Sprinkler set Subsidy-ಕೃಷಿ ಇಲಾಖೆಯಿಂದ ಶೇ 90 ರಷ್ಟು ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

PMKSY scheme: ಪ್ರತಿ ವರ್ಷದಂತೆ ಈ ವರ್ಷವು ಕೃಷಿ ಇಲಾಖೆಯಿಂದ ರೈತರಿಗೆ ಬೇಸಿಗೆ/ಹಿಂಗಾರು ಹಂಗಾಮಿನಲ್ಲಿ ಬೆಳೆಗಳಲ್ಲಿ ನೀರನ್ನು ಒದಗಿಸಲು ತುಂತುರು ನೀರಾವರಿ ಘಟಕ/ಸ್ಪಿಂಕ್ಲರ್ ಸೆಟ್ ಅನ್ನು ಶೇ 90 ರಷ್ಟು ಸಹಾಯಧನದಲ್ಲಿ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

Sprinkler set Subsidy-ಕೃಷಿ ಇಲಾಖೆಯಿಂದ ಶೇ 90 ರಷ್ಟು ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
Sprinkler set yojana

ಪ್ರತಿ ವರ್ಷದಂತೆ ಈ ವರ್ಷವು ಕೃಷಿ ಇಲಾಖೆಯಿಂದ ರೈತರಿಗೆ ಬೇಸಿಗೆ/ಹಿಂಗಾರು ಹಂಗಾಮಿನಲ್ಲಿ ಬೆಳೆಗಳಲ್ಲಿ ನೀರನ್ನು ಒದಗಿಸಲು ತುಂತುರು ನೀರಾವರಿ ಘಟಕ/ಸ್ಪಿಂಕ್ಲರ್ ಸೆಟ್ ಅನ್ನು ಶೇ 90 ರಷ್ಟು ಸಹಾಯಧನದಲ್ಲಿ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯವು ರಾಜಸ್ಥಾನದ ನಂತರ ದೇಶದಲ್ಲಿ ಹೆಚ್ಚಿನ ಒಣಭೂಮಿ ಪ್ರದೇಶವನ್ನು ಹೊಂದಿರುವ ಎರಡನೆ ರಾಜ್ಯವಾಗಿರುತ್ತದೆ. ರಾಜ್ಯದಲ್ಲಿ ಸುಮಾರು ಶೇ.66 ರಷ್ಟು ಸಾಗುವಳಿ ಪ್ರದೇಶದಲ್ಲಿ ಮಳೆಯಾಶ್ರಿತ ಕೃಷಿ ಇದ್ದು, ಶೇ 34ರಷ್ಟು ಪ್ರದೇಶ ಮಾತ್ರ ನೀರಾವರಿ ಸೌಲಭ್ಯವನ್ನು ಹೊಂದಿರುತ್ತದೆ. ಬೆಳೆಗೆ ನೀರು ಅತ್ಯಮೂಲ್ಯ ಅವಶ್ಯಕತೆಯಾಗಿದ್ದು, ನೀರಿನ ಸಮರ್ಥ ಬಳಕೆ ಕೃಷಿಯಲ್ಲಿ ಪ್ರಾಮುಖ್ಯವಾಗಿರುತ್ತದೆ.

ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

ಕೃಷಿ ಇಲಾಖೆಯಿಂದ ರಾಜ್ಯದಲ್ಲಿ ನೀರಿನ ಸಮರ್ಥ ಬಳಕೆಯನ್ನು ಉತೇಜಿಸುವ ಸಲುವಾಗಿ ಸೂಕ್ಷ್ಮ ನೀರಾವರಿ ಯೋಜನೆಯನ್ನು 2003-04 ರಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಸದರಿ ಯೋಜನೆಯಡಿ ಹನಿ ಮತ್ತು ತುಂತುರು ನೀರಾವರಿ ಘಟಕಗಳನ್ನು ಶೇ 90 ರಷ್ಟು ಸಹಾಯಧನದಲ್ಲಿ ಒದಗಿಸಲಾಗುತ್ತದೆ.

ಇದನ್ನೂ ಓದಿ: Parihara list-ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರಿದ್ಯಾ? ಚೆಕ್ ಮಾಡಿ.

Sprinkler set Subsidy amount-ಎಷ್ಟು ಸಹಾಯಧನ ನೀಡಲಾಗುತ್ತದೆ?

ಸೂಕ್ಷ್ಮ ನೀರಾವರಿ ಯೋಜನೆಯಡಿ(PMKSY) ರೈತರಿಗೆ 2 ಹೆಕ್ಟೇರ್(5 ಎಕರೆ) ವರೆಗೆ ಶೇ 90 ರಷ್ಟು ಸಹಾಯಧನದಲ್ಲಿ ತುಂತುರು ನೀರಾವರಿ ಘಟಕವನ್ನು ಪಡೆಯಬವುದು.

ಪ್ರಸ್ತುತ ವರ್ಷದಲ್ಲಿ 30 ಪೈಪ್ ಮತ್ತು 5 ಜೆಟ್ ಪಡೆಯಲು  ರೈತರು ರೂ.4139/- ಪಾವತಿಸಬೇಕು ಇದಕ್ಕೆ ಸರಕಾರದಿಂದ  ರೂ. 19429/- ಸಹಾಯಧನ ನೀಡಲಾಗುತ್ತದೆ.

2 ಹೆಕ್ಟೇರ್ ಗಿಂತ ಮೇಲ್ಪಟ್ಟ ಪ್ರದೇಶದವರೆಗೆ ಸಹಾಯಧನದಲ್ಲಿ ತುಂತುರು ನೀರಾವರಿ ಘಟಕವನ್ನು ಪಡೆಯಲು ಶೇ 45 ರಷ್ಟು ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ: New ration shop- ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬವುದು?

ಅರ್ಜಿ ಸಲ್ಲಿಸಲು ಅರ್ಹತೆಗಳು:

ಈ ಯೋಜನೆಯಡಿ ಎಲ್ಲಾ ವರ್ಗದ ರೈತರು ಅರ್ಜಿ ಸಲ್ಲಿಸಿ ಸ್ಪಿಂಕ್ಲರ್ ಸೆಟ್ ಪಡೆಯಬವುದು.

ಒಂದು ಬಾರಿ ಈ ಯೋಜನೆಯಡಿ ಸ್ಪಿಂಕ್ಲರ್ ಸೆಟ್ ಪಡೆದ ಬಳಿಕ ಮತ್ತೊಮ್ಮೆ  ಈ ಯೋಜನೆಯಡಿ ಪ್ರಯೋಜನ ಪಡೆಯಲು 7 ವರ್ಷ ಅದ ಬಳಿಕವೇ ಅರ್ಜಿ ಸಲ್ಲಿಸಲು ಸಾದ್ಯವಗುತ್ತದೆ 7 ವರ್ಷದ ಒಳಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ.

ಬೆಳೆಗಳಿಗೆ ನೀರನ್ನು ಒದಗಿಸಲು ಸ್ವಂತ ಜಮೀನಿನಲ್ಲಿ ನೀರಾವರಿ ಮೂಲ ಅಂದರೆ ಕೊಳವೆ ಬಾವಿ, ಬಾವಿ, ಕೃಷಿ ಹೊಂಡವನ್ನು ಹೊಂದಿರುವವರಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: MSP price-2023: ಬೆಂಬಲ ಬೆಲೆಯಲ್ಲಿ ರಾಗಿ,ಜೋಳ,ಭತ್ತ ಖರೀದಿ! ಬೆಲೆ ಎಷ್ಟು? ನೊಂದಣಿ ಪ್ರಕ್ರಿಯೆ ಹೇಗಿರಲಿದೆ?

Required documents for pmksy scheme-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

  • ಪಹಣಿ/ಉತಾರ್/RTC
  • ನೀರಾವರಿ/ಕೊಳವೆ ಬಾವಿ/ಬಾವಿ ಧೃಡೀಕರಣ ಪತ್ರ(ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಪಡೆಯಬೇಕು)
  • 2 ಫೋಟೋ
  • 20 ರೂ. ಛಾಪಾ ಕಾಗದ(ರೈತ ಸಂಪರ್ಕ ಕೇಂದ್ರದಲ್ಲಿ ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿ) 
  • ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
  • ಬ್ಯಾಂಕಿನ ಪಾಸ್ ಬುಕ್ ಪ್ರತಿ.
  • ಜಾತಿ ಪ್ರಮಾಣ ಪತ್ರ(ಪ. ಜಾತಿ/ಪ.ಪಂಗಡ ವರ್ಗದ ರೈತರಿಗೆ ಮಾತ್ರ)
  • ಬೆಳೆ ಧೃಡೀಕರಣ ಪತ್ರ(ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಪಡೆಯಬೇಕು)

ಇದನ್ನೂ ಓದಿ: ರೈತರು ನಿಮ್ಮ FID ನಂಬರ್ ನಲ್ಲಿ ಯಾವೆಲ್ಲ ಸರ್ವೆ ನಂಬರ್ ಸೇರ್ಪಡೆಯಾಗಿವೆ? ಎಂದು ನಿಮ್ಮ ಮೊಬೈಲ್‌ನಲ್ಲೇ ತಿಳಿಯಿರಿ!


ಎಲ್ಲಿ ಅರ್ಜಿ ಸಲ್ಲಿಸಬೇಕು?

ಅಗತ್ಯ ದಾಖಲಾತಿಗಳ ಸಮೇತ ಆಸಕ್ತ ಅರ್ಜಿದಾರರು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

ಫಲಾನುಭವಿ ಆಯ್ಕೆ ಪ್ರಕ್ರಿಯೆ:

ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯೊಂದಿಗೆ ನೀವು ಸಲ್ಲಿಸಿದ ಎಲ್ಲಾ ದಾಖಲಾತಿಗಳು ಸರಿಯಾಗಿವೆಯೆ ಎಂದು ಅಧಿಕಾರಿಗಳು ಮರುಪರಿಶೀಲನೆ ಮಾಡಿ ನಿಮ್ಮ ಅರ್ಜಿಯನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಅನುದಾನ ಲಬ್ಯತೆ ಆಧಾರದ ಮೇಲೆ ಅರ್ಜಿ ಸಲ್ಲಿಸಿದವರಿಗೆ ಪೈಪ್ ಸರಬರಾಜು ಕಂಪನಿಗೆ ರೈತರ ವಂತಿಕೆಯನ್ನು RTGS ಮಾಡಲು ತಿಳಿಸಲಾಗುತ್ತದೆ.

ಬಳಿಕ ಅರ್ಜಿದಾರರು ಬ್ಯಾಂಕ್ ಮೂಲಕ ಪೈಪ್ ಸರಬರಾಜು ಕಂಪನಿಗೆ ರೈತರ ವಂತಿಕೆಯ ಹಣವನ್ನು ವರ್ಗಾಹಿಸಿ ಬ್ಯಾಂಕ್ ನಲ್ಲಿ ನೀಡುವ ಸ್ಲಿಪ್ ಅನ್ನು ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಿ ರೈತರು ಪೈಪ್ ಮತ್ತು ಸ್ಪಿಂಕ್ಲರ್ ಅನ್ನು ಪಡೆಯಬವುದು.