RTC Crop Name-ಪಹಣಿಯಲ್ಲಿ ಬೆಳೆ ಮಾಹಿತಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುವುದು ಹೇಗೆ?

December 22, 2025 | Siddesh
RTC Crop Name-ಪಹಣಿಯಲ್ಲಿ ಬೆಳೆ ಮಾಹಿತಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುವುದು ಹೇಗೆ?
Share Now:

ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಮಾಹಿತಿಗೂ ಹಾಗೂ ಪಹಣಿಯಲ್ಲಿ(RTC) ದಾಖಲಾದ ಬೆಳೆ ಮಾಹಿತಿಗೂ ತಾಳೇಯಾಗದೇ ತಪ್ಪಾದ ಬೆಳೆ ಮಾಹಿತಿ ಪಹಣಿಯಲ್ಲಿ ದಾಖಲಾಗಿದ್ದರೆ ಇದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ನಮ್ಮ ರಾಜ್ಯದಲ್ಲಿ ಕೃಷಿ ಜಮೀನಿನಲ್ಲಿ ಬೆಳೆದಿರುವ ಬೆಳೆಯ(Pahani Crop Details) ಮಾಹಿತಿಯನ್ನು ಅಧಿಕೃತವಾಗಿ ಪಹಣಿ/ಊತಾರ್/RTC ಅಲ್ಲಿ ದಾಖಲಿಸಲು ಕೃಷಿ ಮತ್ತು ಕಂದಾಯ ಇಲಾಖೆಯ ಮೂಲಕ ಪ್ರತಿ ಹಂಗಾಮಿನಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಬೆಳೆ ಸಮೀಕ್ಷೆಯನ್ನು ಮಾಡಿ ದಾಖಲಿಸಲಾಗುತ್ತದೆ. ಈ ರೀತಿಯ ವಿಧಾನವನ್ನು ಅನುಸರಿಸಿ ದಾಖಲಿಸಿದ ಮಾಹಿತಿಯು ತಪ್ಪಾಗಿ ನಮೂದಿಸಿ ಪಹಣಿಯಲ್ಲಿ ತಪ್ಪಾದ ಬೆಳೆ ಮಾಹಿತಿ ದಾಖಲಾದರೆ ರೈತರು ಇದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Dairy Equipment Subsidy-ಹಸು ಸಾಕಾಣಿಕೆಗೆ ಪೂರಕ ಯಂತ್ರ ಮತ್ತು ಕೊಟ್ಟಿ ನಿರ್ಮಾಣಕ್ಕೆ ಸಬ್ಸಿಡಿ ಪಡೆಯುವುದು ಹೇಗೆ?

ಪಹಣಿಯಲ್ಲಿ ದಾಖಲಾದ ಬೆಳೆ(Pahani Bele Mahiti)ಮಾಹಿತಿಯನ್ನು ರೈತರು ಮನೆಯಲ್ಲಿ ಕುಳಿತು ತಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು? ಒಂದೊಮ್ಮೆ ಆನ್ಲೈನ್ ನಲ್ಲಿ ಚೆಕ್ ಮಾಡಿದಾಗ ನಮೂದಿಸಿದ ಬೆಳೆ ಮಾಹಿತಿ ತಪ್ಪಾಗಿದ್ದರೆ ಇದನ್ನು ಸರಿಪಡಿಸಿಕೊಳ್ಳುವ ವಿಧಾನ ಹೇಗೆ ಎನ್ನುವ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

RTC Crop Name Importance-ಪಹಣಿಯಲ್ಲಿ ಬೆಳೆ ಮಾಹಿತಿ ಸರಿಯಾಗಿ ದಾಖಲಿಸುವುದು ಏಕೆ ಮುಖ್ಯ?

ರೈತರು ತಮ್ಮ ಹೆಸರಿನಲ್ಲಿರುವ ಕೃಷಿ ಜಮೀನಿನಲ್ಲಿ ಬೆಳೆದಿರುವ ಬೆಳೆ ಮಾಹಿತಿಯು ಸರಿಯಾಗಿ ದಾಖಲಿಸುವುದು ಏಕೆ? ಮುಖ್ಯ, ತಪ್ಪಿದಲ್ಲಿ ಯಾವೆಲ್ಲ ಸರಕಾರಿ ಯೋಜನೆಯ ಪ್ರಯೋಜನಗಳು ಕೈ ತಪ್ಪುತ್ತವೆ ಎನ್ನುವ ಮಾಹಿತಿ ಈ ಕೆಳಗಿನಂತಿವೆ.

1) ಬೆಂಬಲ ಬೆಲೆ ಯೋಜನೆಗಾಗಿ: ಬೆಂಬಲ ಬೆಲೆ ಯೋಜನೆಯಡಿ ರಾಗಿ ಸೇರಿದಂತೆ ಇನ್ನಿತರೆ ಎಲ್ಲಾ ಬೆಳೆಗಳನ್ನು ಮಾರಾಟ ಮಾಡಲು ಪಹಣಿಯಲ್ಲಿ ಸರಿಯಾದ ಬೆಳೆ ಮಾಹಿತಿ ದಾಖಲಾಗಿರುವುದು ಕಡ್ಡಾಯವಾಗಿ ತಪ್ಪಾದ ಬೆಳೆ ಮಾಹಿತಿ ದಾಖಲಾಗಿದ್ದರೆ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: Digital e-Stamp -ಛಾಪಾ ಕಾಗದ ವಹಿವಾಟಿಗೆ ಸ್ಟ್ಯಾಂಪ್ ಪೇಪರ್ ಬದಲಿಗೆ ಇ-ಸ್ಟ್ಯಾಂಪ್: ಸಚಿವ ಕೃಷ್ಣಬೈರೇಗೌಡ!

2) ಬೆಳೆ ವಿಮೆ ಪರಿಹಾರ ಪಡೆಯಲು: ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಮೆಕ್ಕೆಜೋಳಕ್ಕೆ ಬೆಳೆ ವಿಮೆ ಪಾವತಿ ಮಾಡಿ ಅರ್ಜಿ ಸಲ್ಲಿಸಿದ್ದರೆ ಬೆಳೆ ಸಮೀಕ್ಷೆಯ ಮೂಲಕ ಆ ಹಂಗಾಮಿನಲ್ಲಿ ಪಹಣಿಯಲ್ಲಿ ಮೆಕ್ಕೆಜೋಳ ಎಂದು ಬೆಳೆ ಮಾಹಿತಿ ದಾಖಲಾಗಿದ್ದರೆ ಮಾತ್ರ ಬೆಳೆ ವಿಮೆ ಪರಿಹಾರ ಜಮಾ ಅಗುತ್ತದೆ ತಪ್ಪಾದ ಬೆಳೆ ಮಾಹಿತಿ ದಾಖಲಾಗಿದ್ದರೆ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಜಮಾ ಅಗುವುದಿಲ್ಲ. ಇದಕ್ಕಾಗಿ ಪಹಣಿಯಲ್ಲಿ ಬೆಳೆ ಸಮೀಕ್ಷೆಯ ಮೂಲಕ ದಾಖಲಾಗುವ ಬೆಳೆ ಮಾಹಿತಿ ಅತೀ ಮುಖ್ಯವಾಗಿದೆ.

3) ವಿವಿಧ ಇಲಾಖೆಯ ಸಬ್ಸಿಡಿ ಯೋಜನೆಯ ಪ್ರಯೋಜನ ಪಡೆಯಲು: ಕೃಷಿ , ತೋಟಗಾರಿಕೆ, ರೇಷ್ಮೆ ಇಲಾಖೆಯಲ್ಲಿ ಲಭ್ಯವಿರುವ ಸಬ್ಸಿಡಿ ಆಧಾರಿತ ಯೋಜನೆಯ ಪ್ರಯೋಜನವನ್ನು ಪಡೆಯಲು ಪಹಣಿಯಲ್ಲಿ ಸರಿಯಾದ ಬೆಳೆ ಮಾಹಿತಿ ದಾಖಲಾಗಿರುವುದು ಕಡ್ಡಾಯ.

ಇದನ್ನೂ ಓದಿ: Free Drone Training-ಕ್ರಿಶ್ಚಿಯನ್ ನಿಗಮದಿಂದ ಉಚಿತ 15 ದಿನಗಳ ಡ್ರೋನ್ ತರಬೇತಿ!ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

RTC Crop Name Status-ಪಹಣಿಯಲ್ಲಿ ದಾಖಲಾದ ಮಾಹಿತಿಯನ್ನು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು?

ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು, ಬೇಸಿಗೆ ಹಂಗಾಮಿನಲ್ಲಿ ಕೃಷಿ ಮತ್ತು ಕಂದಾಯ ಇಲಾಖೆಯ ಮೂಲಕ ಬೆಳೆ ಸಮೀಕ್ಷೆಯನ್ನು ನಡೆಸುವ ಮೂಲಕ ಪಹಣಿಯಲ್ಲಿ ದಾಖಲಿಸಲಾದ ಬೆಳೆ ವಿವರ ಯಾವುದು ಎಂದು ರೈತರು ತಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ಈ ಕೆಳಗಿನ ಹಂತಗಳನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ "RTC Crop Name Status Check" ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಅಧಿಕೃತ "Bele Darshaka" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಇದಾದ ಬಳಿಕ ಇಲ್ಲಿ ಎರಡು ಆಯ್ಕೆಗಳು ತೋರಿಸುತ್ತದೆ ಸರ್ಕಾರಿ "ಸಿಬ್ಬಂದಿ/ಪ್ರೈವೇಟ್ ರೆಸಿಡೆಂಟ್ಸ್" ಮತ್ತು "ರೈತ" ಇಲ್ಲಿ ರೈತ ಎಂದು ಕ್ಲಿಕ್ ಮಾಡಿಕೊಂಡು ಮುಂದುವರೆಯಬೇಕು.

ಇದನ್ನೂ ಓದಿ: Ganga Kalyana Yojana-ಬೋರ್ವೆಲ್ ಕೊರೆಸಲು ₹4.0 ಲಕ್ಷ ಸಹಾಯಧನ! ಇಲ್ಲಿದೆ ಸಂಪೂರ್ಣ ವಿವರ!

bele darshak app

Step-3: ನಂತರ ಇಲ್ಲಿ ವರ್ಷ: "2025-25" ಋತು: "ಮುಂಗಾರು" ಎಂದು ಕ್ಲಿಕ್ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹಾಕಿ ವಿವರ ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಿ.

Step-4: ಅಗ ನಿಮ್ಮ ಹೋಬಳಿಯ ಸರ್ವೆ ನಂಬರ್ ವಿವರ ಲೋಡ್ ಅಗುತ್ತದೆ ನಂತರ ಹಿಸ್ಸಾ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ "ಸರ್ವೆ ನಂಬರ್ ನ ಹಿಸ್ಸಾ" ಮೇಲೆ ಕ್ಲಿಕ್ ಮಾಡಿಕೊಂಡು "ಮಾಲೀಕರ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ" ಆಯ್ಕೆಯೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರಿರುವ ಆಯ್ಕೆಯನ್ನು ಕ್ಲಿಕ್ ಮಾಡಿ "ಸಮೀಕ್ಷೆ ವಿವರಗಳನ್ನು ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಮೀಕ್ಷೆ ಮಾಡಿದ ಖಾಸಗಿ ವ್ಯಕ್ತಿಯ ಹೆಸರು ಮೊಬೈಲ್ ನಂಬರ್ ತೋರಿಸುತ್ತದೆ ಇದರೆ ಮೇಲೆ ಕ್ಲಿಕ್ ಮಾಡಿ "ಬೆಳೆ ವಿವರ ವೀಕ್ಷಿಸಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ "ಬೆಳೆ ವಿವರ" ಅಂದರೆ ಪಹಣಿಯಲ್ಲಿ ದಾಖಲಾದ ಬೆಳೆ ಮಾಹಿತಿ ಗೋಚರಿಸುತ್ತದೆ.

ಇದನ್ನೂ ಓದಿ: Online E-Khata-ಇನ್ಮುಂದೆ ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಬಹುದು!

Bele Darshaka App-ತಪ್ಪಾದ ಬೆಳೆ ಮಾಹಿತಿ ದಾಖಲಾಗಿದ್ದರೆ ಸರಿಪಡಿಸಿಕೊಳ್ಳವುದು ಹೇಗೆ?

ರೈತರು ಈ ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಜಮೀನಿನ ಪಹಣಿಯಲ್ಲಿ ದಾಖಲಾದ ಬೆಳೆ ಮಾಹಿತಿಯನ್ನು ಚೆಕ್ ಮಾಡಿದಾಗ ಈ ಮಾಹಿತಿಯು ತಪ್ಪಾಗಿದ್ದರೆ ಇದನ್ನು ರೈತರು ಸರಿಪಡಿಸಿಕೊಂಡು ಸರಿಯಾದ ಬೆಳೆ ಮಾಹಿತಿಯನ್ನು ದಾಖಲಿಸಲು ಯಾವ ಕ್ರಮ ಅನುಸರಿಸಬೇಕು ಎನ್ನುವ ವಿವರ ಈ ಕೆಳಗಿನಂತಿದೆ:

Step-1: ಬೆಳೆ ದರ್ಶಕ ಮೊಬೈಲ್ ಅಪ್ಲಿಕೇಶನ್ ನಲ್ಲಿ ಬೆಳೆ ಮಾಹಿತಿಯನ್ನು ಚೆಕ್ ಮಾಡಿದಾಗ ತಪ್ಪಾದ ಬೆಳೆ ಮಾಹಿತಿ ದಾಖಲಾಗಿದ್ದರೆ "ಬೆಳೆ ವಿವರ" ಕೊನೆಯಲ್ಲಿ "ಆಕ್ಷೇಪಣೆ ಇದೆ" ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಆಕ್ಷೇಪಣೆ ಸಲ್ಲಿಸಬಹುದು.

ಇದನ್ನೂ ಓದಿ: Tata Capital Scholarship-ಟಾಟಾ ಕ್ಯಾಪಿಟಲ್ ವತಿಯಿಂದ 18,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ವಿವರ!

Step-2: ಜಮೀನಲ್ಲಿ ಬೆಳೆದಿರುವ ಬೆಳೆಗೂ ಮತ್ತು ಸಮೀಕ್ಷೆಯಲ್ಲಿ ದಾಖಲಿಸಿದ ಬೆಳೆ ವಿವರಕ್ಕೂ ತಾಳೆ ಅಗದಿದ್ದರೆ ಬೆಳೆ ದರ್ಶಕ ಮೊಬೈಲ್ ಅಪ್ಲಿಕೇಶನ್ ಮೂಲಕ ಆಕ್ಷೇಪಣೆ ಸಲ್ಲಿಸಿದ ಬಳಿಕ ಈ ಅರ್ಜಿಯು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಲಾಗಿನ್ ಹೋಗುತ್ತದೆ ಇದನ್ನೊ ಪರೀಶಿಲಿಸಿ ನಿಮ್ಮ ಜಮೀನಿನ ಮರು ಸಮೀಕ್ಷೆಗೆ ಖಾಸಗಿ ನಿವಾಸಿಗಳನ್ನು ಮತ್ತೊಮ್ಮೆ ಕಳುಹಿಸಲಾಗುತ್ತದೆ.

Step-3: ಮರು ಸಮೀಕ್ಷೆಯನ್ನು ಪುನಃ ಅಂದರೆ ಖಾಸಗಿ ನಿವಾಸಿಗಳು ಪುನಃ ನಿಮ್ಮ ಜಮೀನನ್ನು ಭೇಟಿ ಮಾಡಿ ಮತ್ತೊಮ್ಮೆ ಜಿಪಿಎಸ್ ಆಧಾರಿತ ಬೆಳೆ ಪೋಟೋ ವನ್ನು ತೆಗೆದು ಸರಿಯಾದ ಬೆಳೆ ಮಾಹಿತಿಯನ್ನು ದಾಖಲಿಸುತ್ತಾರೆ, ಇದರ ಕುರಿತು ಇನ್ನು ಹೆಚ್ಚಿನ ಮಾಹಿಯನ್ನು ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: