Subsidy Seeds Rate list-ಕೃಷಿ ಇಲಾಖೆಯಿಂದ ಬಿತ್ತನೆ ಬೀಜದ ದರ ಪಟ್ಟಿ ಬಿಡುಗಡೆ!

May 22, 2025 | Siddesh
Subsidy Seeds Rate list-ಕೃಷಿ ಇಲಾಖೆಯಿಂದ ಬಿತ್ತನೆ ಬೀಜದ ದರ ಪಟ್ಟಿ ಬಿಡುಗಡೆ!
Share Now:

ಕೃಷಿ ಇಲಾಖೆಯಿಂದ(Karnatka Agriculture Department) 2025-25 ನೇ ಸಾಲಿನ ಮುಂಗಾರು ಹಂಗಾಮಿಗೆ ರೈತರಿಗೆ ಸಬ್ಸಿಡಿಯಲ್ಲಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲು ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು ಇಲಾಖೆಯಿಂದ ಅಧಿಕೃತವಾಗಿ ಬಿತ್ತನೆ ಬೀಜದ ದರಪಟ್ಟಿಯನ್ನು ಪ್ರಕಟಿಸಲಾಗಿದೆ.

ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜನವನ್ನು ಖರೀದಿ(Subsidy Seeds Rate List) ಮಾಡಲು ಆಸಕ್ತಿಯನ್ನು ಹೊಂದಿರುವ ರೈತರಿಗೆ ನೆರವಾಗಲು ಅಧಿಕೃತ ಬಿತ್ತನೆ ಬೀಜದ ಸಬ್ಸಿಡಿ ಮತ್ತು ದರ ಪಟ್ಟಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Bele Vime- 81.36 ಕೋಟಿ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಬಿಡುಗಡೆ!

ಈ ಲೇಖನದಲ್ಲಿ ರೈತರು ಸಬ್ಸಿಡಿಯಲ್ಲಿ ಬಿತ್ತನೆ ಬೀಜವನ್ನು(Krishi Ilake) ಪಡೆಯುವುದು ಹೇಗೆ? ಇದಕ್ಕೆ ಅಗತ್ಯ ದಾಖಲಾತಿಗಳೇನು? ಅಧಿಕೃತ ಸಬ್ಸಿಡಿ ಬಿತ್ತನೆ ಬೀಜದ ದರಪಟ್ಟಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Seeds Subsidy Details-ಕೃಷಿ ಇಲಾಖೆಯಿಂದ ಯಾವೆಲ್ಲ ಬೀಜಗಳನ್ನು ಸಬ್ಸಿಡಿಯಲ್ಲಿ ನೀಡಲಾಗುತ್ತದೆ?

ಪ್ರತಿ ವರ್ಷ ಎಲ್ಲಾ ಹಂಗಾಮುಗಳಲ್ಲಿ ಆಯಾ ಪ್ರದೇಶದಲ್ಲಿನ ಬೇಡಿಕೆಯ ಅನುಗುಣವಾಗಿ ಕೃಷಿ ಇಲಾಖೆಯಿಂದ ರೈತರಿಗೆ ಸಹಾಯಧನದಲ್ಲಿ ಬಿತ್ತನೆ ಬೀಜನವನ್ನು ವಿತರಣೆ ಮಾಡಲಾಗುತ್ತದೆ ಅವುಗಳ ವಿವರ ಹೀಗಿದೆ: ಉದ್ದು, ಹೆಸರು, ಅಲಸಂದೆ, ಮೆಕ್ಕೆಜೋಳ, ನೆಲಗಡಲೆ, ಸೂರ್ಯಕಾಂತಿ, ಜೋಳ, ರಾಗಿ, ಭತ್ತ, ತೊಗರಿ ಇವು ಪ್ರಮುಖ ಬೆಳೆಗಳಾಗಿದ್ದು ಇದನ್ನು ಹೊರತುಪಡಿಸಿ ಆಯಾ ಪ್ರದೇಶದ ಅನುಗುಣವಾಗಿ ಇನ್ನಿತರೆ ಬಿತ್ತನೆ ಬೀಜಗಳನ್ನು ಸಹ ವಿತರಣೆ ಮಾಡಲಾಗುತ್ತದೆ.

ಇದನ್ನೂ ಓದಿ: Tarpaulin Subsidy-ಕೃಷಿ ಇಲಾಖೆಯಿಂದ ಶೇ 50% ಸಬ್ಸಿಡಿಯಲ್ಲಿ ಟಾರ್ಪಾಲಿನ್ ಪಡೆಯಲು ಅವಕಾಶ!

Subsidy Seeds Rate List-2025: ಸಬ್ಸಿಡಿ ದರ ಪಟ್ಟಿ:

ಕೃಷಿ ಇಲಾಖೆಯಿಂದ ಈ ಬಾರಿಯ ಮುಂಗಾರು ಹಂಗಾಮಿಗೆ ಸಹಾಯಧನದಲ್ಲಿ ವಿತರಣೆ ಮಾಡಲು ಸಿದ್ದತೆ ನಡೆಸಿರುವ ಉದ್ದು, ಹೆಸರು, ಅಲಸಂದೆ, ಮೆಕ್ಕೆಜೋಳ, ನೆಲಗಡಲೆ, ಸೂರ್ಯಕಾಂತಿ, ಜೋಳ, ರಾಗಿ, ಭತ್ತ, ತೊಗರಿ ಬೀಜಗಳ ದರ ಪಟ್ಟಿ ಈ ಕೆಳಗಿನ ಚಿತ್ರದಲ್ಲಿ ಹಂಚಿಕೊಳ್ಳಲಾಗಿದೆ.

Subsidy Seeds Rate list

Subsidy Seeds-ಸಬ್ಸಿಡಿಯಲ್ಲಿ ಬಿತ್ತನೆ ಬೀಜವನ್ನು ಪಡೆಯುವುದು ಹೇಗೆ?

ರೈತರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ತಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜವನ್ನು ಪಡೆಯಬಹುದು.

ಇದನ್ನೂ ಓದಿ: Pumpset Repair Training-ಉಚಿತ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Documents For Subsidy Seeds-ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳೇನು?

1) ರೈತರ ಆಧಾರ್ ಕಾರ್ಡ ಪ್ರತಿ
2) ಜಮೀನಿನ ಪಹಣಿ
3) ಬ್ಯಾಂಕ್ ಪಾಸ್ ಬುಕ್ ಪ್ರತಿ
4) ಮೊಬೈಲ್ ನಂಬರ್

Karnataka Agriculture Department-ರೈತರಿಗೆ ಕೃಷಿ ಇಲಾಖೆಯಿಂದ ಪ್ರಮುಖ ಸೂಚನೆಗಳು:

ರೈತ ಬಾಂಧವರು ಖರೀದಿಸಿದ ಬಿತ್ತನೆ ಬೀಜಗಳಿಗೆ ಕಡ್ಡಾಯವಾಗಿ ರಶೀದಿಯನ್ನು ಪಡೆಯುವುದು.

ಬಿತ್ತನೆ ಬೀಜ ಚೀಲಗಳೊಂದಿಗೆ ನೀಡಿರುವ ಟ್ಯಾಗ್ ಗಳನ್ನು ಮತ್ತು ಸ್ವಲ್ಪ ಪ್ರಮಾಣದ ಬಿತ್ತನೆ ಬೀಜಗಳನ್ನು ಬೆಳೆಯ ಕಟಾವಿನ ಹಂತದವರೆಗೂ ಕಾಯ್ದಿರಿಸಿಕೊಳ್ಳಬೇಕು ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Best Pension Scheme-ತಿಂಗಳಿಗೆ ರೂ 5,000/- ಪಿಂಚಣಿ ಸೌಲಭ್ಯ! ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ!

ರೈತರು ಸಹಾಯಧನದಲ್ಲಿ ಬಿತ್ತನೆ ಬೀಜವನ್ನು ಖರೀದಿ ಮಾಡಲು ಹಾಗೂ ಈ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ.

Agriculture Department Website-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೃಷಿ ಇಲಾಖೆಯ ಅಧಿಕೃತ ಜಾಲತಾಣ- Click here
Helpline Number-ರೈತ ಕರೆ ಕೇಂದ್ರ ದೂರವಾಣಿ ಸಂಖ್ಯೆ: 1800 425 3553

WhatsApp Group Join Now
Telegram Group Join Now
Share Now: