Bara Parihara List-ಬರ ಪರಿಹಾರ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರಿದೆಯೇ ಎಂದು ಮೊಬೈಲ್‌ನಲ್ಲೇ ಪರಿಶೀಲಿಸಿ!

November 28, 2026 | Siddesh
Bara Parihara List-ಬರ ಪರಿಹಾರ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರಿದೆಯೇ ಎಂದು ಮೊಬೈಲ್‌ನಲ್ಲೇ ಪರಿಶೀಲಿಸಿ!
Share Now:

ಈಗಾಗಲೇ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯಿಂದ(Karnataka Revenue Department) ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಪರಿಹಾರ ತಂತ್ರಾಂಶದಲ್ಲಿ ಬರ ಪರಿಹಾರವನ್ನು ಪಡೆಯಲು ಅರ್ಹರಿರುವ ಎಲ್ಲಾ ರೈತರ ವಿವರವನ್ನು ದಾಖಲಿಸಲಾಗುತ್ತಿದ್ದು ಈ ಪಟ್ಟಿಯಲ್ಲಿ ರೈತರು ತಮ್ಮ ಹೆಸರಿರುವುದನ್ನು ಹೇಗೆ ಖಚಿತಪಡಿಸಿಕೊಳ್ಳಬಹುದು ಎನ್ನವ ಬಗ್ಗೆ ಅಗತ್ಯ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ರಾಜ್ಯ ಸರ್ಕಾರದಿಂದ ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಅರ್ಹ ರೈತರಿಗೆ ಬರ ಪರಿಹಾರವನ್ನು ಒದಗಿಸಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಲು ನಿರ್ದೇಶನ ನೀಡಲಾಗಿದ್ದು ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಬರ ಪರಿಹಾರವನ್ನು ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ಸಿದ್ದಪಡಿಸುತ್ತಿದ್ದು ಅರ್ಹ ರೈತರ ಪಟ್ಟಿಯನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿದ್ದು ಈ ಪಟ್ಟಿಯಲ್ಲಿ ರೈತರು ತಮ್ಮ ಹೆಸರು ಇದಿಯಾ ಎಂದು ಒಮ್ಮೆ ಖಚಿತಪಡಿಸಿಕೊಳ್ಳುವ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Salon Subsidy Scheme: ಸವಿತಾ ಸಮಾಜ ನಿಗಮದಿಂದ ಸಲೂನ್ ಆರಂಭಿಲು ₹10 ಲಕ್ಷ ಆರ್ಥಿಕ ನೆರವು!

ಇಂದಿನ ದಿನಗಳಲ್ಲಿ ಅನೇಕ ಸರ್ಕಾರಿ ಸೇವೆಗಳು ಡಿಜಿಟಲೀಕರವಾಗುತ್ತಿದ್ದು ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೇ ಮನೆಯಲ್ಲೇ ಕುರಿತು ಬೆರಳ ತುದಿಯಲ್ಲಿ ಅನೇಕ ಉಪಯುಕ್ತ ಮಾಹಿತಿ ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯಲು ಅವಕಾಶವಿದ್ದು ಈ ನಿಟ್ಟಿನಲ್ಲಿ ರೈತರಿಗೆ ಬರ ಪರಿಹಾರ ವಿತರಣೆಯಲ್ಲಿಯು ಸಹ ಡಿಜಿಟಲ್ ವ್ಯವಸ್ಥೆಯನ್ನು ಬಳಕೆ ಮಾಡಲಾಗುತ್ತಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Revenue Department Parihara Portal-ಬರ ಪರಿಹಾರ ವಿತರಣೆಗೆ "ಪರಿಹಾರ ತಂತ್ರಾಂಶ/Parihara" ಬಳಕೆ:

ಅತಿವೃಷ್ಟಿ ಅನಾವೃಷ್ಟಿ ಇನ್ನಿತರೆ ಕಾರಣಗಳಿಂದ ರೈತರ ಬೆಳೆ ಹಾನಿಯಾದ ಸಮಯದಲ್ಲಿ ಅರ್ಹ ರೈತರಿಗೆ ಯಾವುದೇ ಮಧ್ಯವರ್ತಿಗೆ ಅವಕಾಶ ನೀಡದೇ ಪರಿಹಾರದ ಹಣವನ್ನು ನೀಡಲು ರಾಜ್ಯ ಸರ್ಕಾರದಿಂದ ಪರಿಹಾರ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದೇ ತಂತ್ರಾಂಶವನ್ನು ಬಳಕೆ ಮಾಡಿ ಡಿಬಿಟಿ ಮೂಲಕ ನೇರವಾಗಿ ಸರ್ಕಾರದ ಬ್ಯಾಂಕ್ ಖಾತೆಯಿಂದ ರೈತರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ಇದನ್ನೂ ಓದಿ: Free Sewing Machine-ವಿಶ್ವಕರ್ಮ ನಿಗಮದಿಂದ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ! ಮಹಿಳೆಯರಿಗೆ ಸುವರ್ಣಾವಕಾಶ!

Parihara Workflow-ಪರಿಹಾರ ತಂತ್ರಾಂಶ ಹೇಗೆ ಕಾರ್ಯನಿರ್ವಹಿಸುತ್ತದೆ?

ಮೊದಲಿಗೆ ಕಂದಾಯ ಇಲಾಖೆಯಿಂದ ಹಳ್ಳಿ ಮಟ್ಟದಲ್ಲಿರುವ ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಪರಿಹಾರ ತಂತ್ರಾಂಶದಲ್ಲಿ ಅರ್ಹ ರೈತರ ಜಮೀನಿನ ವಿವರ,ವೈಯಕ್ತಿಕ ವಿವರ ಹಾಗೂ ಬ್ಯಾಂಕ್ ಖಾತೆ ವಿವರವನ್ನು ಫ಼್ರೂಟ್ಸ್ ತಂತ್ರಾಂಶದ ಸಹಾಯದಿಂದ ದಾಖಲಿಸಿ ಬಳಿಕ ತಾಲ್ಲೂಕು/ಜಿಲ್ಲಾ ಮಟ್ಟದ ಅಧಿಕಾರಿಗಳ ಲಾಗಿನ್ ಗೆ ಕಳುಹಿಸಲಾಗುತ್ತದೆ. ಇಲ್ಲಿ ದಾಖಲಿಸಿದ ಎಲ್ಲಾ ವಿವರವನ್ನು ಪರಿಶೀಲಿಸಿ ಹಣ ಪಾವತಿ ಹಂತಕ್ಕೆ ರವಾನಿಸಲಾಗುತ್ತದೆ. ರಾಜ್ಯ ಸರ್ಕಾರದಿಂದ ಜಿಲ್ಲಾ ಮಟ್ಟದ ಕಚೇರಿಗೆ ಅನುದಾನ ಬಿಡುಗಡೆ ಅದ ಬಳಿಕ ನೇರವಾಗಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿರುವ ಅರ್ಹ ರೈತರಿಗೆ ಡಿಬಿಟಿ ಮೂಲಕ ಪರಿಹಾರದ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

Parihara Website Link-ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಈ ವೆಬ್ ಲಿಂಕ್ ಮೇಲೆ ಕ್ಲಿಕ್ ಮಾಡಿ-More Information

ಇದನ್ನೂ ಓದಿ: Agriculture Machinery Subsidy-ಪವರ್ ಸ್ಪ್ರ‍ೇಯರ್, ಪಂಪ್ ಸೆಟ್ ಸೇರಿದಂತೆ ವಿವಿಧ ಉಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಅರ್ಜಿ ಆಹ್ವಾನ!

Bara Parihara Farmer List 2026-ಬರ ಪರಿಹಾರ ರೈತರ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡುವುದು ಹೇಗೆ?

ಈಗಾಗಲೇ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಪರಿಹಾರ ತಂತ್ರಾಂಶದಲ್ಲಿ ಬರ ಪರಿಹಾರ ಪಡೆಯಲು ಅರ್ಹರಿರುವ ರೈತರ ಮಾಹಿತಿಯನ್ನು ದಾಖಲಿಸಲಾಗಿದ್ದು ಈ ಪಟ್ಟಿಯನ್ನು ಕೆಳಗಿನ ವಿಧಾನವನ್ನು ಅನುಸರಿಸಿ ನೋಡಲು ಅವಕಾಶವಿದ್ದು ರೈತರು ತಮ್ಮ ಮೊಬೈಲ್ ಮೂಲಕವೇ ಪರಿಹಾರ ಪಡೆಯುವ ಪಟ್ಟಿಯಲ್ಲಿ ತಮ್ಮ ಹೆಸರು ಇದಿಯಾ ಎಂದು ಖಚಿತಪಡಿಸಿಕೊಳ್ಳಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Bara Parihara Farmer List ಮಾಡಿ ಅಧಿಕೃತ ಪರಿಹಾರ ತಂತ್ರಾಂಶವನ್ನು ಪ್ರವೇಶ ಮಾಡಿ.

parihara website

ಇದನ್ನೂ ಓದಿ: Namma Mane Yojane-ಮುಖ್ಯಮಂತ್ರಿ ನಮ್ಮ ಮನೆ ಯೋಜನೆ: ಅರ್ಹ ಕುಟುಂಬಗಳಿಗೆ ಉಚಿತ ನಿವೇಶನ!

Step-2: ಇದಾದ ನಂತರ ಈ ಪೇಜ್ ನಲ್ಲಿ ಕೆಳಗೆ ಸ್ಕ್ರ‍ೊಲ್ ಮಾಡಿದಾಗ "ಪಾವತಿ ವರದಿ" ವಿಭಾಗದಲ್ಲಿ "ಹೊಸ ವರದಿ" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಬಳಿಕ ಇಲ್ಲಿ Year/ವರ್ಷ-2026-27, Season/ಋತು-Kharif, Calamity Type/ವಿಪತ್ತಿನ ವಿಧ-Drought/ಬರ ಆಯ್ಕೆ ಮಾಡಿಕೊಂಡು Get Data/ಹುಡುಕು ಬಟನ್ ಮೇಲೆ ಕ್ಲಿಕ್ ಮಾಡಿ.

Step-4: ಇಲ್ಲಿ ನಾಲ್ಕು ಆಯ್ಕೆಗಳು ಸಿಗುತ್ತವೆ ನಿಮ್ಮ ಆಧಾರ್/FID ನಂಬರ್/ಮೊಬೈಲ್ ನಂಬರ್/ಸರ್ವೆ ನಂಬರ್ ಅನ್ನು ನಮೂದಿಸಿ ಪರಿಹಾರ ಪಟ್ಟಿಯಲ್ಲಿ ಹೆಸರು ಇರುವುದನ್ನು ಚೆಕ್ ಮಾಡಲು ಈ ನಾಲ್ಕು ಆಯ್ಕೆಯನ್ನು ಒಂದನ್ನು ಆಯ್ಕೆ ಮಾಡಿಕೊಂಡು ಉದಾಹರಣೆಗೆ "Survey Number/ಸರ್ವೆ ನಂಬರ್" ಮೇಲೆ ಕ್ಲಿಕ್ ಮಾಡಿ.

Step-5: ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ,ಗ್ರಾಮ,ಸರ್ವೆ ನಂಬರ್ ನಮೂದಿಸಿ "Fetch/ಪಡೆಯಿರಿ" ಬಟನ್ ಮೇಲೆ ಕ್ಲಿಕ್ FID ನಂಬರ್ ಮೇಲೆ ಕ್ಲಿಕ್ ಮಾಡಿದರೆ ಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರು ದಾಖಲಾಗಿದ್ದೆರೆ ಪರಿಹಾರ ನಮೂದಿನ ವಿವರಗಳು ಕಾಲಂ ನಲ್ಲಿ Entry ID ಇನ್ನಿತರೆ ಅಗತ್ಯ ವಿವರ ಕಾಣಿಸುತ್ತದೆ ಈಗಾಗಲೇ ಹಣ ಜಮಾ ಅಗಿದ್ದರೆ "ಹಣ ಸಂದಾಯದ ವಿವರಗಳು" ಕಾಲಂ ನಲ್ಲಿ ಪಾವತಿ ವಿವರ ತೋರಿಸುತ್ತದೆ.

ಗಮನಿಸಿ: ಅರ್ಹರಿರುವ ಹಾಗೂ ಕೃಷಿ ಇಲಾಖೆಯ ಪ್ರೂಟ್ಸ್/Fruits/FID ತಂತ್ರಾಂಶದಲ್ಲಿ ಸರಿಯಾಗಿ ದಾಖಲಾಗಿರುವ ಬಹುತೇಕ ಎಲ್ಲಾ ರೈತರ ವಿವರವನ್ನು ಬರ ಪರಿಹಾರ ಪಟ್ಟಿಯಲ್ಲಿ ಕಂದಾಯ ಇಲಾಖೆಯಿಂದ ದಾಖಲಿಸಲಾಗಿರುತ್ತದೆ ಅಸಮರ್ಪಕ ಮಾಹಿತಿ ಇರುವ ರೈತರ ವಿವರವನ್ನು ಮಾತ್ರ ಕೈಬಿಡಲಾಗಿರುತ್ತದೆ.

ಇದನ್ನೂ ಓದಿ: Gold Loan-ಬ್ಯಾಂಕ್ ನಲ್ಲಿ ಗೋಲ್ಡ್ ಲೋನ್ ತೆಗೆದುಕೊಂಡವರು ತಪ್ಪದೇ ಈ ಮಾಹಿತಿ ನೋಡಿ!

Bara Parihara Amount-ಎರಡು ಕಂತುಗಳಲ್ಲಿ ಬರ ಪರಿಹಾರ ಬಿಡುಗಡೆ:

ರಾಜ್ಯ ಸರ್ಕಾರದಿಂದ ಎರಡು ಕಂತುಗಳಲ್ಲಿ ರೂ 5,000/- ಬರ ಪರಿಹಾರವನ್ನು ಬಿಡುಗಡೆ ಮಾಡಲಾಗುತ್ತಿದ್ದು ಈಗಾಗಲೇ ಮೊದಲ ಕಂತಿನ ರೂ 2,500/- ಅನೇಕ ಜಿಲ್ಲೆಯ ರೈತರಿಗೆ ಬಿಡುಗಡೆಯಾಗಿದ್ದು ಡಿಸೆಂಬರ್ ಅಂತ್ಯದ ಒಳಗಾಗಿ ಎಲ್ಲಾ ರೈತರ ಖಾತೆಗೆ ರೂ 5,000/- ಬರ ಪರಿಹಾರವನ್ನು ಜಮಾ ಮಾಡುವಂತೆ ಎಲ್ಲಾ ಜಿಲ್ಲೆಯ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ.

ರೈತರು ತಪ್ಪದೇ ಈ ಕ್ರಮ ಅನುಸರಿಸಿ:

ಈಗಾಗಲೇ ಮೊದಲ ಕಂತಿನ ಪರಿಹಾರವನ್ನು ಪಡೆದುಕೊಂಡಿರುವ ರೈತರು ಯಾವುದೇ ಕ್ರಮ ಅನುಸರಿಸುವ ಅವಶ್ಯಕತೆ ಇರುವುದಿಲ್ಲ ಇದಲ್ಲೇ ಬರ ಪರಿಹಾರ ಪಡೆಯಲು ಪ್ರತೇಕ ಅರ್ಜಿ ಸಲ್ಲಿಸುವ ಅವಶ್ಯಕತೆಯು ಇರುವುದಿಲ್ಲ ಅದರೆ ಕೇಲವು ತಾಂತ್ರಿಕ ನಿಯಮಗಳನ್ನು ಅನುಸರಿಸುವುದು ಕಡ್ಡಾಯ ಅದರ ವಿವರ ಹೀಗಿದೆ:

  • ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿರುವುದನ್ನು ಒಮ್ಮೆ ಖಚಿತಪಡಿಸಿಕೊಳ್ಳಿ.
  • ಪ್ರೂಟ್ಸ್ ಐಡಿ/FID ಅಲ್ಲಿ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಅಗಿರಬೇಕು.
  • ಬೆಳೆ ಸಮೀಕ್ಷೆಯಲ್ಲಿ ಬೆಳೆ ವಿವರ ದಾಖಲಾಗಿರಬೇಕು.
  • ಪಹಣಿ ಮತ್ತು ಆಧಾರ್ ನಲ್ಲಿರುವ ಹೆಸರಿನಲ್ಲಿ ತಾಳೆಯಾಗಿರಬೇಕು.

ಬರ ಪರಿಹಾರ ವಿತರಣೆ ಕುರಿತು ಯಾವುದೇ ಬಗ್ಗೆಯ ಅಗತ್ಯ ಮಾಹಿತಿಗಾಗಿ ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಆಡಳಿತಾಧಿಕಾರಿ(VAO) ಅವರವನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: