Gruhalakshmi Amount-ಗೃಹಲಕ್ಷ್ಮಿ ಯೋಜನೆಯಡಿ 20ನೇ ಕಂತಿನ ಹಣ ಬಿಡುಗಡೆ!

June 10, 2025 | Siddesh
Gruhalakshmi Amount-ಗೃಹಲಕ್ಷ್ಮಿ ಯೋಜನೆಯಡಿ 20ನೇ ಕಂತಿನ ಹಣ ಬಿಡುಗಡೆ!
Share Now:

ರಾಜ್ಯ ಸರ್ಕಾರದಿಂದ ಪಡಿತರ ಚೀಟಿದಾರ ಕುಟುಂಬದ ಯಜಮಾನಿಯರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಜೂನ್-2025 ತಿಂಗಳ ಆರಂಭದಲ್ಲೇ ಗೃಹಲಕ್ಷ್ಮಿ(Gruhalakshmi) ಯೋಜನೆಯ 20ನೇ ಕಂತಿನ ರೂ 2,000/- ಹಣವನ್ನು ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಮಾಡಲಾಗಿದೆ.

ಪಡಿತರ ಚೀಟಿ(Ration Card) ಹೊಂದಿರುವ ಕುಟುಂಬದ ಯಜಮಾನಿಯರ ಅರ್ಹ ಫಲಾನುಭವಿಗಳ ಖಾತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ 2,000/-ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತದೆ ಪ್ರಸ್ತುತ ಈ ಯೋಜನೆಯಡಿ ನೇ ಕಂತಿನ ಹಣವನ್ನು ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: Education Loan-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

ಈ ಅಂಕಣದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ(Gruhalakshmi Yojane) ಎಷ್ಟು ಹಣ ಬಿಡುಗಡೆ ಮಾಡಲಾಗಿದೆ? ಫಲಾನುಭವಿಗಳು ಇಲ್ಲಿಯವರೆಗೆ ಜಮಾ ಅಗಿರುವ ಈ ಯೋಜನೆಯ ಹಣ ಜಮಾ ವಿವರವನ್ನು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Gruhalakshmi Amount-ಗೃಹಲಕ್ಷ್ಮಿ ಯೋಜನೆಯಡಿ 20ನೇ ಕಂತಿನ ಹಣ ಬಿಡುಗಡೆ:

ರಾಜ್ಯ ಸರ್ಕಾರದಿಂದ ಈಗಾಗಲೇ 19 ಕಂತಿನ ವರೆಗೆ ಹಣವನ್ನು ಜಮಾ ಮಾಡಲಾಗಿದ್ದು ಇದರನ್ವಯ ಡಿಸೆಂಬರ್-2024 ತಿಂಗಳ ಹಣ ಅಂದರೆ 17ನೇ ಕಂತಿನ ಹಣವನ್ನು 11 ಮಾರ್ಚ್ 2025 ರಂದು ಮತ್ತು 18ನೇ ಕಂತಿನ ಜನವರಿ-2025 ತಿಂಗಳ ಹಣವನ್ನು 30 ಮಾರ್ಚ್ 2025 ರಂದು ಹಾಗೂ ಫೆಬ್ರವರಿ ತಿಂಗಳ 19ನೇ ಕಂತಿನ ಹಣವನ್ನು 19 ಮೇ 2025ರಂದು ಜಮಾ ಮಾಡಲಾಗಿದೆ ಇದೇ ಮಾದರಿಯಲ್ಲಿ ಮಾರ್ಚ್ ತಿಂಗಳ 20ನೇ ಕಂತಿನ ಹಣವನ್ನು 09 ಜೂನ್ 2025 ರಂದು ರಾಜ್ಯ ಅರ್ಹ 1.28 ಕೋಟಿ ಮಹಿಳೆಯರ ಖಾತೆಗೆ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: Vibhuti Ghataka Subsidy- ₹4.00 ಲಕ್ಷದಲ್ಲಿ ವಿಭೂತಿ ಘಟಕ ಸ್ಥಾಪನೆ ಮಾಡಲು ಸಬ್ಸಿಡಿ ಪಡೆಯಲು ಅರ್ಜಿ!

Gruhalakshmi Installment Date-ಕಂತಿನವಾರು ಹಣ ಬಿಡುಗಡೆ ದಿನಾಂಕ:

ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿ 17ನೇ ಕಂತಿನಿಂದ 20ನೇ ಕಂತಿನ ವರೆಗೆ ಯಾವ ದಿನಾಂಕದಂದು ಹಣವನ್ನು ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ ಎನ್ನುವ ಮಾಹಿತಿಯು ಈ ಕೆಳಗಿನಂತಿದೆ:

  • ಡಿಸೆಂಬರ್-2024(17 ನೇ ಕಂತು): 11 ಮಾರ್ಚ್ 2025
  • ಜನವರಿ-2025(18 ನೇ ಕಂತು): 30 ಮಾರ್ಚ್ 2025
  • ಫೆಬ್ರವರಿ-2025(19 ನೇ ಕಂತು): 19 ಮೇ 2025
  • ಮಾರ್ಚ್-2025(20 ನೇ ಕಂತು): 09 ಜೂನ್ 2025

ಇದನ್ನೂ ಓದಿ: SSC Job Notification-ಕೇಂದ್ರದ SSC ನೇಮಕಾತಿ ಆಯೋಗದಿಂದ 2423 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ!

gruhalakshmi

Karnataka Gruhalakshmi Scheme-ಗೃಹಲಕ್ಷ್ಮಿ ಯೋಜನೆ: ಉದ್ದೇಶ ಮತ್ತು ಪ್ರಯೋಜನಗಳು:

ಕರ್ನಾಟಕ ಸರ್ಕಾರವು 2023ರಲ್ಲಿ ಆರಂಭಿಸಿದ ಗೃಹಲಕ್ಷ್ಮಿ ಯೋಜನೆಯು ಮನೆಯ ಮುಖ್ಯಸ್ಥೆಯಾಗಿರುವ ಮಹಿಳೆಯರಿಗೆ ಆರ್ಥಿಕ ಸಬಲೀಕರಣವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ, ಅಂತ್ಯೋದಯ, ಬಿಪಿಎಲ್, ಮತ್ತು ಎಪಿಎಲ್ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳ ಮುಖ್ಯಸ್ಥ ಮಹಿಳೆಯರಿಗೆ,

ಪ್ರತಿ ತಿಂಗಳು ರೂ. 2,000 ನೇರವಾಗಿ ಅವರ ಆಧಾರ್-ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯು ರಾಜ್ಯದ 1.26 ಕೋಟಿಗೂ ಅಧಿಕ ಮಹಿಳೆಯರಿಗೆ ಪ್ರಯೋಜನವನ್ನು ಒದಗಿಸಿದೆ ಎಂದು ಸೇವಾ ಸಿಂಧು ಪೋರ್ಟಲ್‌ನ ದತ್ತಾಂಶ ತಿಳಿಸುತ್ತದೆ.

ಇದನ್ನೂ ಓದಿ: Car Subsidy Application-₹3.0 ಲಕ್ಷ ಸಬ್ಸಿಡಿಯಲ್ಲಿ ಕಾರು ಖರೀದಿ ಮಾಡಲು ಅರ್ಜಿ!

Gruhalakshmi Total Amount-ಫಲಾನುಭವಿಗಳ ಖಾತೆಗೆ ರೂ 2,000/- ಸಾವಿರ ಹಣ ಬಿಡುಗಡೆ:

ಕರ್ನಾಟಕ ರಾಜ್ಯ ಸರ್ಕಾರದಿಂದ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 20 ಕಂತಿನ ಹಣವನ್ನು ಸೇರಿ ತಲಾ ಒಂದು ಕಂತಿಗೆ ರೂ 2,000/-ದಂತೆ ಒಟ್ಟು ಒಬ್ಬ ಫಲಾನುಭವಿ ಮಹಿಳೆಯ ಖಾತೆಗೆ ಈ ಯೋಜನೆಯ ಆರಂಭವಾದ ದಿನಾಂಕದಿಂದ ಇಲ್ಲಿಯವೆರೆಗೆ ಒಟ್ಟು 40,000/- ಸಾವಿರ ಹಣವನ್ನು ಜಮಾ ಮಾಡಲಾಗಿದೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Gruhalakshmi Status Check-2025: ಗೃಹಲಕ್ಷ್ಮಿ ಹಣ ಜಮಾ ವಿವರ ಮೊಬೈಲ್ ನಲ್ಲೇ ಚೆಕ್ ಮಾಡಿ:

ಈ ಯೋಜನೆಯಡಿ ಪ್ರತಿ ತಿಂಗಳು ಹಣವನ್ನು ಪಡೆಯುತ್ತಿರುವ ಫಲಾನುಭವಿಗಳು ಮನೆಯಲ್ಲೇ ಇದ್ದು ತಮ್ಮ ಮೊಬೈಲ್ ಮೂಲಕ ಎರಡು ವಿಧಾನವನ್ನು ಅನುಸರಿಸಿ ಹಣ ಜಮಾ ವಿವರವನ್ನು ಪಡೆಯಬಹುದು.

Method-1: ಬ್ಯಾಂಕ್ ಸಹಾಯವಾಣಿಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಜಮಾ ವಿವರ ತಿಳಿಯಬಹುದು:

ಗೃಹಲಕ್ಷ್ಮಿ ಯೋಜನೆಯಡಿ ಆರ್ಥಿಕ ನೆರವು ಪಡೆಯುತ್ತಿರುವ ಕುಟುಂಬದ ಯಜಮಾನಿಯರು ತಮ್ಮ ಬ್ಯಾಂಕ್ ಅಕೌಂಟ್ ಇರುವ ಬ್ಯಾಂಕಿನ ಸಹಾಯವಾಣಿ ನಂಬರ್ ಗೆ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ನೀಡುವ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವ ಮೂಲಕಗೃಹಲಕ್ಷ್ಮೀ ಯೋಜನೆಯ ಹಣ ಜಮಾ ಅಗಿದಿಯಾ ಅಥವಾ ಇಲ್ಲವಾ? ಎಂದು ಜಮಾ ವಿವರವನ್ನು ಚೆಕ್ ಮಾಡಿಕೊಳ್ಳಬಹುದು.

ನಿಮ್ಮ ಬ್ಯಾಂಕ್‌ಗಳ ಸಹಾಯವಾಣಿ ನಂಬರ್ ಅನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ: Click here

Method-2: DBT Karnataka ಮೊಬೈಲ್ ಆಪ್ ಮೂಲಕ ಚೆಕ್ ಮಾಡಿಕೊಳ್ಳಬಹುದು:

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ ಮಾಡಿ Gruhalakshmi Status Check ಅಧಿಕೃತ DBT ಕರ್ನಾಟಕ ಮೊಬೈಲ್ ಆಪ್ಲಿಕೇಶನ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿ.

ಇದನ್ನೂ ಓದಿ: Jalajeevana Yojane-ಲಿಂಗಾಯತ ನಿಗಮದಿಂದ ಬೋರ್ವೆಲ್ ಕೊರೆಸಲು ₹4.25 ಲಕ್ಷ ಸಬ್ಸಿಡಿಗೆ ಅರ್ಜಿ!

Gruhalakshmi hana

Step-2: ನಂತರ ಫಲಾನುಭವಿಯ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, OTP ಪಡೆದುಕೊಂಡು DBT ಕರ್ನಾಟಕ ಆಪ್ಲಿಕೇಶನ್ ಅನ್ನು ಲಾಗಿನ್ ಆಗಲು ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ರಚನೆ ಮಾಡಿಕೊಳ್ಳಬೇಕು.

Step-3: ಬಳಿಕ ರಚನೆ ಮಾಡಿಕೊಂಡಿರುವ ಪಾಸ್‌ವರ್ಡ್ ಬಳಸಿ ಲಾಗಿನ್ ಆದ ಬಳಿಕ, "ಪಾವತಿ ಸ್ಥಿತಿ/Payment Status" ಬಟನ್ ಮೇಲೆ ಕ್ಲಿಕ್ ಮಾಡಿ. ಇದರಿಂದ ಗೃಹಲಕ್ಷ್ಮೀ ಯೋಜನೆಯಡಿ ಜಮಾ ಅಗಿರುವ ಕಂತುಗಳವಾರು ಹಣ ಜಮಾ ಸ್ಥಿತಿಯ ವಿವರ ಕಾಣಿಸುತ್ತದೆ. ಇಲ್ಲಿ ಹಣ ಜಮಾ ದಿನಾಂಕ, ಯುಟಿಆರ್ ನಂಬರ್, ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆ ಇನ್ನಿತರೆ ವಿವರವನ್ನು ಪಡೆಯಬಹುದು.

WhatsApp Group Join Now
Telegram Group Join Now
Share Now: