Free Hostel Admission-2026: ಉಚಿತ ಹಾಸ್ಟೇಲ್ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

May 17, 2026 | Siddesh
Free Hostel Admission-2026: ಉಚಿತ ಹಾಸ್ಟೇಲ್ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!
Share Now:

2026-27ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಪ್ರವೇಶವನ್ನು ಪಡೆಯಲು ಅರ್ಹ(Free Hostel Application) ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇಂದಿನ ಲೇಖನದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು ಅರ್ಹ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ತಿಳಿಸಲು ಕೂಡಲೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ.

ಉನ್ನತ ಶಿಕ್ಷಣವನ್ನು ಪಡೆಯಲು ಗ್ರಾಮೀಣ ಭಾಗದಿಂದ ನಗರ ಭಾಗಕ್ಕೆ ದಿನನಿತ್ಯ ಪ್ರಯಣವನ್ನು ಮಾಡಿ ಓದಿಕೊಳ್ಳಲು ಕಷ್ಟಕರ ಅಗುತ್ತಿರುವ ವಿದ್ಯಾರ್ಥಿಗಳು ನಗರ ಪ್ರದೇಶದಲ್ಲೇ ಇರುವ ಉಚಿತ ಹಾಸ್ಟೇಲ್(Free Hostel Admission) ಗಳಲ್ಲಿ ಇದ್ದುಕೊಂಡು ವ್ಯಾಸಂಗ ಮಾಡಲು ಅವಕಾಶವಿದ್ದು ಪ್ರಸ್ತುತ ಸಾಲಿನ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: Property Registration-ಬಿ ಖಾತಾದಾರರಿಗೆ ಎ ಖಾತಾ ವಿತರಣೆಗೆ ರಾಜ್ಯ ಸರ್ಕಾರದಿಂದ ಅಭಿಯಾನ!

ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಪ್ರವೇಶವನ್ನು ಪಡೆಯಲು ಯಾರೆಲ್ಲ(Free Hostel In Karnataka) ಅರ್ಜಿ ಸಲ್ಲಿಸಲು ಅರ್ಹರು? ಅರ್ಜಿ ಸಲ್ಲಿಸಲು ಇಲಾಖೆಯಿಂದ ನಿಗದಿಪಡಿಸಿರುವ ಕೊನೆಯ ದಿನಾಂಕ ಯಾವುದು? ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು? ಅಗತ್ಯ ಮಾಹಿತಿಯನ್ನು ಪಡೆಯಲು ಸಹಾಯವಾಣಿ ಸಂಖ್ಯೆ ಸೇರಿದಂತೆ ಇನ್ನಿತರೆ ಅವಶ್ಯಕ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Who Can Apply For Free Hostel Admission-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಪ್ರವೇಶವನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತೆಯನ್ನು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

  • ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
  • ಕರ್ನಾಟಕ ರಾಜ್ಯದ ಖಾಯಂ ನಿವಾಸಿ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ಪ್ರಸ್ತುತ ಸಾಲಿನಲ್ಲಿ ಮೆಟ್ರಿಕ್ ನಂತರದ ವ್ಯಾಸಂಗಕ್ಕೆ ಪ್ರವೇಶವನ್ನು ಪಡೆದಿರಬೇಕು.

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2026

ಇದನ್ನೂ ಓದಿ: Free Sheep Farming Training-ಉಚಿತ ಕುರಿ ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ: ನಿರುದ್ಯೋಗಿ ಯುವಜನತೆಗೆ ಸುವರ್ಣಾವಕಾಶ!

Free Hostel Application

ಇದನ್ನೂ ಓದಿ: Ration Card News-ರೇಶನ್ ಕಾರ್ಡ್‌ದಾರರಿಗೆ ಸಿಹಿ ಸುದ್ದಿ: ಅಕ್ಕಿಯೊಂದಿಗೆ ಈಗ ರಾಗಿ ಮತ್ತು ಜೋಳ ವಿತರಣೆ!

Free Hostel Admission Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಮೆಟ್ರಿಕ್ ನಂತರದ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅರ್ಹರಿರುವ ವಿದ್ಯಾರ್ಥಿಗಳು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

Step-1: ವಿದ್ಯಾರ್ಥಿಗಳು ಮೊದಲ ಹಂತದಲ್ಲಿ ಈ "Free Hostel Online Application" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Vasati Yojane-ವಸತಿ ಯೋಜನೆ-2026: ಸ್ವಂತ ಮನೆ ಕನಸು ನನಸು ಮಾಡಿಕೊಳ್ಳಲು ಸುವರ್ಣಾವಕಾಶ; ಇಂದೇ ಅರ್ಜಿ ಸಲ್ಲಿಸಿ!

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಬಲ ಬದಿಯಲ್ಲಿ ಕಾಣಿಸುವ "Login" ಬಟನ್ ಮೇಲೆ ಕ್ಲಿಕ್ ಮಾಡಿ Enter Your SWD ID ಮತ್ತು Password ಅನ್ನು ಹಾಕಿ ಲಾಗಿನ್ ಅಗಬೇಕು ನೋಂದಣಿಯನ್ನು ಮಾಡಿಕೊಳ್ಳದೇ ಇರುವವರು "Register" ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಲಾಗಿನ್ ಅಗಬೇಕು.

Step-3: ಲಾಗಿನ್ ಅದ ನಂತರ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: Ration Card Correction-ರಾಜ್ಯದ್ಯಂತ ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!

"ಮೆಟ್ರಿಕ್ ನಂತರದ ವಸತಿ ನಿಲಯ ಪ್ರವೇಶ ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವರೆಗೆ ಸಮಯವನ್ನು ಬಿಟ್ಟುಕೊಳ್ಳದೇ ಕೂಡಲೇ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು."– ರಮೇಶ್, ಇಲಾಖಾ ಅಧಿಕಾರಿಗಳು.

Required Documents For Application-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಪ್ರವೇಶವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಶ್ಯವಿರುವ ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

1) SSP ವಿದ್ಯಾರ್ಥಿ ಐಡಿ(Student ID).
2) ಜಾತಿ ಮತ್ತು ಆದಾಯ ಪ್ರಮಾಣ ಪತ್ರ(ವಿದ್ಯಾರ್ಥಿಯ ಹೆಸರಿನಲ್ಲಿ ಇರಬೇಕು).
3) ವಿಶ್ವವಿದ್ಯಾಲಯ ನೋಂದಣಿ ಸಂಖ್ಯೆ.
4) ಚಾಲ್ತಿಯಲ್ಲಿರುವ ಮೊಬೈಲ್ ನಂಬರ್.

  • Helpline-ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ- 9482300400
  • Website-ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: