HomeGovt SchemesPMMVY Yojana- ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯಡಿ ಸಿಗಲಿದೆ ರೂ 11,000 ಸಾವಿರ ಅರ್ಥಿಕ ನೆರವು!

PMMVY Yojana- ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯಡಿ ಸಿಗಲಿದೆ ರೂ 11,000 ಸಾವಿರ ಅರ್ಥಿಕ ನೆರವು!

ಗರ್ಭಿಣಿ ಮಹಿಳೆಯರಿಗೆ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ(PMMVY) Yojana ಅರ್ಥಿಕ ನೆರವು ನೀಡಲಾಗುತ್ತದೆ.

ಒಂದನೇ ಮತ್ತು ಎರಡನೇ ಮಗುವಿನ ಹೆರಿಗೆ ಸಮಯದಲ್ಲಿ ಯೋಜನೆಯಡಿ(Pradhan Mantri Matru Vandana Yojana) ಒಟ್ಟು 11,000 ಅರ್ಥಿಕ ನೆರವು ನೀಡಲಾಗುತ್ತದೆ. ಈ ಹಣವನ್ನು ಪಡೆಯುವುದು ಹೇಗೆ? ಅರ್ಜಿ ಸಲ್ಲಿಸುವ ವಿಧಾನ? ಅಗತ್ಯ ದಾಖಲೆಗಳು ಇತ್ಯಾದಿ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: MGNREGA-2024: ನರೇಗಾ ಯೋಜನೆಯಡಿ 5.0 ಲಕ್ಷದ ವರೆಗೆ ವೈಯಕ್ತಿಕ ಕಾಮಗಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ!

Matru Vandana Yojana- ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ:

ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯನ್ನು 1 ಜನವರಿ 2017 ರಿಂದ ಜಾರಿಗೆ ತರಲಾಗಿದ್ದು, ಈ ಯೋಜನೆಯ ಮೂಲಕ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರವನ್ನು ಸೇವನೆ ಮಾಡಲು ಅರ್ಥಿಕ ನೆರವನ್ನು ನೀಡಲಾಗುತ್ತದೆ.

Who can apply for PMMVY scheme- ಈ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಅರ್ಹರು:

ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಅರ್ಥಿಕ ನೆರವನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವವರು ಅರ್ಜಿ ಸಲ್ಲಿಸಬಹುದು.

ಬಿಪಿಎಲ್ ರೇಶನ್ ಕಾರ್ಡ ಹೊಂದಿರುವವರು.

ಇ-ಶ್ರಮ್ ಕಾರ್ಡ ಹೊಂದಿರುವವರು.

ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಯರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸಹಾಯಧನ ಪಡೆಯುತ್ತಿರುವವರು.

ನರೇಗಾ ಯೋಜನೆ ಚಾಬ್ ಕಾರ್ಡ ಹೊಂದಿರುವವರು.

ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವವರು.

ಇದನ್ನೂ ಓದಿ: BPL card-ಈ ಕಾರ್ಡ ಹೊಂದಿರುವವರಿಗೆ BPL ರ‍ೇಶನ್ ಕಾರ್ಡ ಪಡೆಯಲು ಅವಕಾಶ!

PMMVY

PMMVY Yojana amount details- ಎಷ್ಟು ಹಣ ಪಡೆಯಬಹುದು?

ಈ ಯೋಜನೆಯಡಿ ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಮೊದಲ ಮಗುವಿವ ಸಮಯದಲ್ಲಿ ರೂ 5,000 ಮತ್ತು ಎರಡನೇ ಮಗುವಿನ ಹೆರಿಗೆ ಸಮಯದಲ್ಲಿ ರೂ 6,000 ಒಟ್ಟು 11,000 ಸಾವಿರ ಅರ್ಥಿಕ ನೆರವನ್ನು ಪಡೆಯಬಹುದು.

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಅರ್ಜಿದಾರರು ತಮ್ಮ ಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿರು ಅಂಗನವಾಡಿ ಕಾರ್ಯಕರ್ತೆಯರ ಬಳಿ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Student Incentives-ಸರಕಾರದಿಂದ ಈ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲುವ ವಿದ್ಯಾರ್ಥಿಗಳಿಗೆ 2 ಲಕ್ಷ ಪ್ರೋತ್ಸಾಹಧನ!

Documents for PMMVY- ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳು:

1) ತಾಯಿ ಕಾರ್ಡ
2) ಅಧಾರ್ ಕಾರ್ಡ
3) ರೇಶನ್ ಕಾರ್ಡ
4) ಮಗುವಿನ ಲಸಿಕೆ ಮಾಹಿತಿಯ ಪ್ರತಿ
5) ಫಲಾನುಭವಿಯ ಬ್ಯಾಂಕ್ ಪಾಸ್ ಬುಕ್
6) ಪೋಟೋ
7) ಮೊಬೈಲ್ ನಂಬರ್

ಇದನ್ನೂ ಓದಿ: Maize msp price- ಕೆಎಂಎಫ್‌ ನಿಂದ ರೂ 2,400/- ದರದಲ್ಲಿ ಮೆಕ್ಕೆಜೋಳ ಖರೀದಿ!

ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲಾಖೆಯ ವೆಬ್ಸೈಟ್: Click here

Most Popular

Latest Articles

Related Articles