ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 19 ನೇ ಕಂತಿನ ರೂ 2,000 ಹಣವನ್ನು(PM-Kisan Beneficiary List) ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ಅಧಿಕೃತ PM-Kisan ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು ರೈತರು ಈ ಪಟ್ಟಿಯನ್ನು ನೋಡಲು ಅನುಸರಿಸಬೇಕಾದ ಕ್ರಮದ ಕುರಿತು ಇಲ್ಲಿ ತಿಳಿಸಲಾಗಿದೆ.
ಕೇಂದ್ರ ಸರಕಾರದಿಂದ 2019 ರಿಂದ ದೇಶದ ಎಲ್ಲಾ ವರ್ಗದ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿ ಮಾಡಲು ಅರ್ಥಿಕವಾಗಿ ನೆರವು ನೀಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು(Kisan samman nidhi yojane) ಜಾರಿಗೆ ತರಲಾಗಿದ್ದು ಈ ಯೋಜನೆಯಡಿ ಇಲ್ಲಿಯವರೆಗೆ 18 ಕಂತುಗಳಲ್ಲಿ ಒಟ್ಟು 36,000 ಸಾವಿರ ಹಣವನ್ನು ರೈತರ ಖಾತೆಗೆ ಹಾಕಲಾಗಿದೆ.
ಒಂದು ವರ್ಷಕ್ಕೆ ರೂ 6,000 ಅರ್ಥಿಕ ನೆರವನ್ನು ಈ ಯೋಜನೆಯಡಿ ಫಲಾನುಭವಿಗಳಿಗೆ(PM-kisan 19th Installment Beneficiary List) ಜಮಾ ಮಾಡಲಾಗುತ್ತದೆ ಇದರಂತೆ ಈ ವರ್ಷದ ಕೊನೆಯ ಕಂತು ಅಂದರೆ 19 ನೇ ಕಂತನ್ನು ಪಡೆಯಲು ಅರ್ಹರ ಇರುವ ಹಳ್ಳಿವಾರು ರೈತರ ಪಟ್ಟಿಯನ್ನು ಅಧಿಕೃತ ಪಿ ಎಂ ಕಿಸಾನ್ ವೆಬ್ಸೈಟ್ ನಲ್ಲಿ ಪ್ರಕಟಣೆ ಮಾಡಲಾಗಿದೆ.
ಇದನ್ನೂ ಓದಿ: Monthly Fellowship- ಹಿಂದುಳಿದ ವರ್ಗಗಳ ಇಲಾಖೆಯಿಂದ ಮಾಸಿಕ ₹10,000 ರೂ ಸ್ಕಾಲರ್ಶಿಪ್ ಪಡೆಯಲು ಅರ್ಜಿ!
ರೈತರು ತಮ್ಮ ಮೊಬೈಲ್ ನಲ್ಲೇ 19 ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು(Kisan Samman Farmers List) ಹೇಗೆ ನೋಡುವುದು? ಎಂದು ಈ ಅಂಕಣದಲ್ಲಿ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದ್ದು ತಪ್ಪದೇ ಪೂರ್ಣ ಅಂಕಣವನ್ನು ಓದಿ ಈ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.
PM-Kisan Farmer List-2025: ಪಿಎಂ ಕಿಸಾನ್ 19ನೇ ಕಂತಿನ ಹಣ ಪಡೆಯಲು ಅರ್ಹ ರೈತರ ಪಟ್ಟಿ ನೋಡುವ ವಿಧಾನ:
ಕೇಂದ್ರ ಸರಕಾರದ ಅಧಿಕೃತ ಪಿ ಎಂ ಕಿಸಾನ್ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ 19ನೇ ಕಂತಿನ ಹಣ ಪಡೆಯಲು ಬಿಡುಗಡೆ ಮಾಡಿರುವ ಪರಿಷ್ಕೃತ ರೈತರ ಪಟ್ಟಿ ಯಲ್ಲಿ ನಿಮ್ಮ ಹೆಸರು ಇದಿಯಾ? ಎಂದು ಒಮ್ಮೆ ಚೆಕ್ ಮಾಡಿಕೊಳ್ಳಬಹುದು.
Step-1: ಪ್ರಥಮದಲ್ಲಿ PM-Kisan Beneficiary List ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.
ಇದನ್ನೂ ಓದಿ: Bus Ticket Price- ಬಸ್ ಟಿಕೆಟ್ ದರದಲ್ಲಿ ಶೇ 15% ಏರಿಕೆ! ಇಲ್ಲಿದೆ ಟಿಕೆಟ್ ದರ ವಿವರ!
Step-2: ಬಳಿಕ ಇಲ್ಲಿ ಮುಖಪುಟದಲ್ಲಿ ಬಲ ಬದಿಯಲ್ಲಿ ಕೆಳಗೆ ಕೊನೆಯಲ್ಲಿ ಕಾಣುವ “Beneficiary List” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: “Beneficiary List” ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಬಳಿಕ ಈ ಪೇಜ್ ನಲ್ಲಿ ರಾಜ್ಯ/State: Karnataka ಎಂದು ಆಯ್ಕೆ ಮಾಡಿಕೊಂಡು ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ನಿಮ್ಮ ಹಳ್ಳಿಯ ಹೆಸರನ್ನು ಸೆಲೆಕ್ಟ್ ಮಾಡಿ “Get Report” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿತ ಅರ್ಹ ರೈತರ ಪಟ್ಟಿ ತೆರೆದುಕೊಳ್ಳುತ್ತದೆ. ಒಮ್ಮೆ ಸಂಪೂರ್ಣ ಪಟ್ಟಿಯನ್ನು ನೋಡಿ ನಿಮ್ಮ ಹೆಸರು ಪಟ್ಟಿಯಲ್ಲಿ ಇದಿಯಾ? ಎಂದು ಖಚಿತಪಡಿಸಿಕೊಳ್ಳಿ.
ಸೂಚನೆ: ಈ ಪಟ್ಟಿಯನ್ನು ಪೂರ್ಣವಾಗಿ ನೋಡಲು ಈ ಪೇಜ್ ನಲ್ಲಿ ಕೊನೆಗೆ ಕಾಣುವ 1.2.3 ಬಟನ್ ಅನ್ನು ಒತ್ತಿ.
ಇದನ್ನೂ ಓದಿ: Togari bembala bele-ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ! ದರ ಎಷ್ಟು?
PM-kisan 19th Installment-19ನೇ ಕಂತಿನ ಹಣ ಪಡೆಯಲು ತಪ್ಪದೇ ಈ ಕೆಲಸ ಮಾಡಿ:
ಪಿ ಎಂ ಕಿಸಾನ್ ಯೋಜನೆಯಡಿ ಅರ್ಥಿಕ ನೆರವನ್ನು ಪಡೆಯಲು ಇ-ಕೆವೈಸಿಯನ್ನು, ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್, ಅರ್ಜಿದಾರರ ಹೆಸರು ಮತ್ತು ಜಮೀನಿನ ಹೆಸರು ತಪ್ಪದೇ ತಾಳೆಯಾಗಬೇಕು ಇಲ್ಲವಾದಲ್ಲಿ 19ನೇ ಕಂತಿನ ಹಣ ಪಡೆಯಲು ಸಾಧ್ಯವಾಗುವುದಿಲ್ಲ.
ಈ ಯೋಜನೆಯಡಿ ಅರ್ಥಿಕ ನೆರವು ಪಡೆಯುತ್ತಿರುವವರು ಇ-ಕೆವೈಸಿ ಅಗಿರುವುದನ್ನು ಒಮ್ಮೆ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಚೆಕ್ ಮಾಡಿಕೊಳ್ಳಬೇಕು, ಹಾಗೇಯೆ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಆಧಾರ್ ಕಾರ್ಡ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಜಮೀನಿನ ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಿಸಿದ್ದರೆ ಕೊಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಜಮೀನಿನ ದಾಖಲೆಗಳ ಸಮೇತ ಭೇಟಿ ಮಾಡಿ ನಿಮ್ಮ ಪಿ ಎಂ ಕಿಸಾನ್ ಅರ್ಜಿಯಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಿ.
ಇದನ್ನೂ ಓದಿ: Ration Card Application-ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!
PM-kisan 19th Installment Date-ಈ ತಿಂಗಳಲ್ಲಿ 19ನೇ ಕಂತಿನ ಹಣ ರೈತರ ಖಾತೆಗೆ ಜಮಾ ಸಾಧ್ಯತೆ:
ಕೇಂದ್ರ ಸರಕಾರದಿಂದ ಪ್ರತಿ ವರ್ಷ ಕೊನೆಯ ಕಂತಿನ ಹಣವನ್ನು ಪೆಬ್ರವರಿ-ಮಾರ್ಚ್ ತಿಂಗಳ ಮಧ್ಯದಲ್ಲಿ ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತದೆ ಇದರಂತೆ 19ನೇ ಕಂತಿನ ಹಣವನ್ನು ರೈತರ ಖಾತೆಗೆ ಪೆಬ್ರವರಿ ಮತ್ತು ಮಾರ್ಚ್ ತಿಂಗಳ ಮಧ್ಯದಲ್ಲಿ ಜಮಾ ಮಾಡುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.