HomeNew postsBharat Rice- ರೂ 29 ಕ್ಕೆ ಭಾರತ್ ಅಕ್ಕಿ ಪಡೆಯಲು ಮುಗಿಬಿದ್ದ ಜನ! ಎಲ್ಲಿ ಖರೀದಿಸಬೇಕು?...

Bharat Rice- ರೂ 29 ಕ್ಕೆ ಭಾರತ್ ಅಕ್ಕಿ ಪಡೆಯಲು ಮುಗಿಬಿದ್ದ ಜನ! ಎಲ್ಲಿ ಖರೀದಿಸಬೇಕು? ಎನಿದು ಭಾರತ್ ರೈಸ್?

ಕೇಂದ್ರ ಸರಕಾರದಿಂದ ಅತೀ ಕಡಿಮೆ ಬೆಲೆಯಲ್ಲಿ ಭಾರತೀಯ ಆಹಾರ ನಿಗಮವು (Food Corporation of India – FCI – ಎಫ್‌ಸಿಐ) ಎರಡು ಸಹಕಾರಿ ಸಂಸ್ಥೆಗಳಾದ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (NCCF) ಸಹಯೋಗದಲ್ಲಿ ಗ್ರಾಹಕರಿಗೆ ಕೈಗೆಟಗುವ ದರದಲ್ಲಿ ಅಕ್ಕಿಯನ್ನು(Bharat Rice)ಮಾರಾಟ ಮಾಡಲು ಮುಂಗಳವಾರ ಅಧಿಕೃತ ಚಾಲನೆ ನೀಡಿದೆ.

ಗ್ರಾಹಕರು ಈ ಭಾರತ್ ಬ್ರಾಂಡ್ ಹೆಸರಿನ ಅಕ್ಕಿಯನ್ನು ಎಲ್ಲಿ ಖರೀದಿಸಬಹುದು? ಎಷ್ಟು ಕೆಜಿಯ ಬ್ಯಾಗ್ ಗಳು ಲಭ್ಯ? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಆಹಾರ ಸಾಮಗ್ರಿ ಬೆಲೆ ಏರಿಕೆಯಿಂದ ತತ್ತರಿಸುವ ಜನರಿಗೆ ತುಸು ಅರ್ಥಿಕವಾಗಿ ಸಹಕಾರ ನೀಡಲು ರಿಯಾಯಿತಿ ದರದಲ್ಲಿ ಗುಣಮಟ್ಟದ ಅಕ್ಕಿ, ಗೋಧಿ ಹಿಟ್ಟು, ಬೇಳೆ ಕಾಳುಗಳನ್ನು ಸಾರ್ವಜನಿಕರಿಗೆ ನೀಡಲು ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಈ ಯೋಜನೆಯ ಭಾಗವಾಗಿ ಭಾರತ್‌ ಎನ್ನುವ ಹೆಸರಿನ ಅಕ್ಕಿ ಮಾರಾಟಕ್ಕೆ ಮಂಗಳವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಕ್ರಮದಿಂದಾಗಿ ದೇಶದ ಎಲ್ಲಾ ಭಾಗಗಳಲ್ಲಿ ಭಾರತ್‌ ರೈಸ್ ಗೆ ಸಾರ್ವಜನಿಕರಿಗೆ ಭಾರಿ ಬೇಡಿಕೆ ಬಂದಿದ್ದು ನಮ್ಮ ರಾಜ್ಯದಲ್ಲೂ ಈ ಅಕ್ಕಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಇದನ್ನೂ ಓದಿ: hsrp number plate last date- HSRP ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನಾಂಕ ಮುಂದೂಡಿಕೆ!

Bharat Rice price- ಎನಿದು ಭಾರತ್ ರೈಸ್? ಎಷ್ಟು ಕೆಜಿ ಬ್ಯಾಗ್ ಗಳಲ್ಲಿ ಮಾರಾಟವಾಗುತ್ತಿದೆ?

ಸಧ್ಯ ಮಾರುಕಟ್ಟೆಯಲ್ಲಿ ಭಾರತ್‌’ ಅಕ್ಕಿ 5 ಕೆ.ಜಿ, 10 ಕೆ.ಜಿ ಪ್ಯಾಕೆಟ್‌ಗಳಲ್ಲಿ ಮಾರಾಟವಾಗುತ್ತಿದ್ದು, ಕೇಂದ್ರದಿಂದ ಪ್ರತಿ ಕೆ.ಜಿ.ಗೆ 29 ರೂ. ನಿಗದಿಪಡಿಸಲಾಗಿದೆ. ಈ ಅಕ್ಕಿಯನ್ನು ನಮ್ಮ ರಾಜ್ಯದಲ್ಲಿ ಕೋಲಾರ ಜಿಲ್ಲೆಯಲ್ಲಿ ಬುಧವಾರ ಮಾರಾಟಕ್ಕೆ ಚಾಲನೆ ನೀಡಿದ್ದು ಭಾರತ್ ಅಕ್ಕಿಗಾಗಿ ಜನರು ಮುಗಿಬಿದ್ದದ್ದು ಕಂಡುಬಂತು. ಹತ್ತು ಕೆ.ಜಿ. ಬ್ಯಾಗ್‌ಗೆ 290 ರೂ ಹಣ ಕೊಟ್ಟು ಜನರು ಭಾರತ್ ಅಕ್ಕಿ ಖರೀದಿಸಿದರು.

ಕೋಲಾರ ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 10 ಕೆ.ಜಿ.ಯ ಸಾವಿರ ಬ್ಯಾಗ್‌ಗಳು ಮಾರಾಟವಾಗಿವೆ. ನಾಳೆಯಿಂದ ಭಾರತ್‌ ಬ್ರ್ಯಾಂಡ್‌ನ ಗೋಧಿ ಹಿಟ್ಟು, ಬೇಳೆ ಕಾಳು ರಿಯಾಯಿತಿ ದರದಲ್ಲಿ ಸಿಗಲಿವೆ. ಇದು ಮೋದಿ ಸರ್ಕಾರದ ಮಹತ್ವದ ಕೊಡುಗೆ. ಈ ಭಾರತ್ ಅಕ್ಕಿ ವಿತರಣೆಯಲ್ಲಿ ಯಾವುದೇ ರಾಜಕೀಯ, ಭೇದ ಭಾವ ಇಲ್ಲ. ಸಮಸ್ತ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು  ಸ್ಥಳೀಯ ಬಿಜೆಪಿ ಮುಖಂಡರು ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: Best life insurance plan-ತೆಂಗಿನ ಮರ ಏರುವ ವೃತ್ತಿಪರ ಕೌಶಲ್ಯದಾರರಿಗೆ ರೂ 5 ಲಕ್ಷದವರೆಗೆ ವಿಮಾ ನೀಡಲು ಅರ್ಜಿ ಆಹ್ವಾನ!

ಭಾರತ್ ಅಕ್ಕಿ ಜೊತೆಗೆ ಇತರೆ ದಿನಸಿ ಉತ್ಪನ್ನಗಳು ಸಹ ಮಾರಾಟ!

ಕೇಂದ್ರದಿಂದ ಭಾರತ್ ಎನ್ನುವ ಬ್ರಾಂಡ್ ಹೆಸರಿಗೆ ಅಕ್ಕಿ ಅಲ್ಲದೇ ಭಾರತ್‌ ಅಟ್ಟಾ (ಗೋಧಿ ಹಿಟ್ಟು) ಪ್ರತಿ ಕೆ.ಜಿ 27.5 ರೂ., ಭಾರತ್‌ ದಾಲ್‌(ಕಡಲೆ ಬೇಳೆ) 60 ರೂ.ಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕಡಲೆ ಬೇಳೆಯನ್ನು 1 ಕೆ.ಜಿ ಪ್ಯಾಕ್​ಗೆ ಪ್ರತಿ ಕೆ.ಜಿ.ಗೆ 60 ರೂ., 30 ಕೆ.ಜಿಯ ಪ್ಯಾಕ್​ಗೆ ಪ್ರತಿ ಕೆ.ಜಿ.ಗೆ 55 ರೂ.ಗಳ ಸಬ್ಸಿಡಿ ದರದಲ್ಲಿಸಹ  ಮಾರಾಟ ಮಾಡಲಾಗುತ್ತಿದೆ.

Bharat Rice online booking- ಗ್ರಾಹಕರು ಭಾರತ್ ಅಕ್ಕಿಯನ್ನು ಎಲ್ಲಿ ಖರೀದಿಸಬೇಕು? 

ದೇಶದಲ್ಲಿ ಭಾರತ್ ಅಕ್ಕಿ ಮಾರಾಟಕ್ಕೆ ಮೊದಲ ಹಂತದಲ್ಲಿ ಭಾರತೀಯ ಆಹಾರ ನಿಗಮವು (Food Corporation of India – FCI – ಎಫ್‌ಸಿಐ) ಎರಡು ಸಹಕಾರಿ ಸಂಸ್ಥೆಗಳಾದ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (NCCF) ಹಾಗೂ ಚಿಲ್ಲರೆ ಸರಪಳಿ ಕೇಂದ್ರೀಯ ಭಂಡಾರ್‌ ನಿರ್ವಹಿಸುವ ಮಳಿಗೆಗಳಿಗೆ 5 ಲಕ್ಷ ಟನ್ ಅಕ್ಕಿಯನ್ನು ನೀಡುತ್ತದೆ.

ಇದನ್ನೂ ಓದಿ: Horticulture crop parihara amount- ತೋಟಗಾರಿಕ ಬೆಳೆಗಳಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳನ್ವಯ ಬೆಳೆ ನಷ್ಟಕ್ಕೆ ಪರಿಹಾರದ ಮೊತ್ತ ನಿಗದಿ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

ಈ ಏಜೆನ್ಸಿಗಳು ಅಕ್ಕಿಯನ್ನು 5 ಕೆಜಿ ಮತ್ತು 10 ಕೆಜಿಗಳಲ್ಲಿ ಪ್ಯಾಕ್ ಮಾಡುತ್ತವೆ ಮತ್ತು “ಭಾರತ್” ಬ್ರಾಂಡ್‌ನ ಅಡಿಯಲ್ಲಿ ತಮ್ಮ ಔಟ್‌ಲೆಟ್‌ಗಳ ಮೂಲಕ ಚಿಲ್ಲರೆ ಮಾರಾಟ ಮಾಡುತ್ತವೆ. ಅಕ್ಕಿಯನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕವೂ ಮಾರಾಟ ಮಾಡಲಾಗುತ್ತದೆ.

ಇದಲ್ಲದೆ ಸೆಂಟ್ರಲ್ ಸ್ಟೋರ್‌ಗಳಲ್ಲಿಯೂ ಭಾರತ್ ರೈಸ್ ಲಭ್ಯವಿದೆ. ಸರ್ಕಾರ ಮೊಬೈಲ್ ವ್ಯಾನ್ ಮೂಲಕವೂ ಮಾರಾಟ ಮಾಡುತ್ತಿದೆ. ಸಹಕಾರ ಸಂಸ್ಥೆಗಳು ಮಾತ್ರವಲ್ಲದೆ ಭಾರತ್ ಬ್ರ್ಯಾಂಡ್‌ನ ಗೋಧಿ ಹಿಟ್ಟು 2000 ಚಿಲ್ಲರೆ ಮಳಿಗೆಗಳಲ್ಲಿ ಸಹ ಈ ಅಕ್ಕಿ ದೊರೆಯಲಿದೆ ಅಲ್ಲದೇ ಮದರ್ ಡೈರಿ, ಸಫಲ್ ಮುಂತಾದ ಮಳಿಗೆಗಳಿಂದಲೂ ಗ್ರಾಹಕರು ಈ ಅಕ್ಕಿಯನ್ನು ಖರೀದಿಸಬಹುದು.

ಇದನ್ನೂ ಓದಿ: Sheep and Goat farming-ಕುರಿ,ಮೇಕೆ ಸಾಕಾಣಿಕೆಗಾಗಿ 1.75 ಲಕ್ಷ ಘಟಕ ವೆಚ್ಚದಲ್ಲಿ ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ!

Bharat Rice booking- ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು!

ಭಾರತ್‌ ದಾಲ್‌ ಮತ್ತು ಗೋಧಿ ಹಿಟ್ಟು ಈಗಾಗಲೇ ಆನ್‌ಲೈನ್‌ ನಲ್ಲಿ ಇ-ಕಾರ್ಮಸ್ ಅಪ್ಲಿಕೇಶನ್ ಮೂಲಕ ಖರೀದಿ ಮಾಡಬಹುದಾಗಿದ್ದು, ಆದರೆ, ಪ್ರಸ್ತುತ ಭಾರತ್‌ ಅಕ್ಕಿ ಮಾತ್ರ ಆನ್‌ಲೈನ್ ಮಾರಾಟಕ್ಕೆ ಲಭ್ಯವಿಲ್ಲ.ಭಾರತ್ ಬ್ರ್ಯಾಂಡ್ ಅಕ್ಕಿಯನ್ನು ಸರ್ಕಾರ ಶೀಘ್ರದಲ್ಲೇ ರಿಲಯನ್ಸ್‌ ಜಿಯೋ ಮಾರ್ಟ್, ಫ್ಲಿಪ್‌ಕಾರ್ಟ್‌, ಬಿಗ್‌ ಬಾಸ್ಕೆಟ್‌ ಸೇರಿ ಇತರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡುವ ಯೋಜನೆಯನ್ನು ರೂಪಿಸುತ್ತಿದೆ.

Most Popular

Latest Articles

Related Articles