UPSC CAPF Recruitment- ಕೇಂದ್ರ ಲೋಕಸೇವಾ ಆಯೋಗದಿಂದ ಬೃಹತ್ ನೇಮಕಾತಿ! BSF ಸೇರಿದಂತೆ ಹಲವು ಇಲಾಖೆಗಳಲ್ಲಿ ನೇಮಕಾತಿ.

ಕೇಂದ್ರ ಲೋಕಸೇವಾ ಆಯೋಗವು, ಕೇಂದ್ರ ಸರ್ಕಾರದ ಹಲವು ಉನ್ನತ ಹುದ್ದೆಗಳ ನೇಮಕಾತಿಗಾಗಿ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತದೆ. ಪ್ರಸ್ತುತ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPF) ಖಾಲಿ ಇರುವ ಸಹಾಯಕ ಕಮಾಂಡೆಂಟ್ (Assistant Commandant) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. 

UPSC CAPF Recruitment- ಕೇಂದ್ರ ಲೋಕಸೇವಾ ಆಯೋಗದಿಂದ ಬೃಹತ್ ನೇಮಕಾತಿ! BSF ಸೇರಿದಂತೆ ಹಲವು ಇಲಾಖೆಗಳಲ್ಲಿ ನೇಮಕಾತಿ.
UPSC CAPF Recruitment-2024

ಕೇಂದ್ರ ಲೋಕಸೇವಾ ಆಯೋಗವು, ಕೇಂದ್ರ ಸರ್ಕಾರದ ಹಲವು ಉನ್ನತ ಹುದ್ದೆಗಳ ನೇಮಕಾತಿಗಾಗಿ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತದೆ. ಪ್ರಸ್ತುತ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPF) ಖಾಲಿ ಇರುವ ಸಹಾಯಕ ಕಮಾಂಡೆಂಟ್ (Assistant Commandant) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಅತಿ ಸಲ್ಲಿಸಲು ಅರ್ಹತೆ ಹೊಂದಿರುವ ಆಸಕ್ತ ಹೊಂದಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆಗೆ ಬೇಕಾಗಿರುವ ಅಧಿಸೂಚನೆಯ ವಿವರ, ಅರ್ಹತೆಗಳ ವಿವರ ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ವಿವರವನ್ನು ಕೆಳಗೆ ನೀಡಲಾಗಿದೆ. 

ಇದನ್ನೂ ಓದಿ: 2nd installment parihara amount- ಈ ಪಟ್ಟಿಯಲ್ಲಿರುವವರಿಗೆ ಸಿಗಲಿದೆ 2ನೇ ಕಂತಿನ ಬರ ಪರಿಹಾರ!

UPSC CAPF Recruitment 2024 : ನೇಮಕಾತಿ ವಿವರ 

• ನೇಮಕಾತಿ ಆಯೋಗ - ಕೇಂದ್ರ ಲೋಕಸೇವಾ ಆಯೋಗ (UPSC)
• ನೇಮಕಾತಿ ಹುದ್ದೆಗಳ ಸಂಖ್ಯೆ - 506 ಹುದ್ದೆಗಳು 
• ಅರ್ಜಿ ಸಲ್ಲಿಸುವುದು - ಆನ್ಲೈನ್ ಮೂಲಕ 

ಖಾಲಿ ಹುದ್ದೆಗಳ ನೇಮಕಾತಿ ವಿವರ :

ಯುಪಿಎಸ್ಸಿ ಪ್ರಸ್ತುತ 506 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ವಿವಿಧ ಇಲಾಖೆಗಳವಾರು ಹುದ್ದೆಗಳ ವಿಂಗಡಣೆ ಹೀಗಿದೆ:-

• ಗಡಿ ಭದ್ರತಾ ಪಡೆ (BSF) - 186 ಹುದ್ದೆಗಳು 
• ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) - 120 ಹುದ್ದೆಗಳು 
• ಕೇಂದ್ರೀಯ ಕೈಗಾರಿಕಾ ಭದ್ರತಾ ವಡೆ (CISF) - 100 ಹುದ್ದೆಗಳು
• ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) - 58 ಹುದ್ದೆಗಳು 
• ಸಶಸ್ತ್ರ ಸೀಮಾ ಬಲ (SSB) - 42 ಹುದ್ದೆಗಳು

ಇದನ್ನೂ ಓದಿ: Bara parihara list-2024: ಬರ ಪರಿಹಾರ ಹಣ ಬಿಡುಗಡೆಯಾದ ರೈತರ ಪಟ್ಟಿ ಬಿಡುಗಡೆ!

UPSC CAPF Recruitment 2024 - ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಸಿರುವ ಶೈಕ್ಷಣಿಕ ಅರ್ಹತೆ ವಿವರ : 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದರೆ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - Last Date to Apply 

ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಅರ್ಜಿ ಸಲ್ಲಿಸಬಯಸುವ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 14 ಮೇ 2024ರ ಒಳಗಾಗಿ ಅರ್ಜಿ ಸಲ್ಲಿಸಿ.

Age limitation-ವಯೋಮಿತಿ ಅರ್ಹತೆ: 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿಪಡಿಸಲಾಗಿರುವ ದಿನಾಂಕ ಆಗಸ್ಟ್ 1, 2024 ಕ್ಕೆ ಕನಿಷ್ಠ 20 ವರ್ಷ ಪೂರೈಸಿರಬೇಕು ಹಾಗೂ ಕನಿಷ್ಠ 25 ವರ್ಷದೊಳಗಿರಬೇಕು. ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಗಳ ಅನುಸಾರ ವಯೋ ಸಡಿಲಿಕೆ ನೀಡಲಾಗುವುದು.

ವೇತನ - ಕೇಂದ್ರ ಲೋಕಸೇವಾ ಆಯೋಗದ ನಿಯಮಾನುಸಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ನೀಡಲಾಗುವುದು.

ಇದನ್ನೂ ಓದಿ: Bele parihara-2024: ಇಲ್ಲಿದೆ ಬೆಳೆ ಪರಿಹಾರದ ಹಣ ಜಮಾ ಅಗದ ರೈತರ ಪಟ್ಟಿ!

Application fee- ಅರ್ಜಿ ಶುಲ್ಕ- UPSC CAPF Recruitment 2024:

ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ಈ ಕೆಳಗಿನಂತಿರುತ್ತದೆ.
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.
• ಇನ್ನುಳಿದ ಎಲ್ಲಾ ವರ್ಗಗಳ ಅಭ್ಯರ್ಥಿಗಳು 200 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. 

How to Apply-ಅರ್ಜಿ ಸಲ್ಲಿಸುವುದು ಹೇಗೆ? 

ಅಭ್ಯರ್ಥಿಗಳು ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ https://www.upsconline.nic.in ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಲು ಇತರೆ ಪ್ರಮುಖ ಲಿಂಕುಗಳು : 

ಅಧಿಸೂಚನೆ : Download 
ಅಧಿಕೃತ ಜಾಲತಾಣ : https://upsconline.nic.in/