Bele Vime Amount-1449 ಕೋಟಿ ಬೆಳೆ ವಿಮೆ ರೈತರ ಖಾತೆಗೆ!ನಿಮಗೆ ಬಂತಾ ಚೆಕ್ ಮಾಡಿ!

July 26, 2025 | Siddesh
Bele Vime Amount-1449 ಕೋಟಿ ಬೆಳೆ ವಿಮೆ ರೈತರ ಖಾತೆಗೆ!ನಿಮಗೆ ಬಂತಾ ಚೆಕ್ ಮಾಡಿ!
Share Now:

2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಿ ಬೆಳೆ ವಿಮೆಯನ್ನು(Bele Vime Amount) ಮಾಡಿಕೊಂಡು ಪರಿಹಾರವನ್ನು ಪಡೆಯಲು ಅರ್ಹರಿರುವ ರೈತರಿಗೆ ವಿಮೆಯನ್ನು ಪಾವತಿಸಲು 1449 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಇಂದಿನ ಈ ಲೇಖನದಲ್ಲಿ ಯಾವ ಯಾವ ಜಿಲ್ಲೆಗೆ ಎಷ್ಟು ಪರಿಹಾರವನ್ನು(Crop Insurance) ಬಿಡುಗಡೆ ಮಾಡಲಾಗಿದೆ? ಬೆಳೆ ವಿಮೆ ಯೋಜನೆಯ(Fasal Bhima Yojana)ಪ್ರಯೋಜನ ಯಾರಿಗೆಲ್ಲ ಸಿಗಲಿದೆ?ಬೆಳೆ ವಿಮೆಯನ್ನು ಪಾವತಿಸಲು ಅರ್ಹ ರೈತರನ್ನು ಆಯ್ಕೆ ಮಾಡಲು ಬೆಳೆ ಅಂದಾಜು ಸಮೀಕ್ಷೆ ಮಾಡಲಾಗುತ್ತದೆ ಈ ಸಮೀಕ್ಷೆಯ ಕುರಿತು ವಿವರಣೆ ಸೇರಿದಂತೆ ರೈತರು ತಮ್ಮ ಮೊಬೈಲ್ ನಲ್ಲೇ ಹಣ ಪಾವತಿ ವಿವರವನ್ನು ಹೇಗೆ ಪಡೆಯುವುದು ಎನ್ನುವ ಮಾಹಿತಿಯನ್ನು ಸಹ ತಿಳಿಸಲಾಗಿದೆ.

ಇದನ್ನೂ ಓದಿ: Ration Card-ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!ಯಾರೆಲ್ಲ ಅರ್ಜಿ ಸಲ್ಲಿಸಬಹುದು?

Who Can Apply For Crop Insurance-ಬೆಳೆ ವಿಮೆ ಯೋಜನೆಯ ಪ್ರಯೋಜನ ಯಾರಿಗೆಲ್ಲ ಸಿಗಲಿದೆ?

ಬೆಳೆ ವಿಮೆ ಮಾಡಿಸಿ ಅನಿರೀಕ್ಷಿತ ಮಳೆ, ಬರ, ಚಂಡಮಾರುತ ಅಥವಾ ಇತರೆ ಪ್ರಾಕೃತಿಕ ವಿಕೋಪಗಳಿಂದ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ನಾಶವಾದ ರೈತರು ಈ ಯೋಜನೆಯಡಿ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ.

ತಮ್ಮ ಹೆಸರಿನಲ್ಲಿ ಕೃಷಿ ಜಮೀನನ್ನು ಹೊಂದಿರುವವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ನೋಂದಣಿಯನ್ನು ಮಾಡಿಕೊಳ್ಳಬಹುದು.

ಬೆಳೆ ವಿಮೆ ಯೋಜನೆಯಡಿ(Crop Insurance)ಪರಿಹಾರವನ್ನು ಪಡೆಯಲು ನಿಗದಿಪಡಿಸಿದ ಪ್ರೀಮಿಯಂ ಅನ್ನು ಪಾವತಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿರಬೇಕು.

ಇದನ್ನೂ ಓದಿ: Sainik Welfare Scholarship-ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ!

ಕೃಷಿ ಇಲಾಖೆಯಿಂದ ಪ್ರತಿ ಹಂಗಾಮಿನಲ್ಲಿ ನಡೆಸುವ ಬೆಳೆ ಸಮೀಕ್ಷೆ ಬೆಳೆ ಮಾಹಿತಿ ಮತ್ತು ಬೆಳೆ ವಿಮೆ ಯೋಜನೆಗೆ ಅರ್ಜಿ ಸಲ್ಲಿಸಿರುವಾಗ ನಮೂದಿಸಿದ ಬೆಳೆ ಮಾಹಿತಿ ತಾಳೆ ಅದರೆ ಮಾತ್ರ ಅಂತಹ ರೈತರಿಗೆ ಬೆಳೆ ವಿಮೆ ಪರಿಹಾರ ಸಿಗಲಿದೆ.

ಕೃಷಿ ಬೆಳೆಗಳಿಗೆ ಬೆಳೆ ವಿಮೆಯನ್ನು ಬೆಳೆ ಅಂದಾಜು ಸಮೀಕ್ಷೆಯಲ್ಲಿ ದಾಖಲಿಸುವ ಸರಾಸರಿ ಇಳುವರಿಯ ಆಧಾರದ ಮೇಲೆ ರೈತರಿಗೆ ಬೆಳೆ ವಿಮೆ ಪರಿಹಾರ ಪಾವತಿಸಬೇಕಾ ಅಥವಾ ಬೇಡವಾ? ಎಂದು ನಿರ್ಧಾರ ಮಾಡಲಾಗುತ್ತದೆ.

ಅದರೆ ತೋಟಗಾರಿಕೆ ಬೆಳೆಗಳಿಗೆ ವಿಮಾ ಪರಿಹಾರವನ್ನು ಒದಗಿಸಲು ಆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮಳೆ ಪ್ರಮಾಣದ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆ.

ಇದನ್ನೂ ಓದಿ: Ginger Crop-ಶುಂಠಿಗೆ ಎಲೆಚುಕ್ಕೆ ಕಾಟ ರೈತರ ನೆರವಿಗೆ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯ!

Bele Vime

What Is Crop Cutting Experiment-ಬೆಳೆ ಅಂದಾಜು ಸಮೀಕ್ಷೆ ಎಂದರೇನು?

ಕೃಷಿ ಬೆಳೆ ಅಂದರೆ ತೋಟಗಾರಿಕೆ/ತರಕಾರಿ ಬೆಳೆಗಳನ್ನು ಹೊರತುಪಡಿಸಿ ಮೆಕ್ಕೆಜೋಳ,ತೋಗರಿ,ಹತ್ತಿ ದ್ವಿದಳ ದಾನ್ಯ ಇತರೆ ಬೆಳೆಗಳಿಗೆ ವಿಮೆ ಪರಿಹಾರವನ್ನು ಪಾವತಿ ಮಾಡುವುದನ್ನು ನಿರ್ಧರಿಸಲು ಕೃಷಿ ಇಲಾಖೆಯಿಂದ ನಡೆಸುವ ಸಮೀಕ್ಷೆಗೆ ಬೆಳೆ ಅಂದಾಜು ಸಮೀಕ್ಷೆ(CCE-Crop Cutting Experiment)ಎನ್ನುತ್ತಾರೆ ರಾಜ್ಯದ್ಯಂತ ಪ್ರತಿ ಗ್ರಾಮ ಪಂಚಾಯತಿಯಲ್ಲಿ ನಿಗದಿಪಡಿಸಿದ ಬೆಳೆಯ ನಾಲ್ಕು ರೈತರ ತಾಕುಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಜಿಪಿಎಸ್ ಆಧಾರಿತವಾಗಿ 5*5 ಮೀಟರ್ ಅಳತೆಯಲ್ಲಿ ಬೆಳೆಯನ್ನು ಕಟಾವು ಮಾಡಿ ಸರಾಸರಿ ಇಳುವರಿಯನ್ನು ಲೆಕ್ಕ ಹಾಕಿದಾಗ ಇಳುವರಿ ಕಡಿಮೆ ಬಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ವಿತರಣೆ ಮಾಡಲಾಗುತ್ತದೆ.

ಇದನ್ನೂ ಓದಿ: Karnataka Cabinet Decisions-ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ: ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ!

District Wise Crop Insurance Amount Release Details-ಜಿಲ್ಲಾವಾರು ಬಿಡುಗಡೆಗೊಳಿಸಿದ ಬೆಳೆ ವಿಮೆ ಪರಿಹಾರದ ಮೊತ್ತ ಎಷ್ಟು?

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಪರಿಹಾರವನ್ನು ಒದಗಿಸಲು ಜಿಲ್ಲಾವಾರು ಬಿಡುಗಡೆಗೊಳಿಸಿರುವ ಬೆಳೆ ವಿಮೆ ಪರಿಹಾರದ ಅನುದಾನದ ವಿವರ ಈ ಕೆಳಗಿನಂತಿದೆ:

ಬೆಂಗಳೂರು ಗ್ರಾಮಾಂತರ: ₹79 ಲಕ್ಷ
ಬೆಂಗಳೂರು ನಗರ: ₹4 ಲಕ್ಷ
ದಕ್ಷಿಣ ಕನ್ನಡ: ₹2.40 ಲಕ್ಷ
ಧಾರವಾಡ: ₹23 ಕೋಟಿ
ಹಾವೇರಿ: ₹95 ಕೋಟಿ
ಉತ್ತರ ಕನ್ನಡ: ₹1 ಕೋಟಿ
ಚಿಕ್ಕಬಳ್ಳಾಪುರ: ₹38 ಕೋಟಿ
ಕಲಬುರಗಿ: ₹656 ಕೋಟಿ
ಉಡುಪಿ: ₹3 ಲಕ್ಷ
ಚಿಕ್ಕಮಗಳೂರು: ₹48 ಲಕ್ಷ
ಚಿತ್ರದುರ್ಗ: ₹33 ಕೋಟಿ
ದಾವಣಗೆರೆ: ₹44 ಕೋಟಿ
ಗದಗ: ₹242 ಕೋಟಿ

ಇದನ್ನೂ ಓದಿ: Agriscience Scholarship-ಕೊರ್ಟೆವಾ ಅಗ್ರಿಸೈನ್ಸಸ್ ಸ್ಕಾಲರ್‌ಶಿಪ್ ಅರ್ಜಿ ಆಹ್ವಾನ! ₹35,000 ವಿದ್ಯಾರ್ಥಿವೇತನ!

ಹಾಸನ: ₹26 ಕೋಟಿ
ಕೊಡಗು: ₹23 ಲಕ್ಷ
ಕೊಲಾರ: ₹1 ಕೋಟಿ
ರಾಮನಗರ: ₹2 ಕೋಟಿ
ಶಿವಮೊಗ್ಗ: ₹13 ಕೋಟಿ
ತುಮಕೂರು: ₹1 ಕೋಟಿ
ವಿಜಯನಗರ: ₹70 ಕೋಟಿ
ವಿಜಯಪುರ: ₹97 ಕೋಟಿ
ಬಳ್ಳಾರಿ: ₹32 ಲಕ್ಷ
ಕೊಪ್ಪಳ: ₹34 ಕೋಟಿ
ಮೈಸೂರು: ₹39 ಲಕ್ಷ
ಯಾದಗಿರಿ: ₹18 ಕೋಟಿ
ಬಾಗಲಕೋಟೆ: ₹14 ಕೋಟಿ
ಬೆಳಗಾವಿ: ₹24 ಕೋಟಿ
ಬೀದರ್: ₹13 ಕೋಟಿ
ಚಾಮರಾಜನಗರ: ₹2 ಕೋಟಿ
ಮಂಡ್ಯ: ₹3 ಕೋಟಿ
ರಾಯಚೂರು: ₹3 ಕೋಟಿ
ಒಟ್ಟು ಮೊತ್ತ: ₹1,449 ಕೋಟಿ

ಇದನ್ನೂ ಓದಿ: UPI Payment-ಆಗಸ್ಟ್ 1, 2025 ರಿಂದ UPI ಪಾವತಿಗೆ ಹೊಸ ನಿಯಮಗಳು: ಏನೆಲ್ಲ ಬದಲಾವಣೆ?

Bele Vime Status Check-ಬೆಳೆ ವಿಮೆ ಹಣ ಪಾವತಿ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?

ರೈತರು ಬೆಳೆ ವಿಮೆ ಯೋಜನೆಯಡಿ ನೇರ ನಗದು ವರ್ಗಾವಣೆ(DBT-Direct Benefit Transfer)ಮೂಲಕ ವರ್ಗಾವಣೆಯಾಗಿರುವ ಪರಿಹಾರದ ಮೊತ್ತದ ಸ್ಟೇಟಸ್ ಅನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಲು ಅವಕಾಶವಿರುತ್ತದೆ.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ Crop Insurance Status Check ಮಾಡಿ ಅಧಿಕೃತ ಬೆಳೆ ವಿಮೆ ಯೋಜನೆಯ www.samrakshane.karnataka.gov.in ತಂತ್ರಾಂಶವನ್ನು ಭೇಟಿ ಮಾಡಬೇಕು. ನಂತರ ಈ ಪೇಜ್ ನಲ್ಲಿ ವರ್ಷ: "2024-25" ಋತು: ಮುಂಗಾರು/Kharif ಎಂದು ಆಯ್ಕೆ ಮಾಡಿಕೊಂಡು "ಮುಂದೆ/Go" ಬಟನ್ ಮೇಲೆ ಕ್ಲಿಕ್ ಮಾಡಬೇಕು.

crop insurance

Step-2: ನಂತರ ಈ ಪೇಜ್ ನಲ್ಲಿ "Farmers" ಕಾಲಂ ನಲ್ಲಿ "Crop Insurance Details On Survey No" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಜಿಲ್ಲೆ/District,ತಾಲ್ಲೂಕು/Taluk,ಹೋಬಳಿ/Hobli, ಗ್ರಾಮ/Village, ಸರ್ವೆ ನಂಬರ್/Survey No ಅನ್ನು ಹಾಕಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸರ್ವೆ ನಂಬರ್ ಪಟ್ಟಿ ತೋರಿಸುತ್ತದೆ ಇಲ್ಲಿ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಬೆಳೆ ವಿಮೆ ಅರ್ಜಿ ಸಂಖ್ಯೆ ತೋರಿಸುತ್ತದೆ ಇದನ್ನು ಒಂದು ಕಡೆ ಬರೆದುಕೊಂಡು ಮುಂದುವರೆಯಬೇಕು.

Step-3: ಬೆಳೆ ವಿಮೆ ಅರ್ಜಿ ಸಂಖ್ಯೆಯನ್ನು ಬರೆದುಕೊಂಡು ಬಳಿಕ "Bele Vime Status" ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Application No ಕಾಲಂ ನಲ್ಲಿ ಬೆಳೆ ವಿಮೆ ಅರ್ಜಿ ಸಂಖ್ಯೆಯನ್ನು ನಮೂದಿಸಿ ಕೆಳಗೆ ಕಾಣುವ ಕ್ಯಾಪ್ಚ್/Captcha ಕೋಡ್ ಅನ್ನು ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ಬೆಳೆ ವಿಮೆ ಹಣ ಪರಿಹಾರ ಜಮಾ ಅಗಿದ್ದರೆ ಈ ಕೆಳಗಿನ ಪೋಟೋದಲ್ಲಿ ತೋರಿಸಿರುವ ರೀತಿಯನ್ನು ಬೆಳೆ ವಿಮೆ ಪರಿಹಾರದ ಜಮಾ ವಿವರ(Payment Status,Amount,Paid Date)ಕಾಣಿಸುತ್ತದೆ.

Bele Vime status

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: