Sub Registrar Office-ಸಾರ್ವಜನಿಕ ಪ್ರಕಟಣೆ ಇನ್ಮುಂದೆ ಈ ದಿನವು ಸಹ ಸಬ್ ರಿಜಿಸ್ಟ್ರಾರ್ ತೆರೆದಿರುತ್ತದೆ!

May 28, 2025 | Siddesh
Sub Registrar Office-ಸಾರ್ವಜನಿಕ ಪ್ರಕಟಣೆ ಇನ್ಮುಂದೆ ಈ ದಿನವು ಸಹ ಸಬ್ ರಿಜಿಸ್ಟ್ರಾರ್ ತೆರೆದಿರುತ್ತದೆ!
Share Now:

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಸಬ್ ರಿಜಿಸ್ಟ್ರಾರ್(Registrar Office) ಕಚೇರಿ ಕೆಲಸದ ದಿನದ ಕುರಿತಂತೆ ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿ ಅಧಿಕೃತ ಆದೇಶವನ್ನು ಹೊರಡಿಸಲಾಗಿದ್ದು ಇದರ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಸಬ್ ರಿಜಿಸ್ಟ್ರಾರ್(Sub Registrar Office Karnataka) ಕಚೇರಿ ಕಾರ್ಯನಿರ್ವಹಣೆಯ ಕುರಿತು ನೂತನ ಆದೇಶದಲ್ಲಿ ಯಾವೆಲ್ಲ ಬದಲಾವಣೆ ಮಾಡಲಾಗಿದೆ? ಆದೇಶದಲ್ಲಿ ಯಾವೆಲ್ಲ ವಿಷಯಗಳ ಕುರಿತು ಉಲ್ಲೇಖಿಸಲಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Bus Pass Application- ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ!

ಆಸ್ತಿ ನೋಂದಣಿಗೆ ಸಂಬಂಧಪಟ್ಟ ಅರ್ಜಿಗಳನ್ನು ತ್ವರಿತವಾಗಿ ನೋಂದಣಿಯನ್ನು(Registrar Office Timing) ಮಾಡಿಕೊಳ್ಳಲು ನೆರವಾಗಲು ಹಾಗೂ ಜನದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಮಹತ್ವದ ಹೆಜ್ಜೆಯನ್ನು ಇಡಲಾಗಿದ್ದು ಈ ಕ್ರಮದಿಂದ ಇನ್ನುಂದೆ ರಜಾ ದಿನವು ಸಹ ಸಾರ್ವಜನಿಕರು ತಮ್ಮ ಆಸ್ತಿಯನ್ನು ನೋಂದಣಿ ಮಾಡಿಕೊಳ್ಳಲು ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಭೇಟಿ ಮಾಡಬಹುದಾಗಿದೆ.

Registrar Office Timing-ಇನ್ಮುಂದೆ ರಜಾ ದಿನವು ಸಹ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆದಿರುತ್ತದೆ:

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ನೂತನವಾಗಿ ಹೊರಡಿಸಿರುವ ಆದೇಶದ ಪ್ರಕಾರ ಇನ್ನು ಮುಂದಿನ ದಿನಗಳಲ್ಲಿ ಅಂದರೆ ಇದೆ 01 ಜೂನ್ 2025 ರಿಂದ 2ನೇ ಶನಿವಾರ,4ನೇ ಶನಿವಾರ ಮತ್ತು ಭಾನುವಾರಗಳ ರಜಾದಿನಗಳಂದು ಸಹ ರಾಜ್ಯದಲ್ಲಿ ಜಿಲ್ಲೆಗೆ ಒಂದು ಉಪನೋಂದಣಾಧಿಕಾರಿಗಳ ಕಚೇರಿಯು ತೆರೆದಿರುವಂತೆ ಅಧಿಕೃತವಾಗಿ ಆದೇಶವನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: Diesel Pump Subsidy-ಶೇ 90% ಸಬ್ಸಿಡಿಯಲ್ಲಿ ಡಿಸೇಲ್ ಪಂಪ್ ಪಡೆಯಲು ಅರ್ಜಿ!

Sub Registrar

Sub Registrar Office New Rules-ಪ್ರಮುಖ ಬದಲಾವಣೆಗಳು:

ಜಿಲ್ಲೆಗೆ ಒಂದರಂತೆ ರಜಾ ದಿನವು ಸಹ ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.

ನೂತನ ಆದೇಶದನ್ವಯ 2ನೇ ಶನಿವಾರ,4ನೇ ಶನಿವಾರ ಮತ್ತು ಭಾನುವಾರ ಸರ್ಕಾರಿ ರಜಾ ದಿನವು ಸಹ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆದಿರುತ್ತದೆ.

ಈ ನೂತನ ಕೆಲಸದ ನಿಯಮವು ದಿನಾಂಕ 01 ಜೂನ್ 2025 ರಿಂದ ದಿನಾಂಕ 28 ಡಿಸೆಂಬರ್ 2025 ರವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Guest Teacher-ಸರ್ಕಾರದಿಂದ 51,000 ಅತಿಥಿ ಶಿಕ್ಷಕರ ನೇಮಕಕ್ಕೆ ಅಧಿಕೃತ ಆದೇಶ ಪ್ರಕಟ!

Karnataka Sub Registrar Office List-ರಜಾ ದಿನ ತೆರೆದಿರುವ ಜಿಲ್ಲಾವಾರು ಸಬ್ ರಿಜಿಸ್ಟ್ರಾರ್ ಕಚೇರಿ ಪಟ್ಟಿ ಹೀಗಿದೆ:

ರಾಜ್ಯದಲ್ಲಿ ಸರ್ಕಾರಿ ರಜಾ ದಿನದಂದು(2ನೇ ಶನಿವಾರ,4ನೇ ಶನಿವಾರ ಮತ್ತು ಭಾನುವಾರ) ಸಹ ಜಿಲ್ಲಾವಾರು ಯಾವೆಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳು ತೆರೆದಿರುತ್ತವೆ ಎನ್ನುವ ಜಿಲ್ಲಾವಾರು ಕಚೇರಿಗಳ ಪಟ್ಟಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

  • ಬಸವನಗುಡಿ ಉಪನೋಂದಣಾಧಿಕಾರಿಗಳ ಕಚೇರಿ,
  • ಗಾಂಧಿನಗರ ಉಪನೋಂದಣಾಧಿಕಾರಿಗಳ ಕಚೇರಿ,
  • ಜಯನಗರ ಉಪನೋಂದಣಾಧಿಕಾರಿಗಳ ಕಚೇರಿ,
  • ರಾಜಾಜಿನಗರದ ಮಾದನಾಯಕನಹಳ್ಳಿ ಉಪನೋಂದಣಾಧಿಕಾರಿಗಳ ಕಚೇರಿ,
  • ಶಿವಾಜಿನಗರ ಉಪನೋಂದಣಾಧಿಕಾರಿಗಳ ಕಚೇರಿ,
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಉಪನೋಂದಣಾಧಿಕಾರಿಗಳ ಕಚೇರಿ,
  • ಚಿತ್ರದುರ್ಗ ಉಪನೋಂದಣಾಧಿಕಾರಿಗಳ ಕಚೇರಿ,
  • ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಉಪನೋಂದಣಾಧಿಕಾರಿಗಳ ಕಚೇರಿ,
  • ದಾವಣಗೆರೆ ಉಪನೋಂದಣಾಧಿಕಾರಿಗಳ ಕಚೇರಿ, ರಾಮನಗರ ಉಪನೋಂದಣಾಧಿಕಾರಿಗಳ ಕಚೇರಿ,
  • ಶಿವಮೊಗ್ಗ ಉಪನೋಂದಣಾಧಿಕಾರಿಗಳ ಕಚೇರಿ,
  • ತುಮಕೂರು ಜಿಲ್ಲೆಯ ಕುಣಿಗಲ್ ಉಪನೋಂದಣಾಧಿಕಾರಿಗಳ ಕಚೇರಿ,

ಇದನ್ನೂ ಓದಿ: Vidyadhan Scholorship-SSLC ಪಾಸಾದ ವಿದ್ಯಾರ್ಥಿಗಳಿಗೆ ರೂ 75,000/- ರವರೆಗೆ ಶಿಷ್ಯವೇತನ ಪಡೆಯಲು ಅರ್ಜಿ!

  • ಕೋಲಾರ ಉಪನೋಂದಣಾಧಿಕಾರಿಗಳ ಕಚೇರಿ,
  • ಬೆಳಗಾವಿ ಜಿಲ್ಲೆಯ ಮೂಡಲಗಿ ಉಪನೋಂದಣಾಧಿಕಾರಿಗಳ ಕಚೇರಿ,
  • ಬಾಗಲಕೋಟೆ ಜಿಲ್ಲೆಯ ಇಳಕಲ್ ಉಪನೋಂದಣಾಧಿಕಾರಿಗಳ ಕಚೇರಿ,
  • ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಉತ್ತರ ಉಪನೋಂದಣಾಧಿಕಾರಿಗಳ ಕಚೇರಿ,
  • ಗದಗ್ ಜಿಲ್ಲೆಯ ಗಜೇಂದ್ರಗಢ ಉಪನೋಂದಣಾಧಿಕಾರಿಗಳ ಕಚೇರಿ,
  • ಕಾರವಾರ/ ಉತ್ತರಕನ್ನಡದ ಕುಮಟಾ ಉಪನೋಂದಣಾಧಿಕಾರಿಗಳ ಕಚೇರಿ,
  • ಹಾವೇರಿ ಉಪನೋಂದಣಾಧಿಕಾರಿಗಳ ಕಚೇರಿ,
  • ವಿಜಯಪುರ ಉಪನೋಂದಣಾಧಿಕಾರಿಗಳ ಕಚೇರಿ,
  • ಚಾಮರಾಜನಗರ ಜಿಲ್ಲೆಯ ಕುದೇರು ಉಪನೋಂದಣಾಧಿಕಾರಿಗಳ ಕಚೇರಿ,
  • ಹಾಸನ ಜಿಲ್ಲೆಯ ಸಕಲೇಶಪುರ ಉಪನೋಂದಣಾಧಿಕಾರಿಗಳ ಕಚೇರಿ,
  • ಕೊಡಗು ಜಿಲ್ಲೆಯ ಮಡಿಕೇರಿ ಉಪನೋಂದಣಾಧಿಕಾರಿಗಳ ಕಚೇರಿ,

ಇದನ್ನೂ ಓದಿ: PM Kisan-2025: ಪಿ ಎಂ ಕಿಸಾನ್ ಯೋಜನೆಯಡಿ ಮೇ 31 ರವರೆಗೆ ವಿಶೇಷ ಅಭಿಯಾನ!

  • ಚಿಕ್ಕಮಗಳೂರು ಉಪನೋಂದಣಾಧಿಕಾರಿಗಳ ಕಚೇರಿ,
  • ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಸಿಟಿ ಉಪನೋಂದಣಾಧಿಕಾರಿಗಳ ಕಚೇರಿ,
  • ಮಂಡ್ಯ ಜಿಲ್ಲೆಯ ಮಳವಳ್ಳಿ ಉಪನೋಂದಣಾಧಿಕಾರಿಗಳ ಕಚೇರಿ,
  • ಮೈಸೂರು ಜಿಲ್ಲೆಯ ಮೈಸೂರು ದಕ್ಷಿಣ ಉಪನೋಂದಣಾಧಿಕಾರಿಗಳ ಕಚೇರಿ,
  • ಉಡುಪಿ ಉಪನೋಂದಣಾಧಿಕಾರಿಗಳ ಕಚೇರಿ,
  • ಕೊಪ್ಪಳ ಜಿಲ್ಲೆಯ ಗಂಗಾವತಿ ಉಪನೋಂದಣಾಧಿಕಾರಿಗಳ ಕಚೇರಿ,
  • ಬೀದರ್‍ ಉಪನೋಂದಣಾಧಿಕಾರಿಗಳ ಕಚೇರಿ,
  • ಗುಲ್ಬರ್ಗಾ ಉಪನೋಂದಣಾಧಿಕಾರಿಗಳ ಕಚೇರಿ,
  • ರಾಯಚೂರು ಉಪನೋಂದಣಾಧಿಕಾರಿಗಳ ಕಚೇರಿ,
  • ಯಾದಗಿರಿ ಉಪನೋಂದಣಾಧಿಕಾರಿಗಳ ಕಚೇರಿ,
  • ಬಳ್ಳಾರಿ ಉಪನೋಂದಣಾಧಿಕಾರಿಗಳ ಕಚೇರಿ
  • ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಉಪನೋಂದಣಾಧಿಕಾರಿಗಳ ಕಚೇರಿಗಳು ಕಾರ್ಯನಿರ್ವಹಿಸಲಿವೆ.

ಸಾರ್ವಜನಿಕರು ಸಂಬಂಧಪಟ್ಟ ಜಿಲ್ಲೆಯ ಯಾವುದೇ ಸ್ವತ್ತುಗಳನ್ನು ಆ ಸಂಬಂಧಿಸಿದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡೆದುಕೊಳ್ಳಬೇಕು ಎಂದು ನೋಂದಣಿ ಮಹಾವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Bele Parihara-38.5 ಲಕ್ಷ ರೈತರ ಖಾತೆಗೆ 3535 ಕೋಟಿ ಬೆಳೆ ಹಾನಿ ಪರಿಹಾರ!

Anywhere Registration-ಜಿಲ್ಲೆಯ ವ್ಯಾಪ್ತಿಯ ಆಸ್ತಿ ನೋಂದಣಿಗೆ ಅವಕಾಶ:

ಆಯಾ ತಾಲ್ಲೂಕಿನ ಆಸ್ತಿಯನ್ನು ಆಯಾ ಉಪನೋಂದಣಾಧಿಕಾರಿಗಳ ಕಚೇರಿಯಲ್ಲೇ ನೋಂದಣಿಯನ್ನು ಮಾಡಿಸಿಕೊಳ್ಳಬೇಕು ಎಂದು ಈ ಹಿಂದೆ ಇದ್ದ ನಿಯಮಕ್ಕೆ ಸಡಿಲಿಕೆಯನ್ನು ನೀಡಲಾಗಿದ್ದು "ಎನಿವೇರ್ ನೋಂದಣಿ ಯೋಜನೆಯನ್ನು" ಪ್ರಸ್ತುತ ಜಾರಿಗೆ ತರಲಾಗಿದ್ದು ಸಾರ್ವಜನಿಕರು ಒಂದು ಜಿಲ್ಲೆಯ ವ್ಯಾಪ್ತಿಯ ಆಸ್ತಿಯನ್ನು ಯಾವುದೇ ಆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಯಾವುದೇ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಆನ್ಲೈನ್ ಮೂಲಕ ನೋಂದಣಿಯನ್ನು ಮಾಡಿಸಿಕೊಳ್ಳಲು ಅವಕಾಶವಿರುತ್ತದೆ.

For More Details-ಹೆಚ್ಚಿನ ಮಾಹಿತಿ ಪಡೆಯಲು ಉಪಯುಕ್ತ ಲಿಂಕ್-

Registrar Office Websiite-ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕೃತ ವೆಬ್ಸೈಟ್-Click Here
Helpline-ಸಹಾಯವಾಣಿ-1902

Sub Registrar Office Address-ಜಿಲ್ಲಾವಾರು ಸಬ್ ರಿಜಿಸ್ಟ್ರಾರ್ ಕಚೇರಿ ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳು-Click Here

WhatsApp Group Join Now
Telegram Group Join Now
Share Now: