HomeNew postsHorticulture crop parihara amount- ತೋಟಗಾರಿಕ ಬೆಳೆಗಳಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳನ್ವಯ ಬೆಳೆ ನಷ್ಟಕ್ಕೆ ಪರಿಹಾರದ ಮೊತ್ತ...

Horticulture crop parihara amount- ತೋಟಗಾರಿಕ ಬೆಳೆಗಳಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳನ್ವಯ ಬೆಳೆ ನಷ್ಟಕ್ಕೆ ಪರಿಹಾರದ ಮೊತ್ತ ನಿಗದಿ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

ತೋಟಗಾರಿಕ ಬೆಳೆಗಳಿಗೆ ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್  ಮಾರ್ಗಸೂಚಿಗಳನ್ವಯ ಬೆಳೆ ನಷ್ಟಕ್ಕೆ ಪರಿಹಾರದ ಮೊತ್ತ ನಿಗದಿಪಡಿಸಿರುವುದಾಗಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ರವರು ಮಾಹಿತಿ ಹಂಚಿಕೊಂಡಿದ್ದು ಈ ಕುರಿತು ಸಂಪೂರ್ಣ ವಿವರ ಈ ಕೆಳಗೆ ತಿಳಿಸಲಾಗಿದೆ.

ನಿನ್ನೆ ನಡೆದ ವಿಧಾನ ಪರಿಷತ್ತಿನ ಕಲಾಪದ ವೇಳೆ ಸದಸ್ಯರಾದ ಟಿ.ಎ. ಶರವಣ ಅವರ ಚುಕ್ಕೆ ಗುರಿತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ತೀವ್ರ ಬರಗಾಲದಿಂದ 5,11,208 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ. ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಸರ್ವೆ ಕಾರ್ಯ ನಡೆಸಿ ಒಟ್ಟು ಎಷ್ಟು ವಿಸ್ತೀರ್ಣದಲ್ಲಿ ಬೆಳೆ ಹಾನಿಯಾಗಿದೆ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Sheep and Goat farming-ಕುರಿ,ಮೇಕೆ ಸಾಕಾಣಿಕೆಗಾಗಿ 1.75 ಲಕ್ಷ ಘಟಕ ವೆಚ್ಚದಲ್ಲಿ ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ!

ಎನ್.ಡಿ.ಆರ್.ಎಫ್(NDRF) / ಎಸ್.ಡಿ.ಆರ್.ಫ್(SDRF) ಮಾರ್ಗಸೂಚಿಗಳನ್ವಯ ಬೆಳೆ ನಷ್ಟಕ್ಕೆ ಪರಿಹಾರ!

ರಾಜ್ಯ ಮತ್ತು ದೇಶದಲ್ಲಿ ಯಾವುದೇ ಬಗ್ಗೆಯ ಮಾನವ ಮತ್ತು ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದಾಗ ಸರಕಾರದಿಂದ ಅರ್ಹ ಫಲಾನುಭವಿಗಳಿಗೆ ಪರಿಹಾರವನ್ನು ನೀಡಲು ಏಕ ರೂಪ ಮಾರ್ಗಸೂಚಿಯನ್ನು ಅನುಸರಿಸಲಾಗುತ್ತದೆ ಈ ಮಾರ್ಗಸೂಚಿಯೇ ಎನ್.ಡಿ.ಆರ್.ಎಫ್(NDRF-ರಾಷ್ಟ್ರೀಯ ವಿಪತ್ತು ನಿರ್ವಹಣೆ) ಈ ಮಾರ್ಗಸೂಚಿಯಲ್ಲಿ ಎಷ್ಟು ಪ್ರಮಾಣದ ಹಾನಿಗೆ ಎಷ್ಟು ಪರಿಹಾರವನ್ನು ಫಲಾನುಭವಿಗೆ ಪಾವತಿ ಮಾಡಬೇಕು ಎಂದು ಸಂಪೂರ್ಣವಾಗಿ ತಿಳಿಸಲಾಗಿರುತ್ತದೆ.

ಈ ಮಾರ್ಗಸೂಚಿಯ ನಿಯಮಗಳ ಪ್ರಕಾರವೇ ರಾಜ್ಯ ಸರಕಾರಗಳು ಕೇಂದ್ರದಿಂದ ಅನುದಾನ ಪಡೆದು ಇದಕ್ಕೆ ರಾಜ್ಯದ ಪಾಲನ್ನು ಸೇರಿಸಿ ಬೆಳೆ, ಅಸ್ತಿ-ಪಾಸ್ತಿ, ಮಾನವ ಹಾನಿಗೆ ಒಳಗಾದ ಫಲಾನುಭವಿಗಳಿಗೆ ಪರಿಹಾರವನ್ನು ನೀಡಬೇಕು.

ಅದರೆ ಕರ್ನಾಟಕ ರೈತರ ದುರದೃಷ್ಟವೋ ಅಥವಾ ಆಡಳಿತದಲ್ಲಿರುವ ಇಚ್ಚ ಶಕ್ತಿಯ ಕೊರತೆಯೋ? ಗೊತ್ತಿಲ್ಲ ಇದುವರೆಗೂ ಕೇಂದ್ರದಿಂದ ಬರ ಪರಿಹಾರದ ಮೊದಲ ಕಂತಿನ ಹಣ ಬಂದಿರುವುದಿಲ್ಲ ಈಗಾಗಲೇ ಅರ್ಥಿಕವಾಗಿ ಸಂಕಷ್ಟದಲ್ಲಿದ ರೈತರಿಗೆ ನೆರವಾಗಬೇಕಿದ ಸರಕಾರಗಳು ಅವರ ಮೇಲೆ ಇವರು ಇವರ ಮೇಲೆ ಅವರು ಆರೋಪಿಸುತ್ತ ರೈತರ ತಾಳ್ಮೆ ಪರೀಕ್ಷೆಯಲ್ಲಿ ತೂಡಗಿರುವುದು ದೊಡ್ಡ ದುರಂತ. 

ಇದನ್ನೂ ಓದಿ: Cancelled ration card list-ಫೆಬ್ರವರಿ-2024 ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ! ಇಲ್ಲಿದೆ ಪಟ್ಟಿ ನೋಡಲು ವೆಬ್ಸೈಟ್ ಲಿಂಕ್.

Horticulture crop parihara amount- ಎನ್.ಡಿ.ಆರ್.ಎಫ್ / ಎಸ್.ಡಿ.ಆರ್.ಫ್ ಮಾರ್ಗಸೂಚಿಗಳನ್ವಯ ತೋಟಗಾರಿಕ ಬೆಳೆಗಳಿಗೆ ನಿಗದಿಪಡಿಸಿರುವ ಪರಿಹಾರದ ಮೊತ್ತದ ವಿವರ:

ಎನ್.ಡಿ.ಆರ್.ಎಫ್ / ಎಸ್.ಡಿ.ಆರ್.ಎಫ್ ಮಾರ್ಗಸೂಚಿಗಳನ್ವಯ ಪ್ರತಿ ಹೆಕ್ಟೇರ್ ಗೆ ಅಂದರೆ 2.5 ಎಕರೆಗೆ ತೋಟಗಾರಿಕೆ ಬೆಳೆ ನಷ್ಟಕ್ಕೆ ಮಳೆಯಾಶ್ರಿತ ಪ್ರದೇಶದ ಬೆಳೆಗಳಿಗೆ ರೂ. 8,500/- ನೀರಾವರಿ ಬೆಳೆಗಳಿಗೆ ರೂ17,000/- ಮತ್ತು ಬಹು ವಾರ್ಷಿಕ ಬೆಳೆಗಳಿಗೆ ರೂ. 22,500/- ಪರಿಹಾರ ನಿಗದಿಪಡಿಸಲಾಗಿದೆ ಎಂದು ತೋಟಗಾರಿಕ ಸಚಿವರ ಪರವಾಗಿ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಸದನಕ್ಕೆ ಮಾಹಿತಿ ತಿಳಿಸಿದರು.

1st installment parihara amount- ಒಟ್ಟು 30.24,795 ರೈತರಿಗೆ ಮೊದಲ ಕಂತಿನ ಪರಿಹಾರದ ರೂ 2,000 ವರ್ಗಾವಣೆ:

ಕೃಷಿ, ರೇಷ್ಮೆ ಮತ್ತು ತೋಟಗಾರಿಕಾ ಬೆಳೆ ಸೇರಿದಂತೆ ನಷ್ಟದಿಂದ ನೊಂದ ಪ್ರತಿ ರೈತರಿಗೆ ರೂ. 2000ರಂತೆ ಇಲ್ಲಯವರೆಗೆ ಒಟ್ಟು 30.24,795 ರೈತರಿಗೆ ರೂ. 573.28 ಕೋಟಿ ಪರಿಹಾರದ ಮೊತ್ತವನ್ನು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶದ ಮುಖಾಂತರ ವಿತರಿಸಲಾಗಿರುತ್ತದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Monsoon update 2024: ಎಲ್ ನಿನೊ ವಾತಾವರಣ ದುರ್ಬಲ ಈ ವರ್ಷ ಉತ್ತಮ ಮುಂಗಾರು ನಿರೀಕ್ಷೆ, ಹವಾಮಾನ ತಜ್ಞರಿಂದ ಮಾಹಿತಿ!

ಪರಿಹಾರ ವರ್ಗಾವಣೆ ಕುರಿತು ನಮ್ಮ ಪುಟದ ಇತರೆ ಅಂಕಣಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: click here

ಪ್ರಮುಖ ಉಪಯುಕ್ತ ಲಿಂಕ್ ಗಳು:

ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕೃತ ವೆಬ್ಸೈಟ್: Click here
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕೃತ ವೆಬ್ಸೈಟ್: Click here

Most Popular

Latest Articles

Related Articles