Breaking News:
LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ! Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000! Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!
HomeNew postsUnion Bank Apprenticeship- ಯೂನಿಯನ್ ಬ್ಯಾಂಕ್ ನಲ್ಲಿ ಪದವಿ ಮುಗಿಸಿದವರಿಗೆ ಸಂಬಳದ ಜೊತೆಗೆ ಉದ್ಯೋಗ ತರಬೇತಿ!

Union Bank Apprenticeship- ಯೂನಿಯನ್ ಬ್ಯಾಂಕ್ ನಲ್ಲಿ ಪದವಿ ಮುಗಿಸಿದವರಿಗೆ ಸಂಬಳದ ಜೊತೆಗೆ ಉದ್ಯೋಗ ತರಬೇತಿ!

ಬ್ಯಾಂಕಿಂಗ್  ವಲಯದಲ್ಲಿ ಉದ್ಯೋಗ ಮಾಡಬಯಸುವ ಅಭ್ಯರ್ಥಿಗಳಿಗೆ, ಯೂನಿಯನ್ ಬ್ಯಾಂಕ್(Union Bank Apprenticeship) ಸಂಬಳದ ಜೊತೆಗೆ ಉದ್ಯೋಗ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಒಟ್ಟು 500 ಸ್ಥಾನಗಳನ್ನು  ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಇದರಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗಾಗಿ 40 ಸ್ಥಾನಗಳನ್ನು ಮೀಸಲಿಡಲಾಗಿದೆ. ಅರ್ಹ ಮತ್ತು ಆಸಕ್ತರಿರುವ ಅಭ್ಯರ್ಥಿಗಳು ಇದಕ್ಕೆ ಬೇಕಾಗಿರುವ ಸಂಪೂರ್ಣ ಅರ್ಹತೆ ಮತ್ತು ಇತರೆ ಮಾಹಿತಿ ತಿಳಿದುಕೊಂಡು ನಿಗದಿತ ಕೊನೆಯ ದಿನಾಂಕದ ಮುಂಚಿತವಾಗಿಯೇ ಅರ್ಜಿ ಸಲ್ಲಿಸಿರಿ.

 ನಮ್ಮ ರಾಜ್ಯದ ಅಭ್ಯರ್ಥಿಗಳು ಆಯ್ಕೆಯಾದರೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 11 ಜಿಲ್ಲೆಗಳಲ್ಲಿ, ಯಾವುದಾದರೂ ಒಂದು ಜಿಲ್ಲೆಯಲ್ಲಿ ತರಬೇತಿ ಪಡೆಯಲು ಅವಕಾಶವಿರುತ್ತದೆ. ಹಾಗಿದ್ದರೆ ಇದಕ್ಕೆ ಬೇಕಾಗಿರುವ ಅರ್ಹತೆಗಳೇನು? ತರಬೇತಿಯ ಜೊತೆಗೆ ಸಿಗುವ ಸಂಬಳವೆಷ್ಟು? ಎಂಬ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: Mission Vatsalya Yojana- ಈ ರೀತಿಯ ಮಕ್ಕಳಿಗೆ ಈ ಯೋಜನೆಯಡಿ ಸಿಗುತ್ತೆ ವರ್ಷಕ್ಕೆ ರೂ 48,000 ಸಾವಿರ!

Union Bank Apprenticeship Recruitment 2024 – ಅರ್ಹತೆಗಳು : 

ಶೈಕ್ಷಣಿಕ ಅರ್ಹತೆಗಳು – ಯಾವುದಾದರೂ ಪದವಿ ಮುಗಿಸಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ವಯೋಮಿತಿ ಅರ್ಹತೆಗಳು – ಅಗಸ್ಟ್ 1, 2024ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು 20ರಿಂದ 28 ವರ್ಷದ ವಯೋಮಿತಿ ಹೊಂದಿರಬೇಕು. ಮೀಸಲಾತಿ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಅಭ್ಯರ್ಥಿಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ. 

salary- ತರಬೇತಿಯ ಜೊತೆಗೆ ಸಿಗುವ ಸಂಬಳ – ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತರಬೇತಿಯ ಜೊತೆಗೆ 15,000ರೂ. ಸ್ಟೈಪೆಂಡ್ ಸಿಗಲಿದೆ.

ಇದನ್ನೂ ಓದಿ: Guest lecturer jobs in bangalore- ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ!

Last date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 17 ಸೆಪ್ಟೆಂಬರ್ 2024

How to apply- ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹರಿರುವ ಅಭ್ಯರ್ಥಿಗಳು ಯೂನಿಯನ್ ಬ್ಯಾಂಕಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಗತ್ಯವಿರುವ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕ ಪಾವತಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Ganga kalyana-ಮತ್ತೊಂದು ನಿಗಮದಿಂದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ!

Application fee-ಅರ್ಜಿ ಶುಲ್ಕ – 

• ಸಾಮಾನ್ಯ ವರ್ಗದವರಿಗೆ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 800 ರೂ. ಅರ್ಜಿ ಶುಲ್ಕ ಪಾವತಿಸಬೇಕು.
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಎಲ್ಲಾ  ವರ್ಗದ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 400ರೂ. ಅರ್ಜಿ ಶುಲ್ಕ ಪಾವತಿಸಬೇಕು.

 website link-ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್ –

• ಅಧಿಸೂಚನೆ – Download Now
• ಅರ್ಜಿ ಸಲ್ಲಿಕೆಯ ಲಿಂಕ್ – www.unionbankonline.co.in

Most Popular

Latest Articles

- Advertisment -

Related Articles