2023-24ನೇ ಸಾಲಿನ ಪಶುಸಂಗೋಪನೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ.

2023-24ನೇ ಸಾಲಿನ ಪಶುಸಂಗೋಪನೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ.

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ವಿಶ್ವವಿದ್ಯಾಲಯದಿಂದ 2023-24 ನೇ ಸಾಲಿನ ಪಶುಸಂಗೋಪನಾ ಡಿಪ್ಲೋಮಾ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಗೆ ಪ್ರಕಟಣೆ ಹೊರಡಿಸಲಾಗಿದೆ.

ಈ ಶೈಕ್ಷಣಿಕ ಸಾಲಿಗೆ ಪಶುಸಂಗೋಪನಾ ಪಾಲಿಟೆಕ್ನಿಕ್ ಶಿಗ್ಗಾಂವಿ, ಹಾವೇರಿ ಜಿಲ್ಲೆ ಮತ್ತು ಕೊನೆಹಳ್ಳಿ, ತಿಪಟೂರು ಜಿಲ್ಲೆಯ ಎರಡು ಪಾಲಿಟೆಕ್ನಿಕ್ ಗಳಲ್ಲಿ ಪಶು ಸಂಗೋಪನೆಯಲ್ಲಿ ಎರಡು ವರ್ಷದ ಡಿಪ್ಲೋಮಾ ಕೋರ್ಸಿಗೆ ಎಸ್.ಎಸ್.ಎಲ್.ಸಿ ತೇರ್ಗಡೆಯಾದ ಹಾಗೂ 1 ರಿಂದ  10 ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿಯ ನಮೂನೆಯನ್ನು ಮತ್ತು ಇತರೆ ಹೆಚ್ಚಿನ ವಿವರಗಳನ್ನು ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ(http://www.kvafsu.edu.in/index.html) ಜಾಲತಾಣದಲ್ಲಿ ದಿನಾಂಕ: 21-06-2023 ರ ನಂತರ ಪಡೆಯಬವುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಕೆ ವಿಧಾನ:

ಅರ್ಜಿಯಲ್ಲಿ ಕೇಳಲಾದ ಎಲ್ಲಾ ಅಗತ್ಯ ಮಾಹಿತಿ ಹಾಗೂ ದಾಖಲಾತಿಗಳ ಸಮೇತ ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಮೂಲ(Original copy)ಯನ್ನು ಡಿ . ಡಿ ಯೊಂದಿಗೆ(ಯಾವುದೇ ರಾಷ್ಟೀಕೃತ ಬ್ಯಾಂಕ್) ದಿನಾಂಕ: 20 ಜುಲೈ 2023 ರ ಸಂಜೆ 5-00 ಗಂಟೆಯ ಒಳಗಾಗಿ ಕುಲಸಚಿವರು ಕರ್ನಾಟಕ ಪಶುವೈದ್ಯಕೀಯ . ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ. ನಂದಿನಗರ. ಅಂಚೆ ಪೆಟ್ಟಿಗೆ ಸಂಖ್ಯೆ-585226 ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ.

ಇದನ್ನೂ ಓದಿ: “ಗೃಹ ಜ್ಯೋತಿ” ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ! ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳೇನು?

ಅವಧಿ :

ಡಿಪ್ಲೋಮಾ (ಪಶುಸಂಗೋಪನೆ) ಎರಡು ಶೈಕ್ಷಣಿಕ ವರ್ಷದ ಅವಧಿಯಾಗಿದ್ದು ನಾಲ್ಕು ಸೆಮಿಸ್ಟರ್‌ಗಳನ್ನು ಒಳಗೊಂಡಿರುತ್ತದೆ.

ಬೋಧನಾ ಮಾಧ್ಯಮ:

ಡಿಪ್ಲೋಮಾ (ಪಶುಸಂಗೋಪನೆ) ಕೋರ್ಸ್ ಬೋಧನೆಯು ಕನ್ನಡಮಾಧ್ಯಮದಲ್ಲಿರುತ್ತದೆ.

ಪ್ರವೇಶಕ್ಕೆ ಅರ್ಹತೆ : 

ಡಿಪ್ಲೋಮಾ (ಪಶುಸಂಗೋಪನೆ)ಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕದ ನಿವಾಸಿಯಾಗಿದ್ದು ಒಂದರಿಂದ ಹತ್ತನೇ ತರಗತಿಯವರಿಗೆ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಯಲ್ಲಿ ವ್ಯಾಸಂಗ ಮಾಡಿರಬೇಕು ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು.

ಪ್ರವೇಶಕ್ಕೆ ಆಯ್ಕೆ :

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ವಿಶ್ವವಿದ್ಯಾಲಯವು ನಿಗದಿಪಡಿಸುವ ಪ್ರವೇಶ ಸಂಖ್ಯೆಗೆ ಸೀಮಿತವಾಗಿ ಚಾಲ್ತಿಯಲ್ಲಿರುವ ಮೆರಿಟ್ ಹಾಗೂ ರೋಸ್ಟರ್ ಪದ್ಧತಿ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಶಿಷ್ಯವೇತನ :

ಪಶುಸಂಗೋಪನೆ ಡಿಪ್ಲೋಮಾ ಕೋರ್ಸ್‌ನ ಅಭ್ಯರ್ಥಿಗಳಿಗೆ ಸರಕಾರದ ಆದೇಶದನ್ವಯ ನಿಗದಿಪಡಿಸಲಾದ ಶಿಷ್ಯವೇತನ (ಸೈಪಂಡ್) ನೀಡಲಾಗುತ್ತದೆ. ಈ ಶಿಷ್ಯವೇತನವನ್ನು ಪ್ರತಿ ಸೆಮಿಸ್ಟರ್‌ಗೆ ಸೀಮಿತವಾಗಿ ಎರಡು ಶೈಕ್ಷಣಿಕ ವರ್ಷಕ್ಕೆ ಮಾತ್ರ ಪ್ರತಿ ವಿದ್ಯಾರ್ಥಿಗೆ ನೀಡಲಾಗುತ್ತದೆ. 

ಈ ಕೋರ್ಸಿನ ಕುರಿತು ಇನ್ನೂ ಹೆಚ್ಚಿನ ವಿವರ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.