Anganawadi Worker-ಮಹಿಳೆಯರಿಗೆ ಸುವರ್ಣಾವಕಾಶ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಗೆ ಅರ್ಜಿ ಆಹ್ವಾನ!

February 20, 2026 | Siddesh
Anganawadi Worker-ಮಹಿಳೆಯರಿಗೆ ಸುವರ್ಣಾವಕಾಶ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಗೆ ಅರ್ಜಿ ಆಹ್ವಾನ!
Share Now:

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು(Anganawadi Worker And Helper Job) ಸಿಹಿ ಸುದ್ದಿಯೊಂದನ್ನು ನೀಡಿದೆ. ಸಮಾಜದ ಕಟ್ಟಕಡೆಯ ಮಗುವಿಗೂ ಪೌಷ್ಟಿಕಾಂಶ ಮತ್ತು ಶಿಕ್ಷಣ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದ್ದು. ಈ ಲೇಖನದಲ್ಲಿ ನಾವು ಮುಖ್ಯವಾಗಿ ಕಲಬುರಗಿ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ, ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅರ್ಹತಾ ಮಾನದಂಡದ ಕುರಿತು ಇನ್ನಿತರೆ ಅಗತ್ಯ ಮಾಹಿತಿಯ ಬಗ್ಗೆ ಸಂಪೂರ್ಣ ವಿವರವನ್ನು ಹಂಚಿಕೊಳ್ಳಲಾಗಿದೆ.

ಈ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಅರ್ಹ ಮಹಿಳಾ(Anganwadi Center Job Application) ಅಭ್ಯರ್ಥಿಗಳು ತಮ್ಮ ಮನೆಯಲ್ಲೇ ಕುಳಿತು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ತಮಗೆ ಬೇಕಾದ ಅಗತ್ಯ ದಾಖಲೆಗಳು ಮತ್ತು ವಯೋಮಿತಿಯ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರುವುದು ಅತ್ಯಗತ್ಯ. ಈ ಲೇಖನವು ನಿಮಗೆ ಅರ್ಜಿಯ ಲಿಂಕ್‌ನಿಂದ ಹಿಡಿದು ಅಂತಿಮವಾಗಿ ಸಬ್ಮಿಟ್ ಮಾಡುವವರೆಗಿನ ಎಲ್ಲಾ ಮಾಹಿತಿಯನ್ನು ವಿವರಿಸಲಾಗಿದೆ.

ಇದನ್ನೂ ಓದಿ: Agri Pumpset-ಕೃಷಿ ಪಂಪ್ ಸೆಟ್ ಗೆ 10HP ವರೆಗೆ ವಿದ್ಯುತ್ ಪಡೆಯಲು ಎಷ್ಟು ಹಣ ಪಾವತಿಸಬೇಕು?

ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಮಹಿಳೆಯರಿಗೆ(Anganwadi Kendra) ಆರ್ಥಿಕ ಸ್ವಾವಲಂಬನೆ ನೀಡುವ ನಿಟ್ಟಿನಲ್ಲಿ ಈ ನೇಮಕಾತಿಯು ಮಹತ್ವದ ಹೆಜ್ಜೆಯಾಗಿದೆ. ಒಟ್ಟು 89 ಅಂಗನವಾಡಿ ಕಾರ್ಯಕರ್ತೆಯರು ಮತ್ತು 323 ಅಂಗನವಾಡಿ ಸಹಾಯಕಿಯರ ನೇಮಕಾತಿ ಇದಾಗಿದ್ದು, ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ಬನ್ನಿ, ಈ ನೇಮಕಾತಿಯ ಸಂಪೂರ್ಣ ವಿವರಗಳನ್ನು ಕೆಳಗೆ ತಿಳಿಯೋಣ.

Eligibility Criteria For Anganawadi Job-ಅಂಗನವಾಡಿ ಹುದ್ದೆಗಳಿಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

ಇದನ್ನೂ ಓದಿ: Mobile Canteen Subsidy-ವಿವಿಧ ನಿಗಮಗಳಿಂದ ಮೊಬೈಲ್ ಕ್ಯಾಂಟಿನ್ ಖರೀದಿಗೆ 3.0 ಲಕ್ಷ ಸಬ್ಸಿಡಿಗೆ ಅರ್ಜಿ!

ಕೇವಲ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಕನಿಷ್ಠ 19 ವರ್ಷ ತುಂಬಿರಬೇಕು ಮತ್ತು ಗರಿಷ್ಠ 35 ವರ್ಷ ಮೀರಬಾರದು. (ವಿಕಲಚೇತನ ಅಭ್ಯರ್ಥಿಗಳಿಗೆ ನಿಯಮಾನುಸಾರ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ).

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ (12ನೇ ತರಗತಿ) ತೇರ್ಗಡೆಯಾಗಿರಬೇಕು. ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರುವುದು ಕಡ್ಡಾಯ.

ಅಂಗನವಾಡಿ ಸಹಾಯಕಿಯರ ಹುದ್ದೆಗೆ ಕನಿಷ್ಠ ಎಸ್.ಎಸ್.ಎಲ್.ಸಿ (10ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇಲ್ಲೂ ಸಹ ಕನ್ನಡ ಭಾಷೆಯ ಜ್ಞಾನ ಅತ್ಯಗತ್ಯ.

ಇದನ್ನೂ ಓದಿ: SSLC ಮತ್ತು PUC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಪ್ರಕಟಣೆ!

Anganwadi Vacancy Details-ಖಾಲಿ ಹುದ್ದೆಗಳ ವಿವರ ಹೀಗಿದೆ:

ಸದ್ಯ ಕಲಬುರಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿಯಿರುವ ಹುದ್ದೆಗಳ ವಿವರ ಹೀಗಿದೆ:

ತಾಲೂಕುಕಾರ್ಯಕರ್ತೆ ಹುದ್ದೆಗಳುಸಹಾಯಕಿ ಹುದ್ದೆಗಳು
ಕಲಬುರಗಿ ನಗರ-11
ಸೇಡಂ0421
ಅಫಜಲ್ಪೂರ0635
ಆಳಂದ2068
ಚಿಂಚೋಳಿ1038
ಚಿತ್ತಾಪುರ0529
ಕಲಬುರಗಿ ಗ್ರಾಮೀಣ1356
ಜೇವರ್ಗಿ1925
ಶಹಾಬಾದ್1239

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಮಾರ್ಚ್ 2026

ಇದನ್ನೂ ಓದಿ: Free Drone Training-ಗ್ರಾಮೀಣ ಯುವಕರಿಗೊಂದು ಉತ್ತಮ ಅವಕಾಶ! ಉಚಿತ ಡ್ರೋನ್ ತರಬೇತಿಗೆ ಅರ್ಜಿ!

Anganawadi Worker Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಇಲಾಖೆಯಿಂದ ಅವಕಾಶ ನೀಡಲಾಗಿದ್ದು ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ವಿಧಾನವನ್ನು ಅನುಸರಿಸಿ.

Step-1: ಅರ್ಹ ಅಭ್ಯರ್ಥಿಗಳು ಮೊದಲಿಗೆ ಈ ಲಿಂಕ್ ಮೇಲೆ "Click Here" ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ.

Step-2: ಬಳಿಕ ಈ ಪೇಜ್ ನಲ್ಲಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಬಳಿಕ "Select Project/ಪ್ರಾಜೆಕ್ಟ್ ಆಯ್ಕೆಮಾಡಿ" ಅಧಿಸೂಚನೆ ಸಂಖ್ಯೆ ಹುದ್ದೆಯನ್ನು ಆಯ್ಕೆ ಮಾಡಿ ಬಳಿಕ ಜಾತಿ ಅಯ್ಕೆ ಮಾಡಿಕೊಡು ಅಗತ್ಯ ವಿವರವನ್ನು ಭರ್ತಿ ಮಾಡಿ "Submit' ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಇಲ್ಲಿ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೆಳುವ ಎಲ್ಲಾ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: PM-Kisan Amount-22 ಸಾವಿರ ರೈತರಿಗೆ ಸಿಹಿ ಸುದ್ದಿ: ಶೀಘ್ರವೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಬಾಕಿ ಹಣ!

anganavadi worker application

ಇದನ್ನೂ ಓದಿ: Model Question Papers-SSLC ಮಾದರಿ ಪ್ರಶ್ನೆ-ಉತ್ತರ ಪತ್ರಿಕೆ ಬಿಡುಗಡೆ! ಮೊಬೈಲ್ ನಲ್ಲೇ ಡೌನ್ಲೋಡ್ ಮಾಡುವುದು ಹೇಗೆ?

Required Documents-ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

ಜನ್ಮ ದಿನಾಂಕದ ಪುರಾವೆ (SSLC ಅಂಕಪಟ್ಟಿ).

ವಿದ್ಯಾರ್ಹತೆಯ ಪ್ರಮಾಣ ಪತ್ರಗಳು (SSLC/PUC).

ವಾಸಸ್ಥಳ ದೃಢೀಕರಣ ಪತ್ರ (ಅಭ್ಯರ್ಥಿಯು ಆಯಾ ಗ್ರಾಮ/ವಾರ್ಡ್‌ನ ನಿವಾಸಿಯಾಗಿರಬೇಕು).

ಜಾತಿ ಮತ್ತು ಆದಾಯ ಪ್ರಮಾಣ ಪತ್ರ (RD ಸಂಖ್ಯೆ ಸಹಿತ).

ಇತ್ತೀಚಿನ ಭಾವಚಿತ್ರ.

ವಿಕಲಚೇತನರಾಗಿದ್ದಲ್ಲಿ ಸಂಬಂಧಿತ ಪ್ರಮಾಣ ಪತ್ರ.

ಅಂಗನವಾಡಿ ಉದ್ಯೋಗಗಳು ಕೇವಲ ಕೆಲಸವಲ್ಲ, ಅದು ಸಮಾಜ ಸೇವೆಯೂ ಹೌದು. ಅರ್ಹ ಮಹಿಳೆಯರು ಕೊನೆಯ ದಿನಾಂಕದವರೆಗೂ ಕಾಯದೆ ಇಂದೇ ಅರ್ಜಿ ಸಲ್ಲಿಸುವುದು ಉತ್ತಮ. ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಸೈಬರ್ ಸೆಂಟರ್ ಅಥವಾ ಮೊಬೈಲ್ ಮೂಲಕ ಜಾಗರೂಕತೆಯಿಂದ ಮಾಹಿತಿ ಭರ್ತಿ ಮಾಡಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: