Ration Card News-ರೇಶನ್ ಕಾರ್ಡ್‌ದಾರರಿಗೆ ಸಿಹಿ ಸುದ್ದಿ: ಅಕ್ಕಿಯೊಂದಿಗೆ ಈಗ ರಾಗಿ ಮತ್ತು ಜೋಳ ವಿತರಣೆ!

May 10, 2026 | Siddesh
Ration Card News-ರೇಶನ್ ಕಾರ್ಡ್‌ದಾರರಿಗೆ ಸಿಹಿ ಸುದ್ದಿ: ಅಕ್ಕಿಯೊಂದಿಗೆ ಈಗ ರಾಗಿ ಮತ್ತು ಜೋಳ ವಿತರಣೆ!
Share Now:

ಬೆಂಗಳೂರು: ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು(Karnataka Food Department) ಒಂದು ಮಹತ್ವದ ಸಮಾಧಾನಕರ ಸುದ್ದಿಯನ್ನು ನೀಡಿದೆ. ಅನ್ನಭಾಗ್ಯ(Annabhgaya) ಯೋಜನೆಯಡಿ ಇದುವರೆಗೆ ಕೇವಲ ಅಕ್ಕಿಯನ್ನು ಮಾತ್ರ ಪಡೆಯುತ್ತಿದ್ದ ಪಡಿತರ ಚೀಟಿದಾರರಿಗೆ, ಈ ತಿಂಗಳಿನಿಂದ ಅಕ್ಕಿಯ ಜೊತೆಗೆ ರಾಗಿಯನ್ನು ಸಹ ವಿತರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಸದ್ಯ ಪ್ರತಿ ವ್ಯಕ್ತಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವತಿಯಿಂದ ಒಟ್ಟು 10 ಕೆ.ಜಿ. ಅಕ್ಕಿಯನ್ನು(Rice) ನೀಡಲಾಗುತ್ತಿದ್ದು, ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ತರಲು ಇದರಲ್ಲಿ 2 ಕೆ.ಜಿ. ರಾಗಿಯನ್ನು ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ.

ಈ ಯೋಜನೆಯು ರಾಜ್ಯದಾದ್ಯಂತ ಇರುವ ಸುಮಾರು 1.14 ಕೋಟಿ ಬಿಪಿಎಲ್ ಕಾರ್ಡ್‌ದಾರರು(BPL Card) ಹಾಗೂ 4.01 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಅನ್ವಯವಾಗಲಿದೆ. ಇಲಾಖೆಯ ಮಾಹಿತಿಯ ಪ್ರಕಾರ, ಪ್ರತಿ ತಿಂಗಳು ಸರಿಸುಮಾರು 57 ಸಾವಿರ ಮೆಟ್ರಿಕ್ ಟನ್ ರಾಗಿಯ ಅಗತ್ಯವಿದ್ದು, ಮುಂದಿನ 10 ತಿಂಗಳಿಗೆ ಸಾಕಾಗುವಷ್ಟು ಅಕ್ಕಿ ಮತ್ತು ರಾಗಿಯನ್ನು ಈಗಾಗಲೇ ವ್ಯವಸ್ಥಿತವಾಗಿ ಸಂಗ್ರಹಿಸಿಡಲಾಗಿದೆ. ಕೇವಲ ಅಕ್ಕಿಯನ್ನೇ ಅವಲಂಬಿಸದೆ, ಜನರ ಆರೋಗ್ಯದ ದೃಷ್ಟಿಯಿಂದ ಪೌಷ್ಟಿಕಾಂಶಯುಕ್ತ ಧಾನ್ಯಗಳನ್ನು ತಲುಪಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: Male Munsuchane-ರಾಜ್ಯಾದ್ಯಂತ ವರುಣನ ಅಬ್ಬರ: ಮೇ 11ರವರೆಗೆ ಹಲವೆಡೆ ಭಾರೀ ಮಳೆ ಮುನ್ಸೂಚನೆ!

ಮತ್ತೊಂದು ಗಮನಾರ್ಹ ಅಂಶವೆಂದರೆ, ಪ್ರಾದೇಶಿಕ ಆಹಾರ ಸಂಸ್ಕೃತಿಗೆ ಮನ್ನಣೆ ನೀಡಿರುವುದು. ಹಳೆಯ ಮೈಸೂರು ಭಾಗದ ಜಿಲ್ಲೆಗಳಲ್ಲಿ ರಾಗಿಯನ್ನು(Raagi) ವಿತರಿಸಿದರೆ, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಅವರ ಪ್ರಮುಖ ಆಹಾರವಾದ ಜೋಳವನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ. ಜುಲೈ ತಿಂಗಳ ನಂತರ ಈ ಭಾಗಗಳಲ್ಲಿ ಜೋಳದ ವಿತರಣೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ.

Annabhagya Yojane-2026: ಯೋಜನೆಯ ಪ್ರಮುಖ ಮುಖ್ಯಾಂಶಗಳು:

ಪಡಿತರ ವ್ಯವಸ್ಥೆಯಲ್ಲಿ ತಂದಿರುವ ಈ ಹೊಸ ಬದಲಾವಣೆಯ ಕೆಲವು ಮುಖ್ಯ ಅಂಶಗಳು ಇಲ್ಲಿವೆ:

  • ಪ್ರತಿ ಕಾರ್ಡ್‌ದಾರರಿಗೆ ಅಕ್ಕಿಯ ಜೊತೆಗೆ ಕಡ್ಡಾಯವಾಗಿ 2 ಕೆ.ಜಿ. ರಾಗಿ ಅಥವಾ ಜೋಳವನ್ನು ನೀಡಲಾಗುತ್ತದೆ.
  • ರಾಜ್ಯದ 1.14 ಕೋಟಿ ಬಿಪಿಎಲ್ ಕಾರ್ಡ್‌ದಾರರು ಮತ್ತು 4 ಕೋಟಿಗೂ ಅಧಿಕ ಜನಸಂಖ್ಯೆಗೆ ಇದರ ಲಾಭ ದೊರೆಯಲಿದೆ.
  • ಮುಂದಿನ 10 ತಿಂಗಳಿಗೆ ಅಗತ್ಯವಿರುವ 5.2 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ರೈತರಿಂದ ಬೆಂಬಲ ಬೆಲೆಯಲ್ಲಿ ಖರೀದಿಸಿ ದಾಸ್ತಾನು ಮಾಡಲಾಗಿದೆ.
  • ಮೈಸೂರು ಭಾಗಕ್ಕೆ ರಾಗಿ ಹಾಗೂ ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗಕ್ಕೆ ಜೋಳದ ವಿತರಣೆ.

ಇದನ್ನೂ ಓದಿ: Lidkar Competition-ರಾಜ್ಯಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ-2026! ಪ್ರಥಮ ಬಹುಮಾನ ₹50,000!

Health Benefits-ಆರೋಗ್ಯ ಮತ್ತು ಪೌಷ್ಟಿಕಾಂಶಕ್ಕೆ ಹೆಚ್ಚಿನ ಒತ್ತು:

ಇಂದಿನ ಕಾಲಘಟ್ಟದಲ್ಲಿ ಕೇವಲ ಕಾರ್ಬೋಹೈಡ್ರೇಟ್ ಯುಕ್ತ ಅಕ್ಕಿಯನ್ನು ತಿನ್ನುವುದರಿಂದ ಮಧುಮೇಹದಂತಹ ಸಮಸ್ಯೆಗಳು ಹೆಚ್ಚುತ್ತಿವೆ. ರಾಗಿ ಮತ್ತು ಜೋಳವು ಹೆಚ್ಚಿನ ಫೈಬರ್ (ನಾರು) ಮತ್ತು ಪ್ರೋಟೀನ್ ಅಂಶಗಳನ್ನು ಹೊಂದಿರುವುದರಿಂದ, ಇದು ಜನಸಾಮಾನ್ಯರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ. ಸರ್ಕಾರವು 'ಹಸಿವು ಮುಕ್ತ ಕರ್ನಾಟಕ'ದ ಜೊತೆಗೆ 'ಪೌಷ್ಟಿಕ ಕರ್ನಾಟಕ' ನಿರ್ಮಾಣಕ್ಕೆ ಈ ಮೂಲಕ ನಾಂದಿ ಹಾಡಿದೆ.

ರಾಜ್ಯದ ಬಿಪಿಎಲ್ ಪಡಿತರ ಚೀಟಿದಾರರಿಗೆ ವಿತರಿಸಲು ಪ್ರತಿ ತಿಂಗಳು ಸರಿಸುಮಾರು 57 ಸಾವಿರ ಮೆಟ್ರಿಕ್ ಟನ್ ರಾಗಿಯ ಅವಶ್ಯಕತೆಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ಮುಂದಿನ 10 ತಿಂಗಳಿಗೆ ಸಾಕಾಗುವಷ್ಟು ರಾಗಿಯನ್ನು ನಿಗಮವು ಈಗಾಗಲೇ ಯಶಸ್ವಿಯಾಗಿ ಸಂಗ್ರಹಿಸಿ ದಾಸ್ತಾನು ಮಾಡಿದೆ. ರೈತರಿಂದ ನೇರವಾಗಿ ರಾಗಿ ಖರೀದಿ ಮಾಡುವ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಮೇ 15ರವರೆಗೆ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ. ರೈತರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದು. ಜೊತೆಗೆ ನಮ್ಮಲ್ಲಿನ ಒಟ್ಟು ದಾಸ್ತಾನಿನಲ್ಲಿ ಸರಿಸುಮಾರು 20-30 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ರಾಗಿ ಲಭ್ಯವಿರುವ ಸಾಧ್ಯತೆಯಿದೆ. ಈ ಹೆಚ್ಚುವರಿ ರಾಗಿಯನ್ನು ಅನ್ಯ ರಾಜ್ಯಗಳಿಗೆ ಪೂರೈಕೆ ಮಾಡುವ ಮೂಲಕ ನಮ್ಮ ರಾಜ್ಯದ 'ಸಿರಿಧಾನ್ಯ'ವಾದ ರಾಗಿಯ ಮಹತ್ವವನ್ನು ರಾಷ್ಟ್ರಮಟ್ಟದಲ್ಲಿ ಪ್ರಚಾರ ಮಾಡಲು ನಿಗಮವು ನಿರ್ಧರಿಸಿದೆ. — ಎಂ.ಕೆ. ಜಗದೀಶ್, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ.

ಇದನ್ನೂ ಓದಿ: Bhagyalakshmi Scheme-ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

MSP Scheme In Karnataka-ರೈತರಿಗೂ ಬೆಂಬಲದ ಹಸ್ತ:

ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮವು ನೇರವಾಗಿ ರೈತರಿಂದ ರಾಗಿಯನ್ನು ಖರೀದಿ ಮಾಡುತ್ತಿದೆ. ಮೇ 15 ರವರೆಗೆ ರಾಗಿ ಮಾರಾಟ ಮಾಡಲು ನೋಂದಾಯಿತ ರೈತರಿಗೆ ಅವಕಾಶ ನೀಡಲಾಗಿದೆ. ಸುಮಾರು 6 ಲಕ್ಷ ಮೆಟ್ರಿಕ್ ಟನ್ ರಾಗಿ ಸಂಗ್ರಹದ ಗುರಿಯನ್ನು ಹೊಂದಲಾಗಿದ್ದು, ಹೆಚ್ಚುವರಿ ರಾಗಿಯನ್ನು ಇತರ ರಾಜ್ಯಗಳಿಗೂ ರಫ್ತು ಮಾಡುವ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ ರೈತರಿಗೂ ನ್ಯಾಯಯುತ ಬೆಲೆ ಸಿಕ್ಕಂತಾಗಿದೆ.

Paditara Vitarane-ಜುಲೈ ನಂತರ ಜೋಳ ವಿತರಣೆ:

ಉತ್ತರ ಕರ್ನಾಟಕದ ಪಡಿತರ ಚೀಟಿದಾರರಿಗೆ ಜುಲೈ ನಂತರ ಜೋಳ ವಿತರಣೆ ಆರಂಭವಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅಗತ್ಯ ಅನುಮೋದನೆ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸುಮಾರು 8-9 ಸಾವಿರ ಮೆಟ್ರಿಕ್ ಟನ್ ಜೋಳದ ಅಗತ್ಯವಿದ್ದು, ಪಾರದರ್ಶಕವಾಗಿ ವಿತರಣೆ ಮಾಡಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: