ ಹಣ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: Home Loan Schems-PMAY 2.0 ಯೋಜನೆಯಡಿ ₹ 2.50 ಲಕ್ಷ ಸಹಾಯಧನಕ್ಕೆ ಅರ್ಜಿ! 

ಪ್ರಸ್ತುತ ಈ ಲೇಖನದಲ್ಲಿ ಪಿಂಚಣಿಯನ್ನು(Pension Schemes in Karnataka) ಪಡೆಯಲು ಅರ್ಹರಿರುವ ಹಳ್ಳಿವಾರು ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲೇ ಹೇಗೆ ಪಡೆಯುವುದು? ಹಾಗೂ ಪ್ರತಿ ತಿಂಗಳು ಜಮಾ ಅಗುವ ಪಿಂಚಣಿ ಹಣದ ಜಮಾ ವಿವರವನ್ನು ಚೆಕ್ ಮಾಡುವ ವಿಧಾನ ಹೇಗೆ? ಯೋಜನೆವಾರು ಎಷ್ಟು ಪಿಂಚಣಿಯನ್ನು ನೀಡಲಾಗುತ್ತದೆ ಎನ್ನುವ ಮಾಹಿತಿ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

July-2025 Pension Amount-ಜುಲೈ-2025 ತಿಂಗಳ ವಿವಿಧ ಯೋಜನೆಯ ಪಿಂಚಣಿ ಹಣ ವರ್ಗಾವಣೆ:

ಸಾಮಾನ್ಯವಾಗಿ ಪ್ರತಿ ತಿಂಗಳ 5 ರಿಂದ 10 ನೇ ತಾರೀಖಿನ ಮಧ್ಯದಲ್ಲಿ ಫಲಾನುಭವಿಗಳಿಗೆ ಪಿಂಚಣಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಅದರೆ ಕಳೆದ ತಿಂಗಳು ಮತ್ತು ಈ ತಿಂಗಳು 3 ನೇ ತಾರೀಖಿನ ಒಳಗಾಗಿ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಿಂಚಣಿಯ ಹಣವನ್ನು ಜಮಾ ಮಾಡಲಾಗಿದೆ.

ಇದನ್ನೂ ಓದಿ: Free fast food training-ಉಚಿತ ಫಾಸ್ಟ್ ಫುಡ್ ಉದ್ದಿಮೆ ತರಬೇತಿಗೆ ಅರ್ಜಿ ಆಹ್ವಾನ!

Karnataka pension yojana-ಯೋಜನೆವಾರು ಪಿಂಚಣಿ ಹಣದ ವಿವರ ಹೀಗಿದೆ:

ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಪಿಂಚಣಿ ಯೋಜನೆಗಳು ಮತ್ತು ಯೋಜನೆವಾರು ಸರ್ಕಾರದಿಂದ ನಿಗದಿಪಡಿಸಿರುವ ಪಿಂಚಣಿ ಹಣದ ವಿವರ ಈ ಕೆಳಗಿನಂತಿದೆ.

  • ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ/ಸಂಧ್ಯಾ ಸುರಕ್ಷಾ- 800/- ರಿಂದ 1,200/- ರೂ
  • ವಿಧವಾ ಪಿಂಚಣಿ ಯೋಜನೆ- ರೂ 800/-
  • ಮೈತ್ರಿ ಯೋಜನೆ- ರೂ 800/-
  • ಸಾಲದ ಭಾದೆಯಿಂದ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ - ರೂ 800/-
  • ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ- ರೂ 10,000/-
  • ಎಂಡೋಸಲ್ಫಾನ್‌ ಸಂತ್ರಸ್ಥರಿಗೆ ಮಾಸಿಕ ಪಿಂಚಣಿ- ರೂ 2000/- ರಿಂದ ರೂ 4000/- ರವರೆಗೆ.
  • ಅಂಗವಿಕಲ ಪಿಂಚಣಿ: ರೂ . 1400/- ರಿಂದ ರೂ 2000/- ರವರೆಗೆ.
  • ಸಂಧ್ಯಾ ಸುರಕ್ಷಾ ಯೋಜನ- ರೂ 1200/-
  • ಮನಸ್ವಿನಿ ಯೋಜನೆ- ರೂ 800/-

ಇದನ್ನೂ ಓದಿ: Bele Vime Amount-2025: ಈ ಜಿಲ್ಲೆಯ ರೈತರ ಖಾತೆಗೆ 30 ಕೋಟಿ ಬೆಳೆ ವಿಮೆ ಬಿಡುಗಡೆ!

Pension Status Check-ಪಿಂಚಣಿ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?

ಪಿಂಚಣಿಯನ್ನು ಪಡೆಯಲು ಅರ್ಹರಿರುವ ಫಲಾನುಭವಿಗಳು ಪ್ರತಿ ತಿಂಗಳು ತಮ್ಮ ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಜಮಾ ಅಗಿದಿಯೋ? ಇಲ್ಲವೋ? ಎಂದು ಎರಡು ವಿಧಾನವನ್ನು ಅನುಸರಿಸಿ ಮನೆಯಲ್ಲಿ ಇದ್ದು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು.

ವಿಧಾನ:-1 ಬ್ಯಾಂಕ್ ಸಹಾಯವಾಣಿಗೆ(Bank Balance Check Helpline) ಮಿಸ್ ಕಾಲ್ ಮಾಡಿ:

ಪಿಂಚಣಿಯನ್ನು ಪಡೆಯಲು ಅರ್ಹರಿರುವ ಫಲಾನುಭವಿಗಳು ತಾವು ಯಾವ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರುತ್ತಿರೋ ಆ ಬ್ಯಾಂಕಿನ ಸಹಾಯವಾಣಿಗೆ ಮಿಸ್ ಕಾಲ್ ಮಾಡಿ ಪ್ರಸ್ತುತ ಎಷ್ಟು ಬ್ಯಾಲೆನ್ಸ್ ಇದೆ ಎಂದು ಚೆಕ್ ಮಾಡಿಕೊಳ್ಳುವುದರ ಮೂಲಕ ಪಿಂಚಣಿ ಹಣ ಜಮಾ ಅಗಿದಿಯೋ ಇಲ್ಲವೋ ಎಂದು ಮನೆಯಲ್ಲೇ ಕುಳಿತು ಬ್ಯಾಂಕ್ ಖಾತೆಯನ್ನು ಭೇಟಿ ಮಾಡದೇ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Diploma Veterinary Admission-ಪಶುಸಂಗೋಪನೆ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ! ತಿಂಗಳಿಗೆ ರೂ 1,000 ಶಿಷ್ಯವೇತನ!

ಎಲ್ಲಾ ಬ್ಯಾಂಕಿನ ಬ್ಯಾಲೆನ್ಸ್ ಚೆಕ್ ಸಹಾಯವಾಣಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ-Click Here

ವಿಧಾನ:-2 ಡಿಬಿಟಿ ಮೊಬೈಲ್(DBT Karnataka) ಅಪ್ಲಿಕೇಶನ್ ಮೂಲಕ ಚೆಕ್ ಮಾಡಿಕೊಳ್ಳಬಹುದು:

Step-1: ಫಲಾನುಭವಿಗಳಿ ಮೊದಲಿಗೆ ಈ DBT karanataka App Download ಲಿಂಕ್ ಮೇಲೆ ಕ್ಲಿಕ್ ಮಾಡಿ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ "ಡಿಬಿಟಿ ಕರ್ನಾಟಕ" ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Free Beautician Training-ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

Pension Amount

Step-2: ಇದಾದ ಬಳಿಕ ಮೊಬೈಲ್ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ಪ್ರತಿ ತಿಂಗಳು ಪಿಂಚಣಿಯನ್ನು ಪಡೆಯುತ್ತಿರುವ ಫಲಾನುಭವಿಯ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಆಧಾರ್ ಕಾರ್ಡ ನಲ್ಲಿ ನಮೂದಿಸಿರುವ ಮೊಬೈಲ್ ನಂಬರ್ ಗೆ ಬರುವ 6 ಅಂಕಿಯ OTP/ಒಟಿಪಿ ಅನ್ನು ನಮೂದಿಸಬೇಕು.

ಬಳಿಕ ನಿಮಗೆ ನೆನಪಿನಲ್ಲಿ ಉಳಿಯುವ 4 ನಂಬರಿನ ಪಾಸ್ವರ್ಡ/Password ಅನ್ನು ರಚನೆ ಮಾಡಿಕೊಳ್ಳಬೇಕು. ನಂತರ ಅರ್ಜಿದಾರ ಫಲಾನುಭವಿಯ ಹೆಸರು, ವಿಳಾಸ, ಪೋಟೋ ವೈಯಕ್ತಿಕ ವಿವರ ತೋರಿಸುತ್ತದೆ ಕೊನೆಯಲ್ಲಿ ಮೊಬೈಲ್ ನಂಬರ್ ಹಾಕಿ "ಸರಿ" ಎಂದು ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-3: ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡ ಬಳಿಕ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಪಾಸ್ವರ್ಡ ಹಾಕಿ ಅಪ್ಲಿಕೇಶನ್ ಗೆ ಲಾಗಿನ್ ಆಗಬೇಕು ಇಲ್ಲಿ ಮುಖಪುಟದಲ್ಲಿ ಕಾಣುವ "ಪಾವತಿ ಸ್ಥಿತಿ/Payment Status"  ಬಟನ್ ಮೇಲೆ ಕ್ಲಿಕ್ ಮಾಡಿ ಪಿಂಚಣಿ ಯೋಜನೆಯ ಹೆಸರು ಗೋಚರಿಸುತ್ತದೆ ಇದರ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ಎಷ್ಟು ತಿಂಗಳು ಪಿಂಚಣಿ ಹಣ ಜಮಾ ಅಗಿದೆ? UTR ನಂಬರ್ ಸೇರಿದಂತೆ ಸಂಪೂರ್ಣ ವಿವರವನ್ನು ಇಲ್ಲಿ ಪಡೆಯಬಹುದು.

ಇದನ್ನೂ ಓದಿ: Maize Fall Armyworm-ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ! ನಿಯಂತ್ರಿಸಲು ಈ ಕ್ರಮ ಅನುಸರಿಸಿ!

Pension Beneficiary List- ನಿಮ್ಮ ಹಳ್ಳಿಯ ಪಿಂಚಣಿದಾರರ ಪಟ್ಟಿಯನ್ನು ಮೊಬೈಲ್ ನಲ್ಲೇ ಪಡೆಯುವ ವಿಧಾನ:

ನಾಗರಿಕರು ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ ಪಿಂಚಣಿ ನಿರ್ದೇಶನಾಲಯದ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಹಳ್ಳಿಯ ಪಿಂಚಣಿದಾರರ ಪಟ್ಟಿಯನ್ನು ನೋಡಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Pension Beneficiary List ಮಾಡಿ ಅಧಿಕೃತ ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ ಪಿಂಚಣಿ ನಿರ್ದೇಶನಾಲಯದ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮೀಣ/ನಗರ ಆಯ್ಕೆ ಮಾಡಿಕೊಂಡು ಬಳಿಕ ನಿಮ್ಮ ಹೋಬಳಿ, ಗ್ರಾಮ ಆಯ್ಕೆ ಮಾಡಿ ಕೆಳಗೆ ಕಾಣುವ Captcha ಕೋಡ್ ಅನ್ನು ಹಾಕಿ Serach ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಪಿಂಚಣಿ ಪಡೆಯಲು ಅರ್ಹರಿರುವ ಫಲಾನುಭವಿಗಳ ಪಟ್ಟಿ ತೋರಿಸುತ್ತದೆ.

WhatsApp Group Join Now
Telegram Group Join Now
Share Now: