- Advertisment -
HomeAgricultureSprinkler Set Subsidy-ಕೃಷಿ ಇಲಾಖೆಯಿಂದ ಶೇ 90% ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

Sprinkler Set Subsidy-ಕೃಷಿ ಇಲಾಖೆಯಿಂದ ಶೇ 90% ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

Last updated on December 20th, 2024 at 11:17 am

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ಸೂಕ್ಷ್ಮ ನೀರಾವರಿ ಯೋಜನೆಯಡಿ ಶೇ 90% ಸಬ್ಸಿಡಿ ಸ್ಪಿಂಕ್ಲರ್ ಸೆಟ್ ಅನ್ನು ಪಡೆಯಲು ಅರ್ಹ ರೈತರಿಂದ ಅರ್ಜಿಯನ್ನು(Karnataka Agriculture News) ಆಹ್ವಾನಿಸಲಾಗಿದೆ. ಅರ್ಹ ರೈತರು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕದಡಿಯಲ್ಲಿ ಜೆಟ್ ಪೈಪು ಮತ್ತು ಸ್ಪಿಂಕ್ಲರ್ ಪೈಪ್ ಅನ್ನು ಪಡೆಯಲು ರಾಜ್ಯದ ಎಲ್ಲಾ ಜಿಲ್ಲೆಗಳ ಕೃಷಿ ಇಲಾಖೆ(Karnataka Agriculture Department) ಕಚೇರಿಯಲ್ಲಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೂ ಶೇ 90% ಸಹಾಯಧನ ಪಡೆಯಲು ಅವಕಾಶವಿದ್ದು, ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: KMF Milk Subsidy-ಹಾಲಿನ ಪ್ರೋತ್ಸಾಹಧನ ಬಿಡುಗಡೆ! ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಚೆಕ್ ಮಾಡಿ?

Who can apply for Sprinkler Set Yojana-ಅರ್ಜಿ ಸಲ್ಲಿಸಲು ಅರ್ಹರು:

ಈ ಯೋಜನೆಯಡಿ ಪ್ರಯೋಜನ ಪಡೆಯಲು ಅರ್ಜಿದಾರರ ಹೆಸರಿನಲ್ಲಿ ಕೃಷಿ ಜಮೀನನ್ನು ಹೊಂದಿರಬೇಕು.

ಅರ್ಜಿದಾರರು ಸಣ್ಣ ಮತ್ತು ಅತೀ ಸಣ್ಣ ರೈತರ ವರ್ಗದಲ್ಲಿ ಇರಬೇಕು.

ಕಳೆದ 7 ವರ್ಷದಲ್ಲಿ ಈ ಯೋಜನೆಯಡಿ ಸಹಾಯಧನ ಪಡೆದಿರಬಾರದು.

RSK

Last date-ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ:

ಕೃಷಿ ಇಲಾಖೆಯಿಂದ ಮೊದಲು ಸಲ್ಲಿಸಿದ ಅರ್ಹ ಫಲಾನುಭವಿ ರೈತರಿಗೆ ಅನುದಾನ ಲಭ್ಯತೆ ಆಧಾರದ ಮೇಲೆ ಸ್ಪಿಂಕ್ಲರ್ ಸೆಟ್ ಗಳನ್ನು ನೀಡಲಾಗುತ್ತದೆ ಪ್ರಸ್ತುತ ಯಾವುದೇ ಕೊನೆಯ ದಿನಾಂಕ ಎಂದು ನಿಗದಿಪಡಿಸಿರುವುದಿಲ್ಲ ಸಾಮಾನ್ಯವಾಗಿ ಡಿಸೆಂಬರ್ ತಿಂಗಳ ಒಳಗಾಗಿ ಈ ಯೋಜನೆಯಡಿ ಅರ್ಜಿ ಸಲ್ಲಿಸಿದರೆ ಉತ್ತಮ.

ಇದನ್ನೂ ಓದಿ: Sheep farming loan Subsidy-ಕುರಿ ಸಾಕಾಣಿಕೆ ಆರಂಭಿಸಲು ಶೇ 50% ರಷ್ಟು ಸಬ್ಸಿಡಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Sprinkler Set Scheme application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಆಸಕ್ತ ಅರ್ಹ ರೈತರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ನಮೂನೆಯನ್ನು ಪಡೆದು ಅರ್ಜಿ ಸಲ್ಲಿಸಬೇಕು.

Documents for Sprinkler Set Scheme-ಅರ್ಜಿ ಸಲ್ಲಿಸಲು ದಾಖಲೆಗಳು:

ಅರ್ಜಿದಾರರ ಆಧಾರ್ ಕಾರ್ಡ
ಜಮೀನಿನ ಪಹಣಿ/RTC
ಬ್ಯಾಂಕ್ ಪಾಸ್ ಬುಕ್ ಪ್ರತಿ
ಅರ್ಜಿದಾರರ ಪೋಟೊ
ಹಿಡುವಳಿ ಪ್ರಮಾಣ ಪತ್ರ
ಬಾವಿ/ಕೊಳವೆ ಬಾವಿ ಪ್ರಮಾಣ ಪತ್ರ
ಮೊಬೈಲ್ ನಂಬರ್

ಇದನ್ನೂ ಓದಿ: Best Insurance Plan-2024: ಸಾರ್ವಜನಿಕರಿಗೆ ಭರ್ಜರಿ ಆಫರ್! ಕೇವಲ ₹599ರೂಗೆ ₹5 ಲಕ್ಷ ವಿಮೆ ಪಡೆಯಲು ಅರ್ಜಿ!

karnataka agriculture department

Apply Method-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ:

ಕೃಷಿ ಇಲಾಖೆಯ ಕೆ-ಕಿಸಾನ್ ತಂತ್ರಾಂಶವನ್ನು ರೈತರು ತಮ್ಮ ಮೊಬೈಲ್ ಮೂಲಕ ಭೇಟಿ ಮಾಡಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Online application link-ಅರ್ಜಿ ಸಲ್ಲಿಸಲು ಲಿಂಕ್- Apply Now

ಇನ್ನು ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ವೆಬ್ಸೈಟ್- Karnataka Agriculture Department Website

ಇದನ್ನೂ ಓದಿ: Snake bite-ಹಾವು ಕಚ್ಚಿದಾಗ ಯಾವ ಕ್ರಮ ಅನುಸರಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ!

- Advertisment -
LATEST ARTICLES

Related Articles

- Advertisment -

Most Popular

- Advertisment -