Crop insurance amount-2024: 13 ಲಕ್ಷ ರೈತರಿಗೆ 1,400 ಕೋಟಿ ಬೆಳೆ ವಿಮೆ ಪರಿಹಾರ: ಸಚಿವ ಚೆಲುವರಾಯಸ್ವಾಮಿ

2023-24 ನೇ ಸಾಲಿನಲ್ಲಿ ಪಸಲ್ ಭೀಮಾ ಯೋಜನೆಯಡಿ ಅರ್ಜಿ ಸಲ್ಲಿಸಿ ತಮ್ಮ ಬೆಳೆಗಳಿಗೆ ಬೆಳೆ ವಿಮೆ(Crop insurance) ಮಾಡಿಕೊಂಡಿರುವ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ವರ್ಗಾವಣೆ ಕುರಿತು ಕೃಷಿ ಸಚಿವರು ನೀಡಿರುವ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

Crop insurance amount-2024: 13 ಲಕ್ಷ ರೈತರಿಗೆ 1,400 ಕೋಟಿ ಬೆಳೆ ವಿಮೆ ಪರಿಹಾರ: ಸಚಿವ ಚೆಲುವರಾಯಸ್ವಾಮಿ
Crop insurance amount-2024

2023-24 ನೇ ಸಾಲಿನಲ್ಲಿ ಪಸಲ್ ಭೀಮಾ ಯೋಜನೆಯಡಿ ಅರ್ಜಿ ಸಲ್ಲಿಸಿ ತಮ್ಮ ಬೆಳೆಗಳಿಗೆ ಬೆಳೆ ವಿಮೆ(Crop insurance) ಮಾಡಿಕೊಂಡಿರುವ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ವರ್ಗಾವಣೆ ಕುರಿತು ಕೃಷಿ ಸಚಿವರು ನೀಡಿರುವ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಪಸಲ್ ಬೀಮಾ ಯೋಜನೆಯಡಿಯಲ್ಲಿ ತಾವು ಬೆಳೆದಿರುವ ಬೆಳೆ ವಿಮೆಗಾಗಿ ಈ ವರ್ಷ ಸುಮಾರು 25 ಲಕ್ಷ ಜನ ರೈತರು ಹೆಸರನ್ನು ನೋಂದಾಯಿಸಿಕೊಂಡಿದ್ದು ಮಾರ್ಚ್ -2024 ತಿಂಗಳ ಅಂತ್ಯದ ವೇಳೆಗೆ 13 ಲಕ್ಷ ರೈತರಿಗೆ 1,400 ಕೋಟಿ ಮೊತ್ತವನ್ನು(Crop insurance amount) ಬೆಳೆ ವಿಮೆ ವರ್ಗಾಹಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Annabhagya yojana- ಈ ಪಟ್ಟಿಯಲ್ಲಿರುವವರಿಗೆ ಮಾರ್ಚ-2024 ತಿಂಗಳ ಅನ್ನಭಾಗ್ಯ ಅಕ್ಕಿ ವಿತರಣೆ ಮತ್ತು ಅಕ್ಕಿ ಹಣ ವರ್ಗಾವಣೆ ಪ್ರಾರಂಭ!

ನಾಗಮಂಗಲ ತಾಲೂಕಿನಲ್ಲಿ ನಡೆದ ಸವಲತ್ತು ವಿತರಣಾ ಸಮಾವೇಶ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆ ವಿಮೆಗಾಗಿ ಪ್ರಸ್ತುತ 8 ಲಕ್ಷ ರೈತರಿಗೆ 600 ಕೋಟಿ ವಿಮೆ ಹಣ ಪಾವತಿಯಾಗಿದೆ. ಉಳಿದ 800 ಕೋಟಿ ರೂ. ಅನ್ನು ಮಾರ್ಚ್ ಅಂತ್ಯದೊಳಗೆ ಪಾವತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Crop insurance status-2024: ರೈತರು ತಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಅರ್ಜಿ ಸ್ಥಿತಿ, ಹಣ ಜಮಾ ವಿವರ ಇತ್ಯಾದಿ ಮಾಹಿತಿಯನ್ನು ಕುಳಿತಲೇ ನೋಡಬಹುದಾಗಿದೆ:

ರಾಜ್ಯ ಸರಕಾರದ ಸಂರಕ್ಷಣೆ(https://samrakshane.karnataka.gov.in) ವೆಬ್ಸೈಟ್ ಭೇಟಿ ಮಾಡಿ ಬೆಳೆ ವಿಮೆ ಅರ್ಜಿ ಕುರಿತು ಈ ಕೆಳಗಿನ ವಿಧಾನವನ್ನು ಅನುಸರಿಸಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

Step-1: ಮೊದಲಿಗೆ ಈ Bele vime status check ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸಂರಕ್ಷಣೆ ಜಾಲತಾಣವನ್ನು ಭೇಟಿ ಮಾಡಬೇಕು. ಬಳಿಕ ಇಲ್ಲಿ "ವರ್ಷದ ಆಯ್ಕೆ / Select Insurance Year" ಕಾಲಂ ನಲ್ಲಿ 2023-24 ಎಂದು ವರ್ಷವನ್ನು ಆಯ್ಕೆ ಮಾಡಿಕೊಂದು "ಋತು ಆಯ್ಕೆ / Select Insurance Season" ಕಾಲಂ ನಲ್ಲಿ "Kharif" ಎಂದು ಆಯ್ಕೆ ಮಾಡಿ "ಮುಂದೆ/Go" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Online marriage registration- ಇನ್ನು ಮುಂದೆ ವಿವಾಹ ನೋಂದಣಿ ಭಾರೀ ಸುಲಭ ನಿಮ್ಮ ಮೊಬೈಲ್ ಮೂಲಕವೇ ನೋಂದಣಿ ಮಾಡಿ!

Step-2: ತದನಂತರ ಈ ಪೇಜ್ ನಲ್ಲಿ ಕೆಳಗಡೆ ಕಾಣುವ "Check Status" ಬಟನ್ ಮೇಲೆ ಕ್ಲಿಕ್ ಮಾಡಿ Check Status By Type ಆಯ್ಕೆ ವಿಭಾಗದಲ್ಲಿ "Mobile No" ಎಂದು ಟಿಕ್ ಮಾಡಿಕೊಂಡು ಅರ್ಜಿದಾರರ ಮೊಬೈಲ್ ಸಂಖ್ಯೆಯನ್ನು ಹಾಕಬೇಕು ಅಥವಾ ಆಧಾರ್ ಕಾರ್ಡ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ಆಧಾರ್ ಸಂಖ್ಯೆಯನ್ನು ಹಾಕಬಹುದು.

ಮೊಬೈಲ್ ನಂಬರ್ ಅನ್ನು ಹಾಕಿದ ನಂತರ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ Search ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ವಿವರ ಕೆಳಗಡೆ ತೋರಿಸುತ್ತದೆ.

Step-3: ನಂತರ ಇಲ್ಲಿ "Select" ಬಟನ್ ಮೇಲೆ ಕ್ಲಿಕ್ ಮಾಡಿದರೆ ನೀವು ಸಲ್ಲಿಸಿರುವ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಸಂಪೂರ್ಣ ವಿವರವಾದ ಮಾಹಿತಿ ತೋರಿಸುತ್ತದೆ.

Proposal Status: ವಿಭಾಗದಲ್ಲಿ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಮಾಹಿತಿ ತೋರಿಸುತ್ತದೆ.

ಇದನ್ನೂ ಓದಿ: Voter id application- ಮತದಾರರು ಪಟ್ಟಿಯಲ್ಲಿ ನಿಮ್ಮ ಹೆಸರು ಬಿಟ್ಟು ಹೋಗಿದ್ದರೆ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶ!

UTR Details: ವಿಭಾಗದಲ್ಲಿ ನಿಮಗೆ ಬೆಳೆ ವಿಮೆ ಪರಿಹಾರ ಜಮಾ ಅಗಿದರೆ ಯಾವ ದಿನ ಜಮಾ ಅಗಿದೆ? ಎಷ್ಟು ಮೊತ್ತ? UTR ನಂಬರ್ ವಿವರ ತೋರಿಸುತ್ತದೆ.

"View Details" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಸರ್ವೆ ನಂಬರ್ ಸಹಿತ ಬೆಳೆ ವಿಮೆ ಅರ್ಜಿ ವಿವರ ಪಡೆಯಬಹುದು.

Crop insurance status check- ಉಪಯುಕ್ತ ಲಿಂಕ್ ಗಳು: 

ಬೆಳೆ ವಿಮೆ ಅರ್ಜಿ ಸ್ಥಿತಿ ಚೆಕ್ ಮಾಡಲು: Crop insurance status check
ಸಂರಕ್ಷಣೆ ಅಧಿಕೃತ ವೆಬ್ಸೈಟ್: Click here