Digital Property Certificate-ಗ್ರಾಮ ಪಂಚಾಯತಿ ವತಿಯಿಂದ ಕೃಷಿಯೇತರ ಭೂಮಿಗಳಿಗೆ ಡಿಜಿಟಲ್ ಇ-ಖಾತಾ ಪ್ರಮಾಣ ಪತ್ರ!

December 24, 2025 | Siddesh
Digital Property Certificate-ಗ್ರಾಮ ಪಂಚಾಯತಿ ವತಿಯಿಂದ ಕೃಷಿಯೇತರ ಭೂಮಿಗಳಿಗೆ ಡಿಜಿಟಲ್ ಇ-ಖಾತಾ ಪ್ರಮಾಣ ಪತ್ರ!
Share Now:

ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಹಾಗೂ ಕೃಷಿಯೇತರ ಆಸ್ತಿಗಳಿಗೆ(Digital Property Certificate) ನಮೂನೆ 11ಎ& ನಮೂನೆ 11ಬಿ ನೀಡಲಾಗುತ್ತಿದ್ದು, ನಾಗರಿಕರು ಮನೆಯಲ್ಲೇ ಕುಳಿತು ಇ- ಸ್ವತ್ತು ತಂತ್ರಾಂಶ 2.0 ಮುಖಾಂತರ ಡಿಜಿಟಲ್ ಇ-ಖಾತಾ ಪ್ರಮಾಣ ಪತ್ರ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹಿಂದಿನ ಕಾಲದಲ್ಲಿ ಗ್ರಾಮೀಣ ಸ್ವತ್ತುಗಳಿಗೆ ಸಂಬಂದಿಸಿದ ದಾಖಲಾತಿಗಳು ಕಾಗದ ರೂಪದಲ್ಲಿರುವುದರಿಂದ(, Karnataka e-Swathu Scheme) ಕಳೆದುಹೋಗುವ, ನಕಲಿ ಆಗುವ ಅಥವಾ ವಿವಾದಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಿರಬಹುದು ಆದ್ದರಿಂದ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Gruhalakshmi Amount-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ!

ಎಲ್ಲಾ ಇ-ಸ್ವತ್ತು ವಿವರಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸುವ(Village Property Details) ವ್ಯವಸ್ಥೆ ಮಾಡಲಾಗಿದ್ದು, ಈ ಯೋಜನೆಯ ಮೂಲಕ ಸ್ವತ್ತು ಮಾಲೀಕರಿಗೆ ಬ್ಯಾಂಕ್ ಸಾಲ, ಸರ್ಕಾರಿ ಯೋಜನೆಗಳ ಲಾಭ, ಆಸ್ತಿ ತೆರಿಗೆ ಪಾವತಿ ಹಾಗೂ ಸ್ವತ್ತು ಖರೀದಿ-ಮಾರಾಟದ ಪ್ರಕ್ರಿಯೆಗಳು ಇನ್ನಷ್ಟು ಸುಲಭವಾಗಿವೆ.

ಪ್ರಸ್ತುತ ಇಂದಿನ ಈ ಲೇಖನದಲ್ಲಿ ಇ-ಸ್ವತ್ತು ಎಂದರೇನು? ಇ-ಸ್ವತ್ತು ಯೋಜನೆಯ ಉದ್ದೇಶ? ಇ-ಸ್ವತ್ತು ಯೋಜನೆಯ ಪ್ರಯೋಜನಗಳು? ಇ-ಸ್ವತ್ತು ಪಡೆದುಕೊಳ್ಳಲು ಯಾರು ಅರ್ಜಿ ಸಲ್ಲಿಸಬಹುದು? ಇ-ಸ್ವತ್ತು ಅರ್ಜಿಗೆ ಬೇಕಾದ ದಾಖಲೆಗಳಾವುವು? ಇ-ಸ್ವತ್ತು ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು? ಇತರ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Parivartan Scholarship-ಪರಿವರ್ತನ್ ಯೋಜನೆಯಡಿ ಪದವಿ ವಿದ್ಯಾರ್ಥಿಗಳಿಗೆ ₹30,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ಮಾಹಿತಿ!

e-Swathu-ಇ-ಸ್ವತ್ತು ಎಂದರೇನು?

ಇ-ಸ್ವತ್ತು ಎಂದರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಮನೆ, ಜಮೀನು ಮತ್ತು ಇತರ ಸ್ವತ್ತುಗಳಿಗೆ ಸರ್ಕಾರ ನೀಡುವ ಡಿಜಿಟಲ್ ಆಸ್ತಿ ಪ್ರಮಾಣ ಪತ್ರ ಎಂದರ್ಥ. ಇದು ಪರಂಪರೆಯಿಂದ ಬಂದಂತ ಕಾಗದದ ದಾಖಲೆಗಳ ಬದಲಾಗಿ ಆನ್‌ಲೈನ್‌ನಲ್ಲಿ ಲಭ್ಯವಾಗುವ ಅಧಿಕೃತ ದಾಖಲೆಯಾಗಿದ್ದು, ಸರ್ಕಾರದ ಮಾನ್ಯತೆಯೊಂದಿಗೆ ಸುರಕ್ಷಿತ ಹಾಗೂ ಶಾಶ್ವತವಾಗಿ ಡಿಜಿಟಲ್ ವ್ಯವಸ್ಥೆಯಲ್ಲಿ ಸಂಗ್ರಹವಾಗಿರುತ್ತದೆ.

purpose of this Scheme-ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು?

A) ಗ್ರಾಮೀಣ ಪ್ರದೇಶದಲ್ಲಿನ ಸ್ವತ್ತುಗಳಿಗೆ ನಿಖರ ಮತ್ತು ವಿಶ್ವಾಸಾರ್ಹ ದಾಖಲೆಗಳನ್ನು ಸೃಷ್ಟಿಸುವುದು.

B) ನಕಲಿ ದಾಖಲೆಗಳು ಹಾಗೂ ಸ್ವತ್ತು ಸಂಬಂಧಿತ ವಿವಾದಗಳಿಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುವುದು.

C) ಆಸ್ತಿ ತೆರಿಗೆ ಸಂಗ್ರಹ ಮತ್ತು ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮತ್ತು ವ್ಯವಸ್ಥಿತಗೊಳಿಸುವುದು.

D) ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಪಾರದರ್ಶಕ ಸೇವೆಗಳನ್ನು ಒದಗಿಸುವುದು.

E) ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.

ಇದನ್ನೂ ಓದಿ: Veterinary Subsidy Schemes-ಪಶುಪಾಲನಾ ಇಲಾಖೆಯಿಂದ ರೈತರಿಗಾಗಿ ಲಭ್ಯವಿರುವ ಸಬ್ಸಿಡಿ ಯೋಜನೆಗಳಾವುವು?

Uses of this Scheme-ಇ-ಸ್ವತ್ತು ಯೋಜನೆಯ ಪ್ರಯೋಜನಗಳೇನು?

1) ಇ-ಸ್ವತ್ತು ಯೋಜನೆಯ ಮೂಲಕ ಸ್ವತ್ತು ಮಾಲೀಕರಿಗೆ ಸರ್ಕಾರದ ಮಾನ್ಯತೆಯೊಂದಿಗೆ ಡಿಜಿಟಲ್ ಆಸ್ತಿ ಪ್ರಮಾಣ ಪತ್ರ ಲಭ್ಯವಾಗುವುದರಿಂದ, ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಪ್ರಕ್ರಿಯೆ ಸುಲಭವಾಗುತ್ತದೆ,

2) ಸ್ವತ್ತು ಖರೀದಿ–ಮಾರಾಟದ ವೇಳೆ ದಾಖಲೆಗಳ ಸ್ಪಷ್ಟತೆ ಮತ್ತು ನಂಬಿಕೆಯನ್ನು ಒದಗಿಸುತ್ತದೆ.

3) ಆಸ್ತಿ ತೆರಿಗೆ ಪಾವತಿಯನ್ನು ಸರಳ ಹಾಗೂ ಸಮಯಬದ್ಧವಾಗಿಸುತ್ತದೆ.

4) ಸರ್ಕಾರದ ವಿವಿಧ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅರ್ಹತೆಯನ್ನು ಸುಲಭವಾಗಿ ಸಾಬೀತುಪಡಿಸಲು ಸಹಕಾರಿಯಾಗುತ್ತದೆ.

5) ಕಾಗದದ ದಾಖಲೆಗಳು ಕಳೆದುಹೋಗುವ, ಹಾನಿಗೊಳ್ಳುವ ಅಥವಾ ನಕಲಿ ಆಗುವ ಭಯವನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.

ಇದನ್ನೂ ಓದಿ: PM Surya Ghar Scheme-PM ಸೂರ್ಯಘರ್ ಯೋಜನೆಯಡಿ ಉಚಿತ ವಿದ್ಯುತ್! ಕೂಡಲೇ ಅರ್ಜಿ ಸಲ್ಲಿಸಿ!

Who can apply-ಇ-ಸ್ವತ್ತು ಪಡೆಯಲು ಅರ್ಜಿಯನ್ನು ಯಾರು ಸಲ್ಲಿಸಬೇಕು?

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸ್ವತ್ತು ಮಾಲೀಕರು ಅರ್ಹರು.

ಮನೆ, ಖಾಲಿ ಜಮೀನು, ವಾಣಿಜ್ಯ ಕಟ್ಟಡ ಹೊಂದಿರುವವರು.

ಈಗಾಗಲೇ ತೆರಿಗೆ ಪಾವತಿಸುತ್ತಿರುವ ಸ್ವತ್ತುಧಾರಕರು ಅರ್ಜಿ ಸಲ್ಲಿಸಬಹುದು.

Documents required-ಇ-ಸ್ವತ್ತು ಪಡೆಯಲು ಅವಶ್ಯಕ ದಾಖಲಾತಿಗಳಾವುವು?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಹಳೆಯ ಸ್ವತ್ತು ದಾಖಲೆ / ಖಾತಾ
  • ತೆರಿಗೆ ಪಾವತಿ ರಸೀದಿ
  • ಸ್ವತ್ತಿನ ಫೋಟೋ
  • ಮೊಬೈಲ್ ಸಂಖ್ಯೆ

ಇದನ್ನೂ ಓದಿ: RTC Crop Name-ಪಹಣಿಯಲ್ಲಿ ಬೆಳೆ ಮಾಹಿತಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುವುದು ಹೇಗೆ?

How to apply-ಇ-ಸ್ವತ್ತು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸುವ ವಿಧಾನ?

ಮೊದಲು ಅಭ್ಯರ್ಥಿಗಳು ನಿಮ್ಮ ಗ್ರಾಮ ಪಂಚಾಯತ್ ಕಚೇರಿಗೆ ನೇರವಾಗಿ ಭೇಟಿ ಮಾಡಿ ಇ-ಸ್ವತ್ತು ಅರ್ಜಿ ಫಾರ್ಮ್ ಅನ್ನು ತೆಗೆದುಕೊಂಡು ಅಲ್ಲಿ ಕೇಳಿರುವ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಿಜಿಟಲ್ ಆಸ್ತಿ ಪ್ರಮಾಣ ಪತ್ರ (ಇ-ಸ್ವತ್ತು) ಪಡೆಯಬಹುದು.

ಇದನ್ನೂ ಓದಿ: Dairy Equipment Subsidy-ಹಸು ಸಾಕಾಣಿಕೆಗೆ ಪೂರಕ ಯಂತ್ರ ಮತ್ತು ಕೊಟ್ಟಿ ನಿರ್ಮಾಣಕ್ಕೆ ಸಬ್ಸಿಡಿ ಪಡೆಯುವುದು ಹೇಗೆ?

More Information-ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿ ನೀಡಿರುವ ಸಹಾಯವಾಣಿಗೆ ಕರೆ ಮಾಡಿ: ಸಹಾಯವಾಣಿ ಸಂಖ್ಯೆ: 9483476000

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: