Veterinary Subsidy Schemes-ಪಶುಪಾಲನಾ ಇಲಾಖೆಯಿಂದ ರೈತರಿಗಾಗಿ ಲಭ್ಯವಿರುವ ಸಬ್ಸಿಡಿ ಯೋಜನೆಗಳಾವುವು?

December 23, 2025 | Siddesh
Veterinary Subsidy Schemes-ಪಶುಪಾಲನಾ ಇಲಾಖೆಯಿಂದ ರೈತರಿಗಾಗಿ ಲಭ್ಯವಿರುವ ಸಬ್ಸಿಡಿ ಯೋಜನೆಗಳಾವುವು?
Share Now:

ನಮ್ಮ ರಾಜ್ಯದಲ್ಲಿ ಕೃಷಿಕರಿಗೆ ಪಶುಪಾಲನಾ ಇಲಾಖೆಯಿಂದ(Veterinary Department Subsidy Schemes)ಯಾವೆಲ್ಲ ಯೋಜನೆಯಡಿ ಸಹಾಯಧನ ಮತ್ತು ಇನ್ನಿತರೆ ಅವಶ್ಯಕ ಸೌಲಭ್ಯವನ್ನು ಒದಗಿಸಲಾಗುತ್ತದೆ? ಇದಕ್ಕಾಗಿ ರೈತರು ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಎಷ್ಟು ಮೊತ್ತದ ಸಬ್ಸಿಡಿ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಪಶು ಪಾಲನಾ ಇಲಾಖೆಯಿಂದ ಹೈನುಗಾರಿಕೆ/ಕುರಿ/ಕೋಳಿ ಸಾಕಾಣಿಕೆಯನ್ನು(Veterinary Department Subsidy Yojana) ಮಾಡುವ ರೈತರಿಗೆ ಹಲವು ಸಹಾಯಧನ ಆದಾರಿತ ಯೋಜನೆಗಳು ಜಾರಿಯಲ್ಲಿದ್ದು ಅನೇಕ ಜನರಿಗೆ ಈ ಯೋಜನೆಗಳ ಕುರಿತು ಸಂಪೂರ್ಣ ಸಮರ್ಪಕ ಮಾಹಿತಿ ಲಭ್ಯವಿಲ್ಲದ ಕಾರಣ ಈ ಯೋಜನೆಗಳ ಕುರಿತು ಒಂದಿಷ್ಟು ಅವಶ್ಯಕ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: PM Surya Ghar Scheme-PM ಸೂರ್ಯಘರ್ ಯೋಜನೆಯಡಿ ಉಚಿತ ವಿದ್ಯುತ್! ಕೂಡಲೇ ಅರ್ಜಿ ಸಲ್ಲಿಸಿ!

Veterinary Department Schemes List-2025: ಪಶುಪಾಲನಾ ಇಲಾಖೆಯಿಂದ ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳು:

ನಮ್ಮ ರಾಜ್ಯದಲ್ಲಿ ಪ್ರಸ್ತುತ ಪಶುಪಾಲನಾ ಇಲಾಖೆಯಿಂದ ರೈತರಿಗೆ ಲಭ್ಯವಿರುವ ಸಹಾಯಧನ ಆಧಾರಿತ ಯೋಜನೆಗಳ ಪಟ್ಟಿ ಈ ಕೆಳಗಿನಂತಿವೆ:

1) ಹಾಲು ಉತ್ಪಾದಕರಿಗೆ ಉತೇಜನ/Milk Incentive:

ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಸರಬರಾಜು ಮಾಡುವ ಸದಸ್ಯರಿಗೆ ಪ್ರತಿ ಲೀಟರ್ ಗುಣಾತ್ಮಕ ಹಾಲಿಗೆ ರೂ 5/- ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

2) ರಾಸುಗಳ ಆಕಸ್ಮಿಕ ಸಾವಿಗೆ ಆಪತ್ತು ನಿಧಿ:

ರಾಸುಗಳು ಆಕಸ್ಮಿಕ ಮರಣ ಹೊಂದಿದಾಗ ರೈತರಿಗೆ ಉಂಟಾಘುವ ಆರ್ಥಿಕ ನಷ್ಟವನ್ನು ಭರಿಸಲು ಮರಣ ಹೊಂದಿದ ಜಾನುವಾರು, ಎಮ್ಮೆ, ಹೋರಿ ಗಳಿಗೆ ರೂ 15,000/- ಪರಿಹಾರ ಧನವನ್ನು ರಾಸುಗಳ ಮಾಲೀಕರಿಗೆ ವಿತರಿಸಲಾಗುತ್ತದೆ.

ಇದನ್ನೂ ಓದಿ: RTC Crop Name-ಪಹಣಿಯಲ್ಲಿ ಬೆಳೆ ಮಾಹಿತಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುವುದು ಹೇಗೆ?

3) ಕುರಿ ಮೇಕೆಗಳ ಆಕಸ್ಮಿಕ ಸಾವಿಗೆ ಅನುಗ್ರಹ ಕೊಡುಗೆ:

ಈ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ ತಿಂಗಳ ವಯಸ್ಸಿನ ಕುರಿ/ಮೇಕೆಗಳಿಗೆ ರೂ ಹಾಗೂ ತಿಂಗಳ ಮೇಲ್ಪಟ್ಟ ಕುರಿ/ಮೇಕೆಗಳಿಗೆ ಅವುಗಳ ಮಾಲೀಕರಿಗೆ ರೂ ಪರಿಹಾರ ವಿತರಣೆ ಮಾಡಲಾಗುತ್ತದೆ.

4) ಪರಿಶಿಷ್ಟ ಜಾತಿ ಮತ್ತು ಪಂಗಡ ಸದಸ್ಯರುಗಳಿಗೆ ಕುರಿ/ಮೇಕೆ ವಿತರಣೆ(10+1)/Sheep Farming:

ಪರಿಶಿಷ್ಟ ಜಾತಿ ಮತ್ತು ಪಂಗಡ ಸದಸ್ಯರುಗಳಿಗೆ ಕುರಿ/ಮೇಕೆ ಸಾಕಾಣಿಕೆಯನ್ನು ಮಾಡಲು ಶೇ 90% ಅಂದರೆ ಗರಿಷ್ಠ 90,000/- ಸಬ್ಸಿಡಿಯನ್ನು ಒದಗಿಸಲಾಗುತ್ತದೆ ರೈತರು ಶೇ 10% ರೂ 10,000/- ಪಾವತಿ ಮಾಡಬೇಕು. ಈ ಯೋಜನೆಯಡಿ 10 ಕುರಿ 1 ಟಗರು ಮರಿಯನ್ನು ವಿತರಣೆ ಮಾಡಲಾಗುತ್ತದೆ.

5) ಜಾನುವಾರು ವಿಮೆ/Cow Insurance:

ರೈತರು ಸಾಕಾಣಿಕೆ ಮಾಡುವ ಜಾನುವಾರುಗಳಿಗೆ ವಿಮೆ/ಇನ್ಸುರೆನ್ಸ್ ಅನ್ನು ಮಾಡಿಸಲು ಆರಂಭಿಕ ಹಂತದಲ್ಲಿ ವಿಮೆ ಪ್ರಿಮೀಯಂ ದರವನ್ನು ಪಾವತಿ ಮಾಡಲು ಇಲಾಖೆಯಿಂದ ಶೇ 85% ಸಬ್ಸಿಡಿ ಅನ್ನು ಪಾವತಿಸಲಾಗುತ್ತದೆ ರೈತರು ಕೇವಲ ಶೇ 15% ಪ್ರಿಮೀಯಂ ಅನ್ನು ಪಾವತಿ ಮಾಡಿದರೆ ಸಾಕಾಗುತ್ತದೆ.

ಇದನ್ನೂ ಓದಿ: Dairy Equipment Subsidy-ಹಸು ಸಾಕಾಣಿಕೆಗೆ ಪೂರಕ ಯಂತ್ರ ಮತ್ತು ಕೊಟ್ಟಿ ನಿರ್ಮಾಣಕ್ಕೆ ಸಬ್ಸಿಡಿ ಪಡೆಯುವುದು ಹೇಗೆ?

6) ನಾಟಿ ಕೋಳಿ ಮರಿಗಳ ವಿತರಣೆ(5 ವಾರಗಳ 20 ಕೋಳಿ ಮರಿಗಳು)/Poultry:

ನಾಟಿ ಕೋಳಿಯನ್ನು ಸಾಕಾಣಿಕೆ ಮಾಡಿ ಅನುಭವವನ್ನು ಹೊಂದಿರುವ ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಇಲಾಖೆಯಿಂದ 5 ವಾರಗಳ 20 ಕೋಳಿ ಮರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ.

7) ಮೇವಿನ ಬೀಜ ಕಿರು ಪೊಟ್ಟಣಗಳ ವಿತರಣೆ/Fooder Seeds:

ಪಶು ಪಾಲನಾ ಇಲಾಖೆಯಿಂದ ರೈತರಿಗೆ ಹಸಿ ಮೇವನ್ನು ಉತ್ಪಾದನೆ ಮಾಡಿಕೊಳ್ಳಲು ಶೇ 50%ಸಬ್ಸಿಡಿಯಲ್ಲಿ ಮೇವಿನ ಬೀಜಗಳನ್ನು ವಿತರಣೆ ಮಾಡಲಾಗುತ್ತದೆ. ಸೋರ್ಗ ಮಲ್ಟಿಕಟ್ 5 Kg ರೂ 460/-
ಬ್ಯಾಗ್, ಅಫ್ರಿಕನ್ ಟಾಲ್ ಮೇಜ್ 5 Kg ದರ- ರೂ 352/- ಅಗಿರುತ್ತದೆ.

8) ರಬ್ಬರ್ ನೆಲ ಹಾಸುಗಲ ವಿತರಣೆ/ಕೌ ಮ್ಯಾಟ್/Cow Mat:

ಕೊಟ್ಟಿಗೆಯಲ್ಲಿ ಹಸುಗಳಿಗೆ ಉತ್ತಮ ನೆಲ ಹಾಸು ವ್ಯವಸ್ಥೆಯನ್ನು ರೂಪಿಸಲು ಶೇ 50% ಸಹಾಯಧನದಲ್ಲಿ ಕೌ ಮ್ಯಾಟ್ ಅನ್ನು ರೈತರು ಪಶು ಪಾಲನಾ ಇಲಾಖೆಯಿಂದ ಪಡೆಯಲು ಅವಕಾಶವಿದ್ದು ಒಟ್ಟು ಪೂರ್ಣ ದರ- ರೂ 2,849/- ಇದಕ್ಕೆ ರೂ 1424/- ಸಬ್ಸಿಡಿಯನ್ನು ಇಲಾಖೆಯಿಂದ ಒದಗಿಸಲಾಗುತ್ತದೆ.

9) ಮೇವು ಕತ್ತರಿಸುವ ಯಂತ್ರ ವಿತರಣೆ/Chap Cutter:

ಹೈನುಗಾರಿಕೆ ಮತ್ತು ಕುರಿ/ಮೇಕೆ ಸಾಕಾಣಿಕೆಯನ್ನು ಮಾಡುತ್ತಿರುವ ರೈತರಿಗೆ ಹಸಿ ಮೇವನ್ನು ಕತ್ತರಿಸಿಕೊಳ್ಳಲು ಶೇ 50% ಸಹಾಯಧನದಲ್ಲಿ ಒಟ್ಟು ಪೂರ್ಣ ದರ- 34,000/- ಕ್ಕೆ ರೂ 17,000/- ಸರಕಾರದಿಂದ ಸಬ್ಸಿಡಿ ನೀಡಲಾಗುತ್ತದೆ ಬಾಕಿ ಉಳಿದ ರೂ 17,000/- ಪಾವತಿ ಮಾಡಿ ರೈತರು ಮೇವು ಕತ್ತರಿಸುವ ಯಂತ್ರವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Digital e-Stamp -ಛಾಪಾ ಕಾಗದ ವಹಿವಾಟಿಗೆ ಸ್ಟ್ಯಾಂಪ್ ಪೇಪರ್ ಬದಲಿಗೆ ಇ-ಸ್ಟ್ಯಾಂಪ್: ಸಚಿವ ಕೃಷ್ಣಬೈರೇಗೌಡ!

Veterinary Subsidy Schemes

ಇದನ್ನೂ ಓದಿ: Free Drone Training-ಕ್ರಿಶ್ಚಿಯನ್ ನಿಗಮದಿಂದ ಉಚಿತ 15 ದಿನಗಳ ಡ್ರೋನ್ ತರಬೇತಿ!ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

How To Apply-ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಸಕ್ತ ರೈತರು ಈ ಮೇಲಿನ ಪಟ್ಟಿಯಲ್ಲಿರುವ ಯೋಜನೆಯ ಪ್ರಯೋಜನವನ್ನು ಪಡೆಯಲು ನಿಮ್ಮ ತಾಲ್ಲೂಕಿನ ಪಶು ಆಸ್ಪತ್ರೆಯನ್ನು ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಈ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳಬವುದು.

Required Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ರೈತರು ಅರ್ಜಿ ಸಲ್ಲಿಸಲು ಅವಶ್ಯವಿರುವ ಪೂರಕ ದಾಖಲೆಗಳ ಪಟ್ಟಿ:

ರೈತರ ಆಧಾರ್ ಕಾರ್ಡ
ಪಾನ್ ಕಾರ್ಡ
ರೇಶನ್ ಕಾರ್ಡ್
ಜಾತಿ ಮತ್ತು ಆದಾಯ ಪ್ರಮಾಣ ಪತ್ರ(ಅನ್ವಯಿಸಿದ್ದಲ್ಲಿ ಮಾತ್ರ)
ಬ್ಯಾಂಕ್ ಪಾಸ್ ಬುಕ್
ಪೋಟೋ

ಇದನ್ನೂ ಓದಿ: Ganga Kalyana Yojana-ಬೋರ್ವೆಲ್ ಕೊರೆಸಲು ₹4.0 ಲಕ್ಷ ಸಹಾಯಧನ! ಇಲ್ಲಿದೆ ಸಂಪೂರ್ಣ ವಿವರ!

For More Information-ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಕೃತ ವೆಬ್ಸೈಟ್- Click Here
Veterinary Department Helpline-ಸಹಾಯವಾಣಿ- 8277100200

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: