Education Loan-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

June 9, 2025 | Siddesh
Education Loan-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!
Share Now:

ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್,ವೈದ್ಯಕೀಯ ಪದವಿ(Education Loan Subsidy) ಸೇರಿದಂತೆ 28 ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡಲು ಅತೀ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲವನ್ನು ಪಡೆಯಲು ರಾಜ್ಯ ಸರ್ಕಾರದಡಿ ಬರುವ ವಿವಿಧ ನಿಗಮಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತುತ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ದೇವರಾಜು ಅರಸು ನಿಗಮದಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಯೋಜನೆಯ(Karnataka Education Loan Yojana) ಪ್ರಯೋಜನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇತ್ಯಾದಿ ಅಗತ್ಯ ಮತ್ತು ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Vibhuti Ghataka Subsidy- ₹4.00 ಲಕ್ಷದಲ್ಲಿ ವಿಭೂತಿ ಘಟಕ ಸ್ಥಾಪನೆ ಮಾಡಲು ಸಬ್ಸಿಡಿ ಪಡೆಯಲು ಅರ್ಜಿ!

Karnataka Education Loan Scheme-ಅತೀ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲ:

ರಾಜ್ಯ ಸರ್ಕಾರದಡಿ ಬರುವ ವಿವಿಧ ಅಭಿವೃದ್ಧಿ ನಿಗಮಗಳಿಂದ ಪ್ರತಿ ವರ್ಷ ಈ ಸಮಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಪ್ರವೇಶ ಪಡೆದ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವಾಗಲು ಅತೀ ಕಡಿಮೆ ಬಡ್ಡಿದರದಲ್ಲಿ ಅಂದರೆ ಶೇ 2% ಬಡ್ಡಿದರದಲ್ಲಿ ₹4.00 ಲಕ್ಷದಿಂದ ₹5.00 ಲಕ್ಷದವರೆಗೆ ಸಾಲವನ್ನು ಒದಗಿಸಲು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ದೇವರಾಜು ಅರಸು ನಿಗಮದಿಂದ ಪ್ರಸ್ತುತ ಅರ್ಜಿಯನ್ನು ಆಹ್ವಾನಿಸಲಾಗಿದೆ.

Who can Apply For Education Loan-ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು:

(1) ವಿದ್ಯಾರ್ಥಿಯು ಸರ್ಕಾರಿ ಕಾಲೇಜು/ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ, ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ/ತಾಂತ್ರಿಕ/ಉನ್ನತ ವ್ಯಾಸಂಗದ ಕೋರ್ಸ್‌ಗಳಲ್ಲಿ ಸಿ.ಇ.ಟಿ ಮೂಲಕ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರಬೇಕು.
(2) ವಿದ್ಯಾರ್ಥಿಯು ಶೈಕ್ಷಣಿಕ ಉದ್ದೇಶಕ್ಕೆ ಇತರ ಯಾವುದೇ ಬ್ಯಾಂಕ್/ಆರ್ಥಿಕ ಸಂಸ್ಥೆ/ ಇಲಾಖೆಗಳಿಂದ ಸಾಲ ಪಡೆದಿರಬಾರದು.
(3) ಆಯಾ ನಿಗಮಕ್ಕೆ ಸಂಬಂಧಪಟ್ಟ ವರ್ಗದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
(4) ವಿದ್ಯಾರ್ಥಿಯು ಕರ್ನಾಟಕ ಖಾಯಂ ನಿವಾಸಿಯಾಗಿರಬೇಕು.

ಇದನ್ನೂ ಓದಿ: Car Subsidy Application-₹3.0 ಲಕ್ಷ ಸಬ್ಸಿಡಿಯಲ್ಲಿ ಕಾರು ಖರೀದಿ ಮಾಡಲು ಅರ್ಜಿ!

education loan

Education Loan Age limit-ಅರ್ಜಿ ಸಲ್ಲಿಸಲು ವಯೋಮಿತಿ:

  • ಸ್ನಾತಕ (Graduation)- 18 ರಿಂದ 21 ವರ್ಷ.
  • ಸ್ನಾತಕೋತ್ತರ (Post Graduation)- 21 ರಿಂದ 30 ವರ್ಷ.

Education Loan Course Covered-ಯಾವೆಲ್ಲ ಪದವಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಾಲ ನೀಡಲಾಗುತ್ತದೆ:

ಕರ್ನಾಟಕ ರಾಜ್ಯ ಸರ್ಕಾರದಡಿ ಬರುವ ವಿವಿಧ ನಿಗಮಗಳಿಂದ ಅತೀ ಕಡಿಮೆ ಬಡ್ಡಿದರದಲ್ಲಿ ಈ ಕೆಳಗಿನ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ನೀಡಲಾಗುತ್ತದೆ.

ಬಿ.ಇ(ಸಿ.ಇ.ಟಿ), ಎಂ.ಬಿ.ಬಿ.ಎಸ್, ಬಿ.ಯೂ.ಎಂ.ಎಸ್(ಸಿ.ಇ.ಟಿ), (Bachelar of Unam Medicine and Surgery), ಬಿ.ಡಿ.ಎಸ್(ಸಿ.ಇಟಿ), ಬಿ.ಎ.ಎಂ.ಎಸ್‌ (ಸಿ.ಇ.ಟಿ), ಬಿ.ಎಚ್.ಎಂ.ಎಸ್(ಸಿ.ಇ.ಟಿ), (Bachelar of Homeopathic Medicine and Surgery), ಎಂ.ಬಿ.ಎ (ಸಿ.ಇ.ಟಿ), ಎಂ.ಟೆಕ್‌ (ಸಿ.ಇ.ಟಿ), ಎಂ.ಇ (Master of Engineering), ಎಂ.ಡಿ (Doctor of Medicine), ಪಿ.ಹೆಚ್.ಡಿ, ಬಿ.ಸಿ.ಎ/ಎಂ.ಸಿ.ಎ, ಎಂ.ಎಸ್. ಅಗ್ರಿಕಲ್ಚರ್‌, ಬಿ.ಎಸ್.ಸಿ(ನರ್ಸಿಂಗ್), ಬಿ.ಫಾರಂ/ಎಂ.ಫಾರಂ, ಬಿ.ಎಸ್.ಸಿಪ್ಯಾರಾಮೆಡಿಕಲ್, ಬಿ.ಎಸ್.ಸಿಬಯೋಟೆಕ್ನಾಲಜಿ, ಬಿ.ಟೆಕ್, ಬಿ.ಪಿ.ಟಿ (Bachelor of Physio Therapy)

ಇದನ್ನೂ ಓದಿ: Jalajeevana Yojane-ಲಿಂಗಾಯತ ನಿಗಮದಿಂದ ಬೋರ್ವೆಲ್ ಕೊರೆಸಲು ₹4.25 ಲಕ್ಷ ಸಬ್ಸಿಡಿಗೆ ಅರ್ಜಿ!

ಬಿ.ವಿ.ಎಸ್.ಸಿ/ಎಂ.ವಿ.ಎಸ್.ಸಿ(Bachelor of Veterinary Science/Master of Veterinary Science), ಜಿ.ಎನ್.ಎಂ (General Nursing and Midwifery Course), ಬಿ.ಹೆಚ್.ಎಮ್‌ (Bachelor Degree in Hotel 22 Management), ಎಂ.ಡಿ.ಎಸ್‌ (Master of Dental Surgery), ಎಂ.ಎಸ್.ಡಬ್ಲೂ (Master of Social Work), ಎಲ್.ಎಲ್.ಎಂ, ಎಂ.ಎಫ್.ಎ(Master of Fianance and Accounting), ಎಂ.ಎಸ್. ಸಿ(ಬಯೋಟೆಕ್ನಾಲಜಿ), ಎಂ.ಎಸ್.ಸಿ.ಎಜಿ.

Education Loan Online Application-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಈ ಕೆಳಗಿನ ವಿವರಿಸಿರುವ ವಿಧಾನವನ್ನು ಅನುಸರಿಸಿ ಸೇವಾ ಸಿಂಧು ತಂತ್ರಾಂಶವನ್ನು ಭೇಟಿ ಮಾಡಿ ತಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ನಿಗಮದಿಂದ ಅವಕಾಶವನ್ನು ನೀಡಲಾಗಿದೆ.

Step-1: ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಥಮದಲ್ಲಿ ಈ ಲಿಂಕ್ Apply Now ಮೇಲೆ ಒತ್ತಿ ಸೇವಾ ಸಿಂಧು ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: SSC Job Notification-ಕೇಂದ್ರದ SSC ನೇಮಕಾತಿ ಆಯೋಗದಿಂದ 2423 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ!

Step-2: ತದನಂತರ ಈ ವೆಬ್ಸೈಟ್ ಗೆ ಪ್ರಥಮ ಬಾರಿಗೆ ಭೇಟಿ ಮಾಡುತ್ತಿರುವವರು ಈ ಪೇಜ್ ನಲ್ಲಿ ಕಾಣುವ "Register Here" ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿಯನ್ನು ಸಕ್ರಿಯಗೊಳಿಸಬೇಕು. ಬಳಿಕ ಬಳಕೆದಾರ ಐಡಿ ಮತು OTP ಅನ್ನು ನಮೂದಿಸಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ದಾಖಲಾತಿಗಳನ್ನು ಅಪ್ಲೋಡ್ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

Required Documents For Education Loan- ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳು:

ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ವಿವರಿಸುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

1) ವಿದ್ಯಾರ್ಥಿಯ ಆಧಾರ್ ಕಾರ್ಡ
2) ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ
3) ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
4) ಶಾಲಾ ಪ್ರವೇಶ ಪತ್ರ
5) ವ್ಯಾಸಂಗ ಪ್ರಮಾಣ ಪತ್ರ
6) ಪೋಟೋ
8) ಮೊಬೈಲ್ ನಂಬರ್

ಇದನ್ನೂ ಓದಿ: South India Tour-ದಕ್ಷಿಣ ಭಾರತ ಯಾತ್ರೆ ಕೈಗೊಳ್ಳಲು ಸರ್ಕಾರದಿಂದ ₹5,000 ಸಹಾಯಧನ!

Student Selecation Method-ವಿದ್ಯಾರ್ಥಿಯ ಆಯ್ಕೆಯ ವಿಧಾನ ಹೇಗೆ?

ವಿವಿಧ ನಿಗಮಗಳಿಂದ ಪ್ರತಿ ವರ್ಷ ಕಾಲೇಜುಗಳು ಪ್ರಾರಂಭವಾದ ನಂತರ ಆರ್ಥಿಕ ನೆರವು ಒದಗಿಸುವ ಬಗ್ಗೆ ಸ್ಥಳೀಯ ಪತ್ರಿಕೆಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ ನಂತರ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಸಂಬಂಧಿಸಿದ ಕೋರ್ಸಿನ ಪೂರ್ಣಾವಧಿಗೆ ಅಗತ್ಯವಿರುವ ಒಟ್ಟು ಸಾಲದ ಮೊತ್ತಕ್ಕೆ ಒಂದೇ ಬಾರಿಗೆ ಸಾಲದ ಮಂಜೂರಾತಿಯನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಮುಂದೆ ಮಂಡಿಸಿ, ಅನುಮೋದನೆ/ಮಂಜೂರಾತಿ ಪಡೆಯುವುದು.

ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಯನ್ನು ಪ್ರಸ್ತಾವನೆ ಸಹಿತ ನಿಗಮಕ್ಕೆ ಸಾಲ ಬಿಡುಗಡೆಗೆ ಆಯ್ಕೆ ಸಮಿತಿಯು ಕಳುಹಿಸಿ ಕೊಡುತ್ತದೆ. ನಿಗಮದ ಕೇಂದ್ರ/ವಿಭಾಗ ವ್ಯವಸ್ಥಾಪಕರ ಕಛೇರಿಯಲ್ಲಿ ಪುಸ್ತಾವನೆಯನ್ನು ಪರಿಶೀಲಿಸಿ ಸಾಲ ಮಂಜೂರಾತಿಯನ್ನು ಮಾಡಲಾಗುತ್ತದೆ.

ಇದನ್ನೂ ಓದಿ: PM Kisan 20th installment-ಪಿಎಂ ಕಿಸಾನ್ 20ನೇ ಕಂತು ಈ ಅವಧಿಯಲ್ಲಿ ಬಿಡುಗಡೆ ಸಾಧ್ಯತೆ!

For More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು:

Lingayat Nigama-ಲಿಂಗಾಯತ ನಿಗಮದ ವೆಬ್ಸೈಟ್- Click Here
Devaraja Arasu Nigama-ದೇವರಾಜ ಅರಸು ನಿಗಮದ ವೆಬ್ಸೈಟ್- Click Here
Lingayat Nigama Helpline-ಲಿಂಗಾಯತ ನಿಗಮ ಸಹಾಯವಾಣಿ- 8022865522/9900012351
Devaraja Arasu Helpline-ದೇವರಾಜ ಅರಸು ನಿಗಮ ಸಹಾಯವಾಣಿ- 80-22374832, 8050770004, 805077000

WhatsApp Group Join Now
Telegram Group Join Now
Share Now: