SSP Scholarship-ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಅರ್ಜಿ ಸಲ್ಲಿಸುವ ಗಡುವು ವಿಸ್ತರಣೆ!

February 4, 2026 | Siddesh
SSP Scholarship-ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಅರ್ಜಿ ಸಲ್ಲಿಸುವ ಗಡುವು ವಿಸ್ತರಣೆ!
Share Now:

ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ (SSP Scholarship) ಮೂಲಕ ವಿವಿಧ ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಲು ಮತ್ತು ಮಾಹಿತಿ ಪರಿಷ್ಕರಣೆ ಮಾಡಲು ನೀಡಲಾಗಿದ್ದ ಕಾಲಾವಕಾಶವನ್ನು ರಾಜ್ಯ ಸರ್ಕಾರವು ವಿಸ್ತರಿಸಿದೆ. ತಾಂತ್ರಿಕ ಕಾರಣಗಳು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ರಾಜ್ಯ ಸರಕಾರದಿಂದ ಎಲ್ಲಾ ಯೋಜನೆಯ ಮತ್ತು ಇಲಾಖೆಯ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಉತೇಜನವನ್ನು ನೀಡಲು ವಿದ್ಯಾರ್ಥಿವೇತನವನ್ನು(SSP Scholarship Application) ಒದಗಿಸಲು ಏಕರೂಪ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ(SSP Portal) ಅಭಿವೃದ್ದಿಪಡಿಸಿರುವ ಅರ್ಹತಾ ವಿದ್ಯಾರ್ಥಿಗಳು ಎಲ್ಲಾ ಬಗ್ಗೆಯ ವಿದ್ಯಾರ್ಥಿವೇತನಕ್ಕೆ ಈ ತಂತ್ರಾಂಶದ ಮೂಲವೇ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: Labour Pension Scheme-ಲೇಬರ್ ಕಾರ್ಡದಾರರಿಗೆ ತಿಂಗಳಿಗೆ ₹3,000 ಪಿಂಚಣಿ ಹಣ! ಪಡೆಯುವುದು ಹೇಗೆ!

ಇಂದಿನ ಅಂಕಣದಲ್ಲಿ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮೂಲಕ ತಮ್ಮ ಮೊಬೈಲ್ ನಲ್ಲೇ ವಿದ್ಯಾರ್ಥಿವೇತನಕ್ಕೆ(Scholarship Scheme In Karnataka) ಅರ್ಜಿ ಸಲ್ಲಿಸುವುವುದು ಹೇಗೆ? ಹಾಗೂ ತಂತ್ರಾಂಶದಲ್ಲಿ ಮಾಹಿತಿ ಪರಿಷ್ಕರಣೆ ಮಾಡಲು ಕೊನೆಯ ದಿನಾಂಕ ಎಲ್ಲಿಯವರೆಗೆ ವಿಸ್ತರಣೆ ಮಾಡಲಾಗಿದೆ? ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು? ಯಾರೆಲ್ಲ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Scholarship Application Last Date-ಫೆಬ್ರವರಿ 7, 2026 ರವರೆಗೆ ವಿಸ್ತರಣೆ:

ಈ ಹಿಂದೆ ಮಾಹಿತಿ ಸಲ್ಲಿಕೆಗೆ ಜನವರಿ 30 ಕೊನೆಯ ದಿನಾಂಕವಾಗಿತ್ತು. ಆದರೆ, ರಾಜ್ಯದ ಸುಮಾರು 60 ಸಾವಿರಕ್ಕೂ ಹೆಚ್ಚು ಹಿಂದುಳಿದ ವರ್ಗಗಳ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿಳಂಬವಾಗುತ್ತಿತ್ತು. ಈ ಸಮಸ್ಯೆಯನ್ನು ಮನಗಂಡು, ಈಗ ಅರ್ಜಿಯ ಗಡುವನ್ನು ಫೆಬ್ರವರಿ 7, 2026 ರವರೆಗೆ ವಿಸ್ತರಿಸಲಾಗಿದೆ ಎಂದು ಎಸ್‌ಎಸ್‌ಪಿ ಕಾರ್ಯಕ್ರಮದ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Lakhpati Didi-ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗಿಫ್ಟ್! ಏನಿದು ಲಖ್ ಪತಿ ದೀದಿ ಮತ್ತು ಶಿ-ಮಾರ್ಟ್ ಯೋಜನೆ?

Online Scholarship Application-ಎಸ್‌ಎಸ್‌ಪಿ (SSP) ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಿರುವ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಈ ಕೆಳಗಿನ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಸೆಂಟರ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಅರ್ಜಿದಾರ ವಿದ್ಯಾರ್ಥಿಗಳು ಮೊದಲ ಹಂತದಲ್ಲಿ ಈ Online SSP Scholarship Application ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ(SSP) ವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: PM Kisan Tractor Yojana-ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ 50% ಸಬ್ಸಿಡಿ! ಅರ್ಜಿ ಸಲ್ಲಿಸುವುದು ಹೇಗೆ?

Scholarship

ಇದನ್ನೂ ಓದಿ: LIC Policy Status-ಮೊಬೈಲ್ ನಲ್ಲೇ ಎಲ್ಐಸಿ ಪಾಲಿಸಿ ಸ್ಟೇಟಸ್ ಚೆಕ್ ಮಾಡಲು ಲಿಂಕ್ ಬಿಡುಗಡೆ!

Step-2: ಇದಾದ ಬಳಿಕ ಈ ವೆಬ್ಸೈಟ್ ಗೆ ಮೊದಲ ಬಾರಿಗೆ ಭೇಟಿ ಮಾಡುತ್ತಿರುವ ವಿದ್ಯಾರ್ಥಿಗಳು "ಹೊಸ ಖಾತೆ ಸೃಜಿಸಲು ಇಲ್ಲಿ ಕ್ಲಿಕ್ ಮಾಡಿ" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ 12 ಅಂಕಿಯ ಆಧಾರ್ ಕಾರ್ಡ ನಂಬರ್ ಅನ್ನು ನಮೂದಿಸಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳಿ.

Step-3: ಇದಾದ ನಂತರ ನಿಮ್ಮ ಬಳಕೆದಾರರ ಐಡಿ (User ID) ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ.

Step-4: ಲಾಗಿನ್ ಅದ ನಂತರ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ವಿದ್ಯಾರ್ಥಿಯ ವೈಯಕ್ತಿಕ ವಿವರ, ಜಾತಿ ಮತ್ತು ಆದಾಯ ಪ್ರಮಾಣಪತ್ರದ ಸಂಖ್ಯೆ, ಬ್ಯಾಂಕ್ ಖಾತೆಯ ವಿವರ ಹಾಗೂ ಶೈಕ್ಷಣಿಕ ವಿವರ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ. ನೀವು ಭರ್ತಿ ಮಾದಿದ ಎಲ್ಲಾ ವಿವರಗಳನ್ನು ಮರುಪರಿಶೀಲಿಸಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Fodder Seed Kit-ಕೃಷಿಕರಿಗೆ ಉಚಿತ ಮೇವಿನ ಬೀಜದ ಕಿಟ್ ವಿತರಣೆ! ಅರ್ಜಿ ಸಲ್ಲಿಸುವುದು ಹೇಗೆ?

SSP Scholarship Eligibility Criteria-ಅರ್ಹತಾ ಮಾನದಂಡಗಳು ಮತ್ತು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗೆ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು:

ಅರ್ಜಿದಾರ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

ವಿದ್ಯಾರ್ಥಿವೇತನವನ್ನು ಪಡೆಯಲು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಎಲ್ಲಾ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಕುಟುಂಬದ ವಾರ್ಷಿಕ ಆದಾಯವು ಆಯಾ ಇಲಾಖೆಗಳು ನಿಗದಿಪಡಿಸಿದ ಮಿತಿಯ ಒಳಗಿರಬೇಕು (ಸಾಮಾನ್ಯವಾಗಿ ₹2.5 ಲಕ್ಷದಿಂದ ₹6 ಲಕ್ಷದವರೆಗೆ, ವರ್ಗಕ್ಕೆ ಅನುಗುಣವಾಗಿ ಬದಲಾಗುತ್ತದೆ).

ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ (Post-Matric) ಕೋರ್ಸ್‌ಗಳಾದ ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಅಥವಾ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ಇದನ್ನೂ ಓದಿ: Fellowship Application-ಸಿಇಟಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕೆ ಅರ್ಜಿ!

Scholarship Amount-ಎಷ್ಟು ವಿದ್ಯಾರ್ಥಿವೇತನ ನೀಡಲಾಗುತ್ತದೆ?

ವಿದ್ಯಾರ್ಥಿವೇತನದ ಮೊತ್ತವು ವಿದ್ಯಾರ್ಥಿಯು ಓದುತ್ತಿರುವ ಕೋರ್ಸ್ ಮತ್ತು ವರ್ಗದ ಮೇಲೆ ಅವಲಂಬಿತವಾಗಿರುತ್ತದೆ.

ಶುಲ್ಕ ಮರುಪಾವತಿ: ಕಾಲೇಜು ಶುಲ್ಕದ ಸಂಪೂರ್ಣ ಅಥವಾ ಭಾಗಶಃ ಮೊತ್ತವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ನಿರ್ವಹಣಾ ಭತ್ಯೆ (Maintenance Allowance): ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸಿಕವಾಗಿ ಅಥವಾ ವಾರ್ಷಿಕವಾಗಿ ನಿಗದಿತ ಮೊತ್ತವನ್ನು ನೀಡಲಾಗುತ್ತದೆ. ಇದು ವಾರ್ಷಿಕ ₹2,000 ರಿಂದ ₹25,000 ಕ್ಕೂ ಹೆಚ್ಚು ಇರಬಹುದು (ಕೋರ್ಸ್ ಆಧಾರದ ಮೇಲೆ).

For More Infomation-ಇನ್ನು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ- 1902

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: