Free Drone Training-ಗ್ರಾಮೀಣ ಯುವಕರಿಗೊಂದು ಉತ್ತಮ ಅವಕಾಶ! ಉಚಿತ ಡ್ರೋನ್ ತರಬೇತಿಗೆ ಅರ್ಜಿ!

February 18, 2026 | Siddesh
Free Drone Training-ಗ್ರಾಮೀಣ ಯುವಕರಿಗೊಂದು ಉತ್ತಮ ಅವಕಾಶ! ಉಚಿತ ಡ್ರೋನ್ ತರಬೇತಿಗೆ ಅರ್ಜಿ!
Share Now:

ಕೇಂದ್ರ ಸರ್ಕಾರದ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY) ಅಡಿಯಲ್ಲಿ ಉಚಿತ ಊಟ ಹಾಗೂ ವಸತಿಯೊಂದಿಗೆ ಉಚಿತ ಡ್ರೋನ್ ತರಬೇತಿಗೆ(Free Drone Training) ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಯುವಕರು ಈ ಸದುಪಯೋಗವನ್ನು ಪಡೆದುಕೊಳ್ಳಲು ಕೋರಿದೆ.

ಈ ಕಾರ್ಯಕ್ರಮವು ಸರ್ಕಾರದ ಮಾನ್ಯತೆ ಪಡೆದ ಉಚಿತ ತರಬೇತಿ ಕಾರ್ಯಕ್ರಮವಾಗಿದ್ದು,(Drone Training) ಯುವಕರಿಗೆ ಡ್ರೋನ್ ಮತ್ತು ಇವಿ (EV) ಬ್ಯಾಟರಿ ತಂತ್ರಜ್ಞಾನದಲ್ಲಿ ಪರಿಣತಿಯನ್ನು ನೀಡಿ, ಹೆಸರುವಾಸಿಯಾದ ಕಂಪನಿಗಳಲ್ಲಿ ಕೆಲಸವನ್ನು ಕೊಡಿಸುವುದುದೇ ಈ ತರಬೇತಿಯ ಉದ್ದೇಶವಾಗಿದೆ.

ಇದನ್ನೂ ಓದಿ: Model Question Papers-SSLC ಮಾದರಿ ಪ್ರಶ್ನೆ-ಉತ್ತರ ಪತ್ರಿಕೆ ಬಿಡುಗಡೆ! ಮೊಬೈಲ್ ನಲ್ಲೇ ಡೌನ್ಲೋಡ್ ಮಾಡುವುದು ಹೇಗೆ?

ಪ್ರಸ್ತುತ ಇಂದಿನ ಈ ಅಂಕಣದಲ್ಲಿ ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಹರು? ಈ ಯೋಜನೆಯಲ್ಲಿ ಯಾವೆಲ್ಲ ಕೋರ್ಸ್ ಗಳನ್ನು ನೀಡಲಾಗುತ್ತದೆ? ತರಬೇತಿಯಲ್ಲಿ ಒದಗುವ ಸವಲತ್ತುಗಳು? ತರಬೇತಿಯು ನೆಡೆಯುವ ಸಮಯ ಹಾಗೂ ಅವಧಿ? ತರಬೇತಿಗೆ ಸೇರರು ದಾಖಲಾತಿಗಳಾವುವು? ಹೇಗೆ ನೊಂದಣಿ ಮಾಡಿಕೊಳ್ಳಬೇಕು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Who Can Apply-ತರಬೇತಿ ಪಡೆಯಲು ಯಾರೆಲ್ಲ ಅರ್ಹರು?

ಅರ್ಜಿದಾರ ಅಭ್ಯರ್ಥಿಗೆ ಕನಿಷ್ಟ 18 ವರ್ಷಗಳು ಹಾಗೂ 45 ವರ್ಷ ಮೀರಿರಬಾರದು.

ಅಭ್ಯರ್ಥಿಯು 10 ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಯಲ್ಲಿ ಉತ್ತಿರ್ಣರಾಗಿರಬೇಕು.

ಗ್ರಾಮೀಣ ಬಾಗದ ಬಡ ಕುಟುಂಬದ ಯುವಕರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಇದನ್ನೂ ಓದಿ: lost property documents-ಆಸ್ತಿ ಪತ್ರ ಕಳೆದುಹೋಗಿದೆಯೇ? ಮರಳಿ ಪಡೆಯುವುದು ಹೇಗೆ ಇಲ್ಲಿದೆ ಮಾಹಿತಿ!

How Much Day Training Occur-ಎಷ್ಟು ದಿನಗಳ ಕಾಲ ಈ ತರಬೇತಿಯನ್ನು ನಡೆಸಲಾಗುತ್ತದೆ?

ಈ ತರಬೇತಿಯು ಒಟ್ಟು ಮೂರು ತಿಂಗಳ ಕಾಲ ನಡೆಯಲಿದ್ದು, ಅಭ್ಯರ್ಥಿಗಳು ಪೂರ್ಣ ಪ್ರಮಾಣದ ಪರಿಣತಿ ಪಡೆಯಲು ಸಹಕಾರಿಯಾಗಿದೆ. ಪ್ರತಿದಿನ ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ತರಗತಿಗಳು ನಡೆಯುತ್ತವೆ.

ಹಾಗೆಯೇ ಉಚಿತ ಊಟ ಹಾಗೂ ವಸತಿ ಸೌಲಭ್ಯವನ್ನು ನೀಡಲಾಗುತ್ತದೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ತರಬೇತಿ ಮುಗಿದ ನಂತರ 100% ಪ್ಲೇಸ್‌ಮೆಂಟ್ (Placement Support) ನೀಡಲಾಗುತ್ತದೆ.

Where is the training taking place-ತರಬೇತಿ ನಡೆಯುವ ಸ್ಥಳ?

AVPL ಏರೋ-ವಿಷನ್ ಲ್ಯಾಬ್ (AVPL Aero-Vision Lab)
ಯೂನಿವರ್ಸಿಟಿ ಬಿ.ಡಿ.ಟಿ ಎಂಜಿನಿಯರಿಂಗ್ ಕಾಲೇಜು (UBDT),
ಹದಡಿ ರಸ್ತೆ, ದಾವಣಗೆರೆ - 577004.

ಇದನ್ನೂ ಓದಿ: Agriculture Land Sketch-ರೈತರಿಗೊಂದು ಸಿಹಿಸುದ್ದಿ: ನಿಮ್ಮ ಜಮೀನಿನ ‘ಇ-ಸ್ಕೆಚ್’ ಈಗ ಮೊಬೈಲ್‌ನಲ್ಲೇ ಲಭ್ಯ!

What courses are offered in training-ತರಬೇತಿಯಲ್ಲಿ ಯಾವೆಲ್ಲ ಕೋರ್ಸ್ ಗಳನ್ನು ನೀಡಲಾಗುತ್ತದೆ?

1) ಡ್ರೋನ್ ಸರ್ವಿಸ್ ಟೆಕ್ನಿಷಿಯನ್ (Drone Service Technician):

ಈ ಕೋರ್ಸ್‌ನಲ್ಲಿ ಡ್ರೋನ್‌ಗಳ ದುರಸ್ತಿ, ನಿರ್ವಹಣೆ ಮತ್ತು ಕಾರ್ಯಾಚರಣೆಯ ಬಗ್ಗೆ ಕಲಿಸಲಾಗುತ್ತದೆ. ಇದನ್ನು ಪೂರೈಸಿದವರಿಗೆ ಡ್ರೋನ್ ಆಪರೇಟರ್, ಮೇಂಟೆನೆನ್ಸ್ ಇಂಜಿನಿಯರ್ ಅಥವಾ ಫೀಲ್ಡ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ.

2) ಬ್ಯಾಟರಿ ಸಿಸ್ಟಮ್ ರಿಪೇರಿ ಟೆಕ್ನಿಷಿಯನ್ (Battery System Repair Technician):

ಪ್ರಸ್ತುತ ಬಹುತೇಕ ಜನರು ಎಲೆಕ್ಟ್ರಿಕ್ ವಾಹನಗಳ (EV) ಮೇಲೆ ಅವಲಂಬಿತವಾಗಿರುವುದರಿಂದ , ಬ್ಯಾಟರಿ ತಂತ್ರಜ್ಞರಿಗೆ ಭಾರಿ ಬೇಡಿಕೆಯಿದ್ದು ಈ ಕೋರ್ಸ್ ಮೂಲಕ ಇವಿ ಬ್ಯಾಟರಿ ಟೆಕ್ನಿಷಿಯನ್ ಮತ್ತು ಡ್ರೋನ್ ಬ್ಯಾಟರಿ ಸ್ಪೆಷಲಿಸ್ಟ್ ಆಗಿ ಕೆಲಸವನ್ನು ಪ್ರಾರಂಭ ಮಾಡಬಹುದು.

ಇದನ್ನೂ ಓದಿ: Toilet Room Subsidy-ಶೌಚಾಲಯ ನಿರ್ಮಾಣಕ್ಕೆ 20 ಸಾವಿರ ಸಬ್ಸಿಡಿ! ಇಂದೇ ಅರ್ಜಿ ಸಲ್ಲಿಸಿ!

drone training application

ಇದನ್ನೂ ಓದಿ: PM-Kisan Amount-22 ಸಾವಿರ ರೈತರಿಗೆ ಸಿಹಿ ಸುದ್ದಿ: ಶೀಘ್ರವೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಬಾಕಿ ಹಣ!

Documents Required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

ಆಧಾರ್ ಕಾರ್ಡ್ (Aadhaar Card)

ಪಡಿತರ ಚೀಟಿ(BPL Card)

ವಿದ್ಯಾರ್ಹತೆ ಪ್ರಮಾಣಪತ್ರ (10th/12th Marks Card)

ಪೋಷಕರ ಸಮ್ಮತಿ ಪತ್ರ (Parent Consent Form)

ವಾಸಸ್ಥಳ ದೃಢೀಕರಣ ಪತ್ರ (State Domicile)

4 ಫೋಟೋ(Photocopy)

ಬ್ಯಾಂಕ್ ಪಾಸ್‌ಬುಕ್ (Bank Passbook)

ಇದನ್ನೂ ಓದಿ: Mudra Loan-ಮುದ್ರಾ ಯೋಜನೆಯಡಿ ಸ್ವಂತ ಉದ್ದಿಮೆಗೆ ಸಾಲ ಪಡೆಯುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!

Registration procedure is as follows-ನೋಂದಣಿ ಮಾಡಿಕೊಳ್ಳುವ ವಿಧಾನ ಈ ಕೆಳಗಿನಂತಿದೆ?

ಕೇವಲ 70 ಸೀಟು ಗಳಷ್ಟೆ ಲಭ್ಯವಿದ್ದು, ಮೊದಲು ಅರ್ಜಿ ಸಲ್ಲಿಸಿದವರಿ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.

ಅರ್ಜಿದಾರ‍ ಅಭ್ಯರ್ಥಿಯು ಪೋಸ್ಟರ್‌ನಲ್ಲಿ ನೀಡಿರುವ QR ಕೋಡ್ ಸ್ಕ್ಯಾನ್ ಮಾಡಿ ತಕ್ಷಣ ಅರ್ಜಿ ಸಲ್ಲಿಸಬಹುದು.

More complete information-ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಕರೆ ಮಾಡಿ:

ದೂರವಾಣಿ ಸಂಖ್ಯೆ: 7090117099 , 955-531-1472

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: